By Village Missionary Movement
Tuesday, 09-Apr-2024ಧೈನಂದಿನ ಧ್ಯಾನ(Kannada) – 09.04.2024
ನಾವೂ ಕ್ರಿಸ್ತನೊಂದಿಗೆ
"ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ;..." - ಗಲಾತ್ಯ 2:20
ಒಬ್ಬ ವ್ಯಕ್ತಿ ಅನೇಕ ಸ್ಥಳಗಳಲ್ಲಿ ಕೆಲಸ ಹುಡುಕಿದರೂ ಸಿಗಲಿಲ್ಲ ಹಣ ಮತ್ತು ಸೌಕರ್ಯಗಳಿಲ್ಲದೆ ಬಡತನದೊಂದಿಗೆ ಒಂದು ದಿನ ಸಮುದ್ರತೀರದಲ್ಲಿ ನಡೆಯುತ್ತಾ ಇದ್ದರು. ಅವರು ಸಮುದ್ರ ತೀರದಲ್ಲಿ ನಡೆದುಕೊಂಡು ಹೋದಾಗ ಅವರ ಕಾಲಿನ ಮೇಲೆ ಒಂದು ಬಾಟಲಿಯು ಬಿದ್ದಿತು. ಅದನ್ನು ನೋಡಿದಾಗ ಒಳಗೆ ಒಂದು ಪತ್ರ ಮಡಚಿಟ್ಟಿತ್ತು. ಅದರಲ್ಲಿ, "ನಾನು ನನ್ನ ಸಂಪೂರ್ಣ ಆಸ್ತಿಯನ್ನು ಈ ಬಾಟಲಿ ಸಿಗುವ ಅದೃಷ್ಟಶಾಲಿಗೆ ಮತ್ತು ನನ್ನ ವಕೀಲರಿಗೆ ನೀಡುತ್ತೇನೆ. ಇಬ್ಬರೂ ಸಮಾನವಾಗಿ ಹಂಚಿಕೊಳ್ಳಿರಿ" ಎಂದು ಬರೆಯಲಾಗಿತ್ತು. ಅದನ್ನು ಹಾಗೆ ಬರೆದು ಕಳುಹಿಸಿದವರು ಸಿಂಗಾರ್ ಹೊಲಿಗೆ ಮಿಷನ್‌ನ ಮಾಲೀಕರಲ್ಲಿ ಒಬ್ಬರಾದ ಸಿಂಗಾರ್ ಅಲೆಕ್ಸಾಂಡರ್. ಅವರು 12 ವರ್ಷಗಳ ಹಿಂದೆ ಲಂಡನ್‌ನ ಥೇಮ್ಸ್ ನದಿಯಲ್ಲಿ ಬಾಟಲಿಯಲ್ಲಿ ಹೀಗೆ ಬರೆದು ಹಾಕಿದ್ದರು. ಹನ್ನೆರಡು ವರ್ಷಗಳ ನಂತರ ಅದು ಜ್ಯಾಕ್ ಉರ್ಮ್ ಎಂಬ ಬಡವನ ಕೈಗೆ ಸಿಕ್ಕಿತು. ಅದು ಅವರನ್ನು ರಾತ್ರೋರಾತ್ರಿ ಅತ್ಯಂತ ಶ್ರೀಮಂತನನ್ನಾಗಿ ಮಾಡಿತು. ಎಷ್ಟು ಅದ್ಭುತ ನೋಡಿ.
ಅಪೊ. ಪೌಲನು ಗಲಾತ್ಯದವರಿಗೆ ಬರೆದ ಪತ್ರಿಕೆಯಲ್ಲಿ, "ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ; ಇನ್ನು ಜೀವಿಸುವವನು ನಾನಲ್ಲ, ಕ್ರಿಸ್ತನು ನನ್ನಲ್ಲಿ ಜೀವಿಸುತ್ತಾನೆ," (ಗಲಾತ್ಯ 2:20) ಎಂದು. ಅದೇ ಗಲಾತ್ಯದಲ್ಲಿ, ಇನ್ನೊಂದು ವಚನವು ಹೀಗೆ ಹೇಳುತ್ತದೆ, "ಕ್ರಿಸ್ತ ಯೇಸುವಿನವರು ತಮ್ಮ ಶರೀರಭಾವವನ್ನು ಅದರ ವಿಷಯಾಭಿಲಾಷೆ ಸ್ವೇಚ್ಫಾಭಿಲಾಷೆ ಸಹಿತ ಶಿಲುಬೆಗೆ ಹಾಕಿದವರು. (ಗಲಾತ್ಯ 5:24) ಇನ್ನೂ ಚೆನ್ನಾಗಿ ಅರ್ಥವಾಗುವಂತೆ ಹೇಳಬೇಕಾದರೆ ಕ್ರಿಸ್ತನನ್ನು ಹೊಂದಿರುವವರು ತಮ್ಮ ಸ್ವಂತ ಆಸೆಗಳಿಗೆ ಏನನ್ನೂ ಇಟ್ಟುಕೊಳ್ಳದೆ ಶಿಲುಬೆಯಲ್ಲಿ ನೇತಾಡಿದ ಯೇಸುವಿಗಾಗಿ ಬಿಟ್ಟು ಕೊಡುತ್ತಾರೆ ಎಂದು.
ಇದನ್ನು ಓದುತ್ತಿರುವ ಪ್ರಿಯರೇ, ಡೈಸಿ ಸಿಂಗಾರ್ ತನ್ನ ಐಶ್ವರ್ಯವನ್ನು ತನ್ನ ಎಲ್ಲಾ ಪತ್ರಗಳನ್ನು ಬಾಟಲಿಯಲ್ಲಿ ಹಾಕಿಟ್ಟರು. ಏಕೆಂದರೆ ಅವರು ಹೋಗುವ ಸ್ಥಳಕ್ಕೆ ತನ್ನ ಸಂಪತ್ತನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಅಂತೆಯೇ, ಜ್ಯಾಕ್ ಉರ್ಮ್ ಅವರೂ ಸಹ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಈ ಲೌಕಿಕ ಸಂಪತ್ತು ಈ ಜಗತ್ತಿನೊಂದಿಗೆ ಕೊನೆಗೊಳ್ಳುತ್ತದೆ. ಎಷ್ಟೇ ದೊಡ್ಡ ಸಂಪತ್ತು ಇದ್ದರೂ ಸಾಯುವಾಗ ಅದನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ನಾವು ಕ್ರಿಸ್ತನೊಂದಿಗಿದ್ದು ಕ್ರಿಸ್ತನಿಗಾಗಿ ಏನು ಮಾಡಿದ್ದೇವೆಯೋ ಅದೇ ನಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತದೆ. ಆದ್ದರಿಂದ ನಾವು ಕ್ರಿಸ್ತನಿಗಾಗಿ ನಮ್ಮ ಆಸೆಗಳನ್ನು ಬಿಟ್ಟುಕೊಟ್ಟು ಕಾರ್ಯನಿರ್ವಹಿಸೋಣ.
- Mrs. ಶಕ್ತಿ ಶಂಕರ್ ರಾಜ್
ಪ್ರಾರ್ಥನಾ ಅಂಶ:
ನಮ್ಮ ಆಮೆನ್ ವಿಲೇಜ್ ಟಿವಿಯನ್ನು ಸ್ಯಾಟಲೈಟ್ ಚಾನೆಲ್ ಆಗಿ ಪರಿವರ್ತಿಸಲು ಮಾಡುತ್ತಿರುವ ನಮ್ಮ ಎಲ್ಲಾ ಪ್ರಯತ್ನಗಳಲ್ಲಿ ದೇವರು ಜೊತೆ ಇದ್ದು ನಡೆಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482