Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.03.2024
Share:

By Village Missionary Movement

Saturday, 09-Mar-2024

ಧೈನಂದಿನ ಧ್ಯಾನ(Kannada) – 09.03.2024

 

ಕೊಟ್ಟುಬಿಡೋಣ

 

"…ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು…" - ಮತ್ತಾಯ 25:40

 

ಮೋಟಾರು ಕಾರುಗಳ ಪಿತಾಮಹ ಎಂದು ಕರೆಯಲ್ಪಡುವ ಹೆನ್ರಿ ಬೋರ್ಡ್ ಅವರ ಬಳಿ ಒಮ್ಮೆ ಅನಾಥಾಶ್ರಮವನ್ನು ನಿರ್ಮಿಸಲು ಸಹಾಯ ಮಾಡಲು ಕೇಳಲಾಯಿತು. ಅವರು ಎರಡು ಸಾವಿರ ಡಾಲರ್ ಆರ್ಥಿಕ ಸಹಾಯದ ಚೆಕ್ ನೀಡಿದರು. ಮರುದಿನ ಪತ್ರಿಕೆಯು ಹೆನ್ರಿ ಬೋರ್ಡ್ ಅನಾಥಾಶ್ರಮವನ್ನು ನಿರ್ಮಿಸಲು ಇಪ್ಪತ್ತು ಸಾವಿರ ಡಾಲರ್‌ಗಳನ್ನು ನೀಡಿದ್ದಾರೆ ಎಂದು ತಪ್ಪಾಗಿ ವರದಿ ಮಾಡಿದರು. ಇದನ್ನು ಕೇಳಿದ ಅವರು ಹೆನ್ರಿ ಬೋರ್ಡ್ ಅನ್ನು ಭೇಟಿಯಾಗಿ ವಿಷಾದ ವ್ಯಕ್ತಪಡಿಸಿದರು. ತಕ್ಷಣ ಹೆನ್ರಿ ಬೋರ್ಡ್ ಚಿಂತಿಸಬೇಡಿ ಎಂದು ಹೇಳಿ ಮತ್ತೊಂದು 18,000 ಡಾಲರ್ ಗೆ ಚೆಕ್ ನೀಡಿದರು. ದೇವರು ಅವರನ್ನು ಇನ್ನೂ ಹೆಚ್ಚೆಚ್ಚಾಗಿ ಆಶೀರ್ವದಿಸಿದರು.

 

ಸುವಾರ್ತೆ ಪುಸ್ತಕಗಳಲ್ಲಿ ಒಂದಾದ ಯೋಹಾನ ಪುಸ್ತಕದಲ್ಲಿ ಯೇಸುಕ್ರಿಸ್ತನು ಮಾಡಿದ ಒಂದು ಅದ್ಭುತವನ್ನು ಬರೆಯಲಾಗಿದೆ. ಅದರಲ್ಲಿ, ಯೇಸುವಿನ ಬೋಧನೆಯನ್ನು ಕೇಳಲು ಬಂದ ಜನರು ಹಸಿದಿದ್ದಾರೆ ಎಂದು ತಿಳಿದು, ಯೇಸು ಅವರಿಗೆ ಆಹಾರವನ್ನು ನೀಡಲು ಬಯಸಿದರು. ಯೇಸು ಮಾಡಿದ ಅದ್ಭುತಕ್ಕೆ ಬಹಳ ಪ್ರಮುಖವಾಗಿದ್ದವರು ಯಾರೆಂದರೆ ಒಬ್ಬ ಚಿಕ್ಕ ಹುಡುಗ. ಈ ಪುಟ್ಟ ಬಾಲಕ ಮುಂದೆ ಬಂದು ಕೊಟ್ಟ ಐದು ರೊಟ್ಟಿ ಮತ್ತು ಎರಡು ಮೀನುಗಳೇ ಐದು ಸಾವಿರಕ್ಕೂ ಹೆಚ್ಚು ಜನರ ಹಸಿವನ್ನು ನೀಗಿಸಲು ಕಾರಣವಾಯಿತು. ಚಿಕ್ಕ ಹುಡುಗ ತನ್ನಲ್ಲಿರುವ ಎಲ್ಲವನ್ನೂ ಸಂಪೂರ್ಣವಾಗಿ ಕೊಟ್ಟುಬಿಟ್ಟನು. ತನಗೆ ಬೇಕು, ತನ್ನ ಹಸಿವಿಗೆ ಏನು ಮಾಡಬೇಕು ಎಂದೆಲ್ಲಾ ಸ್ವಲ್ಪವೂ ಯೋಚಿಸದೆ ಕೊಟ್ಟುಬಿಟ್ಟನು. ಇದರ ಪರಿಣಾಮವಾಗಿ ಇಂದಿನವರೆಗೂ, "ಒಬ್ಬ ಚಿಕ್ಕ ಹುಡುಗ" ಎಂದು ಸತ್ಯವೇದದಲ್ಲಿ ಮಾತನಾಡಲ್ಪಡುತ್ತಿದೆ.

 

ಪ್ರಿಯರೇ! ಪಡೆಯುವುದಕ್ಕಿಂತ ಕೊಡುವುದು ಹೆಚ್ಚು ಶ್ರೇಯಸ್ಕರ. ನಾವು ಹೆಮ್ಮೆಗಾಗಿ ಕೊಡಬಾರದು ಮತ್ತು ಬಲಗೈ ನೀಡುವುದು ಎಡಗೈಗೂ ತಿಳಿಯಬಾರದು. ನಾವು ಈ ಜಗತ್ತಿಗೆ ಬಂದಾಗ ಏನನ್ನೂ ತಂದಿಲ್ಲವಾದ್ದರಿಂದ, ನಮ್ಮ ಜೀವಿತಾವಧಿಯಲ್ಲಿ ದೇವರು ನಮಗೆ ಕೊಟ್ಟದ್ದನ್ನು ನಾವು ಅಗತ್ಯವಿರುವವರಿಗೆ ಹಂಚಿಕೊಟ್ಟು ಆನಂದಿಸೋಣ. ದೇವರು ಅದರಲ್ಲಿ ಸಂತೋಷಪಡುತ್ತಾರೆ. ಹಾಗಾಗಿ "ನಮ್ಮ ಕೈಲಾದಷ್ಟು ಕೊಟ್ಟು ಬಿಡೋಣ. ಇಲ್ಲದವರಿಗೆ!" ನಮಗೆ ಆಶೀರ್ವಾದ ಇದ್ದಾಗ ಕೊಡುವುದಲ್ಲ, ಇಲ್ಲದಿದ್ದಾಗಲೂ ಕೊರತೆಗಳ ನಡುವೆಯೂ ಕೊಡಲು ಕಲಿಯೋಣ. ಏಮಿ ಕಾರ್ಮೈಕಲ್ ಎಂಬ ಅಮ್ಮನವರು ಹೇಳುತ್ತಾರೆ, "ನಮ್ಮ ಕೈಗಳು ಗಾಯವಾಗುವವರೆಗೂ ಕೊಡೋಣ" ಎಂದು. ಮತ್ತು ದೇವರ ಮನುಷ್ಯನಾದ ಬಿಲ್ಲಿ ಗ್ರಹಾಂರವರು ಹೇಳುವಾಗ, "ದೇವರು ನಮಗೆ ಎರಡು ಕೈಗಳನ್ನು ಕೊಟ್ಟಿದ್ದಾರೆ. ಒಂದು ದೇವರಿಂದ ಸ್ವೀಕರಿಸಲು ಮತ್ತು ಇನ್ನೊಂದು ಇತರರಿಗೆ ನೀಡಲು!" ಹೌದು, ನಾವು ಸಹ ಧಾರಾಳವಾಗಿ ಕೊಟ್ಟು ಯೇಸುಕ್ರಿಸ್ತನ ಆಲೋಚನೆಯನ್ನು ಪ್ರತಿಬಿಂಬಿಸೋಣ.

- Mrs. ಶಕ್ತಿ ಶಂಕರ್ ರಾಜ್ 

 

ಪ್ರಾರ್ಥನಾ ಅಂಶ:

ನಮ್ಮ ಆಮೆನ್ ವಿಲೇಜ್ ಟಿವಿಯ ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin