Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.04.2021
Share:

By Village Missionary Movement

Monday, 12-Apr-2021

ಧೈನಂದಿನ ಧ್ಯಾನ(Kannada) – 12.04.2021

ಶಬ್ದಕ್ಕೆ ಕಿವಿಗೊಡು

"ಈ ಹೊತ್ತು ಆತನ ಶಬ್ದಕ್ಕೆ ಕಿವಿಗೊಟ್ಟರೆ,..." - ಕೀರ್ತನೆಗಳು 95:8

ಮಹಾ ಅಲೆಕ್ಸಾಂಡರ್ ಲೋಕದ ಹಲವು ದೇಶಗಳಲ್ಲಿ ಯುದ್ಧಮಾಡಿ ಅವುಗಳನ್ನು ತನ್ನ ವಶ ಮಾಡಿಕೊಂಡವರು. ಒಂದು ಬಾರಿ ಯುದ್ಧ ಮುಗಿದ ನಂತರ ವಿಶ್ರಾಂತಿಗಾಗಿ ಗುಡಾರದಲ್ಲಿ ಇದ್ದಾಗ ಅವರು ಉಪಯೋಗಿಸುತ್ತಿದ್ದ ಕುದುರೆ ಗುಡಾರವನ್ನು ಬಿಟ್ಟು ಅಂಗಡಿ ಬೀದಿಯೊಳಗೆ ನುಗ್ಗಿತು, ಸಿಕ್ಕಿದ್ದನ್ನು ತಿಂದು ಬಿಟ್ಟು, ನಂತರ ಒಂದು ಅಂಗಡಿಯ ಮುಂದೆ ಮಲಗಿಕೊಂಡಿತು. ಆ ಅಂಗಡಿಯೊಳಗೆ ಯಾರು ಹೋಗಲು ಸಾಧ್ಯವಾಗಲಿಲ್ಲ. ಅದು ರಾಜನ ಕುದುರೆ ಆಗಿದ್ದದರಿಂದ ಓಡಿಸಲು ಕೂಡ ಯಾರು ಪ್ರಯತ್ನಿಸಲಿಲ್ಲ. ಆದ್ದರಿಂದ ಅಂಗಡಿಯವರು ಒಂದು ಘಂಟೆಯನ್ನು ತೆಗೆದುಕೊಂಡು ಕಿವಿಯ ಹತ್ತಿರ ಆಡಿಸಿದರು ಎಷ್ಟು ಶಬ್ದ ಮಾಡಿದರು ಕುದುರೆಯನ್ನು ಎಬ್ಬಿಸಲು ಸಾಧ್ಯವಾಗಲಿಲ್ಲ. ಅಷ್ಟರೊಳಗೆ ಕುದುರೆಯನ್ನು ಹುಡುಕುತ್ತಾ ಸೈನಿಕರು ಬಂದರು ಅಲ್ಲಿ ಅಂಗಡಿಯವರು ಘಂಟೆ ಹೊಡೆಯುತ್ತಿದ್ದದ್ದನ್ನು ಕಂಡು ನಗುತ್ತಲೇ,  "ಅಯ್ಯಾ ಈ ಕುದುರೆ ಭಯಂಕರವಾದ ಕತ್ತಿಗಳ ಶಬ್ದ, ಹಲವು ಆಯುಧಗಳ ಶಬ್ದ ಕೇಳೇ ಭಯ ಪಡುವುದಿಲ್ಲ ಇನ್ನು ನಿಮ್ಮ ಚಿಕ್ಕ ಘಂಟೆಯ ಶಬ್ದಕ್ಕೆ ಎದ್ದು ಬಿಡುತ್ತದಾ" ಎಂದು ಹೇಳಿ ಕುದುರೆಯನ್ನು ಎಬ್ಬಿಸಿಕೊಂಡು ಕರೆದುಕೊಂಡು ಹೋದರು.

ಇಸ್ರಾಯೇಲ್ ಜನರು ಅವರನ್ನು ಆಳುತ್ತಿದ್ದ ರಾಜರು ಪಾಪ ಮಾಡಿದಾಗ ಹಲವು ಪ್ರವಾದಿಗಳ ಮೂಲಕ ದೇವರು ಒಂದೊಂದು ಬಾರಿಯೂ ಖಂಡಿಸಿ ಎಚ್ಚರಿಸುತ್ತಲೇ ಇದ್ದರು, ಪ್ರೇರೇಪಿಸುತ್ತಲೇ ಇದ್ದರು. ಆದರೆ ಅವರು ತಮ್ಮ ಜೀವನವನ್ನು ಬದಲಾಯಿಸಿಕೊಳ್ಳುವುದಕ್ಕೆ ಪ್ರಯತ್ನಿಸಲಿಲ್ಲ. ನಾವು ಅರಣ್ಯದಲ್ಲಿ ದೇವರ ಶಬ್ದಕ್ಕೇ ಕಿವಿಗೊಡಲಿಲ್ಲ ಇನ್ನು ಪ್ರವಾದಿಗಳ ಮಾತುಗಳಿಗೆ ವಿಧೇಯರಾಗುತ್ತೇವಾ ಎಂಬ ಹಾಗೆ ತಗ್ಗಿಸಲ್ಪಡದ ಕತ್ತುಗಳುಳ್ಳವರಾಗಿ ಕಾಣಲ್ಪಟ್ಟರು. ಇದರ ನಿಮಿತ್ತವಾಗಿ ಅವರು ಹಲವು ಬಾರಿ ದೇವರ ಕೋಪಕ್ಕೆ ಗುರಿಯಾದರು.

ಪ್ರಿಯರೇ! ನಾವು ಕೂಡ ಮುಂಚೆಯೆಲ್ಲಾ ದೇವರ ಸಂದೇಶಗಳನ್ನು ಆಲಯದಲ್ಲಿ, ಗುಡಾರಗಳಲ್ಲಿ ಮಾತ್ರವೇ ಕೇಳಲು ಸಾಧ್ಯವಾಗುತ್ತಿತ್ತು. ಆದರೆ ಈ ದಿನಗಳಲ್ಲಿ YouTube, Facebook ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಕೇಳುತ್ತಲೇ ಇದ್ದೇವೆ. ಇದು ಬಹಳ ಒಳ್ಳೆಯದೇ! ಆದರೆ ಇದರಲ್ಲಿ ಒಂದು ಅಪಾಯವೂ ಇದೆ.ವಾಕ್ಯವನ್ನು ವಿಧವಿಧವಾಗಿ ಕೇಳಿ ಕೇಳಿ ಎಲ್ಲಾ ಸತ್ಯವು ತಿಳಿದ ಹಾಗೆ ಪ್ರಜ್ಞೆ ಬಂದುಬಿಡುತ್ತಿದೆ ಆದರೆ ಹೃದಯವೋ ಪ್ರಜ್ಞೆಯಿಲ್ಲದಂತೆ ಮಾರ್ಪಡುತ್ತಿದೆ. ಇದನ್ನು ಓದುತ್ತಿರುವ ನಾವು ದೇವರ ವಾಕ್ಯಗಳನ್ನು ಕೇಳಿ ಕೇಳಿ ಹೃದಯದಲ್ಲಿ ಬದಲಾವಣೆ ಇಲ್ಲದಂತೆ ಅಲೆಕ್ಸಾಂಡರ್ ನ ಕುದುರೆಯ ಹಾಗೆ ಇದ್ದೇವಾ? ಯೋಚಿಸೋಣ. ನಮ್ಮ ಹೃದಯವು ಕಠಿಣವಾಗಿ, ಪ್ರಜ್ಞೆ ಇಲ್ಲದೆ, ವಿಧೇಯತೆ ಇಲ್ಲದೆ ಇರುವುದಾದರೆ ನಮ್ಮನ್ನು ನಾವೇ ಶೋಧಿಸಿ ನೋಡಿಕೊಳ್ಳೋಣ. ಎಷ್ಟು ದೇವರ ಸಂದೇಶಗಳನ್ನು ಕೇಳುತ್ತಿದ್ದೇವೆ ಎಂಬುದು ಮುಖ್ಯವಲ್ಲ, ಆ ವಾಕ್ಯಗಳಿಗೆ ಕಿವಿಗೊಡುತ್ತಿದ್ದೇವ ಎಂಬುದೇ ಮುಖ್ಯ. ನಾವು ಇಂದೇ ದೇವರ ಶಬ್ದಕ್ಕೆ ಕಿವಿಗೊಡೋಣ ಆಶೀರ್ವಾದಗಳನ್ನು ಸ್ವತಂತ್ರಿಸಿಕೊಳ್ಳೋಣ.
-    Mrs. ಅನಿತ ಅಲಗರಸಾಮಿ

ಪ್ರಾರ್ಥನಾ ಅಂಶ:-
ಸೇವಕರು ಇರುವುದಕ್ಕಾಗಿ ರೂಮ್ ಗಳನ್ನು ಕಟ್ಟುವುದಕ್ಕೆ ಅಗತ್ಯವಾದ ಅವಶ್ಯಕತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin