Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.03.2024
Share:

By Village Missionary Movement

Monday, 18-Mar-2024

ಧೈನಂದಿನ ಧ್ಯಾನ(Kannada) – 18.03.2024

 

ದೇವರು ಆರಿಸಿಕೊಳ್ಳುವ ವಿಧ 

 

"ದೇವರು ಈ ಲೋಕದ ಕುಲಹೀನರನ್ನೂ ಅಸಡ್ಡೆಯಾದವರನ್ನೂ ಆರಿಸಿಕೊಂಡದ್ದಲ್ಲದೆ ಗಣ್ಯರನ್ನು ಇಲ್ಲದಂತೆ ಮಾಡುವದಕ್ಕಾಗಿ ಗಣನೆಗೆ ಬಾರದವರನ್ನು ಆರಿಸಿಕೊಂಡಿದ್ದಾನೆ." - 1 ಕೊರಿಂಥ. 1:28

 

ಇಂದು ನಮ್ಮ ಕಾಲದಲ್ಲಿ ಮತ್ತು ಸತ್ಯವೇದದ ಕಾಲದಲ್ಲಿ, ದೇವರು ಹಲವು ರೀತಿಯ ಕೊರತೆಯುಳ್ಳ ಜನರನ್ನೇ ಆರಿಸಿಕೊಂಡು ಉಪಯೋಗಿಸಿದ್ದಾರೆ.

 

ಹೀನವಾಗಿ ಭಾವಿಸಲ್ಪಟ್ಟ ಲೇಯಳ ಮೂಲಕ, ದೇವರ ಸೇವಕರ ಸಂತತಿಯು ಜನಿಸಿತು. ಅನೇಕ ವರ್ಷಗಳಿಂದ ಬಂಜೆಯಾಗಿದ್ದು ಮತ್ತು ನಿಂದೆಗೆ ಒಳಗಾದ ಹನ್ನಳ ಮೂಲಕ, ಮಹಾನ್ ಪ್ರವಾದಿ ಮತ್ತು ನ್ಯಾಯಸ್ಥಾಪಕನಾದ ಸಮುವೇಲನು ಜನಿಸಿದರು. ರಾಹಾಬಳು, ತಾಮಾರಳು ಮತ್ತು ರೂತಳಂತವರ ಮೂಲಕವಾಗಿಯೇ ಯೇಸು ಕ್ರಿಸ್ತನು ಸಹ ಜನಿಸಿದರು. ಹೊಸ ಒಡಂಬಡಿಕೆಯಲ್ಲಿ, ಸಮಾರ್ಯದ ಹೆಂಗಸು ಮತ್ತು ಜಕ್ಕಾಯನಂತವರು ಸಹ ಸಮಾಜದಲ್ಲಿ ಅತ್ಯಲ್ಪವಾಗಿ ಪರಿಗಣಿಸಲ್ಪಟ್ಟವರೇ.

 

ಯೋಸೇಫ ಮತ್ತು ದಾವೀದನಂತವರು ಸಹ ಸಹೋದರರಿಂದ ಕೀಳಾಗಿ ಕಾಣಲ್ಪಟ್ಟವರೇ. ಅಪೊ. ಪೌಲನು ದೈಹಿಕವಾಗಿ ದುರ್ಬಲವಾಗಿ ಕಾಣಲ್ಪಟ್ಟವರು. ವಿಲಿಯಂ ಕೇರಿ ಶೂ ತಯಾರಕರಾಗಿದ್ದರು. ಡಿ.ಎಲ್. ಮೂಡಿ ವಿದ್ಯಾಭ್ಯಾಸದಲ್ಲಿ ಕಡಿಮೆಯಾಗಿದ್ದರು, ಮಾತಿನಲ್ಲಿ ಇತರರಿಂದ ಕೊರತೆಯುಳ್ಳವರಾಗಿ ಗೌರವಿಸಲ್ಪಟ್ಟವರು. ಉಜ್ಜೀವನದ ವೀರನಾಗಿ ಕಾರ್ಯಮಾಡಿದವರು. ಅಂಗವಿಕಲ ಸಾರಾ ಟಕ್ಕರ್ ಅವರ ತ್ಯಾಗದ ಕೆಲಸವನ್ನು ಯಾರಿಂದ ಮರೆಯಲು ಸಾಧ್ಯ.

 

ನಮ್ಮ ಕಾಲದಲ್ಲಿ ಜೀವಿಸಿದ ಪಾಸ್ಟರ್ ಮೋಸಸ್ ರಾಜಶೇಖರ್ ಅವರನ್ನು ದೈಹಿಕ ವಿಕಲಾಂಗತೆಯಲ್ಲೂ ದೇವರು ಶಕ್ತಿಯುತವಾಗಿ ಉಪಯೋಗಿಸಿದರು. ಇಂದೂ ನಮ್ಮ ನಡುವೆ ಸೇವೆ ಮಾಡುತ್ತಿರುವ ಅನೇಕರು ಶಾರೀರಿಕವಾಗಿ ಬಲಹೀನರಾಗಿದ್ದರೂ ದೇವರಿಂದ ಉಪಯೋಗಿಸಲ್ಪಡುವ ಪಾತ್ರೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 

"ನಿಕ್" ಎಂಬ ವ್ಯಕ್ತಿ ಹುಟ್ಟುವಾಗಲೇ ಎರಡು ಕೈಗಳೂ ಎರಡು ಕಾಲುಗಳೂ ಇಲ್ಲದೆ ಜನಿಸಿದರು. ತನ್ನ 13 ನೇ ವಯಸ್ಸಿನಲ್ಲಿ ನಿಕ್ ಒಬ್ಬ ಅಂಗವಿಕಲ ವ್ಯಕ್ತಿಯ ಕಥೆಯನ್ನು ಓದಿದರು. ಆ ಅಂಗವಿಕಲ ವ್ಯಕ್ತಿ ತನ್ನ ಕುತ್ತಿಗೆ ಬಳಸಿ ಗಾಲ್ಫ್ ಆಡಿದ್ದನ್ನು ಓದಿದಾಗ, ನಿಕ್ ನ ಮನದಲ್ಲಿ ಒಂದು ನಂಬಿಕೆ ಹುಟ್ಟಿತು. 

 

ಯೇಸುವನ್ನು ದ್ವೇಷಿಸಿದ ನಿಕ್, ಯೇಸುವನ್ನು ಪ್ರಕಟಿಸಲು ನಿರ್ಧರಿಸಿದರು. ಅವರ ನಂಬಿಕೆಯ ಮಾತುಗಳು ಇಂದಿಗೂ ಅನೇಕ ಜನರನ್ನು ಕ್ರಿಸ್ತನ ಬಳಿಗೆ ತರುತ್ತಿದೆ. ಅವರು 60 ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದಾರೆ ಮತ್ತು ಲಕ್ಷಾಂತರ ಜನರು ದೇವರನ್ನು ತಿಳಿದುಕೊಳ್ಳಲು ಕಾರಣರಾಗಿದ್ದಾರೆ. ಮದುವೆಯಾಗಿ ಮಕ್ಕಳನ್ನೂ ಹೊಂದಿರುವ ಇವರು ಜಗತ್ತಿನ ಅನೇಕ ಅಂಗವಿಕಲರ ಪಾಲಿಗೆ ಭರವಸೆಯ ತಾರೆಯಾಗಿದ್ದಾರೆ.

 

ಇದನ್ನು ಓದುತ್ತಿರುವ ದೇವಜನರೇ, ನಿಮ್ಮೊಳಗಿನ ದೌರ್ಬಲ್ಯ ಮತ್ತು ಅಸಾಮರ್ಥ್ಯದ ಬಗ್ಗೆ ನೀವು ಚಿಂತೆ ಮಾಡುತ್ತಿದ್ದೀರಾ? ನಾನು ಏನು ಮಾಡಲು ಸಾಧ್ಯ ಎಂದು ತವಕಪಡುತ್ತಿದ್ದೀರಾ? ಕರ್ತನೇ, ನನ್ನನ್ನು ನಿಮ್ಮ ಇಷ್ಟದಂತೆ ಏನು ಬೇಕಾದರೂ ಮಾಡಿ. ನನ್ನನ್ನು ಒಪ್ಪಿಸಿಕೊಡುತ್ತೇನೆ ಎಂದು ಅರ್ಪಿಸಿರಿ. ಉಜ್ಜೀವನದಲ್ಲಿ ಅವರು ನಿಮ್ಮನ್ನು ಉಪಯೋಗಿಸುತ್ತಾರೆ.

- Mrs. ಫಾತಿಮಾ ಸೆಲ್ವರಾಜ್

 

ಪ್ರಾರ್ಥನಾ ಅಂಶ:

ಈ ಬೇಸಿಗೆ ರಜೆಯಲ್ಲಿ VBS ಸೇವೆಗಳ ಮೂಲಕ 3000 ಹಳ್ಳಿಗಳಲ್ಲಿ ಮಕ್ಕಳನ್ನು ಭೇಟಿಯಾಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al