Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.05.2024
Share:

By Village Missionary Movement

Wednesday, 01-May-2024

ಧೈನಂದಿನ ಧ್ಯಾನ(Kannada) – 01.05.2024

 

ಉಪವಾಸ ಮತ್ತು ಹೊರಟು ಹೋಗುವುದು 

 

"ಇವುಗಳನ್ನು ಮಾಡಬೇಕಾಗಿತ್ತು; ಅವುಗಳನ್ನೂ ಬಿಡಬಾರದು." - ಮತ್ತಾಯ 23:23

 

ಯೇಸುಕ್ರಿಸ್ತನ ಕಾಲದಲ್ಲಿ, ಶಾಸ್ತ್ರಿಗಳು ಸತ್ಯವೇದದ ಕೆಲವು ಸತ್ಯಗಳಿಗೆ ಕಟ್ಟುನಿಟ್ಟಾಗಿ ಬದ್ಧರಾಗಿದ್ದರು; ಕೆಲವು ಸತ್ಯಗಳನ್ನು ಗಮನಿಸದೆ ಬಿಟ್ಟು ಬಿಟ್ಟರು. ದಶಮಾಂಶದ ವಿಷಯಕ್ಕೆ ಬಂದರೆ ಹಣದಲ್ಲಿ ಮಾತ್ರವಲ್ಲ ಜೀರಿಗೆಯಲ್ಲಿಯೂ ದಶಮಾಂಶ ಕೊಡುತ್ತಿದ್ದರು. ಆದರೆ ಸತ್ಯವೇದದ ಪ್ರಮುಖ ವಿಷಯಗಳಾದ ನ್ಯಾಯ, ಕರುಣೆ ಮತ್ತು ನಂಬಿಕೆಯನ್ನು ಅವರು ಮರೆತುಬಿಟ್ಟಿದ್ದಾರೆ. ಇದಕ್ಕಾಗಿ ಕರ್ತನು ಅವರನ್ನು "ನಿಮಗೆ ಅಯ್ಯೋ" ಎಂದು ಗದರಿಸಿದರು.

 

ತ್ಯಾಗ ಮುಖ್ಯವೋ ಅಥವಾ ಕರುಣೆ ಮುಖ್ಯವೋ ಎಂಬ ವಿಷಯ ಬಂದಾಗ, "ಇವುಗಳನ್ನು ಮಾಡಬೇಕು, ಮತ್ತು ಅವುಗಳನ್ನು ಬಿಡಬಾರದು" ಎಂದು ನಮ್ಮ ದೇವರು ಹೇಳಿದರು. ಹೌದು, ಸತ್ಯವೇದದ ಎಲ್ಲಾ ಸತ್ಯಗಳನ್ನು ಸಮತೋಲನಗೊಳಿಸಿ ಅಭ್ಯಾಸಮಾಡಬೇಕು.

 

ಸುವಾರ್ತೆಯನ್ನು ಪ್ರಪಂಚದಾದ್ಯಂತ ಸಾರಬೇಕೆಂಬುದು ನಮ್ಮ ಕರ್ತನ ಆಜ್ಞೆಯಾಗಿದೆ. ಮತ್ತಾಯ 28:19 ರಲ್ಲಿ ಗಮನಿಸಬೇಕಾದ ಮುಖ್ಯವಾದ ಮಾತೇನೆಂದರೆ "ನೀವು ಹೊರಟುಹೋಗಿ". . . ಹೌದು, ಶಿಷ್ಯರು ಹೊರಟು ಹೋಗಿ ಸುವಾರ್ತೆ ಸಾರದಿರುವಲ್ಲಿ ಸುವಾರ್ತೆ ಸಾರಬೇಕು. ಇಂದು ಅನೇಕ ಸಂದರ್ಭಗಳಲ್ಲಿ ದೇಶದ ಜನರ ರಕ್ಷಣೆಗಾಗಿ ಉಪವಾಸ ಪ್ರಾರ್ಥನೆಗಳನ್ನು ನಡೆಸಲಾಗುತ್ತಿದೆ. ಅದು ತುಂಬಾ ಒಳ್ಳೆಯದು, ಆದರೆ ನಾವು ಪ್ರಾರ್ಥನೆಯೊಂದಿಗೆ ಸುಮ್ಮನಾಗಿಬಿಡುತ್ತೇವೆ. ಜನರ ರಕ್ಷಣೆಗಾಗಿ ಕೆಲಸ ಮಾಡುತ್ತಿದ್ದೇವೆಯೇ ಎಂದು ಯೋಚಿಸಬೇಕಾಗಿದೆ.

 

ಕರ್ತನಾದ ಯೇಸುಕ್ರಿಸ್ತನು ಭೂಮಿಯ ಮೇಲೆ ಇದ್ದ ದಿನಗಳಲ್ಲಿ, ಪ್ರಾರ್ಥನೆಯು ಅವರ ಜೀವನದ ಪ್ರಮುಖ ವಿಷಯಗಳಲ್ಲಿ ಒಂದಾಗಿತ್ತು. ಅವರು ತಮ್ಮ ಸೇವೆಯ ಆರಂಭದಲ್ಲಿ ನಲವತ್ತು ದಿನಗಳ ಕಾಲ ಉಪವಾಸ ಮಾಡಿದರು ಎಂದು ನಾವು ಸುವಾರ್ತೆಗಳಲ್ಲಿ ಓದುತ್ತೇವೆ. ಆದರೆ ನಮ್ಮ ಕರ್ತನು ಅದರೊಂದಿಗೆ ಸುಮ್ಮನಾಗದೆ, "ಎಲ್ಲಾ ಊರುಗಳನ್ನೂ ಹಳ್ಳಿಪಳ್ಳಿಗಳನ್ನೂ ಸುತ್ತಿಕೊಂಡು . . . ಸುವಾರ್ತೆಯನ್ನು ಸಾರಿ" (ಮತ್ತಾಯ 9:35) ಎಂದು ಓದುತ್ತೇವೆ. ಯೇಸು ಕ್ರಿಸ್ತನು ನಮಗೆ ಇಟ್ಟುಹೋಗಿರುವ ಮಾದರಿ, "ಉಪವಾಸ ಮಾಡಬೇಕು, ಅದರೊಂದಿಗೆ ಹೊರಟು ಹೋಗಬೇಕು" ಎಂಬುದೇ!

 

ಯುರೋಪಿಯನ್ ಮಿಷನರಿಗಳು ತಮ್ಮ ದೇಶಗಳಲ್ಲಿ ಉಪವಾಸವಿದ್ದು ಪ್ರಾರ್ಥನೆ ಮಾಡಿ ಅದರೊಂದಿಗೆ ಸುಮ್ಮನಾಗಿದ್ದರೆ, ನೀವು ಮತ್ತು ನಾನು ರಕ್ಷಣೆಹೊಂದಲು ಸಾಧ್ಯವಾಗುತ್ತಿರಲಿಲ್ಲ. ಅವರು ಅಪಾಯಕಾರಿ ಸಮುದ್ರ ಪ್ರಯಾಣಗಳನ್ನು, ಒಳನಾಡಿನ ಎತ್ತಿನ ಗಾಡಿಗಳಲ್ಲಿ ಹೊರಟು ಕಾರ್ಯನಿರ್ವಹಿಸಿದರ ನಿಮಿತ್ತವಾಗಿಯೇ ನಾವು ಸುವಾರ್ತೆಯನ್ನು ಅರಿತಿದ್ದೇವೆ. ನಾವು ಸಹ ಅವರಂತೆಯೇ ಉಪವಾಸ ಮಾಡಿ ಪ್ರಾರ್ಥಿಸೋಣ; ಹೊರಟು ಹೋಗಿ ಎಲ್ಲೆಡೆ ಸುವಾರ್ತೆಯನ್ನು ಸಾರೋಣ. ಕರ್ತನೇ ನಿಮ್ಮನ್ನು ಆಶೀರ್ವದಿಸಲಿ!

- J. ಸಂತೋಷ್

 

ಪ್ರಾರ್ಥನಾ ಅಂಶ:

ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin