Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.03.2024 (Kids Special)
Share:

By Village Missionary Movement

Sunday, 17-Mar-2024

ಧೈನಂದಿನ ಧ್ಯಾನ(Kannada) – 17.03.2024 (Kids Special)

 

NEW LIFE 

 

"…ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನಸೃಷ್ಟಿಯಾದನು…" - 2 ಕೊರಿಂಥ 5:17

 

Hello ಪುಟಾಣಿಗಳೇ, ಹೊಸ Pen, ಹೊಸ dress, ಹೊಸ things ಅಂದ್ರೆ ನಿಮ್ಗೆ ತುಂಬಾ ಇಷ್ಟ ಅಲ್ವಾ? ನಾವು ಹೊಸದು ಸಿಕ್ಕಿದ ಕೂಡಲೇ ಹಳೆಯದನ್ನೆಲ್ಲಾ Reject ಮಾಡಿಬಿಡುತ್ತೇವೆ‌ ಹೌದು ತಾನೇ! ಯೇಸಪ್ಪ ನಮ್ಮ ಜೀವನದಲ್ಲಿ ಬಂದು ಬಿಟ್ಟರೆ ಹಳೆಯದನ್ನೆಲ್ಲಾ ಬದಲಿಸಿ ಹೊಸ ಜೀವನವನ್ನು ನಡೆಸಲು ಸಹಾಯ ಮಾಡುತ್ತಾರೆ ಪುಟಾಣಿಗಳೇ. ಅದರ ಬಗ್ಗೆ ಒಂದು ಕಥೆಯನ್ನು ಕೇಳೋಣ್ವಾ?

 

ಪಾಮ್. . . ಪಾಮ್ ಎಂದು ಬಸ್ಸಿನ ಸದ್ದು, ಜೆಟ್ ಸ್ಪೀಡ್ ನಲ್ಲಿ ಹಾರುವ ಬೈಕ್ ಸದ್ದು, ಸೈಕಲ್ ಝೇಂಕರಿಸುವ ಸದ್ದು ಇವುಗಳ ಮಧ್ಯೆ ವನಿತಾ ಆಂಟಿ ವೇಗವಾಗಿ ನಡೆಯುತ್ತಿದ್ದರು . . ಮನೆಗೆಲಸಕ್ಕೆ ಪ್ರತಿದಿನ ತಡವಾಗಿ ಹೋಗುತ್ತಾರೆ. ಅಲ್ಲಿಗೆ ಹೋಗಿ ಸರಿಯಾಗಿ ಕೆಲಸವನ್ನೂ ಮಾಡುವುದಿಲ್ಲ. ಪಾತ್ರೆ ತೊಳೆದರೂ ಸ್ವಚ್ಛವಾಗಿ ತೊಳೆಯುವುದಿಲ್ಲ. ಮನೆಗುಡಿಸಿ ಶುಚಿಗೊಳಿಸುವಾಗ ಹಾಸಿಗೆಯ ಕೆಳಗೆ ಮತ್ತು ಸೋಫಾದ ಕೆಳಗೆ ಗುಡಿಸುವುದೇ ಇಲ್ಲ. ಮನೆಯ ಯಜಮಾನಿ ಯೋಚಿಸಿದರು . . . ಈ ಕೆಲಸದವಳನ್ನು ನಿಲ್ಲಿಸಿಬಿಟ್ಟು ಬೇರೆಯವರನ್ನು ನೇಮಿಸಿಕೊಳ್ಳೋಣ ಎಂದು . . . ಆದರೆ ಅವರು ಸ್ವಲ್ಪ ದಿನ ತಾಳ್ಮೆಯಿಂದಲೇ ಇದ್ದರು.

 

ವನಿತಾ ಆಂಟಿಯ ಮಗಳು ಶೀಲಾ ತನ್ನ ತಾಯಿಯ ಬಳಿ, "ಅಮ್ಮಾ ನನಗೆ Sunday class ಹೇಳಿ ಕೊಡುವ ಅಕ್ಕ ನಮ್ಮ ಪಕ್ಕದ ಮನೆಯಲ್ಲಿ prayer ನಡೆಸುತ್ತಾರೆ ಬನ್ನಿ ಅಮ್ಮಾ" ಎಂದು ಕರೆದುಕೊಂಡು ಹೋದಳು. ಅಲ್ಲಿ ಯೇಸುಕ್ರಿಸ್ತನ ಪ್ರೀತಿಯನ್ನು ಮತ್ತು ನಮ್ಮ ಪಾಪಗಳಿಗಾಗಿ ಶಿಲುಬೆಯ ಮೇಲೆ ಮರಣಹೊಂದಿದ ಸುದ್ದಿಯನ್ನು ಕೇಳಿದಾಗ ಕರ್ತನು ಅವರ ಹೃದಯದಲ್ಲಿ ಮಾತನಾಡಿದರು. ಯೇಸಪ್ಪನಿಗೆ ಸ್ಥಳ ಕೊಟ್ಟ ವನಿತಾ ಆಂಟಿಯ ಜೀವನದಲ್ಲಿ ದೊಡ್ಡ ಬದಲಾವಣೆಯಾಯಿತು. ಯಾರೂ ನೋಡದಿದ್ದರೂ ಅವರು ಮನೆಯನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿದರು. ಪಾತ್ರೆಗಳನ್ನೂ ಸ್ವಚ್ಛವಾಗಿ ತೊಳೆದರು. ಆಗಾಗ ಸುಳ್ಳು ಕಾರಣಗಳನ್ನು ನೀಡಿ ರಜೆ ತೆಗೆದುಕೊಳ್ಳದೆ ಸಮಯಕ್ಕೆ ಸರಿಯಾಗಿ ಬಂದು ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದರು. ಕೆಲವು ದಿನಗಳಿಂದ ಈ ಹೊಸ ಬದಲಾವಣೆಯನ್ನು ನೋಡಿದ ಮನೆಯ ಯಜಮಾನಿ ಅಮ್ಮನಿಗೆ ತುಂಬಾ ಖುಷಿಯಾಯಿತು . . . ದಿಢೀರನೆ ಇಷ್ಟು ದೊಡ್ಡ ಬದಲಾವಣೆ ಹೇಗಾಯಿತು ಎಂದು ಕೇಳಿದರು . . . ಹೃದಯದಲ್ಲಿ ಯೇಸುವನ್ನು ಸ್ವೀಕರಿಸಿದ್ದರಿಂದ ಬಂದ ಬದಲಾವಣೆಯೇ ಈ ಹೊಸ ಜೀವನ ಎಂದು ಹೇಳಿದ ಕೂಡಲೇ ಅವರಿಗೂ ಸಂತೋಷ. ಶೀಲಾಳ ವಿದ್ಯಾಭ್ಯಾಸದ ವೆಚ್ಚವನ್ನು ಅವರೇ ವಹಿಸಿಕೊಂಡರು. ವಿಶ್ವಾಸಾರ್ಹ ಸಹಾಯಕರಾಗಿ ಮಾರ್ಪಟ್ಟರು. 

 

ಏನು ಪುಟಾಣಿಗಳೇ ಕಥೆ ಹೇಗಿತ್ತು. ನಿಮಗೂ ಹೊಸ Life ಪ್ರಾರಂಭಿಸಲು ಆಸೆಯೇ? ನಿಮ್ಮ ಹೃದಯದಲ್ಲಿ Jesus ಅನ್ನು ಸ್ವೀಕರಿಸಿ ನಿಮ್ಮ ಜೀವನದಲ್ಲಿಯೂ ಅದ್ಭುತವಾದ ಬದಲಾವಣೆ ಖಂಡಿತವಾಗಿಯೂ ಉಂಟಾಗುತ್ತದೆ ಪುಟಾಣಿಗಳೇ. Check ಮಾಡಿ ನೋಡೋಣ್ವಾ? Ok bye. .  

- Sis. ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş