Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.04.2021 (Kids Special)
Share:

By Village Missionary Movement

Sunday, 11-Apr-2021

ಧೈನಂದಿನ ಧ್ಯಾನ(Kannada) – 11.04.2021 (Kids Special)

ಮನೆಗೆ ರಾಜ

"ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರಬೇಕೆಂಬದಕ್ಕೆ..."- ಲೂಕ 18:1

ಸುಂದರವಾದ ಒಂದು ಚಿಕ್ಕ ಗ್ರಾಮವದು. ಆ ಗ್ರಾಮದ ಸುತ್ತ ಎಲ್ಲಿ  ನೋಡಿದರೂ ಬಿಳಿ ಬಣ್ಣದ ಚಿಕ್ಕ ಚಿಕ್ಕ ಮೋಡಗಳು ವಿಳಾಸವನ್ನು ಹುಡುಕುತ್ತಾ ಅಲೆಯುವ ಹಾಗೆ ಸಣ್ಣ ಸಣ್ಣ ಹತ್ತಿಗಳು ಹಾರಾಡುತ್ತಿದ್ದವು. ಕಣ್ಣುಗಳನ್ನು ಆಕರ್ಷಿಸುವಂತಹ ಬಣ್ಣದಲ್ಲಿ ಹಸಿರು, ಕೆಂಪು ಹೀಗೆ ಕುಚ್ಚುಕುಚ್ಚಾಗಿ ಮೆಣಸಿನಕಾಯಿಗಳು ಬಿಟ್ಟು ಕಂಗೊಳಿಸುತ್ತಿದ್ದವು ಅಲ್ಲಿನ ತೋಟಗಳು. ಆ ಗ್ರಾಮದಲ್ಲಿ ಯಾವಾಗಲೂ ಜಾಲಿಯಾಗಿ ಇರುತ್ತಿದ್ದ ರಾಜ ಎಂಬ ಒಬ್ಬ ಚಿಕ್ಕ ಹುಡುಗ ತನ್ನ ಪೋಷಕರೊಂದಿಗೆ ಜೀವಿಸುತ್ತಿದ್ದನು. ಅವನನ್ನು ಅವನ ಪೋಷಕರು ಅನೇಕ ವರ್ಷಗಳ ನಂತರ ಹರಕೆ ಮಾಡಿ ಪಡೆದು  ಕೊಂಡಿದ್ದರು. ಅದರ ನಂತರ ಎಲ್ಲರಿಗೂ ಮುದ್ದು ಮಗುವಾಗಿ ಜೀವಿಸುತ್ತಿದ್ದನು. ಊರಿಗೆ ಮುದ್ದು ಮಗನಾಗಿ ಜೀವಿಸುತ್ತಿದ್ದ ಅವನೊಳಗೆ ಹಲವು ಒರಟು ಗುಣಗಳು ಬರಲು ಪ್ರಾರಂಭಿಸಿತು. ಚಿಕ್ಕ ವಯಸ್ಸಿನಲ್ಲೇ ಕುಡಿತ, ಮತ್ತುಪದಾರ್ಥಗಳ ಅಭ್ಯಾಸ ಹೀಗೆ ಹಲವು ಪಾಪ ಕಾರ್ಯಗಳಿಗೆ ದಾಸನಾದನು. ಜಗಳ ಎಂದು ಬಂದುಬಿಟ್ಟರೆ ದೊಡ್ಡವರೆಂದು ಕೂಡ ನೋಡುವುದಿಲ್ಲ, ಅವರನ್ನು ಸಾಯಿಸಿ ಬಿಡಲು ಹಿಂಜರಿಯುವುದಿಲ್ಲ. ಹೀಗೆ ಇವನ ಚಿಕ್ಕವಯಸ್ಸಿನಲ್ಲೇ ದುರ್ಮಾರ್ಗವಾದ ಜೀವನವನ್ನು ಜೀವಿಸುತ್ತಿದ್ದನು.

ದೊಡ್ಡವನಾದ ಮೇಲೂ ಅವನಿಂದ ಆ ಅಭ್ಯಾಸಗಳನ್ನು ಬಿಡಲು ಸಾಧ್ಯವಾಗಲಿಲ್ಲ. ಅವನ ಪೋಷಕರು ಅವನನ್ನು ನೋಡಿ ಬಹಳ ದುಃಖ ಪಡುತ್ತಿದ್ದರು. ಅವನ ತಾಯಿ ಅವನಿಗಾಗಿ ಪ್ರತಿದಿನವೂ ಪ್ರಾರ್ಥಿಸುತ್ತಿದ್ದರು. ಅವರ ಕಣ್ಣೀರಿನ ಪ್ರಾರ್ಥನೆಯನ್ನು ಕೇಳಿದ ಕರ್ತನು ಒಂದು ದಿನ ರಾತ್ರಿ ಅವನನ್ನು ಮುಟ್ಟಿದರು. ಅಂದಿನಿಂದ ಅವನೊಳಗೆ ಒಂದು ದೊಡ್ಡ ಹೋರಾಟ ನಾನು ಏಕೆ ಕುಡಿಯಬೇಕು? ಏಕೆ ಇಂತಹ ಪಾಪದ ಅಭ್ಯಾಸದಲ್ಲಿ ಇನ್ನೂ ಜೀವಿಸಬೇಕು ಎಂಬ ಹಲವು ಪ್ರಶ್ನೆಗಳು ಅವನೊಳಗೆ ಎದ್ದೇಳಿದವು. ಪಾಪವನ್ನು ಗ್ರಹಿಸಿ ತನ್ನ ಜೀವನವನ್ನು ಯೇಸುವಿಗೆ ಒಪ್ಪಿಸಿಕೊಟ್ಟನು. ತನ್ನ ಗ್ರಾಮವನ್ನು ಬಿಟ್ಟು ಬೇರೆ ದೇಶಕ್ಕೆ ಹೋಗಿ ಚೆನ್ನಾಗಿ ಕೆಲಸ ಮಾಡುತ್ತಿದ್ದನು. ಅಲ್ಲಿರುವ ಆಲಯಕ್ಕೂ ಹೋಗಲು ಪ್ರಾರಂಭಿಸಿದನು.ಅಳತೆಯಿಲ್ಲದಂತೆ ದೇವರ ಪ್ರೀತಿಯು ಅವನನ್ನು ತುಂಬಿಸಿತು. ಯೇಸುವಿನ ಪ್ರೀತಿಯಿಂದ ತುಂಬಿಸಲ್ಪಟ್ಟ ಮೇಲೆ ಅವನಿಂದ ಸುಮ್ಮನೆ ಇರಲು ಸಾಧ್ಯವಾಗಲಿಲ್ಲ. ಒಬ್ಬ ಹುಚ್ಚನ ಹಾಗೆ ಹಸಿವನ್ನು ಮರೆತು, ನಿದ್ದೆಯನ್ನು ಮರೆತು ನನ್ನನ್ನು ಮಾರ್ಪಡಿಸಿದ ಯೇಸುವಿಗಾಗಿ ನಾನು ಏನಾದರೂ ಮಾಡಬೇಕು,  ದಿನಕ್ಕೆ ಒಬ್ಬರಿಗಾದರೂ ಸುವಾರ್ತೆಯನ್ನು ಸಾರಬೇಕು ಎಂಬ ದಾಹವು ಅವನಲ್ಲಿ ಹೆಚ್ಚಿತು. ಕೆಲಸವನ್ನು ಮುಗಿಸಿ ವಿಶ್ರಾಂತಿಗಾಗಿ ತನ್ನ ಕೋಣೆಯೊಳಗೆ ಬಂದರೂ ಅವನಿಂದ ಸುಮ್ಮನೆ ಇರಲು ಸಾಧ್ಯವಾಗಲಿಲ್ಲ. ಅಗತ್ಯವಾದ ಜನರನ್ನು ಹುಡುಕಿ ಸುವಾರ್ತೆ ಸಾರಿದನು. ಹಾಗೆ ಕೆಲದಿನಗಳಲ್ಲಿಯೇ ಕೆಲಸವನ್ನು ಬಿಟ್ಟು ಬಿಟ್ಟು ಪೂರ್ಣ ಸಮಯ ಮಿಷನರಿ ಕೆಲಸಕ್ಕೆ ತನ್ನನ್ನು ಸಮರ್ಪಿಸಿಕೊಂಡು ದೇವರ ಕೆಲಸವನ್ನು ಮಾಡುತ್ತಿದ್ದಾನೆ.

ತಮ್ಮ, ತಂಗಿ, ನಿನ್ನ ಕುಟುಂಬದಲ್ಲಿ ಯಾರಾದರೂ ಇಂತಹ ಪಾಪದ ಜೀವನದಲ್ಲಿ ಜೀವಿಸುತ್ತಿರುವುದಾದರೆ ಅವರಿಗಾಗಿ ಯೇಸಪ್ಪನ ಬಳಿ ಸತತವಾಗಿ ಪ್ರಾರ್ಥಿಸುವುದಾದರೆ ಅವರ ಜೀವನವನ್ನೂ ಮಾರ್ಪಡಿಸಲು ಯೇಸಪ್ಪಾ ಸಿದ್ಧವಾಗಿದ್ದಾರೆ. Ok.
-    Mrs.ಸಾರಾಳ್ ಸುಭಾಷ್

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al