By Village Missionary Movement
Monday, 08-Apr-2024ಧೈನಂದಿನ ಧ್ಯಾನ(Kannada) – 08.04.2024
ದೇವರ ಉತ್ತರ
"…ಹಿಂದಟ್ಟು, ಅದು ನಿನಗೆ ಸಿಕ್ಕುವದು; ನೀನು ಎಲ್ಲರನ್ನೂ ಬಿಡಿಸಿಕೊಂಡು ಬರುವಿ ಎಂದು ಉತ್ತರಕೊಟ್ಟನು." - 1 ಸಮುವೇಲ 30:8
ಒಮ್ಮೆ ಲಂಡನ್‌ನಲ್ಲಿ ಸುವಾರ್ತಾಬೋಧಕರಾದ ಬಿಲ್ಲಿ ಗ್ರಹಾಂ ಅವರು ಸಂದೇಶವನ್ನು ನೀಡುವುದಕ್ಕಾಗಿ ಸುವಾರ್ತಾ ಕೂಟವೊಂದನ್ನು ಏರ್ಪಡಿಸಲಾಗಿತ್ತು. ಅವರು ಕೂಟವನ್ನು ನಡೆಸಲು ಇಲ್ಲಿಗೆ ಬರಬಾರದು ಎಂದು ಭಯಂಕರವಾದ ವಿರೋಧ ವ್ಯಕ್ತವಾಯಿತು. ಪತ್ರಿಕೆಗಳಲ್ಲಿ ಅವರ ಬಗ್ಗೆ ಅಪಪ್ರಚಾರ ಮಾಡಿದರು. ಈ ಪರಿಸ್ಥಿತಿಯಲ್ಲಿ, ಅವರು ಮತ್ತು ಅವರ ಹೆಂಡತಿಯು ಹಡಗಿನಲ್ಲಿ ಬಂದು ಲಂಡನ್ ನ ಬಂದರಿನಲ್ಲಿ ಇಳಿದಾಗ, ಪತ್ರಿಕಾ ಮಾಧ್ಯಮವು ಅವರನ್ನು ಸುತ್ತುವರೆಯಿತು ಮತ್ತು "ನೀವು ನಮ್ಮ ಲಂಡನ್ ಅನ್ನು ಬದಲಾಯಿಸಲು ಬಂದಿದ್ದೀರಾ, ನಿಮ್ಮ ಅಮೇರಿಕಾವನ್ನು ಬದಲಾಯಿಸಿಬಿಟ್ರಾ?" ಎಂದೆಲ್ಲಾ ಪ್ರತಿಯೊಬ್ಬರೂ ವಿಧವಿಧವಾಗಿ ಹಲವಾರು ಪ್ರಶ್ನೆಗಳನ್ನು ಕೇಳಿದರು. ಸುವಾರ್ತೆಯನ್ನು ಪ್ರಕಟಿಸಲು ಬಂದ ಒಂದು ಕ್ರೈಸ್ತ ದೇಶವು ಈ ರೀತಿಯಾಗಿ ಇದೆಯಲ್ಲಾ ಎಂದು ಭಾವಿಸಿ ಬಿಲ್ಲಿ ಗ್ರಹಾಂನವರ ಮನಸ್ಸು ಒಡೆದು ಹೋಯಿತು. ಬಂದರಿನಿಂದ ತಾವು ಹೋಗಬೇಕಿದ್ದ ಪಟ್ಟಣಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಯೇಸುವೇ ಕಾರ್ಯಗಳು ಈ ರೀತಿಯಾಗಿವೆಯಲ್ಲಾ ಹೇಗೆ ನಾನು ಹೋಗಿ ಇಲ್ಲಿ ಸೇವೆ ಮಾಡಲಿದ್ದೇನೆ ಎಂದು ಹೃದಯ ಜಜ್ಜಲ್ಪಟ್ಟವರಾಗಿ ದೇವರ ಮುಖವನ್ನು ದೃಷ್ಟಿಸಿ ನೋಡಿದರು. "ಪ್ರೀತಿ ಎಲ್ಲವನ್ನು ಸಹಿಸುತ್ತದೆ " ಎಂಬ ವೇದವಾಕ್ಯದ ಮೂಲಕ ದೇವರು ಅವರೊಂದಿಗೆ ಮಾತನಾಡಿದರು. ಕೂಡಲೇ ಭಾರವೆಲ್ಲ ನೀಗಿ ಅವರ ಹೃದಯವು ಹಗುರವಾಯಿತು. ಅವರು ರೈಲಿನಿಂದ ಇಳಿದಾಗ. ಅಲ್ಲಿ ಸಾವಿರಾರು ಜನರು ಜಮಾಯಿಸಿ ಅವರನ್ನು ಸ್ವಾಗತಿಸಿದರು. ನಾನು ನಿನಗಾಗಿ ಎಷ್ಟು ಜನರನ್ನು ಇಟ್ಟಿದ್ದೇನೆ ನೋಡಿದೆಯಾ? ಎಂದು ದೇವರು ಅವರ ಹೃದಯದಲ್ಲಿ ಮಾತನಾಡಿದರು. ಅದನ್ನು ಕಂಡ ಬಿಲ್ಲಿ ಗ್ರಹಾಂ ಅವರ ಕಣ್ಣುಗಳಲ್ಲಿ ಕಣ್ಣೀರು ಹರಿಯಿತು.
ಸತ್ಯವೇದದಲ್ಲಿ, ಅಪೊ. ಪೌಲನ ಸೇವೆಯಲ್ಲಾದರೂ ಸರಿ , ಶಿಷ್ಯರ ಸೇವೆಯಾದರೂ ಸರಿ, ಅನೇಕ ಸಮಸ್ಯೆಗಳು, ಪಾಡುಗಳು, ಇಕ್ಕಟ್ಟುಗಳ ನಡುವೆಯೇ ಸೇವೆಯನ್ನು ಪೂರ್ಣಗೊಳಿಸಿದರು. ಯೇಸುವಿನ ಶಿಷ್ಯರು ವ್ಯಕ್ತಿಗತವಾಗಿ ವಿವಿಧ ದೇಶಗಳಿಗೆ ಹೋಗಿ ಭಾಷೆ, ಜನರು, ಸಂಸ್ಕೃತಿ ಎಲ್ಲವೂ ವಿಭಿನ್ನವಾಗಿದ್ದರೂ ಸಹ, ಆತ್ಮಗಳ ಮೇಲಿದ್ದ ಪ್ರೀತಿಯಿಂದ ಅವರು ಎಲ್ಲವನ್ನೂ ಸಹಿಸಿಕೊಂಡು ಸೇವೆಮಾಡಿ ಯೋಹಾನನನ್ನು ಹೊರತುಪಡಿಸಿ ಮಿಕ್ಕ ಎಲ್ಲರೂ ರಕ್ತಸಾಕ್ಷಿಗಳಾಗಿ ಸತ್ತರು.
ಪ್ರಿಯರೇ, ಕ್ರಿಸ್ತನನ್ನು ಅಂಗೀಕರಿಸಿದ್ದಕ್ಕಾಗಿ ಅಥವಾ ಇತರರಿಗೆ ಆತನನ್ನು ಬೋಧಿಸುವುದಕ್ಕಾಗಿ ನಿಮ್ಮ ಕುಟುಂಬ ಮತ್ತು ಇತರರಿಂದ ನಿಂದೆ ಮತ್ತು ಅವಮಾನಕ್ಕೆ ಒಳಗಾಗಿದ್ದೀರಾ? ಚಿಂತಿಸಬೇಡಿ. ಕ್ರಿಸ್ತನ ಪ್ರೀತಿಗಾಗಿ ಎಲ್ಲವನ್ನೂ ಸಹಿಸಿಕೊಳ್ಳಿ. ಏಕೆಂದರೆ ಪ್ರೀತಿ ಎಲ್ಲವನ್ನೂ ಹೊರುತ್ತದೆ ಮತ್ತು ಎಲ್ಲವನ್ನೂ ಸಹಿಸಿಕೊಳ್ಳುತ್ತದೆ. ಆಗ ದೇವರ ಪ್ರೀತಿ ನಮ್ಮ ಹೃದಯಕ್ಕೆ ಔಷಧವಾಗುತ್ತದೆ. ನಿಮ್ಮ ಮೇಲೆ ಕೋಪಗೊಂಡವರನ್ನು ದೇವರು ನಿಮ್ಮ ಕಡೆಗೆ ಬರುವಂತೆ ಬದಲಾಯಿಸುತ್ತಾರೆ. ದೇವರು ನಿಮಗಾಗಿ ಇಟ್ಟಿರುವ ಆತ್ಮಾಮಕ್ಕಳು ನಿಮ್ಮ ಮೂಲಕ ಆಶೀರ್ವದಿಸಲ್ಪಡುತ್ತಾರೆ.
- Bro. ಪರಮಶಿವನ್
ಪ್ರಾರ್ಥನಾ ಅಂಶ:
ನಮ್ಮ ಸೇವಕರ ಸುರಕ್ಷಿತ ಪ್ರಯಾಣಕ್ಕಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482