Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.04.2024
Share:

By Village Missionary Movement

Wednesday, 03-Apr-2024

ಧೈನಂದಿನ ಧ್ಯಾನ(Kannada) – 03.04.2024

 

ನಾವು ಯಾರು?

 

"…ನಮ್ಮ ಕರ್ತನಾದ ಯೇಸು ಕ್ರಿಸ್ತನ ಕರುಣೆಯನ್ನು ಎದುರುನೋಡುತ್ತಾ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ" - ಯೂದ 21

 

ದೇವರು ನಮಗೆ ಅನುಗ್ರಹಿಸಿರುವ ಸತ್ಯವೇದದಲ್ಲಿ, ಕಿರಿಯಮಗನ ಸಾಮ್ಯವು ಬಹಳ ಪ್ರಸಿದ್ಧವಾಗಿದೆ. ಈ ಮೂಲಕವಾಗಿ ಪವಿತ್ರಾತ್ಮನು ಅನೇಕರೊಂದಿಗೆ ಅನೇಕ ವಿಧವಾಗಿ ಪ್ರವೇಶಿಸಿ ಅವರನ್ನು ಮಾರ್ಪಡಿಸಿದ್ದಾರೆ . ಇಂದು ದೇವರು ನಮ್ಮೊಂದಿಗೆ ಮಾತನಾಡಲು ನಾವು ನಮ್ಮ ಹೃದಯವನ್ನು ತೆರೆದು ಕೊಡೋಣವಾ?

 

ಒಬ್ಬಾನೊಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು. ಅವರಲ್ಲಿ ಕಿರಿಯವನು ತಂದೆಗೆ – ಅಪ್ಪಾ, "ಆಸ್ತಿಯಲ್ಲಿ ನನಗೆ ಬರತಕ್ಕ ಪಾಲನ್ನು ಕೊಡು" ಎಂದನು. ಆದರೆ ಹಿರಿಯ ಮಗನೋ ತಂದೆಯೊಂದಿಗೆ ಇದ್ದು ಅವರು ಹೇಳುವ ಕೆಲಸವನ್ನು ಮಾಡುತ್ತಿದ್ದನು. ಕಿರಿಯಮಗನು ತಾನು ಬಯಸಿದ್ದನ್ನು ಪಡೆದ ಮರುಕ್ಷಣವೇ ತಂದೆಯನ್ನು ತೊರೆದು ದೂರದ ದೇಶಕ್ಕೆ ಹೊರಟುಹೋದನು. ಅವನಿಗೆ ತಂದೆಯ ಮೇಲೆ ಪ್ರೀತಿ ಇದ್ದಹಾಗೆ ಕಾಣುತ್ತಿಲ್ಲ. ಅವರಿಂದ ಏನು ತೆಗೆದುಕೊಳ್ಳೋಣ ಎಂಬ ಸ್ವಾರ್ಥವೇ ಇತ್ತು. ಇಂದು ನಮ್ಮಲ್ಲಿ ಹಲವರು ಹೀಗೆಯೇ ಇದ್ದೇವೆ. ನಾನು ದೇವರಿಂದ ಏನು ಪಡೆಯಲು ಸಾಧ್ಯ? ಎಂದು ಸ್ವಯಂ ಲಾಭಕ್ಕಾಗಿ ಮತ್ತು ಆಶೀರ್ವಾದಕ್ಕಾಗಿ ಮಾತ್ರವೇ ಸಭೆಗೆ ಹೋಗುತ್ತೇವೆ.

 

ಕಿರಿಯವನಿಗಿಂತ ಹಿರಿಯವನು ಒಳ್ಳೆಯವನೆಂದು ನಾವು ಭಾವಿಸಬಹುದು. ಅವನ ಮನಸ್ಥಿತಿ ನೋಡಿದರೆ ಅವನೂ ಕೂಡ ತಪ್ಪು ಮಾಡುವವನಾಗಿಯೇ ಕಾಣಲ್ಪಟ್ಟನು. ಮಾನಸಾಂತರ ಹೊಂದಿ ಬಂದ ತನ್ನ ಕಿರಿಯ ಸಹೋದರನಿಗಾಗಿ ತಂದೆ ಸಿದ್ಧಪಡಿಸಿದ ಔತಣದಲ್ಲಿ ಪಾಲ್ಗೊಳ್ಳಲಾಗದೆ ಅವನಲ್ಲಿ ಅಸೂಯೆ ಉಕ್ಕಿತು. ಕೆಟ್ಟು ಅಧೋಗತಿಗಿಳಿದ ಸಹೋದರನಿಗೆ ಸಿಗುವ ಗೌರವವನ್ನು ಕಂಡು ಕಠಿಣವಾಗಿ ಕೋಪಗೊಂಡನು. ತಂದೆಗೆ, "ಇಷ್ಟು ವರುಷ ನಿಮಗೆ ವಿಧೇಯನಾಗಿದ್ದ ನನಗೆ ಎಂದಾದರೂ ಹೀಗೆ ಮಾಡಿದ್ದುಂಟಾ?" ಎಂದು ಕೇಳುತ್ತಾನೆ. ಇಂದು ನಮ್ಮಲ್ಲಿ ಅನೇಕರಿಗೆ ಈ ಮನಸ್ಥಿತಿ ಇದೆ. ಅನರ್ಹರು ಪ್ರಯೋಜನ ಪಡೆದಾಗ ನಾವು ಅಸೂಯೆಪಡುತ್ತೇವೆ. ಇತರರಿಗೆ ಹೋಲಿಸಿ ಇವರು ಅರ್ಹತೆಗೂ ಮೀರಿ ಆಶೀರ್ವಾದ ಹೊಂದಿರಲು ಅರ್ಹನಾದ ನಾನೋ ಯಾವೊಂದನ್ನೂ ಪಡೆದಿಲ್ಲವೇ! ಎಂದು ದೂರುವವರಾಗಿದ್ದೇವೆ.

 

ಪ್ರಿಯರೇ! ಈ ಇಬ್ಬರ ಮನಸ್ಥತಿಯನ್ನೂ ಬಿಟ್ಟು ಬಿಟ್ಟು, ತಂದೆಯ ಹೃದಯದೊಂದಿಗೆ ಬಾಳಲು ಪ್ರಯತ್ನಿಸೋಣ. ಮಕ್ಕಳ ತಪ್ಪುಗಳನ್ನು ಕ್ಷಮಿಸಿ ಅವರನ್ನು ಸ್ವೀಕರಿಸಿ ಯಾವುದೇ ನಿರೀಕ್ಷೆಗಳಿಲ್ಲದೆ ಪ್ರೀತಿಸುವ ತಂದೆಯ ಪ್ರೀತಿ ವಿಶೇಷ. ಮನಸ್ಸು ಬದಲಾಯಿಸಿಕೊಂಡು ಬಂದ ಕಿರಿಯಮಗನನ್ನು ಕಂಡು ಓಡಿ ಬಂದು ಅಪ್ಪಿಕೊಂಡರು. ಕೋಪದಿಂದ ಹೊರಗೆ ನಿಂತಿದ್ದ ಹಿರಿಯಮಗನನ್ನು ಹುಡುಕಿಕೊಂಡು ಬಂದು ಬಲವಂತ ಮಾಡಿ ಒಳಗೆ ಕರೆದರು. ಆಹಾ! ಎಂಥಾ ಪ್ರೀತಿ! ಇಂದಿಗೂ ಕುಟುಂಬದಲ್ಲಿ ಮತ್ತು ಸೇವೆಯಲ್ಲಿ ಹಿರಿಯವನ ಮನಸ್ಥಿತಿಯಲ್ಲಿ ಮತ್ತು ಕಿರಿಯವನ ಮನಸ್ಥಿತಿಯಲ್ಲಿ ಕಂಡುಬರುವ ಎರಡು ಗುಂಪುಗಳವರಿದ್ದಾರೆ. ತಂದೆಯ ಹೃದಯದಿಂದ ಅವರನ್ನು ಪ್ರೀತಿಸೋಣ ಮತ್ತು ಯೇಸುಕ್ರಿಸ್ತನ ಪ್ರತಿಬಿಂಬವಾಗಿ ಬದುಕೋಣ.

- Mrs. ಜೆಬಾ ಡೇವಿಡ್ ಗಣೇಶನ್ 

 

ಪ್ರಾರ್ಥನಾ ಅಂಶ:

ಮಕ್ಕಳ ಶಿಬಿರಗಳನ್ನು ನಡೆಸಲು ಯೋಜನೆಹಾಕಿರುವ ನಮ್ಮ ಸೇವಾ ಕ್ಷೇತ್ರಗಳಲ್ಲಿ ತಡೆಯಿಲ್ಲದೆ ನಡೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet ibizabet holiganbet amkbet sonbahis betgit cratosroyalbet cratosroyalbet gameofbet