Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.03.2024
Share:

By Village Missionary Movement

Tuesday, 26-Mar-2024

ಧೈನಂದಿನ ಧ್ಯಾನ(Kannada) – 26.03.2024

 

ಆತುರಪಡಬೇಡ

 

"…ಭರವಸವಿಡುವವನು ಆತುರಪಡನು" - ಯೆಶಾಯ 28:16

 

ಜೆಟ್‌ ವಿಮಾನವೊಂದರಲ್ಲಿ ಪೈಲಟ್, ಶಾಲಾ ವಿದ್ಯಾರ್ಥಿ ಮತ್ತು ಬೋಧಕರು ಈ ಮೂವರು ಪ್ರಯಾಣಿಸುತ್ತಿದ್ದರು. ಇಂಜಿನ್ ವೈಫಲ್ಯದಿಂದ ವಿಮಾನವು ಅಪಘಾತಕ್ಕೊಳಗಾಯಿತು. ಇನ್ನು ಸ್ವಲ್ಪ ಸಮಯದಲ್ಲಿ ಒಂದು ದೊಡ್ಡ ಅಪಘಾತವನ್ನು ಸಂಧಿಸಲಿದ್ದೇವೆ ಎಂಬುದನ್ನು ಅರಿತುಕೊಂಡ ಪೈಲಟ್ ಪರಿಸ್ಥಿತಿಯನ್ನು ಉಳಿದ ಇನ್ನಿಬ್ಬರಿಗೆ ವಿವರವಾಗಿ ಹೇಳಿದರು. ಮತ್ತು ವಿಮಾನದಲ್ಲಿ ಕೇವಲ ಎರಡು ಪ್ಯಾರಾಚೂಟ್ ಗಳು ಮಾತ್ರವೇ ಇವೆ. ಆದರೆ ಇಲ್ಲಿ ನಾವು ಮೂವರಿದ್ದೇವೆ ಎಂದು ಪೈಲಟ್ ಹೇಳುತ್ತಿರುವಾಗಲೇ ಬೋಧಕರು ವೇಗವಾಗಿ ಒಂದನ್ನು ತೆಗೆದುಕೊಂಡು ವಿಮಾನದಿಂದ ಕೆಳಗೆ ಜಿಗಿದರು.

 

ಇದನ್ನು ಸ್ವಲ್ಪವೂ ಊಹಿಸಿರದ ಪೈಲಟ್ ಅಚ್ಚರಿಯಿಂದ ಆ ವಿದ್ಯಾರ್ಥಿಯನ್ನು ನೋಡಿ, "ಪರವಾಗಿಲ್ಲ ತಮ್ಮಾ, ಇನ್ನೊಂದು ಪ್ಯಾರಾಚೂಟ್ ಇದೆ, ಅದನ್ನು ತೆಗೆದುಕೊಂಡು ನೀನು ಜೀವ ಉಳಿಸಿಕೋ. ನೀನು ಇನ್ನೂ ಯೌವನಸ್ಥನು, ಬಾಳಬೇಕಾದವನು" ಎಂದು ಹೇಳಿದರು. ಇದನ್ನು ಕೇಳಿದ ವಿದ್ಯಾರ್ಥಿ, "ಇಲ್ಲ ಅಯ್ಯಾ ನಾವಿಬ್ಬರೂ ಬದುಕಬಹುದು" ಎಂದರು. "ಅದು ಹೇಗೆ ಸಾಧ್ಯ? ನಮ್ಮ ಬಳಿ ಒಂದೇ ಪ್ಯಾರಾಚೂಟ್ ತಾನೇ ಇದೆ." ಎಂದರು. ವಿದ್ಯಾರ್ಥಿಯು ಸ್ವಲ್ಪವೂ ಆತಂಕಪಡದೆ, "ಶಿಕ್ಷಕರು ಜಿಗಿಯುವ ವೇಗದಲ್ಲಿ ಪ್ಯಾರಾಚೂಟ್ ಅನ್ನು ಬಿಟ್ಟುಬಿಟ್ಟು ನನ್ನ school bag ಅನ್ನು ಎತ್ತಿಕೊಂಡು ವೇಗವಾಗಿ ಕೆಳಗೆ ಹಾರಿದರು, ಆದ್ದರಿಂದ ನಮ್ಮಿಬ್ಬರಿಗೂ ಪ್ಯಾರಾಚೂಟ್ ಇದೆ" ಎಂದು ಹೇಳಿದರು.

 

ಮೇಲೆ ಓದಿದ ಘಟನೆ ತಮಾಷೆಯಾಗಿದ್ದರೂ ಇಂದು ನಮ್ಮಲ್ಲಿ ಅನೇಕರು ಆತುರದಲ್ಲಿದ್ದಾರೆ. ಕ್ರೈಸ್ತ ಜೀವನದಲ್ಲಿ ನಮಗೆ ನಂಬಿಕೆ ಮತ್ತು ತಾಳ್ಮೆ ಇಲ್ಲದಿದ್ದರೆ, ನಮ್ಮ ಪ್ರಯಾಣಕ್ಕೆ ಅಡ್ಡಿಯಾಗುವುದು ಖಚಿತ. ಇಂದಿನ ಸತ್ಯವೇದ ಭಾಗವನ್ನು ಓದುವಾಗ, ಯೇಸು ತಮ್ಮ ದೋಣಿಯಲ್ಲಿದ್ದರೂ, ಶಿಷ್ಯರು "ಅಯ್ಯೋ, ನಾವು ಸಾಯುತ್ತಿದ್ದೇವೆ" ಎಂದು ಕೂಗಿದರು. ಯೇಸು ಇವರ ಅಪನಂಬಿಕೆಯನ್ನು ಖಂಡಿಸುವುದನ್ನು ಓದುತ್ತೇವೆ. ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ ಎಂದು, ಅಪನಂಬಿಕೆಯ ದುಷ್ಟ ಹೃದಯ ನಿಮ್ಮಲ್ಲಿ ಒಬ್ಬನೊಳಗೂ ಇರದಂತೆ ನೀವು ಜಾಗರೂಕರಾಗಿರಿ ಎಂದು ( ಇಬ್ರಿ. 11:6, 3:12 ) ರಲ್ಲಿ ಸತ್ಯವೇದವು ನಮಗೆ ಬುದ್ಧಿ ಹೇಳುತ್ತಿದೆ. ಆದ್ದರಿಂದ ಇದನ್ನು ಓದುತ್ತಿರುವ ಪ್ರತಿಯೊಬ್ಬರೂ ನಂಬಿಕೆಯಲ್ಲಿ ದೃಢವಾಗಿರೋಣ. ದೇವರು ನಿಮಗೆ ಮಾರ್ಗದರ್ಶನ ನೀಡಲಿ!

- Bro. ಜೇಕಬ್ ಶಂಕರ್.

 

ಪ್ರಾರ್ಥನಾ ಅಂಶ:

ನಮ್ಮ ಕಚೇರಿ ಕೆಲಸಗಾರರಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş