Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.03.2024
Share:

By Village Missionary Movement

Saturday, 23-Mar-2024

ಧೈನಂದಿನ ಧ್ಯಾನ(Kannada) – 23.03.2024

 

ಸಮಯವು ಚಿನ್ನವಾಗಿದೆ

 

"ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ" - ಎಫೆಸ 5:16

 

ಸಮಯದ ಬಗ್ಗೆ ಅನೇಕರು ವಿಭಿನ್ನ ವಿಷಯಗಳನ್ನು ಹೇಳುತ್ತಾರೆ. ಸಮಯವು ಚಿನ್ನದಂತೆ, ಅದನ್ನು ವ್ಯರ್ಥ ಮಾಡಬೇಡಿ. ಪ್ರತಿ ಸೆಕೆಂಡ್ ಅಮೂಲ್ಯವಾದದ್ದು ಎಂದು ಅನೇಕರು ಹೇಳುವುದುಂಟು. ಒಂದು ಕ್ಷಣದ ಬೆಲೆಯನ್ನು ರೈಲು ಹಿಡಿಯಲು ಸಾಧ್ಯವಾಗದವರ ಬಳಿ ಕೇಳಿದರೆ ಗೊತ್ತಾಗುತ್ತದೆ ಎನ್ನುತ್ತಾರೆ. ಒಂದು ಗಂಟೆಯ ಮೌಲ್ಯವನ್ನು ಶಸ್ತ್ರಚಿಕಿತ್ಸೆ ಮಾಡುವ ವೈದ್ಯರ ಬಳಿ ಕೇಳಿದರೆ ಗೊತ್ತಾಗುತ್ತದೆ ಎನ್ನುತ್ತಾರೆ. ದಿನನಿತ್ಯ ದುಡಿದು ತಿನ್ನುವವರನ್ನು ಕೇಳಿದರೆ ಒಂದು ದಿನದ ಮೌಲ್ಯ ಗೊತ್ತಾಗುತ್ತದೆ ಎನ್ನುತ್ತಾರೆ. ಒಂದು ತಿಂಗಳ ಬೆಲೆಯನ್ನು ತಿಳಿಯಲು ಅವಧಿಗೆ ಮುನ್ನವೇ ಮಗುವಿಗೆ ಜನ್ಮ ನೀಡಿದ ತಾಯಿಯನ್ನು ಕೇಳಿದರೆ ತಿಳಿಯುತ್ತದೆ ಎನ್ನುತ್ತಾರೆ. ಹೀಗೆ ದಿನಗಳ ಬಗ್ಗೆ ಜಗತ್ತಿನಲ್ಲಿ ಅನೇಕ ಅಭಿಪ್ರಾಯಗಳಿದ್ದರೂ, ಸತ್ಯವೇದವು ನಮಗೆ ಹೇಳುವುದು, "ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ."

 

ದಿನಗಳು ಕೆಟ್ಟವುಗಳಾಗಿವೆ ಎಂದು ಸತ್ಯವೇದದಲ್ಲಿ ಏಕೆ ಹೇಳಲಾಗಿದೆ? ಯಾರಿಗೆ ಕೆಟ್ಟದ್ದಾಗಿದೆ? ಪ್ರಪಂಚದ ಎಲ್ಲಾ ಮನುಷ್ಯರಿಗೂ ಕೆಟ್ಟದ್ದಾಗಿದೆ. ಅದು ಯಾವಾಗ ಕೆಟ್ಟದ್ದಾಗಿ ಬದಲಾಯಿತು? ದೇವರು ಪ್ರತಿ ದಿನವನ್ನು ಒಳ್ಳೆಯ ದಿನವಾಗಿ ನೋಡಿದರು. ಆದರೆ ಮನುಷ್ಯನು ಪಾಪಮಾಡಿದಾಗ ದಿನಗಳು ಕೆಟ್ಟವುಗಳಾಗಿ ಮಾರ್ಪಟ್ಟಿತು. ಸುಂದರವಾದ ಏದೆನ್ ತೋಟವನ್ನು ಕಳೆದುಕೊಂಡರು. ಬೆವರು ಸುರಿಸುವಂತಾಯಿತು, ಹೆರಿಗೆ ಸಮಯದಲ್ಲಿ ನೋವು ಅನುಭವಿಸಬೇಕಾಯಿತು. ಒಳಿತು ಮಾಡಿದರೆ ಉನ್ನತಿ, ಕೆಡುಕು ಮಾಡಿದರೆ ಹಿಗ್ಗುವಿಕೆ! ನಾವು ಮಾಡುವ ಒಳ್ಳೆಯ ಅಥವಾ ಕೆಟ್ಟದ್ದಕ್ಕೆ ಅನುಗುಣವಾಗಿ ಫಲಿತಾಂಶವನ್ನು ಪಡೆಯುತ್ತೇವೆ ಎಂದು ಸತ್ಯವೇದವು ಹೇಳುತ್ತಿದೆ.

 

ನಾವು ಶಾಶ್ವತ ಸಂತೋಷವನ್ನು ಪಡೆಯಲು, ಸುಖ ಜೀವನವನ್ನು ಅನುಭವಿಸಲು ಸಮಯವನ್ನು ಉಪಯೋಗಿಸಿಕೊಳ್ಳಬೇಕು. ಒಂದು ತಲಾಂತನ್ನು ಪಡೆದವನು ತಲಾಂತನ್ನು ಬಚ್ಚಿಟ್ಟನು. ಅವನು ಮೈಗಳ್ಳನಾದ ಕೆಟ್ಟ ಆಳು ಎಂಬ ಹೆಸರು ಪಡೆದು ಹೊರಗೆ ಕತ್ತಲೆಗೆ ತಳ್ಳಲ್ಪಟ್ಟನು. ತಲಾಂತನ್ನು ಉಪಯೋಗಿಸಿ ತಲಾಂತನ್ನು ಹೆಚ್ಚಿಸಿಕೊಂಡವರಿಗೆ ಉನ್ನತಿಯೂ ಇನ್ನೂ ತಲಾಂತುಗಳೂ ದೊರೆತವು. ದಣಿಯ ಸೌಭಾಗ್ಯದಲ್ಲಿ ಪಾಲುಹೊಂದುವ ಭಾಗ್ಯವೂ ದೊರೆಯಿತು. (ಮತ್ತಾಯ 25:15-30)

 

ನಮಗೆ ಕೊಡಲ್ಪಟ್ಟ ಕಾಲಗಳು ಎಷ್ಟು ಎಂಬುದನ್ನು ನಾವು ಅರಿಯದೇ ಇರುವುದರಿಂದ, ದೇವರು ನಮ್ಮನ್ನು ಲೋಕದಲ್ಲಿ ಬದುಕುವಂತೆ ಮಾಡಿದ ಉದ್ದೇಶವನ್ನು ಪೂರ್ಣಗೊಳಿಸಬೇಕು ಮತ್ತು ಅಪೊ. ಪೌಲನಂತೆ ನನ್ನ ಓಟವನ್ನು ಕೊನೆಗಾಣಿಸಿದೆ ಎಂದು ಹೇಳುವ ಮಟ್ಟಿಗೆ ಯಶಸ್ವಿಯಾಗಿ ಓಡಿ ಮುಗಿಸಬೇಕು. ನಾವು ಹೊಂದಿಕೊಳ್ಳುವಂತೆ ಓಡೋಣ. ನಮ್ಮ ಜಯಮಾಲೆಯನ್ನು ಯಾರೂ ಅಪಹರಿಸದಂತೆ ಎಚ್ಚರವಾಗಿ ಓಡೋಣ. (ಪ್ರಕ. 3:11)

- Bro. ಸಮುವೇಲ್ ಮೋರೀಸ್

 

ಪ್ರಾರ್ಥನಾ ಅಂಶ:

ಪ್ರತಿ ಮಂಗಳವಾರ ನಡೆಯುವ ರಾತ್ರಿ ಪ್ರಾರ್ಥನೆಯಲ್ಲಿ ದೇವರ ಶಕ್ತಿಯು ಪ್ರಕಟವಾಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al