Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.03.2024
Share:

By Village Missionary Movement

Sunday, 10-Mar-2024

ಧೈನಂದಿನ ಧ್ಯಾನ(Kannada) – 10.03.2024

 

ಆಲೂಗಡ್ಡೆ ಮತ್ತು ಪ್ಲಾಸ್ಟಿಕ್ ಚೀಲ

 

"ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷವಿುಸುವವರಾಗಿಯೂ ಇರ್ರಿ" - ಎಫೆಸ 4:32

 

ಹಲೋ ಪುಟಾಣಿಗಳೇ, ಹೇಗಿದ್ದೀರಾ. ಚೆನ್ನಾಗಿದ್ದೀರ? ನೀವು ಪ್ರತಿದಿನ ಶಾಲೆಗೆ ಹೋಗುತ್ತಿದ್ದೀರಾ? ಹೌದು ಪುಟಾಣಿಗಳೇ, ನಿಮ್ಗೆ ಯಾವ ಯಾವ ಆಟಗಳೆಲ್ಲಾ ಇಷ್ಟ. ಮ್. . ಮ್. . . ನಿಮ್ಮ ಶಾಲೆಯಲ್ಲಿ, ನಿಮ್ಮ ಬೀದಿಯಲ್ಲಿ ನಿಮ್ಮ ಸ್ನೇಹಿತರೊಂದಿಗೆ ಜಾಲಿಯಾಗಿ ಆಟ ಆಡ್ತೀರ ಹೌದಲ್ವಾ.

 

ನಿಮ್ಮಂತೆಯೇ ರಿಯಾ ಓದಿದ ಶಾಲೆಯಲ್ಲಿಯೂ ದೊಡ್ಡ ಮೈದಾನ. ಅಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಂತೋಷವಾಗಿ ಮಾತನಾಡುತ್ತಾ, ನಗುತ್ತಾ ಒಟ್ಟಿಗೆ ಆಟವಾಡುತ್ತಿದ್ದರು. ದಿನಗಳು ಕಳೆಯುತ್ತಾ ಎಲ್ಲರೂ ಜಗಳವಾಡಿ ಪ್ರತ್ಯೇಕ ಗುಂಪುಗಳಾಗಿ ಬೇರ್ಪಟ್ಟರು. ಅಲ್ಲಿನ ಶಿಕ್ಷಕರಿಗೆ ತುಂಬಾ ಕಷ್ಟವಾಯಿತು. ಇವರೆಲ್ಲರನ್ನೂ ಒಟ್ಟುಗೂಡಿಸಲು ಬಯಸಿದ ಶಿಕ್ಷಕರು, ಇವರೆಲ್ಲರನ್ನು ಕರೆದು ನಾಳೆ ಶಾಲೆಗೆ ಬರುವಾಗ ನೀವೆಲ್ಲರೂ ಒಂದು ಮೂಟೆ ಆಲೂಗಡ್ಡೆ ಮತ್ತು ಪ್ಲಾಸ್ಟಿಕ್ ಕವರ್ ತರಬೇಕು ಎಂದರು. ವಿದ್ಯಾರ್ಥಿಗಳು ಅದನ್ನು ಹಾಗೆಯೇ ತಂದರು.

 

ಈಗ ಶಿಕ್ಷಕರು ಅವರನ್ನು ನೋಡಿ ನಿಮಗೆ ಯಾರೊಂದಿಗೆಲ್ಲಾ ಜಗಳವೋ, ಯಾರನ್ನೆಲ್ಲಾ ಕ್ಷಮಿಸಲು ಮರೆಯುತ್ತಿದ್ದೀರೋ ಅವರ ಹೆಸರನ್ನು ಈ ಆಲೂಗಡ್ಡೆಗಳ ಮೇಲೆ ಬರೆದು ಈ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿರಿ ಎಂದರು. ವಿದ್ಯಾರ್ಥಿಗಳು ಯೋಚಿಸಿ ಸಮಯ ತೆಗೆದುಕೊಂಡು ಬರೆದುಹಾಕಿದರು. ಗೋಣಿಚೀಲದಲ್ಲಿದ್ದ ಆಲೂಗಡ್ಡೆಗಳು ಕಡಿಮೆಯಾದವು. ಪ್ಲಾಸ್ಟಿಕ್ ಚೀಲ ತುಂಬಿತು. ಈಗ ನೀವು ಯಾರನ್ನು ಕ್ಷಮಿಸಲು ಬಯಸುತ್ತೀರೋ ಅವರ ಹೆಸರಿನ ಆಲೂಗಡ್ಡೆಯನ್ನು ತೆಗೆದುಕೊಂಡು ಅದನ್ನು ಹೊರಗೆ ಬಿಸಾಟುಬಿಡಿ. ಇಲ್ಲವಾದಲ್ಲಿ ಪ್ರತಿದಿನ ಶಾಲೆಗೆ ಬರುವಾಗ ಹೋಗುವಾಗ ಈ ಆಲೂಗಡ್ಡೆಯ ಕವರನ್ನು ಹೊತ್ತುಕೊಂಡೇ ಹೋಗಬೇಕು ಎಂದರು. ಕ್ಷಮಿಸಲು ಮನಸ್ಸಿಲ್ಲದ ವಿದ್ಯಾರ್ಥಿಗಳು ಕವರನ್ನು ಶಾಲೆಗೆ ಹೊತ್ತುಕೊಂಡು ಹೋಗುತ್ತಾ ಬರುತ್ತಾ ಇದ್ದರು. ಕೆಲವೇ ದಿನಗಳಲ್ಲಿ ಆಲೂಗಡ್ಡೆ ಕೊಳೆತು ವಾಸನೆ ಬರುತ್ತಿತ್ತು. ಅವರ ಕಡೆಗೆ ಯಾರೂ ಬರಲು ಬಯಸಲಿಲ್ಲ. ಮತ್ತು ಎಲ್ಲರೂ ಅವರನ್ನು ನೋಡಿ ದೂರ ಹೋಗಲಾರಂಭಿಸಿದರು. ಇದನ್ನು ಕಂಡ ವಿದ್ಯಾರ್ಥಿಗಳು ಗಬ್ಬು ನಾರುತ್ತಿದ್ದ ಆಲೂಗಡ್ಡೆಗಳನ್ನು ಎಸೆದು ಎಲ್ಲರನ್ನು ಕ್ಷಮಿಸಿ ಮೊದಲಿನಂತೆ ಶಾಂತವಾಗಿ ಆಟವಾಡಿದರು.

 

ಪ್ರೀತಿಯ ತಮ್ಮ, ತಂಗಿ, ನಾವು ಸಹ ಇತರರನ್ನು ಕ್ಷಮಿಸದಿದ್ದರೆ, ಅವರ ಮೇಲೆ ಅಸಮಾಧಾನ, ದ್ವೇಷ ಮತ್ತು ಕೋಪವನ್ನು ಇಟ್ಟುಕೊಂಡರೆ, ಅನೇಕ ಪಾಪಗಳು ನಮ್ಮ ಜೀವನವನ್ನು ಹಾಳುಮಾಡುತ್ತವೆ. ಆದ್ದರಿಂದ ಯೇಸು ಶಿಲುಬೆಯಲ್ಲಿ ನೇತಾಡುವಾಗಲೂ ತನ್ನನ್ನು ಹೊಡೆದವರನ್ನು, ಅವಮಾನಿಸಿದವರನ್ನು ಮತ್ತು ದ್ರೋಹ ಮಾಡಿದವರನ್ನು ಕ್ಷಮಿಸಿದಂತೆ ನೀವು ಬದಲಾಗಬೇಕು. ಇದನ್ನೇ ಯೇಸು ನಿಮ್ಮಿಂದ ನಿರೀಕ್ಷಿಸುತ್ತಿದ್ದಾರೆ. ಹಾಗಾದರೆ ನೀವು ಯೇಸುವಿನ ನಿರೀಕ್ಷೆಗಳನ್ನು ಪೂರೈಸುತ್ತೀರಾ ಮತ್ತು ಅವರನ್ನು ಸಂತೋಷಪಡಿಸುತ್ತೀರಾ?

- Mrs. ಸಾರಾಳ್ ಸುಭಾಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al