By Village Missionary Movement
Saturday, 04-May-2024ಧೈನಂದಿನ ಧ್ಯಾನ(Kannada) – 04.05.2024
ಪ್ರೀತಿ ಯಾರ ಮೇಲೆ
"…ನಾನು ಮನುಷ್ಯರನ್ನು ಮೆಚ್ಚಿಸುವದಕ್ಕೆ ಪ್ರಯತ್ನಿಸುತ್ತಾ ಇದ್ದೇನೋ? ಇನ್ನೂ ಮನುಷ್ಯರನ್ನು ಮೆಚ್ಚಿಸುವವನಾಗಿದ್ದರೆ ನಾನು ಕ್ರಿಸ್ತನ ದಾಸನಲ್ಲ" - ಗಲಾತ್ಯ 1:10
ಫೆಬ್ರವರಿ 1961 ರಲ್ಲಿ ಇಂಗ್ಲೆಂಡಿನ ರಾಣಿ ಎಲಿಜಬೆತ್ ನೇಪಾಳದ ರಾಜಧಾನಿ ಕಾತ್ಮಾಂಡುವಿಗೆ ಬಂದಿದ್ದರು. ಆಗ ಮೌಂಟ್ ಎವರೆಸ್ಟ್ ಬಳಿಯ ಹಳ್ಳಿಯಲ್ಲಿ ವಾಸಿಸುವ ಕುಂಚೋ ಮತ್ತು ಅವರ ಪತ್ನಿ ಸುಂಬಿಗೂ ಮಹಾರಾಣಿಯನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಆಗ ಸುಂಬಿ ಕೂಡ ಕೆಲವು ತಿಂಗಳ ಗರ್ಭಿಣಿಯಾಗಿದ್ದಳು. ಅವರು ಬಹಳ ದೂರ ಕಠಿಣವಾದ ಹಳ್ಳ ದಿಣ್ಣೆಗಳ ಒರಟು ಮಾರ್ಗದಲ್ಲಿ 180 ಮೈಲುಗಳನ್ನು ದಾಟಿ ಕೇವಲ ಹತ್ತು ದಿನಗಳಲ್ಲಿ ಹೋದರು. ದಾರಿಯಲ್ಲೇ ಹೆರಿಗೆಯಾಯಿತು. ಒಂದು ಗಂಟೆ ಮಾತ್ರ ವಿಶ್ರಾಂತಿ ಪಡೆದು, ಮತ್ತೆ ಮಗುವನ್ನು ತಮ್ಮ ಕೈಗಳಲ್ಲಿ ಹಿಡಿದುಕೊಂಡು ಪ್ರಯಾಣಿಸಿದರು, ಮಹಾರಾಣಿಯನ್ನು ಭೇಟಿಯಾದರು. ಮಹಾರಾಣಿಯನ್ನು ನೋಡುವ ಆಸೆಯೇ ಅವರನ್ನು ಒರಟು ರಸ್ತೆಗಳನ್ನು ದಾಟಲು ಪ್ರೇರೇಪಿಸಿತು.
ಅಂತೆಯೇ, ದಾನಿಯೇಲನಿಗೆ ದೇವರ ಮೇಲಿದ್ದ ಭಕ್ತಿ ವೈರಾಗ್ಯವು ಅಡೆತಡೆಗಳನ್ನು ಜಯಿಸಲು ಅವರನ್ನು ಪ್ರೇರೇಪಿಸಿತು. ರಾಜನಿಗೆ ಹೊರತು ಬೇರೆ ಯಾರಿಗೂ ನಮಸ್ಕರಿಸಬಾರದೆಂದು ರಾಜನು ಪತ್ರದಲ್ಲಿ ಸಹಿ ಹಾಕಿದ್ದಾನೆಂದು ತಿಳಿದರೂ ತಾನು ಮೊದಲು ಮಾಡುತ್ತಿದ್ದಂತೆಯೇ ಪ್ರಾರ್ಥಿಸಿದರು. ದೇವರನ್ನು ಭೇಟಿಯಾಗುವ ಸಮಯದಲ್ಲಿ ಅಡೆತಡೆಗಳು ಬಂದರೂ, ದೇವರ ಮೇಲಿನ ಪ್ರೀತಿಯಿಂದ ಅವರು ಅದನ್ನು ಸತತವಾಗಿ ಮುಂದುವರೆಸಿದರು. ಸಿಂಹದ ಗವಿ ಉಡುಗೊರೆಯಾಗಿ ಸಿಕ್ಕರೂ ಅಲ್ಲಿಗೆ ಹೋಗಲು ಸಹ ಹಿಂಜರಿಯಲಿಲ್ಲ. ಆದರೆ ಇಂದು ನಮ್ಮಲ್ಲಿ ಅನೇಕ ಕ್ರೈಸ್ತರು ನಾವು ಯೇಸುವನ್ನು ಪ್ರೀತಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ಸಣ್ಣ ತೊಂದರೆಗಳು, ಸೋತುಹೋಗುವಿಕೆ ಮತ್ತು ವೈಫಲ್ಯಗಳು ಬಂದಾಗ, ನಾವು ಕ್ರಿಸ್ತನನ್ನು ಬಿಟ್ಟುಬಿಡುತ್ತೇವೆ. ಕ್ರಿಸ್ತನ ಮೇಲೆ ಪ್ರೀತಿ ಇದ್ದರೆ, ಕಷ್ಟಗಳು, ಸೋತುಹೋಗುವಿಕೆ ಮತ್ತು ವೈಫಲ್ಯಗಳು ಒಂದು ದೊಡ್ಡ ವಿಷಯವಾಗಿ ಕಾಣುವುದಿಲ್ಲ. ಶದ್ರಕ್, ಮೇಷಕ್ ಮತ್ತು ಅಬೇದ್ನೆಗೋ ಇವರಿಗೆ ದೇವರ ಮೇಲಿದ್ದ ಪ್ರೀತಿಯಿಂದಾಗಿ ಉರಿಯುವ ಕುಲುಮೆಗೆ ಎಸೆಯಲ್ಪಟ್ಟರೂ ದೇವರನ್ನು ಬಿಡಲಿಲ್ಲ.
ಪ್ರಿಯರೇ! ನಮ್ಮ ಪ್ರೀತಿ ಯಾರ ಮೇಲೆ? ಜನರನ್ನು ಮೆಚ್ಚಿಸಲು ಬಯಸುತ್ತೀರಾ? ದೇವರನ್ನು ಮೆಚ್ಚಿಸಲು ಬಯಸುತ್ತೀರಾ? ನಿಮ್ಮ ಪ್ರೀತಿ ದೇವರ ಮೇಲಿದ್ದರೆ, ನೀವು ಅವರಿಗಾಗಿ ಏನು ಸಹಿಸಿಕೊಂಡಿದ್ದೀರಿ? ಏನು ಬಿಟ್ಟುಕೊಟ್ಟಿದ್ದೀರಿ? ಎಂದು ಯೋಚಿಸಿ ಆತನ ಮೇಲಿನ ಪ್ರೀತಿಯು ನಮಗೆ ಎಲ್ಲವನ್ನೂ ಸಹಿಸಿಕೊಳ್ಳುವ ಶಕ್ತಿಯನ್ನು ನೀಡುತ್ತದೆ. ನಮ್ಮ ಮೊದಲ ಪ್ರೀತಿ ಮತ್ತು ಪೂರ್ಣ ಪ್ರೀತಿ ಅವರ ಮೇಲಿದ್ದರೆ ಸಾಕು. ದೇವರಿಗಾಗಿ ಪಾಡುಗಳು ಮತ್ತು ಕಷ್ಟಗಳ ನಡುವೆಯೂ ನೆಲೆಗೊಳ್ಳಲು ಸಾಧ್ಯ. ಇದಕ್ಕಾಗಿ ಅವರು ನಿಮಗೆ ಶಕ್ತಿಯನ್ನು ಸಹ ಕೊಡುತ್ತಾರೆ. ಪ್ರೀತಿಸಿರಿ ಮತ್ತು ಆತನಿಗಾಗಿ ಜೀವಿಸಿರಿ. ದೇವರು ನಿಮ್ಮನ್ನು ಆಶೀರ್ವದಿಸಲಿ!
- Mrs. ಅನಿತಾ ಅಲಗರಸಾಮಿ
ಪ್ರಾರ್ಥನಾ ಅಂಶ:
ಆಂಧ್ರಪ್ರದೇಶದ ವಿಜಯನಗರಂ ಸೇವಾ ಕ್ಷೇತ್ರದಲ್ಲಿ ನಿರ್ಮಾಣವಾಗಲಿರುವ ನೂತನ ಆಲಯದ ನಿರ್ಮಾಣ ಕಾರ್ಯಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482