Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.03.2024
Share:

By Village Missionary Movement

Thursday, 21-Mar-2024

ಧೈನಂದಿನ ಧ್ಯಾನ(Kannada) – 21.03.2024

 

ಪಪ್ಪಾಯಿ!

 

"…ನಿನ್ನ ಕೈ ನಿನ್ನನ್ನು ಪಾಪದಲ್ಲಿ ಸಿಕ್ಕಿಸುವದಾದರೆ ಅದನ್ನು ಕತ್ತರಿಸಿಬಿಡು; ಎರಡು ಕೈಯುಳ್ಳವನಾಗಿದ್ದು ಆರದ ಬೆಂಕಿಯಾಗಿರುವ ನರಕದಲ್ಲಿ ಬೀಳುವದಕ್ಕಿಂತ ಕೈಕಳಕೊಂಡವನಾಗಿ ಜೀವದಲ್ಲಿ ಸೇರುವದು ನಿನಗೆ ಉತ್ತಮ" - ಮಾರ್ಕನು 9:43

 

ಕೃಪಾ ಅವರ ಮನೆಯ ಮುಂದೆ ಕಣ್ಣು ಹಾಯಿಸುವಷ್ಟು ದೂರದಲ್ಲಿ ಹುಲ್ಲುಹಾಸಿನ ಮಧ್ಯೆ ಪಪ್ಪಾಯಿ ಗಿಡ ಚಿಗುರಿತ್ತು. ಅವಳಿಗೆ ತುಂಬಾ ಸಂತೋಷ. ಅವಳು ಅದರ ಬೆಳವಣಿಗೆಯನ್ನು ದಿನದಿನವೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಳು. ಎರಡು ತಿಂಗಳ ನಂತರ ಪಪ್ಪಾಯಿ ಗಿಡ ಕೊಂಚ ಸೊರಗಿದಂತೆ ಕಂಡಿತು. ದಿನಗಳು ಕಳೆದಂತೆ, ಸಸ್ಯವು ಮರವಾಯಿತು. ಆದರೆ ಅದು ಓರೆಯಾಗಿತ್ತು. ಕೃಪಾಗೆ ಒಂದೇ ಚಿಂತೆ. ಮರ ಫಲಕೊಡುವ ಸಮಯದಲ್ಲಿ ಭಾರ ತಡೆಯಲಾಗದೆ ಬಿದ್ದುಹೋಗುತ್ತದೋ ಎಂಬ ಭಯ. ಹೂವು, ಹಣ್ಣು ಕಾಣಿಸಿಕೊಂಡು ನಿಧಾನವಾಗಿ ಬೆಳೆದು ಹತ್ತು ಹನ್ನೆರಡು ಹಣ್ಣುಗಳನ್ನು ಕೊಡುತ್ತಾ ಓರೆಯಾಗಿ ನಿಂತಿತ್ತು. ನಿಧಾನವಾಗಿ ಹಸಿರು ಬಣ್ಣ ಬದಲಾಗಿ ಹಳದಿ ಮತ್ತು ಕೆಂಪು ಬಣ್ಣ ಮಿಶ್ರವಾಗಿ ಫಲವಾಯಿತು. ದಾರಿಹೋಕರೆಲ್ಲರ ದೃಷ್ಟಿ ಪೂರ್ತಿ ಅದರ ಮೇಲೆಯೇ ಇತ್ತು. ಒಂದು ದಿನ ಆ ದಾರಿಯಲ್ಲಿ ಹಾದು ಹೋದ ಬಡವನೊಬ್ಬ ಸುತ್ತಲೂ ನೋಡಿ ಎರಡು ಪಪ್ಪಾಯಿಗಳನ್ನು ಕಿತ್ತುಕೊಂಡು ಸಂತೋಷದಿಂದ ತನ್ನ ಚೀಲಕ್ಕೆ ಹಾಕಿಕೊಂಡರು.

 

ವಕ್ರವಾಗಿಯೂ ಓರೆಯಾಗಿಯೂ ಬೆಳೆದು ತನ್ನ ಕಾಲದಲ್ಲಿ ಫಲವನ್ನು ಕೊಟ್ಟು ಜನ್ಮದ ಉದ್ದೇಶವನ್ನು ಪೂರೈಸಿದ ಆ ಮರವನ್ನು ನೋಡಿ ಕೃಪಾಳಿಗೆ ವೇದವಾಕ್ಯವೊಂದು ನೆನಪಾಯಿತು. "ಒಳ್ಳೆಯ ಹಣ್ಣುಗಳನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕಲಾಗುತ್ತದೆ." ಎಂಬ ವಾಕ್ಯವೇ!

 

ಹೌದು, ಪ್ರಿಯರೇ, ನಾವು ಆ ಮರದಂತೆಯೇ ಕೊರತೆಗಳುಳ್ಳವರಾಗಿರಬಹುದು. ಅನಕ್ಷರಸ್ಥರಾಗಿರಬಹುದು. ಕಡು ಬಡತನದಲ್ಲೂ ಇರಬಹುದು. ಆದರೆ ದೇವರು ನಮ್ಮ ಜೀವನದಲ್ಲಿ ಎದುರುನೋಡುವ ಪ್ರೀತಿ ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಉಪಕಾರ, ನಂಬಿಕೆ, ಸಾಧುತ್ವ, ಶಮೆದಮೆಗಳಂತಹ ಫಲಗಳು ನಮ್ಮಲ್ಲಿಲ್ಲದಿದ್ದರೆ ನಾವೂ ಸಹ ಬೆಂಕಿಗೆ ಹಾಕಲ್ಪಡುವ ಮರಕ್ಕೆ ಸಮಾನವಾಗಿದ್ದೇವೆ. ಫಲಕೊಡುವ ಜೀವನ ಮಾತ್ರವೇ ಅರ್ಥಪೂರ್ಣ ವಾದದ್ದು. ಪಪ್ಪಾಯಿ ಮರವು ನೋಟಕ್ಕೆ ಕೊರತೆಯುಳ್ಳದ್ದಾಗಿ ಕಂಡರೂ ಹಸಿದ ಅನೇಕ ಜನರಿಗೆ ಗುಣಮಟ್ಟದ ಹಣ್ಣನ್ನು ನೀಡುವ ಮೂಲಕ ತನ್ನ ಕಾರ್ಯವನ್ನು ಪೂರ್ಣಗೊಳಿಸಲಿಲ್ಲವೇ? ಫಲಕಾರಿಯಾದ ಜೀವನ ನಡೆಸುವುದಕ್ಕೆ ಅಡ್ಡಿಯಾಗಿರುವ ಸಂಗತಿಗಳನ್ನು ತೊಲಗಿಸಬೇಕು. ಎರಡು ಕಣ್ಣುಳ್ಳವನಾಗಿದ್ದು ನರಕದಲ್ಲಿ ಹಾಕಿಸಿಕೊಳ್ಳುವದಕ್ಕಿಂತ ಒಂದೇ ಕಣ್ಣುಳ್ಳವನಾಗಿದ್ದು ದೇವರ ರಾಜ್ಯದಲ್ಲಿ ಸೇರುವದು ನಿನಗೆ ಉತ್ತಮ ಎಂಬ ಸತ್ಯವನ್ನು ಮಾರ್ಕನು 9:47 ರ ಮೂಲಕ ನಾವು ತಿಳಿಯಬಹುದು. ಬಾಳುವುದು ಒಂದೇ ಜೀವನ, ನೀತಿಯಾಗಿ ನಡೆದು, ಸತ್ಕಾರ್ಯಗಳನ್ನು ಮಾಡಿ ಫಲಕೊಟ್ಟು ಜೀವಿಸಲು ಪ್ರಯತ್ನಿಸುವುದು ಅಗತ್ಯ. ಪ್ರತಿ ದಿನದ ಕೊನೆಯಲ್ಲಿ ಇಂದು ಯಾವ ಸತ್ಕಾರ್ಯದಿಂದ ದೇವರನ್ನು ಸಂತೋಷಪಡಿಸಿದ್ದೇನೆ? ಎಂದು ಸ್ವಯಂ ಪರಿಶೋಧನೆ ಮಾಡೋಣವಾ?

 

ನಿನ್ನ ಯಜಮಾನನಾದ ಯೇಸುವನ್ನು ಭೇಟಿಯಾಗುವ ಸಮಯ ಬಂದಾಗ, ಫಲಗಳೊಂದಿಗೆ ಅವರನ್ನು ಭೇಟಿ ಮಾಡಲು ಸಿದ್ಧರಾಗೋಣವಾ? ಕರ್ತನು ಕೊಡುವ ಪ್ರತಿದಿನದಲ್ಲಿ ಅವರು ನಿನ್ನ ಮೂಲಕ ಸಂತೋಷಪಡುವಂತಹ ಕಾರ್ಯಗಳನ್ನು ಮಾಡುವುದರಲ್ಲಿ ಜಾಗರೂಕರಾಗಿರೋಣವಾ? ಯಾವ ನೆವಗಳನ್ನೂ ಹೇಳಿ ಅವರನ್ನು ದುಃಖಪಡಿಸಬೇಡ. ನಿನಗಾಗಿ ತನ್ನ ಪ್ರಾಣವನ್ನೇ ಕೊಟ್ಟಾತನಿಗೆ ನೀನು ಏನು ಮಾಡಲಿರುವೆ?

- Mrs. ಎಮೀಮಾ ಸೌಂದರರಾಜನ್

 

ಪ್ರಾರ್ಥನಾ ಅಂಶ:

ನಮ್ಮ ಸೇವಾಕ್ಷೇತ್ರಗಳಲ್ಲಿ ಚರ್ಚುಗಳನ್ನು ನಿರ್ಮಿಸಲು ಸಹಾಯ ಮಾಡುವ ಕುಟುಂಬಗಳನ್ನು ದೇವರು ಎಬ್ಬಿಸಿಕೊಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet ibizabet holiganbet amkbet sonbahis betgit cratosroyalbet cratosroyalbet gameofbet