By Village Missionary Movement
Saturday, 10-Apr-2021ಧೈನಂದಿನ ಧ್ಯಾನ(Kannada) – 10.04.2021
ಕೋಪ ಬದಲಾಗಬೇಕು
"...ನೂತನ ಮನಸ್ಸನ್ನು ಹೊಂದಿಕೊಂಡು ರೂಪಾಂತರಗೊಂಡವರಾಗಿರ್ರಿ." - ರೋಮಾ 12:2
ವೆಸ್ಟ್ ಇಂಡಿಯಾ ದ್ವೀಪಗಳಲ್ಲಿ ಸಿಮಿಯೋನ್ ಪ್ಲಸ್ಟರ್ ಎಂಬ ಒಬ್ಬ ಕೋಪಗಾರ ಮನುಷ್ಯ ಇದ್ದರು. ಯೇಸು ಅವರ ಜೀವನದಲ್ಲಿ ಬಂದಾಗ ಕೋಪವು ಮರೆಯಾಯಿತು. ಅವರ ಹೃದಯದ ಆಳದಲ್ಲಿ ಆತ್ಮ ಭಾರವು, ದೇವರು ಮೇಲೆ ಪ್ರೀತಿಯು ಬೆಳೆಯಿತು. ಆದ್ದರಿಂದ ತನ್ನಿಂದ ಸಾಧ್ಯವಾದ ಚಿಕ್ಕ ಚಿಕ್ಕ ಸೇವೆಗಳನ್ನು ಮಾಡಿದರು. ಹೀಗೆ ಒಂದು ದಿನ ಸೇವೆಗೆ ಹೋದಾಗ ಒಂದು ಮನೆಯ ಬಾಗಿಲನ್ನು ತಟ್ಟಿದರು. ಆ ಮನೆಯ ಗೃಹಿಣಿಯಾದ ಶ್ರೀಮತಿ. ಅಪ್ಟೈಟ್ ಬಂದು ಬಾಗಿಲು ತೆರೆದಳು. ಕೈಯಲ್ಲಿ ಒಂದು ಹಾಲಿನ ಕಪ್ ಇತ್ತು. ಹೊರಗೆ ನಿಂತಿರುವವರು ಒಬ್ಬ ಕ್ರೈಸ್ತ ಸೇವಕರು ಎಂದು ತಿಳಿದ ಕೂಡಲೇ, ಕೋಪವು ಹೆಚ್ಚಾಯಿತು, ಒಂದು ಕಪ್ಪು ಹಾಲು ಪೂರ್ತಿಯಾಗಿ ಸಿಮೆಯೋನನ ಮುಖದಲ್ಲಿ ಸುರಿದು ಬಿಟ್ಟಳು. ಸಿಮಿಯೋನ್ ಹೆಮ್ಮೆಯಿಂದ ಕಣ್ಣಲ್ಲಿ ಹರಿಯುತ್ತಿದ್ದ ಹಾಲನ್ನು ಒರೆಸಿಕೊಂಡೆ, ಇಷ್ಟು ಒಳ್ಳೆಯ ಹಾಲನ್ನು ಮುಖದಲ್ಲಿ ಸುರಿಯುವುದಕ್ಕಿಂತ ಹೊಟ್ಟೆಗೆ ಸುರಿದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿದರು. ಈ ಮಾತನ್ನು ಕೇಳಿದ ಆ ಗೃಹಿಣಿ ನಾಚಿಕೆ ಪಟ್ಟಳು. ಅವರನ್ನು ಒಳಗೆ ಕರೆದುಕೊಂಡು ಹೋಗಿ, ಕುಡಿಯಲು ಪಾನವನ್ನು ಕೊಟ್ಟಳು. ಯೇಸುವಿನ ಬಗ್ಗೆ ತಿಳಿದುಕೊಂಡಳು, ಅವರ ಆ ಶಾಂತಗುಣ ಆ ಗೃಹಿಣಿಯನ್ನು ಕ್ರಿಸ್ತನ ಕಡೆಗೆ ನಡೆಸಿತು.
ವಿಮೋಚನಕಾಂಡ 2 ನೇ ಅಧ್ಯಾಯದಲ್ಲಿ ಮೋಶೆ ತನ್ನ ಸಹೋದರರಾದ ಇಬ್ರಿಯರಲ್ಲಿ ಒಬ್ಬನನ್ನು ಒಬ್ಬ ಐಗುಪ್ತದವನು ಹೊಡೆಯುವುದನ್ನು ಕಂಡು, ಅಲ್ಲಿ ಇಲ್ಲಿ ನೋಡಿ, ಅಲ್ಲಿ ಯಾರು ಇಲ್ಲದೆ ಇರುವುದನ್ನು ಗ್ರಹಿಸಿ, ಐಗುಪ್ತದವನನ್ನು ಕೊಂದು, ಅವನನ್ನು ಮರಳಿನಲ್ಲಿ ಮುಚ್ಚಿ ಬಿಟ್ಟನು. ಮೋಶೆ ಮನುಷ್ಯನನ್ನು ಕೊಲೆ ಮಾಡುವ ಮಟ್ಟಿಗೆ ಕೋಪಗಾರನಾಗಿದ್ದನು. ವಿಮೋಚನಕಾಂಡ 3 ನೇ ಅಧ್ಯಾಯದಲ್ಲಿ ದೇವರು ಮುಳ್ಳು ಗಿಡದಲ್ಲಿ ದರ್ಶನ ಕೊಟ್ಟು ಮೋಶೆಯನ್ನು ಭೇಟಿ ಮಾಡಿದರು. ಅದರ ನಂತರ ಇಸ್ರಾಯೆಲ್ ಜನರನ್ನು ಐಗುಪ್ತದಿಂದ ಕಾನಾನ್ ದೇಶಕ್ಕೆ ಮುನ್ನಡೆಸುವಾಗ ಮೋಶೆಗೆ ವಿರೋಧವಾಗಿ ಜನರು ಗುಣುಗುಟ್ಟಿದರು, ನಂತರ ಕಲ್ಲೆಸೆದು ಕೊಲ್ಲಲು ನೋಡುತ್ತಾರೆ. ಆದರೂ ಮೋಶೆ ಅವರ ಮೇಲೆ ಕೋಪಗೊಳ್ಳದೆ ಅದನ್ನು ದೇವರ ಬಳಿ ಹೇಳುವುದನ್ನು ನೋಡುತ್ತೇವೆ.ಮೋಶೆ ಎಂಬವನು ಭೂಮಿಯಲ್ಲಿರುವ ಎಲ್ಲಾ ಜನರಿಗಿಂತಲು ಬಹಳ ಶಾಂತಗುಣವುಳ್ಳವನಾಗಿದ್ದಾನೆ ಎಂದು ಮೋಶೆಯ ಬಗ್ಗೆ ದೇವರು ಸಾಕ್ಷಿ ಕೊಟ್ಟದ್ದನ್ನು ಸತ್ಯವೇದದಲ್ಲಿ ನೋಡುತ್ತೇವೆ. "ಒಬ್ಬ ಕ್ರೈಸ್ತನ ಉನ್ನತವಾದ ಗುಣಕ್ಕೆ ಉನ್ನತವಾದ ಪುರಾವೆ ಸ್ವಯಂ ನಿಯಂತ್ರಣ" ವಾಗಿದೆ. ಅದು ಒಂದೊಂದು ದೇವರ ಮಕ್ಕಳ ಬಳಿಯೂ ಇರಬೇಕು.
ಕ್ರಿಸ್ತನಲ್ಲಿ ಪ್ರಿಯರೇ! ನೀವು ಕೋಪದಿಂದ ಯಾವುದನ್ನೂ ಸಾಧಿಸಲಾಗುವುದಿಲ್ಲ. ರಕ್ಷಣೆ ಹೊಂದುವುದಕ್ಕೆ ಮುಂಚೆ ನೀವು ಕೋಪಗಾರರಾಗಿ ಇದ್ದಿರಬಹುದು. ಈಗಲು ನಮ್ಮ ಜನ್ಮ ಸ್ವಭಾವವು ಮಾರ್ಪಡದೆ ಎಲ್ಲಾದಕ್ಕೂ ಕೋಪ ಮಾಡಿಕೊಳ್ಳುತ್ತಿದ್ದೇವಾ? ನಮ್ಮನ್ನು ನಾವೇ ಯೋಚಿಸಿ ನೋಡಿಕೊಳ್ಳೋಣ. ಯೇಸುಕ್ರಿಸ್ತನ ಪ್ರೀತಿ, ಅವರ ಚಿಂತೆ, ಅವರ ಸ್ವಭಾವ ನಮ್ಮ ಹೃದಯದಲ್ಲಿ ಇರುವಾಗ ಮೋಶೆಯ ಹಾಗೆ ಎಷ್ಟು ಸಮಸ್ಯೆಗಳು, ಹೋರಾಟಗಳು ಬಂದರು ಅದರ ಬಗ್ಗೆ ಮತ್ತೊಬ್ಬರ ಮೇಲೆ ಕೋಪ ಪಡದೆ ದೇವರ ಬಳಿ ಪ್ರಾರ್ಥಿಸುವವರಾಗಿರೋಣ. ದೇವರು ನಮ್ಮ ಬಗ್ಗೆ ಖಂಡಿತವಾಗಿ ಸಾಕ್ಷಿ ಕೊಡುತ್ತಾರೆ, ಆಮೆನ್.
- P.ಶಿವ
ಪ್ರಾರ್ಥನಾ ಅಂಶ:-
ಗೆತ್ಸೇಮನೆ ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಪ್ರಾರ್ಥನಾ ಗುಡಾರ ಕಟ್ಟಡದ ಕೆಲಸಗಳು ಆದಷ್ಟು ಬೇಗ ಮುಗಿಯುವಂತೆ, ಅದಕ್ಕೆ ಬೇಕಾದ ಅವಶ್ಯಕತೆಗಳು ಇನ್ನೂ ಸಂಧಿಸಲ್ಪಡುವಂತೆ ಪ್ರಾರ್ಥಿಸೋಣ.
ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.
ತಮಿಳಿಗಾಗಿ +919444011864
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482