Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.04.2024
Share:

By Village Missionary Movement

Wednesday, 17-Apr-2024

ಧೈನಂದಿನ ಧ್ಯಾನ(Kannada) – 17.04.2024

 

ಕ್ರಿಸ್ತನ ಕೆಲಸ

 

"…ಇಗೋ, ನಾವು ನಮ್ಮ ನಮ್ಮ ಮನೆಮಾರುಗಳನ್ನು ಬಿಟ್ಟು ನಿನ್ನ ಹಿಂದೆ ಬಂದೆವು ಎಂದು ಹೇಳಲು" - ಲೂಕ 18:28

 

ಆರ್ಥರ್ ಮಾರ್ಸಿಯಸ್ ಆರೋಗ್ಯವಂತ ವ್ಯಕ್ತಿಯಾಗಿರಲಿಲ್ಲ. ಅವರು ಅಸ್ತಮಾದಿಂದ ಬಳಲುತ್ತಿದ್ದರು. ಆದರೆ ಅವರು ಬಯಸಿ ಆಯ್ಕೆ ಮಾಡಿಕೊಂಡ ಸೇವೆಯನ್ನು ಪೂರೈಸುವಲ್ಲಿ ಆಸಕ್ತಿಯುಳ್ಳವರು ಮತ್ತು ಉತ್ಸಾಹವುಳ್ಳವರೂ ಆಗಿದ್ದರು. ಅವರು ತಮ್ಮ 22 ನೇ ವಯಸ್ಸಿನಲ್ಲಿ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡರು. ವೈದ್ಯಕೀಯ ಶಾಲೆಯಲ್ಲಿ ಓದುತ್ತಿರುವಾಗ ಮತ್ತು ಅವರ ಸ್ನಾತಕೋತ್ತರ ಪರೀಕ್ಷೆಗೆ ತಯಾರಿ ನಡೆಸುತ್ತಿರುವಾಗ, ಮಿಷನರಿ ರಾಬರ್ಟ್ ಕಾಲ್ಡ್ವೆಲ್ ಅವರ ಮಹತ್ವದ ಮಾತುಗಳು ಅವರನ್ನು ದಕ್ಷಿಣ ಭಾರತಕ್ಕೆ ಕರೆತಂದಿತು. ಅವರ ಸಂಪೂರ್ಣ ಸೇವೆಯ ಸಮರ್ಪಣೆಯ ಪರಿಣಾಮದಿಂದ ರೂಪುಗೊಂಡದ್ದೇ ತೂತುಕುಡಿ ಜಿಲ್ಲೆಯಲ್ಲಿರುವ ನಜರೇತ್. ಇಂದಿಗೂ ಅವರು ಮಾಡಿದ ಸೇವೆಯ ಬಗ್ಗೆ ಮಾತನಾಡಲಾಗುತ್ತಿದೆ. ಈ ಪ್ರದೇಶದ ಸುತ್ತಮುತ್ತಲಿನ ಅನೇಕ ಗ್ರಾಮಗಳು ಕ್ರೈಸ್ತ ಗ್ರಾಮಗಳಾಗಿಯೂ, ಕ್ರಿಸ್ತನ ವಾಸನೆಯುಳ್ಳವರಾಗಿಯೂ ಮಾರ್ಪಟ್ಟಿದ್ದಾರೆ. ಇವರು ಮಾಡಿರುವ ಹಲವಾರು ಸಾಮಾಜಿಕ ಸೇವೆಗಳೂ ಇವೆ. ಕಾರಣವೇನೆಂದರೆ ಅವರು ಕ್ರಿಸ್ತನ ಸೇವೆಯನ್ನು ಎಲ್ಲಕ್ಕಿಂತ ಹೆಚ್ಚಾಗಿ ಪರಿಗಣಿಸಿದರು.

 

ನಂಬಿಕೆಯಿಂದ ಮೋಶೆಯು ದೊಡ್ಡವನಾದ ಮೇಲೆ ಫರೋಹನ ಕುಮಾರ್ತೆಯ ಮಗನೆನಿಸಿಕೊಳ್ಳುವದು ಬೇಡವೆಂದು ತೊರೆದು, ಸ್ವಲ್ಪಕಾಲ ಪಾಪಭೋಗಗಳನ್ನನುಭವಿಸುವದಕ್ಕಿಂತ ದೇವರ ಜನರೊಂದಿಗೆ ಕಷ್ಟವನ್ನನುಭವಿಸುವದೇ ಒಳ್ಳೇದೆಂದು ತೀರ್ಮಾನಿಸಿಕೊಂಡನು.

 

ಪ್ರಿಯರೇ! ಗೋಧಿ ಕಾಳು ನೆಲಕ್ಕೆ ಬಿದ್ದು ಸತ್ತರೇನೆ ಹೆಚ್ಚು ಫಲವನ್ನು ಕೊಡುತ್ತದೆ ಎಂಬ ವಾಕ್ಯದ ಪ್ರಕಾರ ಕ್ರಿಸ್ತನಿಗಾಗಿಯೂ ಮತ್ತು ಆತನ ರಾಜ್ಯಕ್ಕಾಗಿಯೂ ತಮ್ಮದನ್ನು ಕಳೆದುಕೊಂಡ ಜನರು ಬಹಳ ಹೆಚ್ಚೆಚ್ಚಾಗಿದ್ದಾರೆ. ಏಕೆಂದರೆ ಅವರು ಕ್ರಿಸ್ತನ ರಾಜ್ಯದ ಸೇವೆಯನ್ನು ಶ್ರೇಷ್ಠವೆಂದು ಪರಿಗಣಿಸಿದರು. ಇಂದು ನಾವು ನಮ್ಮ ಮಾತೃಭೂಮಿಯ ಮೇಲೆ ವಿದೇಶಿ ಮಿಷನರಿಗಳು ಸುರಿಸಿದ ರಕ್ತದ ಹನಿಗಳ ಮೇಲೆಯೇ ನಿಂತಿದ್ದೇವೆ. ಅವರು ಆರಂಭಿಸಿದ ಶಿಕ್ಷಣ ಸಂಸ್ಥೆಗಳು ಇಂದಿಗೂ ಅವರ ತ್ಯಾಗಗಳನ್ನು ಸ್ಮರಿಸುತ್ತಿವೆ. ಕ್ರಿಸ್ತನಿಗಾಗಿ ಒಬ್ಬನು ಕಳೆದುಕೊಂಡದ್ದನ್ನು ಜಗತ್ತು ಮರೆತುಬಿಡಬಹುದು. ಆದರೆ ಕ್ರಿಸ್ತನ ಸೇವೆಗಾಗಿ ಅವರು ಕಳೆದುಕೊಂಡ ಎಲ್ಲವನ್ನೂ ಪರಲೋಕವು ಅವರಿಗೆ ಪುನಃ ಕೊಡುತ್ತದೆ. ಆದ್ದರಿಂದ, ಈ ಜಗತ್ತಿನಲ್ಲಿ ಕ್ರಿಸ್ತನಿಗಾಗಿ ಪಾಡುಗಳು ಅನುಭವಿಸುವುದನ್ನು ನಾವು ಸಂತೋಷವೆಂದು ಮತ್ತು ಶ್ರೇಷ್ಠವೆಂದು ಪರಿಗಣಿಸೋಣ.

- Mrs. ರೂಬಿ ಅರುಣ್

 

ಪ್ರಾರ್ಥನಾ ಅಂಶ:

ನಮ್ಮ ಆಮೆನ್ ವಿಲೇಜ್ ಟಿವಿ ಕಾರ್ಯಕ್ರಮಗಳಲ್ಲಿ ವಾಕ್ಯ ಮತ್ತು ಹಾಡುಗಳನ್ನು ಹಾಡುವ ಮಕ್ಕಳ ಭವಿಷ್ಯಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş