By Village Missionary Movement
Friday, 22-Mar-2024ಧೈನಂದಿನ ಧ್ಯಾನ(Kannada) – 22.03.2024
ಕಣ್ಣುಗಳನ್ನು ತೆರೆ
"…ಯೆಹೋವನು ಅವನ ಕಣ್ಣುಗಳನ್ನು ತೆರೆದನು . . ." - 2 ಅರಸುಗಳು 6:17
ಚಪ್ಪಲಿ ಹೊಲಿಯುತ್ತಿದ್ದ ವಿಲಿಯಂ ಕೇರಿ ಅವರು ತಮ್ಮ ಬಿಡುವಿನ ವೇಳೆಯಲ್ಲೆಲ್ಲಾ ಭಾರತದ ನಕ್ಷೆಯೊಂದಿಗೆ ಮಂಡಿಯೂರಿ ಪ್ರಾರ್ಥಿಸುತ್ತಿದ್ದರು. ಭಾರತದ ಕುರಿತಾದ ಭಾರ ಅವರ ಹೃದಯದಲ್ಲಿ ದಿನದಿನಕ್ಕೂ ಹೆಚ್ಚಾಗುತ್ತಲೇ ಇತ್ತು. ಮಿಷನರಿಯಾಗಿ ಭಾರತಕ್ಕೆ ಯಾರು ಹೋಗುತ್ತಾರೆ? ಎಂಬ ಕರೆಯನ್ನು ಕೇಳಿದ ಕೂಡಲೇ, ಇವರು ತನ್ನನ್ನೇ ಸಮರ್ಪಿಸಿಕೊಂಡು ಭಾರತಕ್ಕೆ ಮಿಷನರಿಯಾಗಿ ಹೋಗಲು ಮುಂದಾದರು. ಅನೇಕ ಅಡೆತಡೆಗಳು, ಹೋರಾಟಗಳು ಮತ್ತು ನಷ್ಟಗಳ ನಡುವೆಯೂ ಇವರು ಭಾರತದಲ್ಲಿ ಉತ್ಸಾಹದಿಂದ ಸೇವೆ ಮಾಡಿದರು. ಅವರ ಹೃದಯದ ಮಾತು, "ದೇವರಿಂದ ಮಹತ್ತರವಾದದ್ದನ್ನು ನಿರೀಕ್ಷಿಸು; ದೇವರಿಗಾಗಿ ಮಹತ್ತರವಾದದ್ದನ್ನು ಮಾಡು" ಎಂಬುದೇ. ಇವರು ತಮ್ಮ ಯೌವನದಿಂದಲೂ ಭಾರತದ ಬಗ್ಗೆ ಉತ್ಸಾಹವನ್ನು ಹೊಂದಿದ್ದರು, ಅದೇ ಅವರ ಕೊನೆಯ ಉಸಿರಿರುವವರೆಗೂ ಭಾರತದಲ್ಲಿ ಸೇವೆ ಮಾಡುವಂತೆ ಮಾಡಿತು. ವಿಲಿಯಂ ಕೇರಿಯವರ ಪ್ರಕಾಶಮಾನವಾದ ಮನೋನೇತ್ರಗಳು ಭಾರತದತ್ತ ತಿರುಗಿದ ಪರಿಣಾಮವಾಗಿ ಇಂದು ನೀವು ಮತ್ತು ನಾನು ಕ್ರಿಸ್ತನನ್ನು ತಿಳಿದಿದ್ದೇವೆ.
ಸತ್ಯವೇದದಲ್ಲಿ, ಸಿರಿಯಾದ ರಾಜನು ಇಸ್ರಾಯೇಲ್ ಗೆ ವಿರುದ್ಧವಾಗಿ ಹೋರಾಡಲು ಬಂದನು. ನಗರವನ್ನು ಸುತ್ತುವರೆದಿರುವ ಸೈನ್ಯ, ಕುದುರೆಗಳು ಮತ್ತು ರಥಗಳನ್ನು ನೋಡಿ, ಎಲೀಷನ ಸೇವಕನು, "ಅಯ್ಯೋ, ನನ್ನ ಒಡೆಯನೇ, ನಾವು ಏನು ಮಾಡಬೇಕು?" ಎಂದು ಅಳುತ್ತಾನೆ. ಆಗ ಎಲೀಷನು ಯೆಹೋವನೇ, ಇವನು ನೋಡುವಂತೆ ಇವನ ಕಣ್ಣುಗಳನ್ನು ತೆರೆ ಎಂದು ಪ್ರಾರ್ಥಿಸಲು ಯೆಹೋವನು ಅವನ ಕಣ್ಣುಗಳನ್ನು ತೆರೆದನು. ಆಗ ಎಲೀಷನ ರಕ್ಷಣೆಗಾಗಿ ಸುತ್ತಣ ಗುಡ್ಡಗಳಲ್ಲಿ ಬಂದು ನಿಂತಿದ್ದ ಅಗ್ನಿಮಯವಾದ ರಥರಥಾಶ್ವಗಳು ಆ ಸೇವಕನಿಗೆ ಕಂಡವು. ಅದಕ್ಕೆ ಪ್ರವಾದಿಯಾದ ಎಲೀಷನು ಸೇವಕನನ್ನು ನೋಡಿ, "ಹೆದರಬೇಡ; ಅವರ ಕಡೆಯಲ್ಲಿರುವವರಿಗಿಂತಲೂ ನಮ್ಮ ಕಡೆಯಲ್ಲಿರುವವರು ಹೆಚ್ಚಾಗಿದ್ದಾರೆ" ಎಂಬುದನ್ನು ಆ ದಿನದಲ್ಲಿ ಗ್ರಹಿಸುವಂತೆ ಸೇವಕನ ಕಣ್ಣುಗಳು ತೆರೆಯಲ್ಪಟ್ಟವು.
ಇದನ್ನು ಓದುತ್ತಿರುವ ಪ್ರಿಯರೇ! ನೀವು ಸಹ ನಿಮ್ಮ ಜೀವನದಲ್ಲಿ ಅನುಭವಿಸುತ್ತಿರುವ ಎಲ್ಲಾ ಹೋರಾಟಗಳು, ಸಮಸ್ಯೆಗಳು, ನಿಂದೆಗಳು, ಬಲಹೀನತೆಗಳು ಮತ್ತು ಅವಮಾನಗಳು ಎಲ್ಲವನ್ನೂ ಶಾರೀರಿಕವಾದ ಕಣ್ಣುಗಳಿಂದ ದೃಷ್ಟಿಸಿ ನೋಡಿದರೆ ಸೋತುಹೋಗುತ್ತೀರಿ. ನಿಮ್ಮ ಸಮಸ್ಯೆಗಳನ್ನು ದೇವರ ಸಹಾಯದಿಂದ ನಂಬಿಕೆಯ ಕಣ್ಣುಗಳಿಂದ ನಿಮ್ಮ ಸಮಸ್ಯೆಗಳನ್ನು ದೃಷ್ಟಿಸಿ ನೋಡಿದರೆ ದೇವರು ಮಹೋನ್ನತನಾಗಿ ಎದ್ದೇಳುತ್ತಾರೆ. ದೇವರು ನಿಮ್ಮ ಹೃದಯದ ಕಣ್ಣುಗಳನ್ನು ತೆರೆಯುವಂತೆ ಪ್ರತಿದಿನವೂ ಪ್ರಾರ್ಥಿಸಿರಿ. ಕಣ್ಣುಗಳು ತೆರೆಯಲ್ಪಟ್ಟವರಾಗಿ ಸಮಸ್ಯೆಯನ್ನು ದೇವರಿಗೆ ಹೇಳುವ ಮೊದಲು, ದೇವರು ಎಷ್ಟು ದೊಡ್ಡವರು ಎಂಬುದನ್ನು ಸಮಸ್ಯೆಯ ಬಳಿ ಹೇಳೋಣ. ಎಷ್ಟೇ ದೊಡ್ಡ ಸಮಸ್ಯೆಯಾದರೂ ಹಿಮದಂತೆ ಮಾಯವಾಗುವ ಹಾಗೆ ಮಾಡುವ ಯೇಸುವಿನ ಮೇಲೆ ನಂಬಿಕೆ ಇಡೋಣ. ದೇವರು ದೊಡ್ಡ ಕಾರ್ಯಗಳನ್ನು ಮಾಡಲಿ!
- Mrs. ರೂಬಿ ಅರುಣ್
ಪ್ರಾರ್ಥನಾ ಅಂಶ:
ನಮ್ಮ ಮೋಕ್ಷ ಪ್ರಯಾಣ ಪತ್ರಿಕೆಯ ಮೂಲಕ ಭೇಟಿಯಾಗುವ ಜನರಿಗಾಗಿ, ಈ ಪತ್ರಿಕೆಯ ಮುದ್ರಣ ಅಗತ್ಯಗಳು ಪೂರೈಸಲ್ಪಡುವುದಕ್ಕಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482