Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.03.2024
Share:

By Village Missionary Movement

Monday, 25-Mar-2024

ಧೈನಂದಿನ ಧ್ಯಾನ(Kannada) – 25.03.2024

 

ತ್ಯಾಗವನ್ನು ನೆನೆಸಿಕೋ

 

"ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣ ಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ." - ರೋಮಾ 5:8

 

ಒಮ್ಮೆ ಪಶ್ಚಿಮ ಪೆನ್ಸಿಲ್ವೇನಿಯಾವನ್ನು ತೀವ್ರ ಸುಂಟರಗಾಳಿ ಅಪ್ಪಳಿಸಿತು. ಅಲ್ಲಿದ್ದವರು ಕಿರುಚುತ್ತಾ ಹಳ್ಳಗಳಲ್ಲಿ ಅಡಗಿಕೊಂಡರು. ಡೇವಿಡ್ ಕೊಸ್ಟೀವಾ ಎಂಬ ವ್ಯಕ್ತಿ ಚಂಡಮಾರುತದ ಸಮಯದಲ್ಲಿ ಕ್ರೀಡಾಂಗಣದಲ್ಲಿ ಪಂದ್ಯವನ್ನು ರೆಫರಿ ಮಾಡುತ್ತಿದ್ದರು. ಅಕ್ಕನ ಮಗಳು ಆಟ ನೋಡುತ್ತಾ ಪಕ್ಕದಲ್ಲಿ ನಿಂತಿದ್ದಳು. ಚಂಡಮಾರುತದ ದುರಂತವನ್ನು ಅರಿತುಕೊಂಡ ಡೇವಿಡ್ ಕೊಸ್ಟೀವಾ ತಕ್ಷಣವೇ ಹುಡುಗಿಯನ್ನು ಎಳೆದುಕೊಂಡು ಹೋಗಿ ಹಳ್ಳದೊಳಗೆ ಇಳಿಸಿ ಅದರ ಮೇಲ್ಗಡೆಯಲ್ಲಿ ಮಲಗಿಕೊಂಡರು. ಕಣ್ಣು ಮಿಟುಕಿಸುವಷ್ಟರಲ್ಲಿ ಗಾಳಿಯ ರಭಸಕ್ಕೆ ಅವರನ್ನು ಕೊಚ್ಚಿ ಕೊಂಡೊಯ್ದಿತು. ಆ ಪುಟ್ಟ ಹುಡುಗಿ ಕಾಪಾಡಲ್ಪಟ್ಟಳು. ಡೇವಿಡ್ ಕೊಸ್ಟೀವಾ ತನ್ನ ಸಹೋದರಿಯ ಮಗಳಿಗಾಗಿ ತನ್ನ ಜೀವವನ್ನೇ ತ್ಯಾಗ ಮಾಡಿದರು.

 

ಅಪೊಸ್ತಲನಾದ ಪೌಲನು ರೋಮಾಪುರದವರಿಗೆ ಹೀಗೆ ಬರೆಯುತ್ತಾರೆ. ನಾವು ಇನ್ನೂ ಪಾಪಿಗಳಾಗಿದ್ದಾಗ ಕ್ರಿಸ್ತನು ನಮಗೋಸ್ಕರ ಮರಣಹೊಂದಿದ ಕಾರಣ ಆ ದೇವರು ನಮ್ಮ ಮೇಲಿನ ಪ್ರೀತಿಯನ್ನು ಪ್ರದರ್ಶಿಸಿದ್ದಾರೆ ಎಂದು. ಅಂದರೆ, ನಾವು ಇನ್ನೂ ಪಾಪದಲ್ಲಿ ಜೀವಿಸುತ್ತಿರುವಾಗ, ದೇವರು ತನ್ನ ಅಪರಿಮಿತವಾದ ಪ್ರೀತಿಯಿಂದ ನಮ್ಮನ್ನು ವಿಮೋಚಿಸಿಕೊಳ್ಳುವಂತೆ, ದೇವರು ಶಿಲುಬೆಯ ಮೇಲೆ ಸಾಯಲು ತನ್ನ ಏಕೈಕ ಮಗನನ್ನು ಕೊಟ್ಟರು. ಪಾಪದಿಂದ ನಮ್ಮನ್ನು ಮುಕ್ತಗೊಳಿಸಲು ಬೇರೆ ಯಾವುದೇ ಪರಿಹಾರವಿಲ್ಲ. ನಾವು ನಿತ್ಯಜೀವವನ್ನು ಹೊಂದುವಂತೆ ಆತನು ನಮಗೋಸ್ಕರ ಸತ್ತನು.

 

ಇದನ್ನು ಓದುವ ಪ್ರಿಯರೇ! ನಮ್ಮ ಅಧರ್ಮ ಮತ್ತು ಪಾಪಕ್ಕಾಗಿ ಅವರು ಸತ್ತರು ಎಂಬ ಸತ್ಯವನ್ನು ನಾವು ನಂಬಿದರೆ ಮತ್ತು ಅರಿತುಕೊಂಡರೆ, ನಾವು ಇನ್ನು ಮುಂದೆ ಪಾಪದೊಂದಿಗೆ ಆಟವಾಡುವುದಿಲ್ಲ. ನಮಗೆ ಇಷ್ಟ ಬಂದಂತೆ ಬದುಕುವ ಪಾಪಿ ಜೀವನದಿಂದ ಮೇಲೆದ್ದು ಬರೋಣ. ದೇವರು ಮಾಡಿದ ತ್ಯಾಗದ ಬಗ್ಗೆ ಯೋಚಿಸೋಣ. ನಾವು ಪಶ್ಚಾತ್ತಾಪಪಟ್ಟು ಮಾನಸಾಂತರ ಹೊಂದೋಣ. ಮತ್ತು ಪಾಪದಿಂದ ನಮ್ಮನ್ನು ವಿಮೋಚಿಸಿದ ಯೇಸುವಿಗೆ ನಾವು ಏನು ಮಾಡಲಿದ್ದೇವೆ? ನಾವು ಮುಕ್ತವಾಗಿ ಪಡೆದ ಪಾಪಗಳ ಕ್ಷಮೆಯ ಖಚಿತತೆಯನ್ನು ಇತರರಿಗೆ ಪ್ರಕಟಿಸಲು ಸಿದ್ಧರಾಗೋಣ. ಶಿಲುಬೆ ತ್ಯಾಗದ ಸಂಕೇತ! ಯೇಸು ಕ್ರಿಸ್ತನು ತನ್ನ ಜೀವವನ್ನು ಶಿಲುಬೆಯ ಮೇಲೆ ಬಲಿಯಾಗಿ ಕೊಟ್ಟರು. ಆ ತ್ಯಾಗಕ್ಕೆ ಪ್ರತಿಯಾಗಿ ನಾವು ಏನು ಮಾಡಲಿದ್ದೇವೆ?

 ನಾವು ಶಿಲುಬೆಯನ್ನು ದೃಷ್ಟಿಸಿ ನೋಡೋಣ ಶಿಲುಬೆಯ ಬಳಿಗೆ ಬರೋಣ ಶಿಲುಬೆಯನ್ನು ಹೊರೋಣ

 ಶಿಲುಬೆಯಿಂದ ಉಂಟಾಗುವ ವಿಮೋಚನೆಯನ್ನು ಪ್ರಕಟಿಸೋಣ.

- Bro. ಗುಣಶೀಲನ್

 

ಪ್ರಾರ್ಥನಾ ಅಂಶ:

ನಮ್ಮ ಉತ್ತರ ಭಾರತದ ಸೇವೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino