Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.04.2024 (Kids Special)
Share:

By Village Missionary Movement

Sunday, 07-Apr-2024

ಧೈನಂದಿನ ಧ್ಯಾನ(Kannada) – 07.04.2024 (Kids Special)

 

ಯೇಸುವಿನ ಚಿತ್ತ

 

"ನನ್ನ ಮಾತಿಗೆ ಕಿವಿಗೊಡುವವನಾದರೋ ಸ್ವಸ್ಥವಾಗಿರುತ್ತಾ ಯಾವ ಕೇಡಿಗೂ ಭಯಪಡದೆ ಸುರಕ್ಷಿತನಾಗಿರುವನು ಎಂಬದೇ." - ಜ್ಞಾನೋಕ್ತಿ 1:33

 

 ಹಲೋ ಪುಟಾಣಿಗಳೇ! ಇಂದು ನಾವು ಒಂದು ಸತ್ಯ ಘಟನೆಯನ್ನು ಕೇಳಲಿದ್ದೇವೆ. ಯೇಸುವಿನ ವಾಕ್ಯವನ್ನು ಕೇಳುವುದರಿಂದ ಮತ್ತು ಅದರಂತೆ ನಡೆಯುವುದರಿಂದ ಸಿಗುವ ರಕ್ಷಣೆ ಮತ್ತು ಆಶೀರ್ವಾದದ ಕುರಿತು ಹೇಳಲು ಮಾತುಗಳು ಸಾಲದು. ಏನು ಪುಟಾಣಿಗಳೇ, ನಿಮಗೂ ಯೇಸಪ್ಪನ ಧ್ವನಿ ಕೇಳಲು ಆಸೆ ಆಗ್ತಿದೆಯಾ ಪ್ರತಿದಿನ ಸತ್ಯವೇದವನ್ನು ಓದಿ, ಪ್ರಾರ್ಥಿಸಿ ನೋಡಿರಿ ನಿಮಗೆ ತಿಳಿಯುತ್ತದೆ.

 

ಯುದ್ಧದಲ್ಲಿ ಪತಿಯನ್ನು ಕಳೆದುಕೊಂಡ ತಾಯಿ ಮತ್ಸಕೋ ದುಃಖದಲ್ಲಿ ಮುಳುಗಿದ್ದಳು. ತನ್ನ ಮೂವರು ಮಕ್ಕಳೊಂದಿಗೆ ಹಿರೋಷಿಮಾಕ್ಕೆ (ರೈಲಿನಲ್ಲಿ) ಹೋಗುವಾಗ, ರೈಲು ಹಾದು ಹೋಗುತ್ತಿದ್ದಂತೆ ತನ್ನ ಮಕ್ಕಳನ್ನು ತ್ಯಜಿಸಿ ಆತ್ಮಹತ್ಯೆಗೆ ಯತ್ನಿಸಿದಳು. ಆಗ ದೇವರು ನಾನು ನಿನ್ನೊಂದಿಗಿದ್ದೇನೆ ಎಂದು ಮಾತನಾಡಿದರು. ಅವರು ತಕ್ಷಣ ಆತ್ಮಹತ್ಯೆಯ ಆಲೋಚನೆಗಳನ್ನು ತೊರೆದರು ಮತ್ತು ಉದ್ಯೋಗವನ್ನು ಹುಡುಕಲು ಹಿರೋಷಿಮಾಕ್ಕೆ ಹೋದರು. ಆಗ ಅಲ್ಲೊಂದು ಆಸ್ಪತ್ರೆಯಲ್ಲಿ ಕೆಲಸ ಸಿಕ್ಕಿತು. ಅವರು ಅಲ್ಲಿ ಸಮರ್ಥವಾಗಿ ಕೆಲಸ ಮಾಡಿದರು. ಉನ್ನತ ಪದವಿ ಸಿಕ್ಕಿತು. ಅವರು ತನ್ನ ಮಕ್ಕಳೊಂದಿಗೆ ಪ್ರತಿದಿನ ಪ್ರಾರ್ಥಿಸಿ ಮಕ್ಕಳನ್ನು ಬೆಳೆಸಿದರು. ನಂತರ ಇದ್ದಕ್ಕಿದ್ದಂತೆ ಒಂದು ದಿನ ತಮಗೆ ಸಂಬಳ ಹೆಚ್ಚಿಸುವುದಾಗಿ ಮ್ಯಾನೇಜ್‌ಮೆಂಟ್ ಅವರನ್ನು ಕರೆದು ಹೇಳಿದರು. ಆದರೆ ಆ ರಾತ್ರಿ ದೇವರು ಕೆಲಸ ಬಿಟ್ಟು ಆ ಸ್ಥಳದಿಂದ ಹೊರಡಲು ಹೇಳಿದರು. ತಕ್ಷಣ ಮತ್ಸಕೋ ಅಮ್ಮನವರು ಹಿರೋಷಿಮಾವನ್ನು ಬಿಟ್ಟು ಯಾವುದರ ಬಗ್ಗೆಯೂ ಯೋಚಿಸದೆ ಹತ್ತಿರದ ಪರ್ವತಕ್ಕೆ ಹೋದರು. ಮರುದಿನವೇ ಅಮೆರಿಕ ಹಿರೋಷಿಮಾ ಮೇಲೆ ಬಾಂಬ್ ಹಾಕಿತು. ವಿಧೇಯತೆ ತೋರಿದ ಮತ್ಸಕೋ ಕುಟುಂಬವಾಗಿ ಬದುಕುಳಿದರು. ನಂತರ ಅವರು ಕಷ್ಟಪಟ್ಟು ತಮ್ಮ ಮಕ್ಕಳನ್ನು ಬೆಳೆಸಿದರು. ಅವರು ವಾಕ್ಯಗಳನ್ನು ಓದಲು ಮತ್ತು ಪ್ರತಿದಿನ ಪ್ರಾರ್ಥಿಸಲು ಮರೆಯುವುದೇ ಇಲ್ಲ. ಅವರು ತನ್ನ ಮಕ್ಕಳನ್ನು ದೇವರ ಸೇವೆಗೆ ಸಮರ್ಪಿಸಿ ಬೆಳೆಸಿದರು. ಮೂವರೂ ಮಿಷನರಿಗಳಾಗಿ ಹೋದರು. ಮೂವರು ಮಕ್ಕಳಲ್ಲಿ ಒಬ್ಬರು ಜಮೈಕಾದಲ್ಲಿ, ಒಬ್ಬರು ಆಫ್ರಿಕಾದಲ್ಲಿ ಮತ್ತು ಇನ್ನೊಬ್ಬರು ಭಾರತದಲ್ಲಿ ಮಿಷನರಿಯಾಗಿ ಸೇವೆ ಸಲ್ಲಿಸಿದರು. ಮತ್ಸಕೋ ಅಮ್ಮನವರು ತನಗೆ ಯಾರೂ ಇಲ್ಲ ಎಂದು ಭಾವಿಸಿ ಕೈಬಿಡಲ್ಪಟ್ಟ ಪರಿಸ್ಥಿತಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದಾಗ ದೇವರು ಅವರನ್ನು ಬಿಡದೇ ಅವರೊಂದಿಗೆ ಮಾತನಾಡಿ ಜೊತೆಯಿದ್ದು ನಡೆಸಿದರು. 

 

ಅದೇ ರೀತಿ, ಪ್ರೀತಿಯ ತಮ್ಮ, ತಂಗಿ ನನಗೆ ತಾಯಿ ಇಲ್ಲ, ಅಥವಾ ತಂದೆ ಇಲ್ಲ, ನನ್ನನ್ನು ಪ್ರೀತಿಸಲು ಯಾರೂ ಇಲ್ಲ ಮತ್ತು ಬದುಕಲು ಯಾವುದೇ ಮಾರ್ಗವಿಲ್ಲ ಎಂದು ಭಾವಿಸುತ್ತಿದ್ದೀರಾ? ಕರ್ತನಾದ ಯೇಸು ಇದ್ದಾರೆ. ಅವರು ನಿಮ್ಮೊಂದಿಗಿದ್ದು ನಿಮ್ಮನ್ನು ನಡೆಸುತ್ತಾರೆ. ನೀವು ಸತತವಾಗಿ ಪ್ರಾರ್ಥಿಸುತ್ತಾ ಆತನನ್ನು ಹಿಡಿದುಕೊಂಡಿರಿ.

- Mrs. ಅನ್ಬುಜ್ಯೋತಿ ಸ್ಟಾಲಿನ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al