Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.03.2024
Share:

By Village Missionary Movement

Thursday, 28-Mar-2024

ಧೈನಂದಿನ ಧ್ಯಾನ(Kannada) – 28.03.2024

 

ಯೇಸುವಿನ ಪಾಡುಗಳು

 

"ಅವನು ಬಾಧೆಗೆ ಒಳಗಾಗಿ ತನ್ನನ್ನು ತಗ್ಗಿಸಿಕೊಂಡನು, ಬಾಯಿ ತೆರೆಯಲಿಲ್ಲ;…" - ಯೆಶಾಯ 53:7

 

ಯೇಸುಕ್ರಿಸ್ತನು ರಕ್ಷಕನಾಗಿ ಈ ಲೋಕಕ್ಕೆ ಕಳುಹಿಸಲ್ಪಡುವುದಕ್ಕಿಂತ ಮೊದಲೇ, ಅವರ ಜನನ, ಸೇವೆ ಅವರು ಅನುಭವಿಸಲಿರುವ ಪಾಡುಗಳು ಎಲ್ಲವನ್ನೂ ಪ್ರವಾದನೆಯಾಗಿ ನುಡಿಯಲಾಗಿತ್ತು. ವಿಶೇಷವಾಗಿ ಅವರ ಕೊನೆಯ ದಿನಗಳಲ್ಲಿ ನಡೆಯುವ ಘಟನೆಗಳು, ಶಿಲುಬೆಗೇರಿಸುವಿಕೆ ಮತ್ತು ಮರಣವನ್ನು ಅನೇಕ ಪ್ರವಾದಿಯ ಪುಸ್ತಕಗಳಲ್ಲಿ ಬರೆಯಲಾಗಿದೆ.

 

ಯೇಸು ಇಸ್ಕರಿಯೋತ ಯೂದನಿಂದ 30 ಬೆಳ್ಳಿ ನಾಣ್ಯಗಳಿಗೆ ತೋರಿಸಿಕೊಡಲ್ಪಟ್ಟು ಮಹಾಯಾಜಕನ ಬಳಿಗೆ ಕರೆದೊಯ್ಯಲ್ಪಟ್ಟರು. ಅಲ್ಲಿ ಅವರ ಮೇಲೆ ಸುಳ್ಳು ಸಾಕ್ಷಿಗಳನ್ನೆಬ್ಬಿಸಿ ಆರೋಪ ಹೊರಿಸಿದಾಗ "ಯೇಸುವೋ ಮೌನವಾಗಿದ್ದರು". (ಮತ್ತಾ. 26:63) ಮರಣಕ್ಕೆ ಅರ್ಹನೆಂದು ನಿರ್ಣಯಿಸಿದಾಗ, ಅವರ ಮುಖಕ್ಕೆ ಉಗುಳಿ ಅವರನ್ನು ಚುಚ್ಚಿದರು ಮತ್ತು ಕೆಲವರು ಅವರ ಕೆನ್ನೆಗೆ ಹೊಡೆದು ಅಪಹಾಸ್ಯ ಮಾಡಿದರು.

 

ಯೇಸುವನ್ನು ದೇಶಾಧಿಪತಿಯಾದ ಪಿಲಾತನ ಬಳಿಗೆ ಕಳುಹಿಸಿದಾಗ, ಪಿಲಾತನು ಅವರನ್ನು ಬಿಡುಗಡೆ ಮಾಡಲು ಬಯಸಿ, ಹಬ್ಬದ ದಿನಗಳಲ್ಲಿ ನಾನು ಯಾರನ್ನು ನಿಮಗೆ ಬಿಡುಗಡೆ ಮಾಡಬೇಕು. ಬರಬ್ಬನನ್ನಾ ಅಥವಾ ಯೇಸುಕ್ರಿಸ್ತನನ್ನಾ ಎಂದು ಕೇಳಿದಾಗ ಜನರು ಬರಬ್ಬನನ್ನು ಬಿಡುಗಡೆಗೊಳಿಸಬೇಕು ಮತ್ತು ಯೇಸುವನ್ನು ಶಿಲುಬೆಗೇರಿಸಬೇಕು ಎಂದು ಕೂಗಿದರು. ಶತಾಧಿಪತಿಯ ಸೈನಿಕರು ಯೇಸುವಿನ ಬಟ್ಟೆಗಳನ್ನು ಕಿತ್ತೆಸೆದು, ಕಡುಗೆಂಪು ವಸ್ತ್ರವನ್ನು ತೊಡಿಸಿ, ಮುಳ್ಳುಗಳಿಂದ ಒಂದು ಕಿರೀಟವನ್ನು ಹೆಣೆದು, ಅವರ ತಲೆಯ ಮೇಲೆ ಇಟ್ಟು, ಅವರ ಮುಂದೆ ನಮಸ್ಕರಿಸಿ, "ಯೆಹೂದ್ಯರ ಅರಸನೇ, ಜಯವಾಗಲಿ" ಎಂದು ಅವರನ್ನು ಗೇಲಿ ಮಾಡಿ, ಅವರ ಮೇಲೆ ಉಗುಳಿ, ಆ ಕೋಲನ್ನು ತೆಗೆದುಕೊಂಡು ಅವರ ತಲೆಗೆ ಹೊಡೆದರು.

 

ಯೇಸು ಹೆರೋದನ ಬಳಿಗೆ ಕಳುಹಿಸಲ್ಪಟ್ಟರು ಮತ್ತು ಹೆರೋದನು ಕೇಳಿದ ಯಾವ ಪ್ರಶ್ನೆಗಳಿಗೂ ಯೇಸು ಉತ್ತರ ನೀಡಲಿಲ್ಲ. (ಲೂಕ.22:9) ಚಾಟಿಯಿಂದ ಹೊಡೆದು ಮರಣಕ್ಕೆ ಒಪ್ಪಿಸಿಕೊಟ್ಟನು. ಯೇಸುವನ್ನು ಇಬ್ಬರುl ಅಪರಾಧಿಗಳೊಂದಿಗೆ ಶಿಲುಬೆಗೇರಿಸಲಾಯಿತು. ಎರಡೂ ಕೈ ಮತ್ತು ಕಾಲುಗಳಲ್ಲಿ ಮೊಳೆಗಳನ್ನು ಹೊಡೆದು ಬರ್ಬರವಾಗಿ ಕೊಲ್ಲಲ್ಪಟ್ಟರು. ಅವರು ಸತ್ತುಹೋದರಾ ಎಂದು ನೋಡಲು ಈಟಿಯಿಂದ ಚುಚ್ಚಲ್ಪಟ್ಪರು.

 

ಇದನ್ನು ಓದುತ್ತಿರುವ ಪ್ರಿಯರೇ ಸಹೋದರ ಸಹೋದರಿಯರೇ! ಇಷ್ಟು ಪಾಡುಗಳನ್ನು ಅವರು ಯಾಕೆ ಸಹಿಸಿಕೊಂಡರು? ಯಾರಿಗಾಗಿ ಸಹಿಸಿದರು? ಈ ಅಪಹಾಸ್ಯ, ನಿಂದೆ, ಅವಮಾನ, ಮುಳ್ಳುಕಿರೀಟ ಮತ್ತು ಶಿಲುಬೆ ಪಾಡುಗಳು ಇವೆಲ್ಲವನ್ನೂ ಯಾಕೆ ಮೌನವಾಗಿ ಸಹಿಸಿಕೊಂಡರು? ನಮಗಾಗಿಯೇ! ನಮ್ಮನ್ನು ಪಾಪದಿಂದಲೂ ಮತ್ತು ಶಾಪದಿಂದಲೂ ಮುಕ್ತಗೊಳಿಸಲು! ಆತನು ಸುರಿಸಿದ ರಕ್ತದ ಶಕ್ತಿಯನ್ನು ಅರಿತುಕೊಂಡು ಆತನನ್ನು ರಕ್ಷಕನಾಗಿ ಮತ್ತು ದೇವರಾಗಿ ಸ್ವೀಕರಿಸಿದರೆ, ನಮ್ಮ ಪಾಪಗಳು ತೊಳೆಯಲ್ಪಟ್ಟು ನಿತ್ಯಜೀವವನ್ನು ಹೊಂದಬಹುದು. ಈ ನಿತ್ಯಜೀವವನ್ನು ಹೊಂದಲು ದೇವರು ನಮಗೆ ಕೃಪೆತೋರಲಿ!

- Mrs. ಭುವನಾ ಧನಪಾಲನ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್ ನಲ್ಲಿ ನಡೆಯುವ ಸ್ವಸ್ಥತಾ ಕೂಟದಲ್ಲಿ ಭಾಗವಹಿಸುವ ಜನರ ರೋಗಗಳು ವಾಸಿಯಾಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino