Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.04.2024
Share:

By Village Missionary Movement

Thursday, 04-Apr-2024

ಧೈನಂದಿನ ಧ್ಯಾನ(Kannada) – 04.04.2024

 

ನನ್ನ ನಿಧಿ ಎಲ್ಲಿದೆ?

 

"ತನಗೋಸ್ಕರ ದ್ರವ್ಯವನ್ನಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗದೆ ಇರುವವನು ಅವನಂತೆಯೇ ಇದ್ದಾನೆ” ಅಂದನು" - ಲೂಕ 12:21

 

ಒಬ್ಬ ವ್ಯಕ್ತಿ ಕೆಲಸದ ನಿಮಿತ್ತವಾಗಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ತೆರಳಿದರು. ಅಲ್ಲಿ ಒಂದು ನಿರ್ದಿಷ್ಟ ವರ್ಷ ಮಾತ್ರ ಉಳಿದುಕೊಂಡು ಕೆಲಸ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ ಅವರೂ ಅಲ್ಲೇ ಇದ್ದು ಚೆನ್ನಾಗಿ ಕೆಲಸ ಮಾಡಿದರು. ಆದಾಯದಿಂದ ಬದುಕಲು ಬೇಕಾಗಿದ್ದನ್ನು ಮಾತ್ರ ಇಟ್ಟುಕೊಂಡು ಉಳಿದ ಹಣವನ್ನು ತನ್ನ ತಾಯ್ನಾಡಿನಲ್ಲಿರುವ ಬ್ಯಾಂಕ್ ಖಾತೆಯಲ್ಲಿ ಸೇರಿಸಿಟ್ಟುಕೊಂಡರು. ಏಕೆಂದರೆ ಇದು ತನ್ನ ಸ್ವಂತ ದೇಶವಲ್ಲ ಎಂದು, ಇಲ್ಲಿ ಸೇರಿಸಿಡುವುದರಿಂದ ತನಗೆ ಯಾವ ಪ್ರಯೋಜನವೂ ಇಲ್ಲ ಎಂದೂ, ತನಗೆ ಕೊಡಲ್ಪಟ್ಟ ಸಮಯ ಮುಗಿದ ನಂತರ ಇಲ್ಲಿ ವಾಸಿಸಲು ಸಾಧ್ಯವೂ ಇಲ್ಲ ಎಂಬುದನ್ನು ಅರಿತು ಒಳ್ಳೆಯ ಕೆಲಸ ಮಾಡಿದರೆಂದು ನಮಗೆ ಚೆನ್ನಾಗಿ ಅರ್ಥವಾಗುತ್ತಿದೆ.

 

ಹಾಗೆಯೇ ಭೂಮಿ ಯಾರಿಗೂ ಶಾಶ್ವತವಲ್ಲ. ನಮ್ಮ ಆತ್ಮವು ಸಹ ಇಲ್ಲಿಂದ ಪರಲೋಕ ಅಥವಾ ನರಕ ಎಂಬ ಶಾಶ್ವತ ಸ್ಥಳಕ್ಕೆ ಹೋಗಿ ಸೇರುತ್ತದೆ ಎಂಬ ಗ್ರಹಿಕೆ ನಮಗೆಲ್ಲರಿಗೂ ಇರಬೇಕಾದದ್ದು ಬಹಳ ಅವಶ್ಯಕ. ಆದರೆ ನಮ್ಮಲ್ಲಿ ಅನೇಕರು ಇದನ್ನು ಮರೆತು ಈ ಭೂಮಿಯಲ್ಲಿಯೇ ಯಾವಾಗಲೂ ಇರುತ್ತೇವೆ ಎಂದು ಭಾವಿಸಿ ಹೇರಳವಾದ ವಸ್ತುಗಳನ್ನು ಇಲ್ಲಿಯೇ ತಮಗಾಗಿಯೇ ಸೇರಿಸಿಟ್ಟುಕೊಳ್ಳುತ್ತೇವೆ.

 

ಪರಿಶುದ್ಧ ಗ್ರಂಥದಲ್ಲಿ ಹೀಗೆ ತನಗಾಗಿಯೇ ಸೇರಿಸಿಟ್ಟುಕೊಂಡಿದ್ದ ಒಬ್ಬ ಶ್ರೀಮಂತ ವ್ಯಕ್ತಿ ಇದ್ದನು. ಅವನು ಇದನ್ನು ತಾನೇ ಇಟ್ಟುಕೊಂಡಿದ್ದನು. ಅವನು ತನ್ನ ಆತ್ಮವನ್ನು ನೋಡಿ ನಿನಗಾಗಿ ಅನೇಕ ವರ್ಷಗಳಿಗೆ ಸಾಕಾಗುವಷ್ಟು ವಸ್ತುಗಳನ್ನು ಸೇರಿಸಿಡಲಾಗಿದೆ. ನೀನು ವಿಶ್ರಮಿಸಿ, ತಿಂದು, ಕುಡಿದು ಉಲ್ಲಾಸದಿಂದಿರು ಎಂದು ಹೇಳಿಕೊಂಡನು. ಆದರೆ ದೇವರೋ ಅವನನ್ನು ನೋಡಿ, ಬುದ್ಧಿ ಇಲ್ಲದವನೇ, ಈ ರಾತ್ರಿ ನಿನ್ನ ಆತ್ಮವು ನಿನ್ನಿಂದ ತೆಗೆದುಕೊಳ್ಳಲ್ಪಡುತ್ತದೆ, ಆಗ ನೀನು ಸೇರಿಸಿಟ್ಟಿರುವವುಗಳು ಯಾರಿಗೆ ಸೇರುತ್ತದೆ ಎಂದರು. ಇದೇ ಪ್ರಶ್ನೆ ದೇವರು ಇಂದು ನಮ್ಮ ಬಳಿ ಕೇಳುವುದಾದರೆ!

 

ಈ ಲೋಕದಲ್ಲಿ ಎಷ್ಟೋ ಬಡವರನ್ನು ನಾವು ನೋಡಬಹುದು. ಬಡವರಿಗೆ ದಯೆ ತೋರಿಸುವವನು ಯೆಹೋವನಿಗೆ ಸಾಲಕೊಡುವವನು. ಮತ್ತು ಹಸಿದವರಿಗೆ, ಬಾಯಾರಿದವರಿಗೆ, ಅಪರಿಚಿತರಿಗೆ, ಬೆತ್ತಲೆಯವರಿಗೆ, ಅನಾರೋಗ್ಯದಲ್ಲಿರುವವರಿಗೆ ಮತ್ತು ಸೆರೆಮನೆಯಲ್ಲಿರುವ ನಿಮ್ಮ ಸಹೋದರರಾದ ಇವರಲ್ಲಿ ಕನಿಷ್ಠ ವ್ಯಕ್ತಿಗಾಗಿ ನೀವು ಏನು ಮಾಡಿದಿರೋ, ಅದನ್ನು ನನಗೇ ಮಾಡಿದ್ದೀರಿ ಎಂದು ಯೇಸುಕ್ರಿಸ್ತನು ಹೇಳಿದ್ದಾರೆ.

 

ನಾವು ಪರಲೋಕದಲ್ಲಿ ಸಂಪತ್ತನ್ನು ಸೇರಿಸಿಟ್ಟುಕೊಳ್ಳಲು ದೇವರು ನಮಗೆ ಇಂತಹ ಅನೇಕ ಅವಕಾಶಗಳನ್ನು ನೀಡಿದ್ದಾರೆ. ದೇವರು ನಮಗೆ ನೀಡಿದ ಅವಕಾಶವನ್ನು ನಾವು ಬಳಸುತ್ತಿದ್ದೇವೆಯೇ? ನಾವು ಯಾವಾಗ ಈ ಭೂಮಿಯನ್ನು ಬಿಟ್ಟು ಹೋಗುತ್ತೇವೆ ಎಂಬುದು ನಮ್ಮ ದೇವರನ್ನು ಹೊರತುಪಡಿಸಿ ಯಾರಿಗೂ ಗೊತ್ತಿಲ್ಲ.

- Bro. ಸಿಮಿಯೋನ್

 

ಪ್ರಾರ್ಥನಾ ಅಂಶ:

ನಮ್ಮ ವೆಬ್‌ಸೈಟ್ ಕಾರ್ಯಕ್ರಮಗಳಲ್ಲಿ ಪ್ರಾರ್ಥನಾ ಅಂಶಗಳನ್ನು ಕಳುಹಿಸುವ ಪ್ರತಿಯೊಬ್ಬರಿಗೂ ಕರ್ತನು ಅದ್ಭುತವನ್ನು ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet ibizabet holiganbet amkbet sonbahis betgit cratosroyalbet cratosroyalbet gameofbet