Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.03.2024
Share:

By Village Missionary Movement

Wednesday, 27-Mar-2024

ಧೈನಂದಿನ ಧ್ಯಾನ(Kannada) – 27.03.2024

 

ಸಮಾಧಾನಕ್ಕೆ ಸೂಕ್ತವಾದವುಗಳು 

 

"ನೀನಾದರೂ ಸಮಾಧಾನಕ್ಕೆ ಬೇಕಾದದ್ದನ್ನು ಇದೇ ದಿನದಲ್ಲಿ ತಿಳಿದುಕೊಂಡರೆ ಎಷ್ಟೋ ಒಳ್ಳೇದು. ಆದರೆ ಈಗ ಅದು ನಿನ್ನ ಕಣ್ಣಿಗೆ ಮರೆಯಾಗಿದೆ" - ಲೂಕ 19:42

 

ಒಬ್ಬ ದೇವಮಾನವ ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಳ್ಳನೊಬ್ಬ ಅವರನ್ನು ಅಡ್ಡಗಟ್ಟಿದ. ಅವರಲ್ಲಿ ಅವನಿಗೆ ಏನೂ ಸಿಗದ ಕಾರಣ, ಅವನು ಹಿಂತಿರುಗಲು ಯೋಚಿಸಿದನು. ಆ ದೇವಮನುಷ್ಯನು ಕಲ್ಲು ಸಕ್ಕರೆಯ ಪಾನೀಯವನ್ನು ಅವನ ಕಡೆಗೆ ಚಾಚಿದರು. ಅವನೋ "ನಾನು ಲೆಂಟ್ ದಿನಗಳಲ್ಲಿ ಸಿಹಿ ತಿನ್ನುವುದಿಲ್ಲ" ಎಂದು ಹೇಳಿ ಅದನ್ನು ತೆಗೆದುಕೊಳ್ಳಲು ನಿರಾಕರಿಸಿದನು. ನೋಡಿ, ಕ್ರೈಸ್ತ ನೈತಿಕತೆ ಅವನಲ್ಲಿಲ್ಲ. ಆದರೆ ಕ್ರೈಸ್ತ ಆಚರಣೆಗಳ ಬಗ್ಗೆ ಜಾಗರೂಕರಾಗಿದ್ದನು. ಲೆಂಟ್ ಕಾಲಘಟ್ಟದಲ್ಲಿ ನಮ್ಮ ಸ್ಥಿತಿ ಹೇಗಿದೆ?

 

ಸತ್ಯವೇದವು ದೇವರಿಂದ ನಮಗೆ ಬಂದ ತೆರೆದ ಪತ್ರವಾಗಿದೆ. ಅದರಲ್ಲಿ ಅವರು ಮನುಷ್ಯನ ಬಗ್ಗೆ ತಮ್ಮ ಅಭಿಪ್ರಾಯದ ಬಗ್ಗೆ ಬರೆದಿದ್ದಾರೆ. ಏನದು? ಇದರರ್ಥ ಇಡೀ ಮಾನವ ಜನಾಂಗವು ಪಾಪಮಾಡಿದೆ ಮತ್ತು ದೇವರ ಮಹಿಮೆ ದೇವರ ಸಮಾಧಾನವನ್ನು ಕಳೆದುಕೊಂಡಿದೆ ಎಂಬುದೇ ಅದು. ದೇವರ ಸಮಾಧಾನವನ್ನು ಪಡೆದುಕೊಂಡರೆ ದೇವರ ಮಹಿಮೆಯನ್ನೂ ಪಡೆಯಬಹುದು. ಆ ದೇವಸಮಾಧಾನಕ್ಕೆ ಯಾವುದು ಸೂಕ್ತ? ರಕ್ಷಣೆ, ದೇವರೊಂದಿಗಿರುವ ಐಕ್ಯವಾಗಿದೆ. ಅದರ ಜೊತೆಗೆ ನಿತ್ಯ ಜೀವದ ಕಡೆಗೆ ನಾವು ಓಡುವ ಓಟ ನಮಗೆ ದೇವರ ಮಹಿಮೆಯನ್ನು ತರುತ್ತದೆ. ಅನೇಕ ಕ್ರೈಸ್ತರಿಗೂ ಈ ಸತ್ಯಗಳ ಅರಿವಿಲ್ಲ. ಕ್ರೈಸ್ತರಾಗಿದ್ದರೇನೆ ಮೋಕ್ಷವನ್ನು ಪಡೆಯಬಹುದು ಎಂಬ ಸೈತಾನನ ಸುಳ್ಳನ್ನು ನಂಬುತ್ತಾರೆ. ನಾವು ಅನುಸರಿಸುವ ಕ್ರೈಸ್ತ ಆಚರಣೆಗಳೋ ಅಥವಾ ಯಾವುದೇ ಒಳ್ಳೆಯ ಕೆಲಸಗಳೋ ನಮ್ಮನ್ನು ರಕ್ಷಿಸುವುದಿಲ್ಲ. ಯೇಸುಕ್ರಿಸ್ತನ ರಕ್ತವು ಮಾತ್ರ ಎಲ್ಲಾ ಪಾಪಗಳನ್ನು ತೊಳೆದು ನಮ್ಮನ್ನು ರಕ್ಷಿಸುತ್ತದೆ. ಎಲ್ಲರೂ ಪಾಪಿಗಳು ಆದರೆ ಎಲ್ಲರೂ ಯೇಸುವಿನ ರಕ್ತದಿಂದ ಮಾತ್ರವೇ ರಕ್ಷಣೆ ಹೊಂದಲು ಸಾಧ್ಯ. ಆದ್ದರಿಂದ ಇದುವರೆಗೂ ರಕ್ಷಣೆ ಹೊಂದದವರು ಈ ಲೆಂಟ್ ದಿನಗಳಲ್ಲಿ ಉಚಿತವಾದ ಬೆಲೆಯುಳ್ಳ ರಕ್ಷಣೆಯನ್ನು ಪಡೆದುಕೊಳ್ಳಿರಿ. ರಕ್ಷಿಸಲ್ಪಟ್ಟವರಾಗಿದ್ದರೆ ಕೊನೆಯವರೆಗೂ ನೆಲೆಗೊಳ್ಳಲು ದೇವರೊಂದಿಗಿನ ಐಕ್ಯತೆ ಮುಖ್ಯ.

 

ಅಂದು ಭಕ್ತಿಪೂರ್ವಕವಾದ ಮಹಾಯಾಜಕರೂ, ಹಿರಿಯರೂ ದುಷ್ಟ ಬರಬ್ಬನನ್ನು ಸ್ವೀಕರಿಸಿದರು. ಆದರೆ ಅವರು ತಮ್ಮ ಜೀವನದಲ್ಲಿ ಯೇಸುರಾಜನ ಆಳ್ವಿಕೆಯನ್ನು ಸ್ವೀಕರಿಸಲಿಲ್ಲ. ಇಂದಿಗೂ ಅನೇಕ ಜನರು ತಮ್ಮ ಜೀವನದಲ್ಲಿ ಸೈತಾನನಿಗೆ ಮೊದಲ ಸ್ಥಾನವನ್ನು ನೀಡುತ್ತಾರೆ ಮತ್ತು ತಮ್ಮ ಜೀವನದಲ್ಲಿ ಯೇಸುರಾಜನ ಆಳ್ವಿಕೆಯನ್ನು ಒಪ್ಪಿಕೊಳ್ಳುವುದಿಲ್ಲ. ನಮಗೆ ಕೃಪೆಯಾಗಿ ದೊರೆತಿರುವ ಈ ದಿನಗಳಲ್ಲಾದರೂ ಸಮಾಧಾನಕ್ಕೆ ಸೂಕ್ತವಾದವುಗಳನ್ನು ಅರಿತುಕೊಳ್ಳೋಣ! ಸಮಯವನ್ನು ಪ್ರಯೋಜನಪಡಿಸಿಕೊಳ್ಳೋಣ! ಇಂದೇ ರಕ್ಷಣೆಯ ದಿನ!!

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯಗಳಿಗಾಗಿ ಅಗತ್ಯಗಳು ಸಂಧಿಸಲ್ಪಡುವುದಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet ibizabet holiganbet amkbet sonbahis betgit cratosroyalbet cratosroyalbet gameofbet