Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.03.2024
Share:

By Village Missionary Movement

Wednesday, 20-Mar-2024

ಧೈನಂದಿನ ಧ್ಯಾನ(Kannada) – 20.03.2024

 

ಅರ್ಥವಾಗದ ಒಗಟುಗಳು

 

"ಕಷ್ಟಾನುಭವಕ್ಕಿಂತ ಮುಂಚೆ ತಪ್ಪಿಹೋಗುತ್ತಿದ್ದೆನು; ಈಗಲಾದರೋ ನಿನ್ನ ನುಡಿಗಳನ್ನು ಕೈಕೊಳ್ಳುತ್ತೇನೆ" - ಕೀರ್ತನೆ 119:67

 

ಕರಡಿಯೊಂದು ದಾರಿತಪ್ಪಿ ಕಾಡಿನಿಂದ ಹೊರಗೆ ಬಂದು ಸಮೀಪದ ಪಟ್ಟಣದೊಳಕ್ಕೆ ಬಂದುಬಿಟ್ಟಿತು. ಇದನ್ನು ಕಂಡ ಜನರು ಕಾಡಿಗೆ ಓಡಿಸಲು ಯತ್ನಿಸಿದರು. ಆದರೆ ಕರಡಿ ಭಯದಿಂದ ಓಡುತ್ತಿತ್ತು. ಅದನ್ನು ಕೊಲ್ಲುವ ಬದಲು ಕಾಡಿಗೆ ಕಳುಹಿಸಲು ಗ್ರಾಮಸ್ಥರು ನಿರ್ಧರಿಸಿದರು. ಅದಕ್ಕಾಗಿ ಬೇಟೆಗಾರನು ಬಳಸುವ ಒಂದು ಬಲೆ ಹಾಕಿದರು. ಕರಡಿ ಆಹಾರವನ್ನು ತಿನ್ನಲು ಹತ್ತಿರ ಬಂದಾಗ, ಕಾಲು ಅದರಲ್ಲಿ ಸಿಲುಕಿಕೊಂಡಿತು. ನಂತರ ಹಗ್ಗದಿಂದ ಕಟ್ಟಿ ಕಾಡಿಗೆ ಬಿಡಲು ಯತ್ನಿಸಿದ್ದಾರೆ. ಆದರೆ ಕರಡಿ ಹತ್ತಿರ ಬಂದವರಿಗೆಲ್ಲಾ ಭಯ ಹುಟ್ಟಿಸುತ್ತಿತ್ತು. ನಂತರ ಮತ್ತುಬರುವ ಔಷಧಿ ತುಂಬಿದ್ದ ಒಂದು ಬಂದೂಕಿನಿಂದ ಅದು ಪ್ರಜ್ಞೆ ತಪ್ಪುವಂತೆ ಮಾಡಿದರು. ಬಲೆಯಲ್ಲಿ ಸಿಕ್ಕಿಕೊಂಡಿದ್ದ ಕಾಲನ್ನು ಬಿಡಿಸಿದರು. ಇದರಿಂದ ಕರಡಿಗೆ ಸ್ವಲ್ಪ ಗಾಯವಾಯಿತು. ನಂತರ ಅದನ್ನು ಕಟ್ಟಿ ಸುರಕ್ಷಿತವಾಗಿ ಎತ್ತಿಕೊಂಡು ಹೋಗಿ ಕಾಡಿನಲ್ಲಿ ಬಿಟ್ಟು ಬಂದರು. ಕೆಲವು ಗಂಟೆಗಳ ನಂತರ, ಕರಡಿ ಎಚ್ಚರವಾಗಿ ಕಾಡಿನೊಳಗೆ ಹೊರಟುಹೋಯಿತು.

 

ಈ ಕಾರ್ಯದ ಮೂಲಕ ಕರಡಿ ಏನು ಯೋಚಿಸಿರುತ್ತದೆ ಎಂದು ಸ್ವಲ್ಪ ಊಹಿಸೋಣ. ಮೊದಲು ಊರಿನೊಳಗೆ ಪ್ರವೇಶಿಸಿದಾಗ, ಜನರು ಅದನ್ನು ಕಾಡಿಗೆ ಓಡಿಸಿದ್ದರಿಂದ ಮನುಷ್ಯರು ಏನಾದರೂ ಕೆಟ್ಟವರು ಎಂದು ಭಾವಿಸಿರಬೇಕು. ಅವರು ಅದನ್ನು ಬಂದೂಕಿನಿಂದ ಪ್ರಜ್ಞೆ ತಪ್ಪಿಸಿದಾಗ ಮನುಷ್ಯರು ಅದನ್ನು ಕೊಲ್ಲಲು ಹೊರಟಿದ್ದಾರೆಂದು ಭಾವಿಸಿರಬಹುದು. ಆದರೆ ಕರಡಿಯ ಈ ಎಲ್ಲಾ ಆಲೋಚನೆಗಳು ತಪ್ಪು ಎಂದು ನಮಗೆ ಗೊತ್ತು. ಬಹುಶಃ ಜನರು ಏನು ಯೋಚಿಸಿ ಪ್ರತಿಯೊಂದು ಕಾರ್ಯವನ್ನೂ ಮಾಡುತ್ತಿದ್ದಾರೆಂದು ತಿಳಿದುಕೊಳ್ಳಲು ಸಾಧ್ಯವಾಗದ ಕಾರಣ ಈ ತಪ್ಪು ಕಲ್ಪನೆಯು ಆ ಕರಡಿಗೆ ಬಂದಿರಬಹುದು.

 

ದೇವರು ನಮ್ಮ ಜೀವನದಲ್ಲಿ ಕೆಲವು ದುಃಖಗಳನ್ನು ನಮ್ಮ ಒಳಿತಿಗಾಗಿ ಕಳುಹಿಸಿದಾಗ ನಾವು ಕೆಲವೊಮ್ಮೆ ತಪ್ಪು ಆಲೋಚನೆಗಳಿಗೆ ಹೋಗುತ್ತೇವೆ. ಕ್ರೈಸ್ತರ ಜೀವನದಲ್ಲಿ ಸಂಕಟ ಮತ್ತು ಶಿಲುಬೆಗಳು ಅತ್ಯಗತ್ಯ. ಆದರೆ ದೇವರು ನಮ್ಮನ್ನು ನರಳಿಸುವ ಮೂಲಕ ನಮ್ಮಲ್ಲಿ ಸ್ವಲ್ಪ ಸಂತೋಷವನ್ನು ಕಂಡುಕೊಳ್ಳುತ್ತಾರೆ ಎಂಬ ತಪ್ಪು ಕಲ್ಪನೆ ನಮ್ಮೊಳಗೆ ಬಂದುಬಿಡಬಾರದು. ಸಂಕಟಗಳ ಪೂರ್ಣ ಅರ್ಥವನ್ನು ಈ ಪಾಪದ ದೇಹದಲ್ಲಿ ನಾವು ವಾಸಿಸುತ್ತಿರುವಾಗ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಮೇಲ್ಕಂಡ ಘಟನೆಯಲ್ಲಿ ಕರಡಿಗೆ "ಜನರು ಮಾಡುವುದೆಲ್ಲವೂ ಅದರ ಒಳಿತಿಗಾಗಿಯೇ" ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗದಂತೆಯೇ, ನಮ್ಮ ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವಾಗದಿರಬಹುದು. ಆದರೆ ನಾವು ಪರಲೋಕಕ್ಕೆ ಹೋದ ನಂತರ ಇವೆಲ್ಲಕ್ಕೂ ಸ್ಪಷ್ಟ ಉತ್ತರ ಸಿಗುತ್ತದೆ. ಅದಕ್ಕಿಂತ ಹೆಚ್ಚಾಗಿ ನಮಗಾಗಿ ಕಷ್ಟಪಟ್ಟು ಶಿಲುಬೆಯಲ್ಲಿ ಮಡಿದ ಯೇಸುಕ್ರಿಸ್ತನ ಮುಖವನ್ನು ಮುಖಾಮುಖಿಯಾಗಿ ನೋಡಿದಾಗ ನಮ್ಮ ಹೃದಯದಲ್ಲಿ ಈ ಪ್ರಶ್ನೆಗಳು ಉದ್ಭವಿಸದಂತೆ ನಮ್ಮ ಹೃದಯ ತುಂಬಿ ಬರುತ್ತದೆ.

- J. ಸಂತೋಷ್

 

ಪ್ರಾರ್ಥನಾ ಅಂಶ:

ಮಕ್ಕಳ ಶಿಬಿರದ ಮೂಲಕ ನಾವು ಭೇಟಿಯಾಗುವ ಮಕ್ಕಳಿಗೆ ಯೇಸುವಿನ ಉಡುಗೊರೆ ಎಂಬ ಗಿಫ್ಟ್ ಕೊಡಲಿದ್ದೇವೆ. ಇದರ ಅಗತ್ಯತೆಗಳು ಪೂರೈಸಲ್ಪಡಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al