Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.03.2024
Share:

By Village Missionary Movement

Friday, 08-Mar-2024

ಧೈನಂದಿನ ಧ್ಯಾನ(Kannada) – 08.03.2024

 

ತಗ್ಗಿಸಿಕೊಳ್ಳುವಿಕೆ

 

"ಕರ್ತನ ಮುಂದೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆಗಲಾತನು ನಿಮ್ಮನ್ನು ಮೇಲಕ್ಕೆ ತರುವನು." - 4:10

 

ಒಮ್ಮೆ ಸಾಧುಸುಂದರ್ ಸಿಂಗ್ ಇಂಗ್ಲೆಂಡಿನಲ್ಲಿ ಪ್ರಯಾಣಿಸುತ್ತಿದ್ದಾಗ, ಒಬ್ಬ ಸಹೋದರಿ ಅವರಿಗೆ, "ನಿಮಗೇನು, ನೀವು ಕ್ರಿಸ್ತನನ್ನು ಅಂಗೀಕರಿಸಿದ ನಂತರ, ನಿಮಗೆ ಎಷ್ಟು ಸ್ವಾಗತ ಮತ್ತು ಎಷ್ಟು ಹೊಗಳಿಕೆ" ಎಂದು ಹೇಳಿದರು. ಆಗ ಅವರು ಹೇಳಿದರು, ನಾನು ನನ್ನನ್ನು ಯೇಸು ಕ್ರಿಸ್ತನು ಹತ್ತಿಹೋದ ಕತ್ತೆ ಎಂದು ಭಾವಿಸುತ್ತೇನೆ. ಅಂದು ಕ್ರಿಸ್ತನನ್ನು ಹೊತ್ತೊಯ್ದ ಕತ್ತೆ ತನ್ನನ್ನೇ ಜನರು ಸ್ವಾಗತಿಸುತ್ತಿದ್ದಾರೆ, ತನಗೇ ಮಹಿಮೆ ಸಲ್ಲಿಸುತ್ತಿದ್ದಾರೆ ಎಂದು ಭಾವಿಸಿದ್ದರೆ ಅದು ಎಷ್ಟು ಮೂರ್ಖತನವೋ, ಅದರಂತೆಯೇ ಈಗ ನನಗೆ ಸಿಗುವ ಎಲ್ಲಾ ಕೀರ್ತಿಯೂ ನನಗೇ ಎಂದು ಭಾವಿಸಿದರೆ ನಾನೂ ಒಬ್ಬ ಮೂರ್ಖನಾಗುತ್ತೇನೆ. "ಕ್ರಿಸ್ತನು ನನ್ನಲ್ಲಿಲ್ಲದಿದ್ದರೆ, ನಾನು ಬರೀ ಕತ್ತೆ!" ಎಂದು ಹೇಳಿದರಂತೆ! ಎಂತಾ ತಗ್ಗಿಸಿಕೊಳ್ಳುವಿಕೆ, ನೋಡಿ!

 

ಸತ್ಯವೇದದಲ್ಲಿ, ಇಜ್ರೇಲಿನವನಾದ ನಾಬೋತನಿಗೆ ಸಮಾರ್ಯದ ಅರಸನಾದ ಅಹಾಬನ ಅರಮನೆಯ ಬಳಿ ಒಂದು ದ್ರಾಕ್ಷೇತೋಟವಿತ್ತು. ದೇವರು ಅಹಾಬನನ್ನು ಆಶೀರ್ವದಿಸಿ ಅವನಿಗೆ ಒಳ್ಳೆಯ ಸೌಲಭ್ಯಗಳನ್ನು ಕೊಟ್ಟಿದ್ದರು. ಆದರೆ ಅಹಾಬನು ದುರಾಸೆಯವನಾಗಿದ್ದನು ಮತ್ತು ತನಗಿರುವುದು ಸಾಕು ಎಂದು ಭಾವಿಸದೇ ಹತ್ತಿರದಲ್ಲಿದ್ದ ನಾಬೋತನ ದ್ರಾಕ್ಷೇತೋಟವನ್ನು ತನಗೆ ಸ್ವಂತ ಮಾಡಿಕೊಳ್ಳಲು ಬಯಸಿದನು. ಆದರೆ ನಾಬೋತನು ತನ್ನ ದ್ರಾಕ್ಷೇತೋಟ ಪಿತ್ರಾರ್ಜಿತ ಸ್ವಾಸ್ಥ್ಯವಾದ್ದರಿಂದ ಕೊಡಲು ನಿರಾಕರಿಸುತ್ತಾನೆ. ಅಹಾಬನ ಅಪೇಕ್ಷೆಯಂತೆ ಅಹಾಬನ ಹೆಂಡತಿಯಾದ ಈಜೆಬೆಲಳು ಕೂಡ ನಾಬೋತನ ಮೇಲೆ ಸುಳ್ಳು ಸಾಕ್ಷಿ ಹೇಳಿಸಿ ಕಲ್ಲೆಸೆದು ಕೊಂದರು. ಆ ಸಂದರ್ಭದಲ್ಲಿ, ಪ್ರವಾದಿಯಾದ ಎಲೀಯನಿಗೆ ಯೆಹೋವನ ವಾಕ್ಯವುಂಟಾಗಿ ಎಲೀಯನ ಮೂಲಕ ಅಹಾಬನು ಎಚ್ಚರಿಸಲ್ಪಡುತ್ತಾರೆ. ಅಹಾಬನು ಮಾಡಿದ ಪ್ರತಿಯೊಂದೂ ಕಾರ್ಯವೂ ತಪ್ಪಾದದ್ದು ಮತ್ತು ಅನ್ಯಾಯವಾದದ್ದು. ಆದರೆ ಅಹಾಬನು ತನ್ನನ್ನು ತಗ್ಗಿಸಿಕೊಂಡು ಪ್ರವರ್ತಿಸಿದ್ದನ್ನು ಕಂಡ ಕರ್ತನು ಅಹಾಬನಿಗೆ ಮುಂತಿಳಿಸಿದ ಕೇಡನ್ನು ಬರಗೊಡಿಸದೆ ಅವನ ಮಗನ ಕಾಲದಲ್ಲಿ ಬರಮಾಡುವೆನು ಎಂದು ಹೇಳಿದರು. 

 

ಪ್ರಿಯರೇ, ತಗ್ಗಿಸಿಕೊಳ್ಳುವಿಕೆ ಎಂಬ ಗುಣವು ಎಲ್ಲಾ ಕ್ರೈಸ್ತರಲ್ಲಿ ಕಂಡುಬರಬೇಕಾದ ವಿಷಯವಾಗಿದೆ. ಸಾಮಾನ್ಯ ವಿಶ್ವಾಸಿಯಿಂದ ಹಿಡಿದು ಎಷ್ಟೇ ದೊಡ್ಡ ಸೇವಕರಾಗಿದ್ದರೂ ಇರಬೇಕಾದ ವಿಷಯ. ಕರ್ತನಾದ ಯೇಸು ಭೂಮಿಯ ಮೇಲೆ ಜೀವಿಸಿದ ದಿನಗಳಲ್ಲಿ ತನ್ನ ಶಿಷ್ಯರ ಕಾಲುಗಳನ್ನು ತೊಳೆಯುವ ಮೂಲಕ ತನ್ನ ತಗ್ಗಿಸಿಕೊಳ್ಳುವಿಕೆಯನ್ನು ತೋರ್ಪಡಿಸಿದರು. ಯಾರಬಳಿಯೂ ನಮ್ಮ ಈಗೋ ಅನ್ನು ತೋರ್ಪಡಿಸದೆ‌ ತಗ್ಗಿಸಿಕೊಳ್ಳೋಣ. ಅವರು ನಮ್ಮ ವಯಸ್ಸಿಗಿಂತ ಚಿಕ್ಕವರಿರಬಹುದು ಅಥವಾ ದೊಡ್ಡವರಿರಬಹುದು. ನಾವು ಇಂದು ದೇವರ ಮಿತಿಯಿಲ್ಲದ ಕೃಪೆಯನ್ನು ಹೊಂದಬೇಕಾದರೆ ಇಂದೇ ನಮ್ಮನ್ನು ಆತನ ಮುಂದೆ ತಗ್ಗಿಸಿಕೊಳ್ಳೋಣ. ಕೃಪಾ ವರಗಳನ್ನು ಪಡೆದುಕೊಳ್ಳೋಣ. ತಗ್ಗಿಸಿಕೊಳ್ಳಲು ತಡಮಾಡಬೇಡಿ!!

- Mrs. ಶಕ್ತಿ ಶಂಕರ್ ರಾಜ್ 

 

ಪ್ರಾರ್ಥನಾ ಅಂಶ:

ಆಸ್ಪತ್ರೆ ಸೇವೆಗಳಿಗೆ ಅಗತ್ಯವಾದ ಔಷಧಿಗಳು ಮತ್ತು ಸಲಕರಣೆಗಳನ್ನು ನೀಡಿ ಸಹಾಯ ಮಾಡುವ ವ್ಯಕ್ತಿಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin