Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.03.2024
Share:

By Village Missionary Movement

Sunday, 24-Mar-2024

ಧೈನಂದಿನ ಧ್ಯಾನ(Kannada) – 24.03.2024

 

ಡೇವಿಡ್ ಬ್ರೆನಾಯ್ಡ್ 

 

"ಯೆಹೋವನು ನಿನ್ನನ್ನು ಎಲ್ಲಾ ಕೇಡಿನಿಂದ ತಪ್ಪಿಸುವನು; . ." - ಕೀರ್ತನೆ 121:7

 

ಏನು ಪುಟಾಣಿಗಳೇ ನೀವು ಪ್ರತಿ ವಾರ ಕಥೆ ಕೇಳ್ತಿದೀರ. ನಿಮ್ಗೆ ಅದು Useful ಆಗಿ ಇದೆ ಎಂದು ಭಾವಿಸುತ್ತೇನೆ. Ok ನಾವು ಇಂದು ನಾವು ಒಂದು ಮಿಷನರಿ story ಕೇಳೋಣ್ವಾ?

 

ಅಮೆರಿಕ ದೇಶದಲ್ಲಿ ಜನಿಸಿದ ಬ್ರೆನಾಯ್ಡ್ ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡರು. ಯೇಸುಕ್ರಿಸ್ತನನ್ನು ಸ್ವೀಕರಿಸಿದ ಇವರು ತನ್ನ 25 ನೇ ವಯಸ್ಸಿನಲ್ಲಿ ಮಿಷನರಿಯಾಗಿ ಅಮೆರಿಕಕ್ಕೆ ಕಳುಹಿಸಲ್ಪಟ್ಟರು. ಟಿ.ಬಿ. ಅನಾರೋಗ್ಯ ಮತ್ತು ರಕ್ತ ವಾಂತಿಯಿಂದ ಬಳಲುತ್ತಿದ್ದರೂ, ಕೆಂಪುಭಾರತೀಯರಿಗೆ ತನ್ನೊಳಗಿನ ಕ್ರಿಸ್ತನ ಪ್ರೀತಿಯನ್ನು ಪ್ರಕಟಿಸಲು ಅವರು ಶ್ರಮಿಸಿದರು. ಮುದ್ದು ಪುಟಾಣಿಗಳೇ, ಯೇಸುವನ್ನು ತಿಳಿದಿರುವ ನೀವು ಅವರ ಬಗ್ಗೆ ತಿಳಿಯದವರಿಗೆ ಹೇಳಲು ಆಸೆಯಾಗಿ ಇರಬೇಕು, ok ನಾ.

 

ಬ್ರೆನಾಯ್ಡ್ ಅಣ್ಣ ಕೆಂಪು ಭಾರತೀಯರು ವಾಸಿಸುವ ಒಂದು ಹಳ್ಳಿಯಲ್ಲಿ ಟೆಂಟ್ ಹಾಕಿ ತಂಗಿದ್ದರು. ಆ ಜನರು ಅವರನ್ನು ಕೊಂದುಬಿಡೋಣ ಎಂದು ಭಾವಿಸಿ ನಿಧಾನವಾಗಿ ಆ ಡೇರೆಗೆ ಹೋದರು. ಅವರು ಇಣುಕಿ ನೋಡಿದಾಗ ಅವರು ಮೊಣಕಾಲುಗಳ ಮೇಲೆ ಪ್ರಾರ್ಥಿಸುತ್ತಿದ್ದರು. ಅವರ ಹಿಂದೆ ನಾಗರಹಾವೊಂದು ತಲೆಯೆತ್ತಿ ಆಡುತ್ತಿತ್ತು. ನೋಡುತ್ತಿದ್ದ ಜನರು ನಾವು ಇವರನ್ನು ಸಾಯಿಸಬಾರದು, ಆ ಹಾವೇ ಅವರನ್ನು ಕೊಂದು ಬಿಡುತ್ತದೆ ಎಂದುಕೊಂಡು ಏನಾಗುತ್ತದೋ ಎಂದು ಕಾಯುತ್ತಿದ್ದರು. ಹಾವು ಕಂಡರೆ ಸೇನೆಯೇ ನಡುಗುತ್ತದೆ ಎಂದು ಹೇಳುತ್ತಾರೆ. ಹಾಗೆ ಅಲ್ವಾ ಪುಟಾಣಿಗಳೇ. ನಡೆದಿದ್ದೇನು ಗೊತ್ತಾ? ಹಾವು ಹಾಗೆಯೇ ಸರಿದು ಬಂದ ದಾರಿಯಲ್ಲೇ ಹೊರಟುಹೋಯಿತು. ಬ್ರೆನಾಯ್ಡ್ ನನ್ನು ಕೊಲ್ಲಲು ಬಯಸಿದ ಜನರು ಸಹ ಆಶ್ಚರ್ಯಚಕಿತರಾದರು, ಅವರು ದೈವಿಕ ಮನುಷ್ಯನಾಗಿರಬೇಕು ಎಂದು ಭಾವಿಸಿ ಅವರೊಂದಿಗೆ ಸ್ನೇಹ ಬೆಳೆಸಿದರು. ಅಷ್ಟೇ ಅಲ್ಲ, ಅವರು ಯೇಸು ಕ್ರಿಸ್ತನನ್ನು ತಮ್ಮ ರಕ್ಷಕನನ್ನಾಗಿ ಸ್ವೀಕರಿಸಿದರು. ಗ್ರಾಮಸ್ಥರು ಅವರನ್ನು ಕೊಲ್ಲಲು ಬಂದದ್ದು, ಹಾವು ಅವರ ಹಿಂದೆ ಇದ್ದದ್ದು, ಇದ್ಯಾವುದೂ ಬ್ರೆನಾಯ್ಡ್ ಅಣ್ಣನಿಗೆ ಗೊತ್ತಿಲ್ಲ. ಆದರೆ ನೋಡುವ ದೇವರು ಅವರೊಂದಿಗಿದ್ದು ಅವರನ್ನು ಕಾಪಾಡಿದರು.

 

ಪ್ರೀತಿಯ ತಮ್ಮ, ತಂಗಿಯರೇ ನೀವು ಸಹ ದೇವರನ್ನು ನೋಡಿ ಪ್ರಾರ್ಥಿಸುವಾಗ ಯಾವ ಕೇಡೂ ಸಂಭವಿಸದಂತೆ ಕಾಣುವ ದೇವರಾಗಿದ್ದು ನಿತ್ಯವೂ ನಡೆಸುತ್ತಾರೆ. ಭಯಪಡಬೇಡಿ, ಚಿಂತಿಸಬೇಡಿ. ಪ್ರಾರ್ಥಿಸಿ. Ok ನಾ. Bye. 

- Mrs. ಅನ್ಬುಜ್ಯೋತಿ ಸ್ಟಾಲಿನ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet padişahbet bets10 extrabet royalbet süperbetin padişahbet betcio romabet giriş romabet queenbet bahiscasino atlasbet bahiscasino atlasbet matbet matbet giriş bahiscasino celtabet queenbet casibom jojobet