Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.05.2024
Share:

By Village Missionary Movement

Thursday, 02-May-2024

ಧೈನಂದಿನ ಧ್ಯಾನ(Kannada) – 02.05.2024

 

ಬದಲಾವಣೆಯ ಸಮಯ

 

"ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು ಅಂದನು" - ಮತ್ತಾಯ 11:30

 

ನಾನು ಸಾಂಪ್ರದಾಯಿಕ ಕ್ರೈಸ್ತ ಕುಟುಂಬದಲ್ಲಿ ಹುಟ್ಟಿ ಭಕ್ತಿಯಾಗಿ ಬೆಳೆದೆ. ಆದರೆ ನಾನು ಹದಿನೆಂಟನೇ ವಯಸ್ಸಿನವರೆಗೂ ಯೇಸುವಿನ ಪ್ರೀತಿಯನ್ನು ರುಚಿ ನೋಡಲೇ ಇಲ್ಲ. ನಾನು ದೇವರಿಗೆ ಇಷ್ಟವಾಗದ ಜೀವನವನ್ನು ನಡೆಸುತ್ತಿದ್ದೆ. ನನ್ನ ತಾಯಿ ಮತ್ತು ತಂದೆ ಇಬ್ಬರೂ ಹುಟ್ಟಿನಿಂದಲೇ ಕಿವುಡರು ಮತ್ತು ಮೂಗರು. ಆದ್ದರಿಂದ ನಾನು ಅವರನ್ನು ದ್ವೇಷಿಸಿದೆ ಮತ್ತು ಹಿಂಸಿಸಿದೆ. ಒಂದು ದಿನ ಆಕಸ್ಮಿಕವಾಗಿ ನಾನು ಯೌವನಸ್ಥರ ಕೂಟದಲ್ಲಿ ಭಾಗವಹಿಸಿದೆ, ದೇವರು ನನ್ನೊಂದಿಗೆ ಮಾತನಾಡಿದರು. "ಎರಡು ದಿನಗಳ ಯೌವನಸ್ಥರ ಕೂಟ ನನಗಾಗಿ ಮಾತ್ರವೇ" ಎಂದು ದೇವರು ನನ್ನೊಂದಿಗೆ ಪ್ರತ್ಯಕ್ಷವಾಗಿ ಮಾತನಾಡಿದರು. ನಾನು ನನ್ನ ಜೀವನವನ್ನು ಯೇಸುವಿಗೆ ಸಮರ್ಪಿಸಿದೆ.

 

ನಾನು ಹದಿನೆಂಟು ವರ್ಷದವನಾಗಿದ್ದಾಗ, ಯೇಸು ಕ್ರಿಸ್ತನು ನನ್ನ ಎಲ್ಲಾ ಪಾಪಗಳನ್ನು ಕ್ಷಮಿಸಿದರು ಮತ್ತು ನನ್ನನ್ನು ತನ್ನ ಮಗುವಾಗಿ ಸ್ವೀಕರಿಸಿದರು. ದೇವರು ನನ್ನ ಜೀವನದಲ್ಲಿ ಬಂದನೆಂದು ತಿಳಿದಾಗ ನನ್ನ ಹೆತ್ತವರ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ದೇವರ ಮೇಲಿನ ಪ್ರೀತಿಯಿಂದ ಸಣ್ಣಪುಟ್ಟ ಸೇವೆಯನ್ನು ಮಾಡುತ್ತಿದ್ದೆ. ಆ ದಿನಗಳಲ್ಲಿಯೇ ವಿಲೇಜ್ ಮಿಷನರಿ ಮೂವ್‌ಮೆಂಟ್‌ ಗೆ ಸೇರಿದ ಜೇಕಬ್ ಅಣ್ಣ ನಮ್ಮ ಹಳ್ಳಿಗೆ ಸೇವೆಗೆ ಬಂದರು. ಅವರೊಂದಿಗೆ ಸೇರಿ ಗ್ರಾಮಗಳಲ್ಲಿ ಸೇವೆಗೆ ಹೋಗುತ್ತಿದ್ದೆ. ಜನವರಿ 2012 ರಲ್ಲಿ, ಅವರು ವಿಲೇಜ್ ಮಿಷನರಿ ಮೂವ್‌ಮೆಂಟ್‌ ನ ಪರವಾಗಿ ಪರಮಕುಡಿಯಲ್ಲಿ ಮೂರು ದಿನಗಳ ಕೂಟವನ್ನು ಆಯೋಜಿಸಿದ್ದರು. ಆ ಕೂಟಗಳಲ್ಲಿ ಪಾಲ್ಗೊಳ್ಳಲು ಹೋಗಿದ್ದೆ. ಅದರಲ್ಲಿ ಸಹೋ. ಡೇವಿಡ್ ಗಣೇಶನ್ ಅಣ್ಣನವರು ದೇವರ ವಾಕ್ಯವನ್ನು ಹಂಚಿಕೊಂಡರು. ಕೂಟವು ಮುಗಿದ ನಂತರ ನಾನು ಅವರ ಕೋಣೆಗೆ ಅವರನ್ನು ನೋಡಲು ಹೋದೆ. ಕೊನೆಗೆ ಅವರು ನನಗೆ ಒಂದು ಮಾತು ಹೇಳಿದರು. ಯೇಸಪ್ಪ ಅಳುತ್ತಿದ್ದಾರೆ ನೀನು ಯಾಕೆ ನಮ್ಮೊಂದಿಗೆ ಸೇರಿ ಸೇವೆ ಮಾಡಬಾರದು ಎಂದು! ಅದನ್ನು ಕೇಳಿದಾಗ ನನಗೆ ಸಹಿಸಲಾಗಲಿಲ್ಲ. ನನ್ನ ಕಣ್ಣೀರನ್ನು ಒರೆಸಿದ ಯೇಸು ಅಳುತ್ತಿದ್ದಾರೆ ಅವರಿಗಾಗಿ ಈ ಸೇವೆಯೊಂದಿಗೆ ಸೇರಿ ಒಟ್ಟಾಗಿ ಸೇವೆ ಮಾಡೋಣ ಎಂದು ನಿರ್ಧರಿಸಿದೆ. ಒಂದು ಕಡೆ ಮಾತನಾಡಲಾಗದ ಕಿವುಡ ಪೋಷಕರು, ಮತ್ತು ಮದುವೆಗಾಗಿ ಕಾಯುತ್ತಿರುವ ನನ್ನ ಸಹೋದರಿ, ಮತ್ತು ಇನ್ನೊಂದು ಬದಿಯಲ್ಲಿ ಆತ್ಮಗಳಿಗಾಗಿ ಅಳುತ್ತಿರುವ ಯೇಸು. ಆದರೂ ನನ್ನ ಇಡೀ ಕುಟುಂಬದ ಒಪ್ಪಿಗೆಯೊಂದಿಗೆ ಸೇವೆಗೆ ಬರಲು ದೇವರು ನನಗೆ ಸಹಾಯ ಮಾಡಿದರು. ಇಂದು, ನನ್ನ ತಂದೆ ಮತ್ತು ತಾಯಿ ಇಬ್ಬರೂ ಹದಿನೆಂಟು ವರ್ಷಗಳಿಂದ ಕಿವುಡ ಮತ್ತು ಮೂಕರ ನಡುವೆ ಸೇವೆ ಮಾಡುತ್ತಿದ್ದಾರೆ. ದೇವರೇ ನನ್ನ ಅಕ್ಕನ ಮದುವೆಯನ್ನು ನಡೆಸಿಕೊಟ್ಟರು. ಕುಟುಂಬ ಸಮೇತರಾಗಿ ದೇವರ ಸೇವೆ ಮಾಡಲು ದೇವರು ಕೃಪೆ ನೀಡಿದ್ದಾರೆ.

 

ಇದನ್ನು ಓದುತ್ತಿರುವ ಪ್ರೀತಿಯ ಯೌವನಸ್ಥ ಸಹೋದರ ಸಹೋದರಿಯರೇ, ನಿಮ್ಮ ಪರಿಸ್ಥಿತಿ ಎಷ್ಟೇ ಕಷ್ಟಕರವಾಗಿದ್ದರೂ ಆತನ ಸೇವೆಗೆ ನಿಮ್ಮ ಜೀವನವನ್ನು ಮುಡಿಪಾಗಿಡಲು ಪ್ರಯತ್ನಿಸಿ ನೋಡಿ. ಯೇಸು ನಿಮ್ಮನ್ನೂ ಉಪಯೋಗಿಸುತ್ತಾರೆ. ಅವರೇ ನಿಮ್ಮ ಕಾರ್ಯಗಳನ್ನೂ ನೋಡಿಕೊಳ್ಳುತ್ತಾರೆ. ಯೇಸು ಅಳುತ್ತಿದ್ದಾರೆ ಅವರ ಸೇವೆ ಮಾಡಿ ಅವರ ಕಣ್ಣೀರನ್ನು ಒರೆಸಲು ನಿಮ್ಮಿಂದ ಸಾಧ್ಯವಾಗುವಷ್ಟು ಮಾಡಿ. ಒಂದು ಬೀಜವಾಗಿ ಅನೇಕರಿಗೆ ಉಪಯುಕ್ತವಾದ ಜೀವನವನ್ನು ಜೀವಿಸಲು ನಿಮ್ಮನ್ನು ದೇವರಿಗೆ ಸಮರ್ಪಿಸಿಕೊಳ್ಳಿ. ದೇವರು ತಾನೇ ನಿಮ್ಮನ್ನು ಆಶೀರ್ವದಿಸಲಿ!

- Bro. ಆಲ್ವಿನ್ ಜಾಕೋಬ್

 

ಪ್ರಾರ್ಥನಾ ಅಂಶ:

ಈ ತಿಂಗಳು VBS ಸೇವೆಗಳ ಮೂಲಕ 5000 ಹಳ್ಳಿಗಳನ್ನು ತಲುಪಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş