Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.02.2024
Share:

By Village Missionary Movement

Wednesday, 28-Feb-2024

ಧೈನಂದಿನ ಧ್ಯಾನ(Kannada) – 28.02.2024

 

ಉಡುಗೊರೆ

 

"…ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು;…" - ಯೋಹಾನ 3:16

 

ಉಡುಗೊರೆ ಪ್ರೀತಿಯ ಪ್ರತಿರೂಪವಾಗಿದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ಇನ್ನೊಬ್ಬರಿಗೆ ನೀಡುವ ಪ್ರೀತಿಯ ಕಾಣಿಕೆಯೇ ಉಡುಗೊರೆ ಎಂದು ಹೇಳಬಹುದು. ಈ ಉಡುಗೊರೆ ಅನಿರೀಕ್ಷಿತ ಸಂದರ್ಭಗಳಲ್ಲಿ ಬರುತ್ತದೆ. ಸ್ನೇಹಿತರ ನಡುವೆ ಹಂಚಿಕೊಳ್ಳುವ ಉಡುಗೊರೆಗಳು, ಕುಟುಂಬ ಸಂಬಂಧಗಳ ನಡುವೆ ನೀಡುವ ಉಡುಗೊರೆಗಳು ಹೀಗೆ ಹಲವು ರೀತಿಯ ಉಡುಗೊರೆಗಳಿವೆ. ಹಾಗೂ ಹುಟ್ಟುಹಬ್ಬ, ಮದುವೆಗೆ ನೀಡುವ ಉಡುಗೊರೆಯೂ ವಿಶೇಷವಾದದ್ದು. ಪ್ರೀತಿ ಇದ್ದರೆ ಮಾತ್ರ ಈ ಎಲ್ಲಾ ಉಡುಗೊರೆ ವಸ್ತುಗಳನ್ನು ಹಂಚಿಕೊಳ್ಳಲು ಸಾಧ್ಯ. ಪ್ರೀತಿ ಇಲ್ಲದೆ ಏನನ್ನೂ ಕೊಡಲು ಸಾಧ್ಯವಿಲ್ಲ. ಉದಾಹರಣೆಗೆ, ಮದರ್ ತೆರೇಸಾ, ಗ್ರಹಾಂ ಸ್ಟೇನ್ಸ್, ಎಲ್ಲರೂ ದೇವರ ಮೇಲಿನ ಪ್ರೀತಿಯಿಂದ ರೋಗಿಗಳಿಗೆ ತಮ್ಮ ಸೇವೆಗಳನ್ನು ಉಚಿತವಾಗಿ ನೀಡಿದರು.

 

ಸತ್ಯವೇದದಲ್ಲಿ ಶ್ರೀಮಂತ ವ್ಯಕ್ತಿಯ ಬಗ್ಗೆ ಮತ್ತು ಲಾಜರನು ಎಂಬ ದರಿದ್ರನ ಬಗ್ಗೆಯೂ ಬರೆಯಲಾಗಿದೆ. ಇವರಿಬ್ಬರನ್ನೂ ದೇವರು ಉಂಟುಮಾಡಿದರು. ಆದರೆ ಈ ಲಾಜರನು ಶ್ರೀಮಂತನ ಬಾಗಿಲಲ್ಲಿ ಬಿದ್ದಿದ್ದನು, ಅವನ ಮೇಜಿನಿಂದ ಬೀಳುವ ರೊಟ್ಟಿತುಂಡುಗಳಿಂದ ಅವನ ಹಸಿವನ್ನು ಪೂರೈಸಲು ಆಸೆಯಿಂದಿದ್ದನು. ಇಬ್ಬರೂ ಒಂದು ದಿನ ಸತ್ತರು. ಬಡವನು ಸತ್ತು ದೇವದೂತನ ಮೂಲಕ ಅಬ್ರಹಾಮನ ಎದೆಗೆ ಒರಗಿಸಲ್ಪಟ್ಟನು. ಶ್ರೀಮಂತನೂ ಸತ್ತು ಪಾತಾಳಕ್ಕೆ ಹೋದನು. ಶ್ರೀಮಂತನು ಜಮ್ ಜಮ್ ಆಗಿ ಭೂಮಿಯಲ್ಲಿ ಬದುಕಿ ಪಾತಾಳಕ್ಕೆ ಹೋಗುವುದು ಎಂಬುದು ಎಂತಹ ದಯನೀಯ ಪರಿಸ್ಥಿತಿ! ಅವನು ಶ್ರೀಮಂತನಾಗಿ ಜೀವಿಸಿದರೂ ಪ್ರೀತಿಯಿಲ್ಲದವನಾಗಿ ಸತ್ತು ತನ್ನ ಓಟವನ್ನು ಕೊನೆಗೊಳಿಸುತ್ತಾನೆ.

 

ಪ್ರಿಯರೇ! ಹಣ, ಸ್ಥಾನ, ಹೆಸರು ಮತ್ತು ಕೀರ್ತಿ ಕೇವಲ ಆಶೀರ್ವಾದ ಎಂದು ಭಾವಿಸುತ್ತೇವೆ. ನಮಗೂ ಅನ್ನಿಸುತ್ತೆ ಇವರಿಗೆ ನನ್ನ ಮೇಲೆ ತುಂಬಾ ಅಭಿಮಾನ ಎಂದು. ಅವರ ಪ್ರೀತಿಯನ್ನು ಆಶೀರ್ವಾದದಿಂದ ಮಾತ್ರವಲ್ಲ; ಏನೂ ಇಲ್ಲದ ಸ್ಥಿತಿಯಲ್ಲಿಯೂ, ಕೊರತೆಯಲ್ಲಿಯೂ ದೇವರ ಶಿಕ್ಷೆಯಲ್ಲೂ ಸಹ ಸವಿಯಬಹುದು. "ನಾವು ಪ್ರೀತಿ ಇಲ್ಲದೆ ನೀಡಲು ಸಾಧ್ಯವಿಲ್ಲ, ಮತ್ತು ನೀಡದೆ ನಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ" ಎಂದು ಮದರ್ ತೆರೇಸಾ ಹೇಳಿದರು. ತಂದೆಯು ಈ ಭೂಮಿಗೆ ಯೇಸುವನ್ನು ನಮಗೆ ಪ್ರೀತಿಯ ಉಡುಗೊರೆಯಾಗಿ ನೀಡಿದ್ದಾರೆ. ನಾವೂ ಆತನ ಪ್ರೀತಿಯಿಂದ ತುಂಬಿ ಯೇಸುವನ್ನು ಇತರರಿಗೆ ಉಡುಗೊರೆಯಾಗಿ ನೀಡೋಣ. ನಮ್ಮಲ್ಲಿರುವದನ್ನು ಕಷ್ಟದಲ್ಲಿರುವವರಿಗೆ ನೀಡಿ ಇತರರನ್ನು ಸಂತೋಷಪಡಿಸೋಣ.

- sis. ಎಸ್ತೇರ್ ಸೆಲ್ವಿ

 

ಪ್ರಾರ್ಥನಾ ಅಂಶ:

ಉತ್ತರ ಭಾರತದ ಮಿಷನರಿಗಳ ಸ್ವಸ್ಥತೆಗಾಗಿ; ಸೇವೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al