Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.04.2024
Share:

By Village Missionary Movement

Saturday, 20-Apr-2024

ಧೈನಂದಿನ ಧ್ಯಾನ(Kannada) – 20.04.2024

 

ಸತ್ತ ನೊಣ

 

"ಸತ್ತ ನೊಣಗಳಿಂದ ಗಂದಿಗನ ತೈಲವು ಕೊಳೆತು ನಾರುವದು; ಹಾಗೆಯೇ ಹುಚ್ಚುತನ ಸ್ವಲ್ಪವಾದರೂ ಜ್ಞಾನಮಾನಗಳನ್ನು ಮುಚ್ಚಿ ಮೀರುವದು.” - ಪ್ರಸಂಗಿ 10:1

 

ಮನೆಯೊಂದರ ತೋಟದಲ್ಲಿದ್ದ ಮರದಲ್ಲಿ ಕಾಗೆಯೊಂದು ವಾಸವಾಗಿತ್ತು. ಅದೇ ತೋಟದಲ್ಲಿ ವಾಸಿಸುತ್ತಿದ್ದ ನಾಯಿ ಮತ್ತು ಕಾಗೆ ಸ್ನೇಹಿತರಾದರು. ನಾಯಿ ಒಂದು ದಿನ ದುಃಖಿತನಾಗಿದ್ದ ಕಾಗೆಯನ್ನು ನೋಡಿ ಇಂದು ಏಕೆ ದುಃಖಿತನಾಗಿದ್ದೀಯ ಎಂದು ಕೇಳಿತು. ಕಾಗೆ ಏನಿಲ್ಲವೆಂದಿತು. ನಾಯಿ ಬಿಡಲಿಲ್ಲ. ತಕ್ಷಣ ಕಾಗೆ ಹೇಳಿತು. ಈ ಜನರು ಪ್ರೀತಿಯಿಂದ ಗಿಳಿ ಮತ್ತು ಪಾರಿವಾಳಗಳನ್ನು ಸಾಕುತ್ತಿದ್ದಾರಲ್ಲಾ ಎಂದು ನೋಡಲು ನಾನು ಅವರ ಕಿಟಕಿಯ ಬಳಿಗೆ ಹೋದೆ. ಅವರು ನನ್ನನ್ನು ಓಡಿಸಿಬಿಟ್ಟರು. ಏಕೆ ಜನರಿಗೆ ನನ್ನನ್ನು ಕಂಡರೆ ಇಷ್ಟವಿಲ್ಲ, ನನ್ನಲ್ಲಿ ಎಷ್ಟು ಗುಣಗಳಿವೆ ಎಂದಿತು. ನಾಯಿ, ಒಳ್ಳೇತನಾನ? ನಿನ್ನ ಹತ್ರಾನಾ! ಎಲ್ಲಿ ಹೇಳು ನೋಡೋಣ ಎಂದ ಕೂಡಲೇ ಮುಂಜಾನೆ ಬೇಗ ಎದ್ದೇಳುತ್ತೇವೆ, ಶುದ್ಧವಾಗಿರುತ್ತೇವೆ. ಕೂಡಿ ಬಾಳುತ್ತೇವೆ ಎಂದಿತು ಕಾಗೆ. ಇಷ್ಟೆಲ್ಲ ಆದರೂ ನಿನಗೆ ಕಳ್ಳತನ ಮಾಡುವ ಅಭ್ಯಾಸವಿದೆ, ಎಚ್ಚರವಾಗಿರುವಾಗಲೇ ಕೈಗೆ ಸಿಕ್ಕಿದ್ದನ್ನು ಕಿತ್ತುಕೊಂಡು ಹೋಗಿ ಬಿಡುತ್ತೀಯೆ ಎಂದಿತು ನಾಯಿ. ಹೌದು, ಇಷ್ಟು ಒಳ್ಳೆಯ ಗುಣಗಳು ನನಗಿದ್ದರೂ ನಾನು ಕಳ್ಳತನ ಮಾಡುವುದರಿಂದ ನನಗಿರುವ ಎಲ್ಲಾ ಒಳ್ಳೆಯ ಗುಣಗಳು ವ್ಯರ್ಥವಾಯಿತೇ ಎಂದು ಅಂದುಕೊಂಡಿತು.

 

ಇದರಂತೆ, ಬುದ್ಧಿವಂತಿಕೆಯಲ್ಲೂ, ಗೌರವದಲ್ಲೂ ಹೆಸರುವಾಸಿಯಾದ ವ್ಯಕ್ತಿಯು ಸ್ವಲ್ಪ ಅಸಡ್ಡೆಯಿಂದ ಹಾಳಾಗುತ್ತಾನೆ ಎಂದು ಸತ್ಯವೇದವು ಹೇಳುತ್ತಿದೆ. ನಮ್ಮಲ್ಲಿ ಮೂಡುವ ಸಣ್ಣ ಪುಟ್ಟ ಬಯಕೆಗಳು ಮತ್ತು ಆಲೋಚನೆಗಳು ನಮ್ಮನ್ನು ಕೆಡವುತ್ತಿವೆ. ಅರಸನಾದ ಉಜ್ಜೀಯನು ಹದಿನಾರನೆಯ ವಯಸ್ಸಿನಲ್ಲಿ ಅರಸನಾದಾಗ, ಅವನು ಕರ್ತನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿದನು. ಅವರು ತನ್ನ ಸೇನೆಯ ಶಕ್ತಿಯನ್ನು ಹೆಚ್ಚಿಸಿದನು. ಜನರ ಹಿತದ ಬಗ್ಗೆ ಕಾಳಜಿ ವಹಿಸಿ ಜನರನ್ನು ಸಂಪಾದಿಸಿದರು. ಮಹತ್ಕಾರ್ಯಗಳನ್ನು ಮಾಡಿದರೆಂದು ಸತ್ಯವೇದವು ಹೇಳುತ್ತಿದೆ. ಆದರೆ ತನಗೆ ಕೇಡು ಸಂಭವಿಸುವ ಮಟ್ಟಿಗೆ ಅವನ ಮನಸ್ಸು ಹೆಮ್ಮೆಯಿಂದಿತ್ತು, ಎಂದು ಸತ್ಯವೇದವು ಹೇಳುತ್ತಿದೆ. "ಹೆಮ್ಮೆಯು" ಸತ್ತ ನೊಣದ ಹಾಗೆ ಅವರ ಸುಗಂಧಭರಿತ ಜೀವನದಲ್ಲಿ ಬಿದ್ದು ರಾಜನಾದ ಉಜ್ಜೀಯನ ಎಲ್ಲಾ ಸದ್ಗುಣಗಳನ್ನು ನಾಶಪಡಿಸಿತು. ಮೋಶೆಯು ತನ್ನ ಸಣ್ಣ ಅವಿಧೇಯತೆಯ ಕಾರಣದಿಂದ ಕಾನಾನ್ ಅನ್ನು ಸ್ವತಂತ್ರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸೊಲೊಮೋನನು ಮಹಾ ಜ್ಞಾನಿಯಾಗಿದ್ದರೂ ಸಹ, ದೇವರ ಆಜ್ಞೆಯನ್ನು ಉಲ್ಲಂಘಿಸಿ ಅನ್ಯಸ್ತ್ರೀಯನ್ನು ಮದುವೆಯಾದನು, ಈ ಕಾರ್ಯವು ರಾಜ್ಯವನ್ನು ವಿಭಜಿಸಿತು. ಎಲ್ಲಾ ಜ್ಞಾನವನ್ನು ಹತಮಾಡಿತು. ಸಂಸೋನನು ದೇವರ ಆಜ್ಞೆಯನ್ನು ಉಲ್ಲಂಘಿಸಿದನು ಮತ್ತು ಸತ್ತ ಸಿಂಹದ ದೇಹದಿಂದ ಜೇನುತುಪ್ಪವನ್ನು ತಿಂದನು, ಅದು ಬಲಶಾಲಿಯಾದ ಮನುಷ್ಯನನ್ನು ಗುಲಾಮನನ್ನಾಗಿ ಮಾಡಿತು.

 

ಪ್ರಿಯರೇ, ನೀವು ಚೆನ್ನಾಗಿ ಆಶೀರ್ವದಿಸಲ್ಪಟ್ಟು ಸಮೃದ್ಧಿಯಾಗಿದ್ದೀರಾ? ಹೆಮ್ಮೆ, ಅಹಂಕಾರ, ದುರಹಂಕಾರ ನಮ್ಮ ಯೋಚನೆಯಲ್ಲೂ ಬರದಂತೆ ನೋಡಿಕೊಳ್ಳೋಣ. ಅದಕ್ಕಾಗಿ ನಾವು ಪ್ರತಿದಿನ ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳಬೇಕು ಮತ್ತು ನಾವು ಮಾಡುವುದೆಲ್ಲವೂ ದೇವರ ಕೃಪೆಯೇ ಹೊರತು ಬೇರೇನೂ ಅಲ್ಲ ಎಂದು ಒಪ್ಪಿಕೊಳ್ಳಬೇಕು. ದೇವರ ಕೃಪೆ ಮತ್ತು ದಯೆ ಇಲ್ಲದೆ ಏನೂ ಇಲ್ಲ ಎಂದು ನಾವು ಮನಸ್ಸಿನಲ್ಲಿಟ್ಟುಕೊಳ್ಳೋಣ. ಸತ್ತ ನೊಣಗಳು ನಮ್ಮ ಜೀವನದಲ್ಲಿ ಬೀಳದಂತೆ ನೋಡಿಕೊಳ್ಳೋಣ.

- Sis. ಅನ್ಬುಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳಿಗಾಗಿ ಮತ್ತು ಅವರ ಕುಟುಂಬಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al