By Village Missionary Movement
Tuesday, 05-Mar-2024ಧೈನಂದಿನ ಧ್ಯಾನ(Kannada) – 05.03.2024
ನನಗೆ ಬಲವಿದೆ
"ನನ್ನನ್ನು ಬಲಪಡಿಸುವಾತನಲ್ಲಿದ್ದು ಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ" - ಫಿಲಿಪ್ಪಿ 4:13
ವಿಲ್ಮಾ ರುಡಾಲ್ಫ್ ಎಂಬ ಮಹಿಳೆ ಪಾರ್ಶ್ವವಾಯು ರೋಗದಿಂದ ಬಳಲುತ್ತಿದ್ದರು. ಆದರೆ ಏನೇ ಆಗಲಿ, ಯಶಸ್ವಿ ಮಹಿಳೆಯಾಗಿ ಬದುಕಲು ನಿರ್ಧರಿಸಿ ಕಷ್ಟಪಟ್ಟು ದುಡಿದರು. ಅವರು ಸರಿಯಾಗಿ ತಿನ್ನುತ್ತಿದ್ದರು ಮತ್ತು ದುರ್ಬಲ ನರಗಳನ್ನು ಬಲಪಡಿಸಲು ಕಠಿಣ ವ್ಯಾಯಾಮ ಮಾಡಿದರು ಮತ್ತು ವೇಗವಾಗಿ ಓಡುವ ಹಂತಕ್ಕೆ ಏರಿದರು. ಅವರು 1960 ರ ಒಲಿಂಪಿಕ್ಸ್‌ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದರು ಮತ್ತು "ವಿಶ್ವದ ಅತ್ಯಂತ ವೇಗದ ಮಹಿಳೆ" ಎಂಬ ಹೆಸರು ಗಳಿಸಿದರು.
ಶೆಲ್ಲಿಮಲ್ ಎಂಬ ಹುಡುಗಿ ಐದು ವರ್ಷದವಳಿದ್ದಾಗ ಜುವೆನೈಲ್ ಪೆಡಿಕ್ಯುಲೈಟಿಸ್‌ನಿಂದ ಬಳಲುತ್ತಿದ್ದರು. ಆದರೆ ಅವರೊಳಗೆ ಕಂಡುಬಂದ ಅಳೆಯಲಾಗದ ಯಶಸ್ಸನ್ನು ಈ ರೋಗವು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಇವರೂ ಸಹ 1956 ರಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಮೂರು ಪದಕಗಳನ್ನು ಗೆದ್ದರು.
ಇಪ್ಪತ್ತು ವರ್ಷಗಳ ಹಿಂದೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಸೈಮನ್ ಎ. ಡೊನಾಪ್ ಎಂಬ ಒಬ್ಬ ವ್ಯಕ್ತಿ ಆಟವಾಡಿದರು. ಹದಿಹರೆಯದಲ್ಲಿ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಆದರೆ ವೈದ್ಯಕೀಯ ನೆರವಿನಿಂದ ಕಠಿಣ ಪರಿಶ್ರಮ ಮತ್ತು ವ್ಯಾಯಾಮ ಮಾಡಿ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ವೇಗದ ಬೌಲರ್ ಎನಿಸಿಕೊಂಡರು.
ಮೇಲೆ ತಿಳಿಸಿದ ಮೂವರು ವ್ಯಕ್ತಿಗಳೂ ಸಹ ಜೀವನದ ಮೋಸವಾದ ಪರಿಸ್ಥಿತಿಗಳಿಗೆ ತಳ್ಳಲ್ಪಟ್ಟವರಾಗಿ ಕಾಣಲ್ಪಟ್ಟರು. ಆದರೆ ಈ ಇವರು ತಮ್ಮ ಬಲಹೀನತೆಯ ಬಗ್ಗೆ ಯೋಚಿಸದೆ ಜೀವನದಲ್ಲಿ ಹೇಗೆ ಸಾಧಿಸಬಹುದು ಎಂಬ ಆಸೆ ಮತ್ತು ಆಲೋಚನೆಯಿಂದ ಮುನ್ನಡೆದರು. ಪರಿಶುದ್ಧ ಗ್ರಂಥದಲ್ಲಿ ಪೌಲನು, ನನ್ನ ಬಲಹೀನತೆಯ ನಿಮಿತ್ತವಾಗಿ ನಾನ ತುಂಬಾ ಸಂತೋಷಪಡುತ್ತೇನೆ. ಏಕೆಂದರೆ ಕ್ರಿಸ್ತನ ಬಲವು ನನ್ನಲ್ಲಿ ಕಂಡುಬರುವಾಗ, ನಾನು ಬಲಹೀನತೆಯಲ್ಲಿ ಬಲಶಾಲಿಯಾಗಿದ್ದೇನೆ ಎಂದು ಸಾಕ್ಷಿ ಹೇಳುತ್ತಿದ್ದಾರೆ. (2 ಕೊರಿಂ. 12:9) ಮತ್ತು ಅವರು ಫಿಲಿಪ್ಪಿ ಪತ್ರಿಕೆಯಲ್ಲಿ ಹೇಳುವಾಗ, "ನನ್ನನ್ನು ಬಲಪಡಿಸುವಾತನಲ್ಲಿದ್ದು ಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ" ಎಂದು ಹೇಳುತ್ತಾರೆ. ಈ ಸಂದೇಶವನ್ನು ಓದುತ್ತಿರುವ ನೀವು ಯಾವುದಾದರೂ ಬಲಹೀನತೆಯಿಂದ ಬಂಧಿತರಾಗಿದ್ದರೆ, ನಿರುತ್ಸಾಹಗೊಳ್ಳಬೇಡಿ. ನಿಮ್ಮ ಬಲಹೀನತೆಯನ್ನು ಬದಲಾಯಿಸಲು ಪ್ರಾರ್ಥಿಸಿ ಮತ್ತು ಶ್ರಮಿಸಿ. ಕರ್ತನು ನಿಮ್ಮ ಬಳಿಯಲ್ಲಿ ನಿಂತು ನಿಮ್ಮನ್ನು ಬಲಪಡಿಸುತ್ತಾರೆ. ( 2 ತಿಮೊ. 4:17 ) ಆಮೆನ್!
- P. ಜೇಕಬ್ ಶಂಕರ್
ಪ್ರಾರ್ಥನಾ ಅಂಶ:
ಏಳು ಸಾವಿರ ಮಿಷನರಿಗಳು ಒಂದು ಲಕ್ಷ ಹಳ್ಳಿಗಳು ಎಂಬ ಯೋಜನೆಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482