Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.03.2024
Share:

By Village Missionary Movement

Friday, 29-Mar-2024

ಧೈನಂದಿನ ಧ್ಯಾನ(Kannada) – 29.03.2024

 

ಶಿಲುಬೆಯಲ್ಲಿ ಅರಳಿದ ಹೂವುಗಳು

 

 "…ಅವರು – ಅವನನ್ನು ಶಿಲುಬೆಗೆ ಹಾಕಿಸು ಎಂದು ಬಹಳವಾಗಿ ಆರ್ಭಟಿಸಿದರು." - ಮಾರ್ಕ 15:14

 

ಪ್ರೀತಿಯಾಗಿ ರೂಪುಗೊಂಡ ದೇವರು, ಶಿಲುಬೆಯಲ್ಲಿ ಜಜ್ಜಲ್ಪಟ್ಟು ಅರೆಜೀವವಾಗಿ ನೇತಾಡುವಾಗ 7 ಮಾತುಗಳನ್ನು ಸತತವಾಗಿ ನುಡಿದರು. ಅವುಗಳಲ್ಲಿ ಪ್ರತಿಯೊಂದೂ ಹೂವಾಗಿ ಅರಳಿ ಪರಿಮಳ ಬೀರುತ್ತಿದೆ. ಅವುಗಳನ್ನು ನೋಡೋಣವಾ?

 

ಕ್ಷಮೆ (ಹೂವು): ಯೇಸುಕ್ರಿಸ್ತನು ಶಿಲುಬೆಯಲ್ಲಿ ಜಡಿಯಲ್ಪಟ್ಟು ವೇದನೆಯ ತುಟ್ಟ ತುದಿಯಲ್ಲಿ ನೇತಾಡುತ್ತಿರುವಾಗ ಅವರನ್ನು ತಾನೂ ಕ್ಷಮಿಸಿ ತಂದೆಯನ್ನೂ ಕ್ಷಮಿಸುವಂತೆ ಬೇಡಿಕೊಂಡರು. ಯಾರೂ ನಮಗೆ ಅಂತಹ ದೊಡ್ಡ ಹಾನಿ ಮಾಡಿಲ್ಲ. ಹಾಗಾಗಿ ಎಲ್ಲರನ್ನೂ ಕ್ಷಮಿಸೋಣ.

 

ರಕ್ಷಣೆ (ಹೂವು): ತನ್ನ ಪಾಪವನ್ನು ಅರಿತು ನಿನ್ನ ರಾಜ್ಯದಲ್ಲಿ ನನ್ನನ್ನು ನೆನೆಸಿಕೋ ಎಂದು ಬೇಡಿಕೊಂಡ ಕಳ್ಳನಿಗೆ ರಕ್ಷಣೆಯನ್ನು ಆಜ್ಞಾಪಿಸಿದರು. ಈ ರಕ್ಷಣೆಯ ಸಂದೇಶವನ್ನು ನಾವು ಸಹ ಮತ್ತೊಬ್ಬರಿಗೆ ಪ್ರಕಟಿಸಬೇಕೆಂದು ದೇವರು ಬಯಸುತ್ತಿದ್ದಾರೆ. ನಾವು ಎಷ್ಟು ಜನರಿಗೆ ಪ್ರಕಟಿಸಿದ್ದೇವೆ?

 

ಪರಾಂಬರಿಕೆ (ಹೂವು): ಹತ್ತು ತಿಂಗಳ ಕಾಲ ತನ್ನನ್ನು ಹೊತ್ತು ಸಾಕಿ ಸಲಹಿದ ತಾಯಿ ಸಂಕಟದಿಂದ ಅತ್ತು ಗೋಳಾಡುತ್ತಿರುವುದನ್ನು ಕಂಡು, ತನ್ನ ಕೊನೆಯ ಕರ್ತವ್ಯವನ್ನು ಪೂರೈಸುವಂತೆ ತನ್ನ ಪ್ರೀತಿಯ ಶಿಷ್ಯನಿಗೆ ತಾಯಿಯ ಆರೈಕೆಯನ್ನು ಒಪ್ಪಿಸುತ್ತಾರೆ. ನಾವು ಸಹ ಹಲವಾರು ಕಷ್ಟಗಳ ನಡುವೆ ನಮ್ಮನ್ನು ಹೊತ್ತು ಸಾಕಿ ಸಲಹಿದ ಹೆತ್ತವರನ್ನು ಕೊನೆಯವರೆಗೂ ಪರಾಂಬರಿಸಬೇಕು. ನಮಗೆ ಮೂಲಮಾದರಿಯಾಗಿ ಯೇಸು ಮಾಡಿ ಮುಗಿಸಿದರು!

 

ಪರಿತಪಿಸುವಿಕೆ(ಹೂವು): ಪ್ರಪಂಚದ ಒಟ್ಟು ಮೊತ್ತ ಪಾಪವನ್ನು ಯೇಸುವಿನ ಮೇಲೆ ಹೊರಿಸಲು ಸುಮಾರು 12 ಗಂಟೆ ಮೊದಲುಗೊಂಡು 3 ಗಂಟೆಯವರೆಗೆ ಕಾರ್ಗತ್ತಲು ಆವರಿಸಿತು. ತಂದೆಯ ಮುಖ ಮರೆಯಾಗಿತ್ತು. ಆ ಹೇಳಲಾರದ ಸಂಕಟದಲ್ಲಿ ಪರಿತಪಿಸಿದರು. ನಮ್ಮ ಜೀವನದಲ್ಲಿ ಬರುವ ಆಧ್ಯಾತ್ಮಿಕ ಅಂಧಕಾರವನ್ನು ಬದಲಾಯಿಸಲು ಮತ್ತು ದೇವರ ಮುಖವನ್ನು ನೋಡಲು ನಾವು ಪರಿತಪಿಸಿ ಪ್ರಾರ್ಥಿಸಿದ್ದೇವೆಯೇ?

 

ತವಕ (ಹೂವು): ಗೆತ್ಸೆಮನೆಯಲ್ಲಿ ರಕ್ತವು ಬೆವರಿನ ಹಾಗೆ ಹೊರಬರುವ ಮಟ್ಟಿಗೆ ಮನೋಭಾರ, ಶರೀರದಲ್ಲಿ ಚಾಟಿಯ ಹೊಡೆತ, ಇರಿತ ಮುಂತಾದ ಅನೇಕ ಯಾತನೆಗಳನ್ನು ಅನುಭವಿಸಿದ್ದರಿಂದ ಆತನಿಗೆ ಬಾಯಾರಿಕೆಯಾಯಿತು. ಮತ್ತು ಪಾಪಿಗಳನ್ನು ರಕ್ಷಿಸಲು ಬಂದ ಅವರಿಗೆ ಆತ್ಮಗಳ ಕುರಿತಾದ ಬಾಯಾರಿಕೆಯಿಂದಾಗಿ, ತವಕದಿಂದ ಬಾಯಾರಿಕೆಯಾಗಿದೆ ಎಂದರು. ಹೌದು, ನಾವೂ ಸಹ ಆತನನ್ನು ಅರಿಯದವರಿಗೆ ಪ್ರಕಟಿಸಿ ದೇವರ ದಾಹವನ್ನು ನೀಗಿಸೋಣ.

 

ಸಮಾಪ್ತಿ (ಹೂವು): ದೇವಾಧಿ ದೇವನು ಮಾನವ ಅವತಾರನ್ನು ಧರಿಸಿ ಬಂದ ಉದ್ದೇಶವನ್ನು ನೆರವೇರಿಸಿ ಮುಗಿಸಿದರು. ಪೌಲನು ಕ್ರಿಸ್ತನಿಗಾಗಿ ಜೀವಿಸಿ ಓಟವನ್ನು ಮುಗಿಸಿದೆ ಎಂದರು. ಅಂತೆಯೇ ನಮಗೆ ಕೊಡಲ್ಪಟ್ಟ ಕೆಲಸವನ್ನು ಪೂರ್ಣಗೊಳಿಸಲು ಆಸಕ್ತರಾಗಿರೋಣ. 

 

ಒಪ್ಪಿಸುವಿಕೆ(ಹೂವು): ಒಪ್ಪಿಸಿಕೊಡುತ್ತೇನೆ ಎಂಬುದಕ್ಕೆ ಬೆಲೆಯುಳ್ಳ ಒಂದನ್ನು ಮತ್ತೆ ಪಡೆದುಕೊಳ್ಳುವಂತೆ ಸುರಕ್ಷಿತವಾದ ಸ್ಥಳದಲ್ಲಿ ಕೊಟ್ಟಿಡುವ ಹಾಗೆ ತನ್ನ ಆತ್ಮವನ್ನು ತಂದೆಯ ಬಳಿ ಒಪ್ಪಿಸಿಕೊಡುತ್ತಾರೆ. ಇಂದು ನಮ್ಮ ಜೀವನವನ್ನು ಅವರಿಗೆ ಒಪ್ಪಿಸಿಕೊಟ್ಟು ಬಾಳುತ್ತಿದ್ದೇವೆಯೇ?

 

ಇಡೀ ಕ್ರೈಸ್ತ ಜೀವನವನ್ನು ಮೂರು ಗಂಟೆಗಳಲ್ಲಿ ಏಳು ಹೂವುಗಳಾಗಿ ಅರಳಿಸಿದರು. ಈ ಹೂವುಗಳ ಪರಿಮಳದೊಂದಿಗೆ ನಾವೂ ಬದುಕೋಣ.

- Mrs. ವನಜಾ ಪಾಲ್ ರಾಜ್

 

ಪ್ರಾರ್ಥನಾ ಅಂಶ:

ಫಿಲಿಪ್ ಗಾಸ್ಪೆಲ್ ತಂಡದ ಸೇವೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al