Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.02.2024 (Kids Special)
Share:

By Village Missionary Movement

Sunday, 25-Feb-2024

ಧೈನಂದಿನ ಧ್ಯಾನ(Kannada) – 25.02.2024 (Kids Special)

 

ವಾರ್ಷಿಕೋತ್ಸವ

 

"ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ" - ಫಿಲಿಪ್ಪಿ 2:5

 

ಪುಟ್ಟ ಪುಟ್ಟ ಗುಬ್ಬಚ್ಚಿಗಳು ಬಣ್ಣಬಣ್ಣದ ಗರಿಗಳನ್ನು ಪ್ರದರ್ಶಿಸಿ ಹಾರಾಡುವಂತೆ, ಮಕ್ಕಳು ಬಣ್ಣಬಣ್ಣದ ಬಟ್ಟೆಗಳನ್ನು ಧರಿಸಿ ತಲೆಯನ್ನು ಅಲಂಕರಿಸಿಕೊಂಡು ಸಂತೋಷದಿಂದ ನಡೆದುಬಂದರು. ಎಲ್ಲರೂ ಎಲ್ಲಿಗೆ ಬಂದರು ಎಂದು ತಾನೇ ಆಶ್ಚರ್ಯ ಪಡುತ್ತಿದ್ದೀರ. ಅದು ಬೇರೆಲ್ಲೂ ಅಲ್ಲ ಅವರು ಓದುತ್ತಿದ್ದ ಶಾಲೆಯ ಕಡೆಗೆ ಬಂದರು. ಅಂದು ಅವರ ಶಾಲೆಯಲ್ಲಿ ವಾರ್ಷಿಕೋತ್ಸವ. ಏನು ಪುಟಾಣಿಗಳೇ! ನಿಮ್ಮ ಶಾಲೆಯ ವಾರ್ಷಿಕ ಸಮಾರಂಭಕ್ಕೆ ನೀವು ಸಹ ಹೀಗೆ ತಾನೇ ಹೋಗುತ್ತೀರ. ಅಲ್ಲಿ ಕೆಲಸ ಮಾಡುವ ಶಿಕ್ಷಕರೂ ಸಹ ಸಾಕಷ್ಟು ಉಡುಗೊರೆಗಳೊಂದಿಗೆ ಅಲ್ಲಿ ಕಾಣಿಸಿಕೊಂಡರು. ಮತ್ತು ಉದ್ಯಮಿ ಚಾರ್ಲ್ಸ್ ಅಂಕಲ್ ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಚಾರ್ಲ್ಸ್ ಅಂಕಲ್ ಸಮಾರಂಭವನ್ನು ಪ್ರಾರಂಭಿಸಿದರು. ಅವರು ಮಾತನಾಡುವಾಗ ಹಲವು ವಿಷಯಗಳ ಬಗ್ಗೆ ಮಾತನಾಡಿದರು. ವಿಶೇಷವಾಗಿ ವಿದ್ಯಾರ್ಥಿಗಳು ಬಡವರು, ಶ್ರೀಮಂತರು, ಮೇಲು-ಕೀಳು, ಜಾತಿ, ಧರ್ಮ ಎಂಬ ಭೇದಭಾವ ಮಾಡಬಾರದು ಎಂದು ಹೇಳಿ ಭಾಷಣ ಮುಗಿಸಿದರು. ಎಲ್ಲರೂ ಚಪ್ಪಾಳೆ ತಟ್ಟಿದರು.

 

ಕಲಾ ಪ್ರದರ್ಶನಗಳು ಪ್ರಾರಂಭವಾದವು. ಅಂತಿಮವಾಗಿ ವಿದ್ಯಾರ್ಥಿಗಳು ಒಂದು ನಾಟಕವನ್ನು ಮಾಡಿ ತೋರಿಸಿದರು. ಇದರಲ್ಲಿ ಬ್ಯುಸಿನೆಸ್ ಮ್ಯಾನ್ ಚಾರ್ಲ್ಸ್ ಅಂಕಲ್ ಮಗನ ಬಟ್ಟೆಯನ್ನು ಅವರ ಮನೆಯಲ್ಲಿ ಕೆಲಸ ಮಾಡುವ ಕೆಲಸದವನ ಮಗ ಹಾಕಿಕೊಂಡು ತನ್ನನ್ನು ಶ್ರೀಮಂತನಂತೆಯೂ, ಕೆಲಸದವನ ಮಗನ ಬಟ್ಟೆಯನ್ನು ಚಾರ್ಲ್ಸ್ ಅಂಕಲ್ ಮಗ ಹಾಕಿಕೊಂಡು ಬಡವನಂತೆಯೂ ನಟಿಸಿದರು. ಇದನ್ನು ನೋಡುತ್ತಿದ್ದ ಚಾರ್ಲ್ಸ್ ಗೆ ಕಹಿ, ದ್ವೇಷ, ಕೋಪ ಉದ್ವೇಗ ಉಂಟಾಯಿತು ದಿಢೀರನೆ ಕುರ್ಚಿಯಿಂದ ಎದ್ದರು.ಚಾರ್ಲ್ಸ್ ಸಿಟ್ಟಿನಿಂದ ಎದ್ದು ಬರುತ್ತಿದ್ದುದನ್ನು ಕಂಡು ಕೆಲವು ವಿದ್ಯಾರ್ಥಿಗಳು “ಅಂಕಲ್, ಎಲ್ಲರನ್ನು ಸಮಾನವಾಗಿ ಕಾಣಬೇಕು ಎಂದು ಈಗತಾನೇ ಹೇಳುದ್ರಿ?” ಎಂದು ಕೇಳಿದರು. ಅವರು ಹೇಳಿದ್ದನ್ನು ಕೇಳಿದ ಚಾರ್ಲ್ಸ್ ಮನಃಸಾಕ್ಷಿ ಚುಚ್ಚಲ್ಪಟ್ಟು ತನ್ನ ತಪ್ಪನ್ನು ಅರಿತುಕೊಂಡು ಎಲ್ಲರಲ್ಲಿ ಕ್ಷಮೆಯಾಚಿಸಿದರು ಮತ್ತು ಕೆಲಸದವನ ಮಗನನ್ನು ತನ್ನ ಸ್ವಂತ ಮಗನಂತೆ ಪ್ರೀತಿಸಲು ಪ್ರಾರಂಭಿಸಿದರು.

 

ಪುಟ್ಟ ತಮ್ಮ, ತಂಗಿ ನೀವು ಸಹ ಮಾತನಾಡುವುದು ಒಂದು, ಮಾಡುವುದು ಇನ್ನೊಂದು ಎಂಬಂತೆ ಇರಬಾರದು. ಇಲ್ಲಿಯವರೆಗೆ ನೀವು ಹೇಗೆ ಬೇಕಾದರೂ ಇದ್ದಿರಬಹುದು. ಮತ್ತೊಬ್ಬರನ್ನು ಅಲ್ಪವಾಗಿ ಕೂಡ ಭಾವಿಸಿರಬಹುದು. ಇದೆಲ್ಲವನ್ನೂ ಇಂದೇ ಯೇಸಪ್ಪನ ಬಳಿ ಹರಕೆ ಮಾಡಿ ಇನ್ನು ಮುಂದೆ ಯೇಸಪ್ಪನಿಗೆ ಇಷ್ಟವಾದ ಮಗುವಾಗಿ ಜೀವಿಸಬೇಕು. ಓಕೆ ನಾ ಮುದ್ದು ಪುಟಾಣಿಗಳೇ! Bye, Bye!!

- Mrs. ಸಾರಾಳ್ ಸುಭಾಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al