Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.03.2024
Share:

By Village Missionary Movement

Saturday, 16-Mar-2024

ಧೈನಂದಿನ ಧ್ಯಾನ(Kannada) – 16.03.2024

 

ಹೃದಯದ ಆಳದಿಂದ. . .

 

 "…ಆತ್ಮದಿಂದ ಹಾಡುವೆನು, ಬುದ್ಧಿಯಿಂದಲೂ ಹಾಡುವೆನು" - 1 ಕೊರಿಂಥ 14:15

 

ಒಬ್ಬ ಯೌವನಸ್ಥ ಕ್ರೈಸ್ತ ಸಹೋದರ ತನ್ನ ಕಂಪನಿಯಲ್ಲಿ ರಾತ್ರಿ ವೇಳೆಯಲ್ಲಿ ಕೆಲಸ ಮುಗಿಸಿ ಸೈಕಲ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದನು. ಆ ಸಮಯದಲ್ಲಿ ಅವರು ಹಾಡಿದ ಹಾಡು: ಸಿಂಹದ ಮೇಲೂ ಸರ್ಪದ ಮೇಲೂ ನಡೆದೇ ಹೋಗುವೇ, ಸೈತಾನನ ಎಲ್ಲಾ ಶಕ್ತಿಯ ಜಯಿಸಲು ಶಕ್ತಿ ನನ್ನಲ್ಲಿ ಉಂಟು ಎಂದು! ಅವರು ಹಾಡುತ್ತಾ ಹೋಗುತ್ತಿದ್ದ ದಾರಿಯಲ್ಲಿ ಇದ್ದಕ್ಕಿದ್ದಂತೆ ಎಲ್ಲಿಂದಲೋ ನಾಯಿಯೊಂದು ಬೊಗಳುವ ಸದ್ದು ಕೇಳಿಸಿತು. ತಕ್ಷಣ ಆ ಯುವಕ ವೇಗವಾಗಿ ಸೈಕಲ್ ತುಳಿದುಕೊಂಡು ಉಸಿರು ಬಿಗಿಹಿಡಿದು ಮನೆಗೆ ಹೋಗಿ ಸೇರಿದನು. ಇದು ಒಂದುವೇಳೆ ನಮಗೆ ನಗು ತರಿಸಿದರೂ, ನಾವು ಹಾಡುವ ಹಾಡು ಹೃದಯದಿಂದ ಹಾಡುತ್ತಿದ್ದೇವೆಯೇ? ಎಂದು ಯೋಚಿಸೋಣ.

 

ಅಪೊ.ಪೌಲನು ಕೊರಿಂಥ ಸಭೆಗೆ ಬರೆಯುವಾಗ, ಹೀಗೆ ಬರೆದರು, "ಆತ್ಮದಿಂದ ಹಾಡುವೆನು, ಬುದ್ಧಿಯಿಂದಲೂ ಹಾಡುವೆನು ಎಂದು! ಹಾಗಿದ್ದಲ್ಲಿ, ನಮ್ಮ ಹಾಡುಗಳಿಗೆ ಆತ್ಮ ಮತ್ತು ಅರ್ಥ ಇರಬೇಕು. ಇಂದು ನಾವು ಸಭೆಯ ಆರಾಧನೆಗಳಲ್ಲಿಯೂ, ಪ್ರಾರ್ಥನಾ ಕೂಟಗಳಲ್ಲಿಯೂ ಪಾಪಗಳನ್ನು ಅರಿಕೆಮಾಡಿ, ಕೃತಜ್ಞತೆ ಸಲ್ಲಿಸುವ ವಿಧವಾಗಿ ಇನ್ನೂ ಅನೇಕ ಹಾಡುಗಳನ್ನು ಹಾಡುತ್ತೇವೆ! ಆದರೆ ಎಂತಾ ಒಂದು ಪರಿತಾಪ! ನಮ್ಮ ಪ್ರಾಯೋಗಿಕ ಜೀವನದಲ್ಲಿ ನಾವು ಹಾಡುವಂತೆ ಕಾರ್ಯನಿರ್ವಹಿಸಲು ವಿಫಲರಾಗುತ್ತೇವೆ.

 

ಇತ್ತೀಚೆಗೆ ಭಕ್ತರೊಬ್ಬರು ಬರೆದ ಲೇಖನವನ್ನು ಓದಿದ್ದೇನೆ. ಅದರಲ್ಲಿ ಹಾಡುಗಳಲ್ಲಿ ಹೇಳುವುದು ಮತ್ತು ಅವರು ಮಾಡುವುದು ವಿರುದ್ಧವಾಗಿದೆ ಎಂದು ಕ್ರೈಸ್ತರು ಸುಳ್ಳು ಹಾಡುತ್ತಿದ್ದಾರೆ ಎಂದೂ ಬರೆದಿದ್ದಾರೆ. ಉದಾಹರಣೆಗೆ, ನಾನು ಯೇಸುವನ್ನು ಅನುಸರಿಸಲು ಧೈರ್ಯಮಾಡಿದೆ ಎಂದು ನಾವು ಹಾಡುತ್ತೇವೆ. ಆದರೆ ಪ್ರಾಯೋಗಿಕ ಜೀವನದಲ್ಲಿ ದೇವರ ಕೆಲಸವನ್ನು ಮಾಡಲು ಹಿಡಿದುತಳ್ಳಬೇಕಾಗಿದೆ.

 

ಪ್ರಿಯರೇ! ನಾವು ಹಾಡುವಂತೆ ಬದುಕಲು ಪ್ರಯತ್ನಿಸೋಣ. ಕೆಲಕಾಲದ ಹಿಂದೆ ಬೈಬಲ್, ಹಾಡಿನ ಪುಸ್ತಕ, ನೋಟ್ ಬುಕ್ ಕೈಯಲ್ಲಿ ಹಿಡಿದುಕೊಂಡು ಆಲಯಕ್ಕೆ ಹೋಗುತ್ತಿದ್ದೆವು. ಆಧುನಿಕ ಜಗತ್ತು ಅಂದರೆ ಸ್ಮಾರ್ಟ್ ವರ್ಲ್ಡ್, ಎಂದು ಇಂದು ಒಂದು ಬೆರಳ ತುದಿಯಲ್ಲಿ ಎಲ್ಲಾದಕ್ಕೂ ಮೊಬೈಲ್ ಫೋನ್ ಅನ್ನು ಉಪಯೋಗಿಸುತ್ತಿದ್ದೇವೆ. ಇಂದು ಸಭೆಗಳಲ್ಲಿ ಹಾಕುವ ಮ್ಯೂಸಿಕ್ ಗಾಗಿ ನಾವು ಹಾಡಬಾರದು. ನಾವು ಹಾಡುವ ಪ್ರತಿಯೊಂದು ಹಾಡು ನಮ್ಮ ಆತ್ಮವನ್ನು ಉಜ್ಜೀವಿಸಮಾಡಲಿ. ನಮ್ಮ ಆಲೋಚನೆಗಳು ನಮ್ಮ ಹಾಡಿನ ಮೂಲಕ ದೇವರ ಕಡೆಗೆ ತಿರುಗಲಿ. ನಮ್ಮ ಸುತ್ತಮುತ್ತಲಿನವರನ್ನು ಹುರಿದುಂಬಿಸೋಣ. ಆದುದರಿಂದ ನಮಗೆ ಜೀವವಿರುವವರೆಗೂ ಜೀವ ನೀಡಿದ ಆತನಿಗೆ ಹೃದಯದ ಆಳದಿಂದ ಜೀವದ ಜೊತೆ ಹಾಡೋಣ!!

- Mrs. ಜಾಸ್ಮಿನ್ ಪಾಲ್

 

ಪ್ರಾರ್ಥನಾ ಅಂಶ:

ತರಬೇತಿಯಲ್ಲಿರುವ ನಮ್ಮ ಯುವ ಮಿಷನರಿಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al