Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.04.2021
Share:

By Village Missionary Movement

Wednesday, 07-Apr-2021

ಧೈನಂದಿನ ಧ್ಯಾನ(Kannada) – 07.04.2021

ದೊಡ್ಡ ಅಪಾಯ

"ಕಷ್ಟಕಾಲದಲ್ಲಿ ನನಗೆ ಮೊರೆಯಿಡಿರಿ; ಬಿಡಿಸುವೆನು; ಆಗ ನನ್ನನ್ನು ಕೊಂಡಾಡುವಿರಿ." - ಕೀರ್ತನೆಗಳು 50:15

ಕಳೆದ ವರ್ಷದಲ್ಲಿ ದೊಡ್ಡ ಅಪಾಯಕಾರಿಯಾದ ಸಾಂಕ್ರಾಮಿಕ ರೋಗವಾದ ಕೊರೋನಾ ಲೋಕದಲ್ಲಿರುವ ಹಲವು ದೇಶಗಳಲ್ಲಿ ಇರುವ ಜನರ ಮೇಲೆ ಬಂದದ್ದನ್ನು ನಾವು ನೋಡಲು ಸಾಧ್ಯವಾಯಿತು. ಎಲ್ಲಿ ನೋಡಿದರೂ ಮರಣದ ವಾರ್ತೆಗಳು ಒಂದು ಕಡೆ! ಮರಣ ಭಯ ಇನ್ನೊಂದು ಕಡೆ! ಕೊರೋನಾ ಆಪತ್ತು ಬರದೇ ಇರುವಂತೆ ಅನೇಕ ದೇಶಗಳಲ್ಲಿ ಅನೇಕರು ದೇವರನ್ನು ನೋಡಿ ಮೊಣಕಾಲೂರಿ ಪ್ರಾರ್ಥಿಸಿದ್ದನ್ನು ನೋಡಿರುತ್ತೀರ. ಯಾವಾಗಲೂ ಒಬ್ಬ ಮನುಷ್ಯನಿಗೆ ಶಾರೀರಿಕವಾಗಿ ಘೋರವಾದ ವ್ಯಾಧಿ, ವಿಪತ್ತುಗಳು ಅಥವಾ ಲೋಕಾನುಸಾರವಾದ ಸಾಲಗಳು, ಸುನಾಮಿಯಂತಹ ಹಲವು ಆಪತ್ತುಗಳು ಬರುವಾಗ ದೇವರನ್ನು ನೋಡಿ ಕರೆಯುವುದು ಅಭ್ಯಾಸ. ಆದರೆ ಇವೆಲ್ಲವುಗಳಿಗಿಂತ ದೊಡ್ಡ ಆಪತ್ತು ಲೋಕದಲ್ಲಿ ಇದೆ ಅದುವೇ ಪಾಪ. ಇದಕ್ಕೆ ತಪ್ಪಿಸಿಕೊಂಡು ಜೀವಿಸುವುದೇ ಮುಖ್ಯವಾದದ್ದು, ಏಕೆಂದರೆ ಪಾಪವೆ ಈ ಲೋಕದಲ್ಲಿ ಪರಿಶುದ್ಧವಾಗಿ ಜೀವಿಸುವುದಕ್ಕೆ, ಮರಣದ ನಂತರ ನಿತ್ಯವಾದ ಪರಲೋಕ ಜೀವನಕ್ಕೆ ಹೋಗಲು ತಡೆಯಾಗಿ ಇರುವಂತಹ ಬಹುದೊಡ್ಡ ಆಪತ್ತು. ಈ ಅಪಾಯದಿಂದ ನಮ್ಮನ್ನು ಬಿಡಿಸಲು ಮೊದಲು ದೇವರನ್ನು ನೋಡಿ ಕರೆಯಬೇಕು.

ದಾವೀದನು ಈ ಲೋಕದಲ್ಲಿ ವಿರೋಧಿಗಳಿಂದ ಹಲವು ವಿಧವಾಗಿ ಆಪತ್ತುಗಳು ಬರುವಾಗೆಲ್ಲಾ ದೇವರನ್ನು ನೋಡಿ ಕರೆಯುತ್ತಿದ್ದರು. ಆದರೆ ಬತ್ಷೆಬೆಯ ಬಳಿ ಪಾಪ ಮಾಡಲು ಬಂದ ಸಂದರ್ಭವು ಆಪತ್ತಾಗಿ ಅನಿಸಲಿಲ್ಲ. ಅದರಂತೆ ಸಂಸೋನನು ಕತ್ತೆಯ ದವಡೆಯ ಎಲುಬನ್ನು ತೆಗೆದುಕೊಂಡು ಸಾವಿರ ಜನರನ್ನು ಸಾಯಿಸಿ ಹೊರಳಿಸಿ ಬಿಟ್ಟು, ನೀರಿನ ದಾಹದೊಂದಿಗೆ ಸತ್ತು ಹೋಗುತ್ತೇನೆ ಎಂದು ದೇವರನ್ನು ನೋಡಿ ಕರೆಯುತ್ತಿದ್ದಾರೆ. ಅದರಂತೆ ಕಣ್ಣುಗಳು ಕುರುಡಾಗಿ ಫಿಲಿಷ್ಟಿಯರ ಕೈಯಿಂದ ಸತ್ತು ಹೋಗುತ್ತೇನೆ ಎಂದು ನೆನೆಸಿ ದೇವರನ್ನು ನೋಡಿ ಕರೆಯುತ್ತಿದ್ದಾರೆ. ಆದರೆ ವ್ಯಭಿಚಾರ ಸ್ತ್ರೀಯ ನಿಮಿತ್ತವಾಗಿ ಪಾಪ ಬರುವಾಗ ತನ್ನನ್ನು ಈ ಪಾಪದಿಂದ ಕಾಪಾಡುವಂತೆ ದೇವರನ್ನು ನೋಡಿ ಕರೆಯಲಿಲ್ಲ.

ಇಂದು ಈ ಲೋಕದಲ್ಲಿ ಸೋಶಿಯಲ್ ಮೀಡಿಯಾ ಮೂಲಕ ವಾಟ್ಸಾಪ್, ಫೇಸ್ಬುಕ್, ಇನ್ಸ್ಟ್ರಾಗ್ರಾಮ್, ಆನ್ಲೈನ್ ಗೇಮ್, ಕೆಟ್ಟ ಸ್ನೇಹಿತರು ಎಂದು ಹಲವು ವಿಧವಾಗಿ ಪಾಪ ನಮ್ಮ ಹತ್ತಿರ ಬರುತ್ತಿದೆ. ಹೀಗೆ ಬಹುದೊಡ್ಡ ಅಪಾಯಕರವಾದ ಈ ಪಾಪ ನಮ್ಮನ್ನು ಮುಟ್ಟುವಾಗ ನಮ್ಮಲ್ಲಿ ಎಷ್ಟು ಜನ ಪಾಪದಿಂದ ನಮ್ಮನ್ನು ಕಾಪಾಡುವಂತೆ ದೇವರನ್ನು ನೋಡಿ ಕರೆಯುತ್ತಿದ್ದೇವೆ? ಇಂತಹ ಪಾಪದಲ್ಲಿ ಬಿದ್ದ ಅನೇಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದೇವರ ವಾಕ್ಯವು ಹೇಳುತ್ತದೆ, ಯಾಕೋಬ 1-15 ರಲ್ಲಿ "ಆಮೇಲೆ ಆಶೆಯು ಬಸುರಾಗಿ ಪಾಪವನ್ನು ಹೆರುತ್ತದೆ; ಪಾಪವು ತುಂಬಾ ಬೆಳೆದು ಮರಣವನ್ನು ಹಡೆಯುತ್ತದೆ."ಆದ್ದರಿಂದ ಪಾಪವೆಂಬ ದೊಡ್ಡ ಅಪಾಯವು ನಮ್ಮನ್ನು ಸಮೀಪಿಸುವಾಗಲೇ ದೇವರಾದ ಯೇಸುಕ್ರಿಸ್ತನನ್ನು ನೋಡಿ ಅನುದಿನವು ಕರೆಯೋಣ. ಅವರು ನಮ್ಮನ್ನು ಖಂಡಿತವಾಗಿ ಬಿಡಿಸುತ್ತಾರೆ.
-    P.V.ವಿಲಿಯಮ್ಸ್

ಪ್ರಾರ್ಥನಾ ಅಂಶ:-
ದೇಶವನ್ನು ಸ್ವತಂತ್ರಿಸುವವರು ಎಂಬ ತರಬೇತಿಯ ಕೂಟದಲ್ಲಿ ದೇವರ ಸಂದೇಶಗಳನ್ನು ಕೊಡುವ ಸೇವಕರನ್ನು ದೇವರು ಬಲವಾಗಿ ಎತ್ತಿ ಉಪಯೋಗಿಸುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş