By Village Missionary Movement
Sunday, 21-Apr-2024ಧೈನಂದಿನ ಧ್ಯಾನ(Kannada) – 21.04.2024 (Kids Special)
ನೀನು ವಿಶೇಷವಾದವನು(ಳು)
"…ಆದದರಿಂದ ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು" - ಮತ್ತಾಯ 10:31
ಆನೆಯೊಂದು ಕಾಡಿನಲ್ಲಿ ವಾಸಿಸುತ್ತಿತ್ತು. ಆ ಆನೆ ಯಾವಾಗಲೂ ತನ್ನನ್ನು ಇತರ ಪಕ್ಷಿಗಳು ಮತ್ತು ಪ್ರಾಣಿಗಳೊಂದಿಗೆ ಹೋಲಿಸಿಕೊಂಡು, ಮನಸ್ಸೋತು ಹೋಗುತ್ತಿತ್ತು. ಯಾವಾಗಲೂ ಚಿಂತಿಸುತ್ತಲೇ ಇತ್ತು. ಒಂದು ದಿನ ಪುಟ್ಟಪಕ್ಷಿಯೊಂದು ಹಾರುವುದನ್ನು ಕಂಡು ನನಗೂ ರೆಕ್ಕೆಗಳಿದ್ದಿದ್ದರೆ ನಾನೂ ಹಾರುತ್ತಿದ್ದೆ ಎಂದು ಬಿಕ್ಕಿ ಬಿಕ್ಕಿ ಅಳುತ್ತಿತ್ತು. ಅದಕ್ಕೆ ತಿನ್ನಲು ಸಹ ಇಷ್ಟವಿರಲಿಲ್ಲ.
ಅಲ್ಲಿ ಸುಂದರವಾದ ನೈಟಿಂಗೇಲ್ ಪಕ್ಷಿ ಮಧುರವಾಗಿ ಹಾಡುತ್ತಿತ್ತು. ಆನೆಗೆ ಇನ್ನೂ ಚಿಂತೆ ಹೆಚ್ಚಾಯಿತು. ಈ ಹಕ್ಕಿಗಳೆಲ್ಲ ಇಷ್ಟು ಸೊಗಸಾಗಿ ಹಾಡುತ್ತಿವೆಯಲ್ಲಾ ನನಗೆ ಮಾತ್ರ ಹಾಡುವ ಪ್ರತಿಭೆ ಇಲ್ಲವಲ್ಲಾ ಎಂದು ಯೋಚಿಸಿ ಅಳುತ್ತಿತ್ತು. ಇನ್ನೊಂದು ಚಿಟ್ಟೆ ಹೂವಿನ ಮೇಲೆ ಸುಂದರವಾಗಿ ಕುಳಿತು ಮಕರಂದವನ್ನು ಹೀರಿ ಸವಿಯುತ್ತಿತ್ತು. ಅದನ್ನು ಕಂಡ ಆನೆಯು ದೇವರು ಇದಕ್ಕೆ ಮಾತ್ರ ರುಚಿಯಾದ ಆಹಾರವನ್ನು ಕೊಟ್ಟಿದ್ದಾರೆ. ಆದರೆ ನಾನು ಮಾತ್ರ ರುಚಿಯಿಲ್ಲದ ಎಲೆಗಳನ್ನು ತಿನ್ನುತ್ತಿದ್ದೇನೆ ಎಂದು ಪ್ರಲಾಪಿಸಿತು.
ಚುಕ್ಕೆ ಜಿಂಕೆಗಳು ಓಡುತ್ತಿರುವುದನ್ನು ಕಂಡ ಆನೆ ಅಯ್ಯೋ ಅಂದವಾದ ಚುಕ್ಕೆ ಜಿಂಕೆಗಳ ಬಣ್ಣ ನನಗಿಲ್ಲವೇ! ವೇಗವಾಗಿ ಓಡಲು ತೆಳ್ಳಗಿನ ಕಾಲುಗಳಿಲ್ಲವೇ ಎಂದು ಕಣ್ಣೀರು ಸುರಿಸಿತು. ಅಲ್ಲಿ ಇರುವೆಗಳು ಭೂಮಿಗಡಿಯಲ್ಲಿ ಹೋಗಿಬರುತ್ತಿದ್ದವು ಆಗ ನಾನು ಹೀಗೆ ಹೋಗಲು ಸಾಧ್ಯವಿಲ್ಲವೇ ಎಂದು ಅಳುತ್ತಿತ್ತು. ಕೊನೆಗೆ ಆನೆಯು ತುಂಬಾ ತೆಳ್ಳಗಾಗಿ, ಸಾವಿನ ಅಂಚಿನಲ್ಲಿತ್ತು, ಆಗ ಕಾಡಿನಲ್ಲಿರುವ ಮೃಗಗಳು, ಪಕ್ಷಿಗಳು ಆ ಆನೆಯ ಬಳಿಗೆ ಬಂದು "ಆನೆಯವರೇ, ಕರ್ತನು ನಿಮಗೆ ಎಷ್ಟು ಬಲವನ್ನು, ಶಕ್ತಿಯನ್ನು ಕೊಟ್ಟಿದ್ದಾರೆ. ಎಷ್ಟು ದೊಡ್ಡ ಕಾಲುಗಳು ನಿಮಗಿವೆ. ನಿಮ್ಮ ದಂತ ಎಷ್ಟು ದುಬಾರಿಯಾಗಿದೆ? ನೀವು ಸೃಷ್ಟಿಯಲ್ಲಿ ಎಷ್ಟು ಶ್ರೇಷ್ಠರು ಎಂದು ನೆನೆಸಿ ನೋಡಿ. ನಿಮ್ಮ ಬಗ್ಗೆ “ಆನೆ ಬದುಕಿದರೂ ಸಾವಿರ ಬಂಗಾರ, ಸತ್ತರೂ ಸಾವಿರ ಬಂಗಾರ” ಎಂದು ಹೇಳುತ್ತಾರಲ್ಲಾ" ಎಂದು ಸಂತೈಸಿದವು. ಆಗಲೇ ದೇವರು ತನಗೆ ಕೊಟ್ಟಿರುವ ಶ್ರೇಷ್ಠತೆಯನ್ನು ನೆನೆಸಿ ದೇವರನ್ನು ಮಹಿಮೆಪಡಿಸಲು ಪ್ರಾರಂಭಿಸಿತು. ತನ್ನನ್ನು ವಿಶೇಷವಾಗಿ ಸೃಷ್ಟಿಸಿದ ದೇವರನ್ನು ಮರೆತು, ಗೊಣಗಿಬಿಟ್ಟೆನೇ ಎಂದುಕೊಂಡು ಪಶ್ಚಾತ್ತಾಪಪಟ್ಟಿತು.
ಪುಟ್ಟ ತಮ್ಮ, ತಂಗಿಯರೇ! ನೀವೂ ಇತರರನ್ನು ನೋಡಿ ನಾನು ಕಪ್ಪಾಗಿದ್ದೇನೆ, ಸುಂದರವಾಗಿಲ್ಲ, ಪ್ರತಿಭಾವಂತನಲ್ಲ, ಸೌಕರ್ಯಗಳಿಲ್ಲ ಎಂದು ಚಿಂತಿಸುತ್ತಿದ್ದೀರಾ? ನೀವು ಹೇಗಿದ್ದರೂ ಯೇಸಪ್ಪನಿಗೆ ತುಂಬಾ ಇಷ್ಟ. ಏಕೆಂದರೆ , ನೀವು ಯೇಸಪ್ಪನ ದೃಷ್ಟಿಯಲ್ಲಿ ವಿಶೇಷವಾದವನು(ಳು).
- Mrs. ಜೀವಾ ವಿಜಯ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482