By Village Missionary Movement
Thursday, 22-Feb-2024ಧೈನಂದಿನ ಧ್ಯಾನ(Kannada) – 22.02.2024
ಧೈರ್ಯವಾಗಿ ಕಾರ್ಯನಿರ್ವಹಿಸೋಣ
"ಆ ಸತ್ಯಾರ್ಥದ ನಿವಿುತ್ತವೇ ರಾಯಭಾರಿಯಾದ ನಾನು ಬೇಡಿಯಲ್ಲಿ ಬಿದ್ದಿದ್ದೇನಲ್ಲಾ, ಅದರ ವಿಷಯದಲ್ಲಿ ಧೈರ್ಯವಾಗಿ ಮಾತಾಡುವ ಹಂಗಿನಲ್ಲಿದ್ದೇನೆ; ಹಾಗೆಯೇ ನಾನು ಮಾತಾಡಬೇಕೆಂದು ನನಗೋಸ್ಕರ ಬೇಡಿಕೊಳ್ಳಿರಿ" - ಎಫೆಸ 6:20
1973 ರಲ್ಲಿ, ಉಗಾಂಡಾವನ್ನು ಇದಿ ಅಮೀನ್ ಎಂಬ ಅಧ್ಯಕ್ಷನು ಆಳ್ವಿಕೆ ನಡೆಸಿದನು. ಅವನು ಕ್ರೈಸ್ತರನ್ನು ಗುಂಡು ಹಾರಿಸಿ ಕೊಲ್ಲುತ್ತಿದ್ದನು. ಆ ಸಮಯದಲ್ಲಿ, ಸೋಫ್ ಸೆಂಬಾಸ್ಕಿ ಎಂಬ ಬೋಧಕರು ಉಪದೇಶಿಸುತ್ತಿದ್ದರು. ಒಂದು ದಿನ ಪೋಲೀಸರು ಬಂದೂಕುಗಳೊಂದಿಗೆ ಬಂದು ಅವರನ್ನು ಬಂದೂಕಿನ ತುದಿಯೊಂದಿಗೆ ಅವರನ್ನು ಎಳೆದುಕೊಂಡು ಹೋಗಿ ನಾವು ನಿನ್ನನ್ನು ಕೊಲ್ಲಲಿದ್ದೇವೆ. ನಿನ್ನ ಕೊನೆಯ ಆಸೆಯನ್ನು ಹೇಳು ಎಂದರು. ಬೋಧಕರು ನಡುಗುವ ಧ್ವನಿಯಿಂದ ನಿಮಗಾಗಿ ಪ್ರಾರ್ಥಿಸಬೇಕು. ನೀವು ಮಾಡಲು ಹೊರಟಿರುವ ಈ ಕಾರ್ಯಕ್ಕಾಗಿ ದೇವರು ಕೃಪೆತೋರಿ ನಿಮ್ಮನ್ನು ಕ್ಷಮಿಸಬೇಕು ಎಂದರು. ನಾಯಕ ಅಲ್ಲಿ ನೆರೆದಿದ್ದ ಜನರನ್ನು ನೋಡಿದನು. ಅನೇಕ ಮಹಿಳೆಯರು ಅವನಿಂದ ವಿಧವೆಯರಾಗಿ ನಿಂತಿದ್ದರು. ಅವರನ್ನು ನೋಡಿಬಿಟ್ಟು ಬೋಧಕರ ಬಳಿ ಇವರು ಇಷ್ಟು ಸಂತೋಷವಾಗಿರಲು ಕಾರಣವೇನು ಎಂದನು. ಅದಕ್ಕೆ ಬೋಧಕರು ಸಾವು ನಮಗೆ ಅಂತ್ಯವಲ್ಲ. ಸಾವು ನಿತ್ಯಜೀವದ ಆರಂಭ ಎಂದರು. ಬೋಧಕರು ಪ್ರಾರ್ಥಿಸಿದರು. ಆ ದಿನ ನಾಯಕನು ದೇವರನ್ನು ಅಂಗೀಕರಿಸಿದನು.
ಸಿರಿಯಾದ ಸೇನಾಪತಿಯ ಮನೆಗೆ ಗುಲಾಮಳಾಗಿ ಕರೆದೊಯ್ಯಲ್ಪಟ್ಟ ಕೆಲಸ ಮಾಡುವ ಗುಲಾಮ ಹುಡುಗಿ, "ತಾನೊಂದು ಪುಟ್ಟ ಗುಲಾಮ ಹುಡುಗಿ" ಎಂದೂ ನೋಡದೇ ನಾಮಾನನ ಕುಷ್ಠರೋಗವು ನೀಗಲು ಒಂದು ಮಾರ್ಗ ಹೇಳಿದಳು. ಅದರಿಂದ ಅವನೂ ಗುಣಹೊಂದಿದ. ಸಿರಿಯನ್ನರು ನಾಮಾನನ ಮೂಲಕ ದೇವರ ಮಹಿಮೆಯನ್ನು ಕಂಡರು. ಆ ದಿನ ನಾಮಾನನು ದೇವರನ್ನು ಅಂಗೀಕರಿಸಿದನು. ಪೌಲನು ಸಹ ಸೆರೆಮನೆಯಲ್ಲಿ, ಬೀದಿಗಳಲ್ಲಿ, ಮನೆಗಳಲ್ಲಿ ಮತ್ತು ನ್ಯಾಯಾಲಯಗಳಲ್ಲಿ ಮತ್ತು ರಾಜರ ಮುಂದೆ ಧೈರ್ಯದಿಂದ ಮಾತನಾಡಿದರು. ಆದ್ದರಿಂದಲೇ ಇಷ್ಟೊಂದು ಸಭೆಗಳನ್ನು ರಚಿಸಲು ಸಾಧ್ಯವಾಯಿತು. ತನ್ನ ಪ್ರಾಣವನ್ನೂ ಸಹ ಕ್ರಿಸ್ತನಿಗೆ ಅರ್ಪಿಸಿದರು. ಹೌದು, ನಾವು ನಮ್ಮನ್ನು ಸಂಪೂರ್ಣವಾಗಿ ಒಪ್ಪಿಸಿಕೊಟ್ಟಾಗ ದೇವರು ನಮಗೆ ಧೈರ್ಯವನ್ನು ಕೊಟ್ಟುಬಿಡುತ್ತಾರೆ. ಧೈರ್ಯವಾಗಿ ಬಿತ್ತಿರಿ ಧೈರ್ಯವಾಗಿ ಕೊಯ್ಯಿರಿ. ಆದರೆ ಇತ್ತೀಚಿನ ದಿನಗಳಲ್ಲಿ ಕ್ರಿಸ್ತನ ಬಗ್ಗೆ ಮೆಚ್ಚುಗೆ, ಉತ್ಸಾಹ ಮತ್ತು ಧೈರ್ಯವು ಜನರಲ್ಲಿ ಕಡಿಮೆಯಾಗಿದೆ.
ಸಣ್ಣಪುಟ್ಟ ಪ್ರತಿರೋಧ ಬಂದರೂ ಹೆದರಿ ಪ್ರಾಣಹೋಗಿಬಿಡುತ್ತದೇನೋ ಎಂಬಂತೆ ಹಿಂದೇಟು ಹಾಕುತ್ತೇವೆ. ನಾವು ಹಿಂಜರಿಕೆಯಿಲ್ಲದೆ ಮಾತನಾಡುವಾಗ ಮತ್ತು ಕಾರ್ಯಮಾಡುವಾಗ, ದೇವರು ನಮ್ಮೊಳಗಿಂದ ಕ್ರಿಯೆಮಾಡುತ್ತಾರೆ. ದೇಹವನ್ನು ಮಾತ್ರ ಕೊಲ್ಲುವವರಿಗೆ ನೀವು ಭಯಪಡಬೇಡಿರಿ. ಆತ್ಮವನ್ನು ಮತ್ತು ದೇಹವನ್ನು ನರಕದಲ್ಲಿ ನಾಶಮಾಡಲು ಶಕ್ತನಾದಾತನಿಗೇ ಭಯಪಡಿರಿ ಎಂದು ಯೇಸು ಹೇಳಿದ್ದಾರೆ. ಧೈರ್ಯವಿಲ್ಲದ ಮನುಷ್ಯ ಮಂದ ಚಾಕು ಇದ್ದಂತೆ. ಅವನು ಏನೂ ಮಾಡಲಾರನು, ಅವನಿಂದ ಪ್ರಯೋಜನವೂ ಇಲ್ಲ. ಧೈರ್ಯ ಮತ್ತು ಉತ್ಸಾಹವುಳ್ಳವರ ಮೂಲಕವೇ ದೇವರು ತನ್ನ ಯೋಜನೆಯನ್ನು ನೆರವೇರಿಸಿ ಮುಗಿಸುತ್ತಾರೆ.
- Bro. ಗುಣಶೀಲನ್
ಪ್ರಾರ್ಥನಾ ಅಂಶ:
ಹಸ್ತಪ್ರತಿ ಸೇವೆಗಳ ಮೂಲಕ ಭೇಟಿಯಾದವರು ದೇವರನ್ನು ಅರಿತುಕೊಳ್ಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482