Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.04.2021
Share:

By Village Missionary Movement

Tuesday, 13-Apr-2021

ಧೈನಂದಿನ ಧ್ಯಾನ(Kannada) – 13.04.2021

ತಾಯಿ ಮರೆತರೂ

"ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ ತನ್ನ ಮೊಲೆಕೂಸನ್ನು ಮರೆತಾಳೇ? ಒಂದು ವೇಳೆ ಮರೆತಾಳು, ನಾನಾದರೆ ನಿನ್ನನ್ನು ಮರೆಯೆ." - ಯೆಶಾಯ 49:15

ಕೇರಳ ರಾಜ್ಯದ ಪಾಲಕ್ಕಾಡ್ ನಲ್ಲಿ1999 ನೇ ವರ್ಷ ಬೀದಿಯಲ್ಲಿ ಅಲೆದಾಡುತ್ತಿದ್ದ ಎಂಟು ವಯಸ್ಸಿನ ಹುಡುಗನನ್ನು ಪೋಲಿಸರು ಕರೆದು ವಿಚಾರಿಸಿದರು. ತನ್ನ ಹೆಸರು ಅಭಯ್ ಎಂದು, ಅಪ್ಪನ ಹೆಸರು ಅಂತೋನಿ, ಸ್ವಂತ ಊರು ಬೆಂಗಳೂರು ಎಂದು ತಿಳಿಸಿದನು. ಸ್ಪಷ್ಟವಾದ ವಿವರಗಳು ಇಲ್ಲದೆ ಹೋದುದರಿಂದ ಅವನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ನ್ಯಾಯಾಧಿಪತಿ ಅವನನ್ನು ಶಿಶು ಪಾಲನಾ ಕೇಂದ್ರದಲ್ಲಿ ಸೇರಿಸುವಂತೆ ತಿಳಿಸಿದರು.

ವಾರ್ತಾಪತ್ರಿಕೆಯ ಮೂಲಕ ವಿಷಯವನ್ನು ತಿಳಿದ ಸುಶೀಲ ಎಂಬ ಹೆಂಗಸು ತನ್ನ ಮಗನೇ ಅಭಯ್ ಎಂದು ನಾನು ಹೆತ್ತ ಮಗನೇ ಇವನು ಎಂದು ಹೇಳಿ ನನ್ನ ಅತ್ತೆ ಅವನು ಮಗುವಾಗಿರುವಾಗಲೇ ನನ್ನಿಂದ ಕಿತ್ತುಕೊಂಡು ಹೊರಟು ಹೋದರು ಎಂದು ಹೇಳಿ ಆ ಚಿಕ್ಕ ಹುಡುಗನನ್ನು ಕರೆದುಕೊಂಡುಹೋದಳು. ಎರಡು ವರ್ಷಗಳು ಅಭಯ್ ಸುಶೀಲಳ ಬಳಿ ಬೆಳೆದನು. ಅವಳು ಮತ್ತೆ ಪಾಲಕ್ಕಾಡ್ ನ್ಯಾಯಾಲಯಕ್ಕೆ ಅಭಯ್ ನನ್ನು ಕರೆದುಕೊಂಡು ಬಂದು, ಇವನನ್ನು ತಪ್ಪಾಗಿ ನನ್ನ ಮಗನೆಂದು ಹೇಳಿಬಿಟ್ಟೆನು. ನನ್ನ ಗಂಡನ ಹೆಸರು ಅಂತೋನಿ ಊರು ಬೆಂಗಳೂರು ಆಗಿರುವುದರಿಂದ ಕರೆದುಕೊಂಡು ಹೋಗಿಬಿಟ್ಟೆನು ನನ್ನ ಮಗ ಬೆಂಗಳೂರಿನಲ್ಲಿ ಬೆಳೆಯುತ್ತಿದ್ದಾನೆ, ಅವನನ್ನು ಕಂಡುಹಿಡಿದು ಬಿಟ್ಟೆನು ಎಂದು ಹೇಳಿ ಒಂದು ಭಾವ ಚಿತ್ರವನ್ನು ತೋರಿಸಿ, ತಪ್ಪು ನಡೆದುಹೋಯಿತು ಕ್ಷಮಿಸಿಬಿಡಿ ಎಂದು ಹೇಳಿ ಆ ಚಿಕ್ಕವನನ್ನು ನ್ಯಾಯಾಲಯದಲ್ಲಿ ಒಪ್ಪಿಸಿಬಿಟ್ಟಳು. ಕಾಣದೆ ಹೋಗಿ ಬೀದಿಯಲ್ಲಿ ಸುತ್ತುತ್ತಿದ್ದ ದಿನಗಳಲ್ಲಿ ಆ ಚಿಕ್ಕ ಹುಡುಗ ಅಳಲಿಲ್ಲ. ಆದರೆ ಎರಡು ವರ್ಷಗಳು ತಾಯಿಯ ಪ್ರೀತಿಯನ್ನು ಅನುಭವಿಸಿದ ಅವನಿಂದ ತಾಯಿಯನ್ನು ಬಿಟ್ಟಿರಲು ಸಾಧ್ಯವಾಗದೆ ಬಿಕ್ಕಳಿಸಿ ಅತ್ತನು. ಹೃದಯವನ್ನು ಕಲಕುವ ಈ ಸಂಭವವನ್ನು ನೋಡಿದ ನ್ಯಾಯಾಧಿಪತಿ, ಅಮ್ಮ ಇವನನ್ನೂ ನಿಮ್ಮ ಮಗನಾಗಿ ಭಾವಿಸಿ ಬೆಳೆಸ ಬಾರದ? ಎಂದು ಕೇಳಿದ್ದಕ್ಕೆ ಅವಳು ಉತ್ತರವೇನು ಹೇಳದೆ ಹೊರಟುಹೋದಳು. ಅಭಯ್ ಪುನಃ  ಶಿಶು ಪಾಲನಾ ಕೇಂದ್ರಕ್ಕೆ ಕಳುಹಿಸಲ್ಪಟ್ಟನು.

ಹೆತ್ತವರಿಂದ ತ್ಯಜಿಸಲ್ಪಟ್ಟ ಸಾವಿರಾರು ಚಿಕ್ಕ ಮಕ್ಕಳು ಲೋಕದ ಎಲ್ಲಾ ಭಾಗಗಳಲ್ಲಿಯೂ ಇದ್ದಾರೆ. ಕೆಲವು ತಾಯಂದಿರು ಪಾಪ ಪುಣ್ಯವೇ ಇಲ್ಲದೆ ತಮ್ಮ ಉತ್ಸಾಹ ಮತ್ತು ಸ್ವಾರ್ಥ ಜೀವನಕ್ಕಾಗಿ ಮಕ್ಕಳನ್ನು ಸಾಯಿಸಿ ಬಿಡುತ್ತಿದ್ದಾರೆ. ಬಡತನದಿಂದ ತಾವು ಹೆತ್ತಮಕ್ಕಳನ್ನು ಬಿಟ್ಟುಬಿಡಲು ಆತುರ ಪಡುತ್ತಿದ್ದಾರೆ. ಇಂತಹ ಸಂಭವಗಳನ್ನು ನಾವು ಅನುದಿನವು ವಾರ್ತಾಪತ್ರಿಕೆ ಮತ್ತು T.V. ಮೂಲಕ ಕೇಳುತ್ತಲೇ ಇರುವುದರಿಂದ ನಮ್ಮ ಹೃದಯವು ಕುದಿಯುತ್ತಿದೆ.

ಆದರೆ ನಮ್ಮ ಪ್ರೀತಿಯ ದೇವರು, ಯಾವ ಪರಿಸ್ಥಿತಿಯಲ್ಲಿಯೂ, ಅವರನ್ನು ಪ್ರೀತಿಸಿ, ಅವರನ್ನೇ ನಂಬಿ ಅವರೊಂದಿಗೆ ಜೀವಿಸುತ್ತಿರುವ ತಮ್ಮ ಮಕ್ಕಳನ್ನು ಎಂದಿಗೂ ಕೈಬಿಡುವುದೂ ಇಲ್ಲ, ತ್ಯಜಿಸುವುದೂ ಇಲ್ಲ. ನನ್ನ ಪ್ರಿಯರೇ, ನಮ್ಮನ್ನು ಎಂದಿಗೂ ಮರೆಯದೆ, ಹೊತ್ತು, ಸಾಕಿ ಸಲಹಿ, ತಪ್ಪಿಸಿ ಕಾಪಾಡುತ್ತಾ ಬರುತ್ತಿರುವ ದೇವರು ನಮ್ಮೊಂದಿಗಿದ್ದಾರೆ ಎಂಬ ದೃಢತೆಯಿಂದ ಅವರನ್ನು ಸ್ತುತಿಸಿ, ಮಹಿಮೆ ಪಡಿಸಿ ಜೀವಿಸೋಣ. ದೇವರ ಕೃಪೆ ನಮ್ಮನ್ನು ಆದರಿಸಲಿ!
-    Mrs. ಸರೋಜಾ ಮೋಹನ್ ದಾಸ್

ಪ್ರಾರ್ಥನಾ ಅಂಶ:-
ಹೊಸದಾಗಿ ಒಂದೇ ದರ್ಶನವನ್ನು ಹೊಂದಿ ತಮ್ಮನ್ನು ಸಮರ್ಪಿಸಿಕೊಂಡಿರುವ ಸೇವಕರನ್ನು ದೇವರು ನಮ್ಮೊಂದಿಗೆ ಒಟ್ಟುಗೂಡಿಸುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin