By Village Missionary Movement
Tuesday, 20-Feb-2024ಧೈನಂದಿನ ಧ್ಯಾನ(Kannada) – 20.02.2024
ONLINE - OFFLINE
"…ಕೊಂಬೆಯು ಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೆ ತಾನೇ ಫಲಕೊಡಲಾರದೋ ಹಾಗೆಯೇ ನೀವು ನನ್ನಲ್ಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ" - ಯೋಹಾನ 15:4
ನಾವು ವಾಸಿಸುವ ಪ್ರಪಂಚವು ತುಂಬಾ ವೇಗವಾಗಿ ಚಲಿಸುತ್ತಿದೆ. ಈ ಪರಿಸ್ಥಿತಿಯಲ್ಲಿ, ಮೊಬೈಲ್ ಫೋನ್ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಬಹಳ ಮುಖ್ಯವಾದ ವಸ್ತುವಾಗಿ ಮಾರ್ಪಟ್ಟಿದೆ. ಮನುಷ್ಯನಿಗಾಗಿ ಕಂಡು ಹಿಡಿಯಲ್ಪಟ್ಟ ಮೊಬೈಲ್ ಫೋನ್ ಈಗ ಮನುಷ್ಯನನ್ನೇ ಆಳುತ್ತಿದೆ. ಅದರಲ್ಲಿ ಇಂಟರ್ನೆಟ್ ಸಂಪರ್ಕ ಬಹಳ ಮುಖ್ಯ. ನೆಟ್ ಸಂಪರ್ಕವಿದ್ದರೆ ಮಾತ್ರವೇ ವಿವಿಧ ಮಾಹಿತಿಯನ್ನು ತಿಳಿಯಲು ಅದನ್ನು ಬಳಸಬಹುದು. ಅಂದರೆ ಅದು ಆನ್‌ಲೈನ್ ನಲ್ಲಿ ಇರಬೇಕು. ಇಲ್ಲದಿದ್ದರೆ ಅದು ಒಂದು ಮೂಲೆಯಲ್ಲಿ ಬಿದ್ದಿರುತ್ತದೆ, ಅದಕ್ಕೆ ಯಾವ ಬೆಲೆಯೂ ಇಲ್ಲ.
ಅದೇ ರೀತಿ, ದೇವರನ್ನು ತಿಳಿದಿರುವವರು ಯಾವಾಗಲೂ ದೇವರೊಂದಿಗೆ ಆನ್‌ಲೈನ್ ಸಂಬಂಧವನ್ನು ಹೊಂದಿರಬೇಕು. ಬೈಬಲ್‌ನಲ್ಲಿ ದೇವರೊಂದಿಗೆ ಆನ್‌ಲೈನ್‌ನಲ್ಲಿರುವ ಅನೇಕ ಜನರಿದ್ದಾರೆ.
1. ಯೋಸೇಫನು ಯಾವಾಗಲೂ ದೇವರೊಂದಿಗೆ ಸಂಪರ್ಕದಲ್ಲಿ ಇದ್ದದರಿಂದ ಪಾಪದಿಂದ ಓಡಿಹೋಗಲು ಸಾಧ್ಯವಾಯಿತು.
2. ಯೆಹೋಶುವನು ದೇವರೊಂದಿಗೆ Online ನಲ್ಲಿ ಇದ್ದುದರಿಂದ ಇಸ್ರಾಯೇಲ್ ದೇಶಕ್ಕೆ ನಾಯಕನಾಗಿ ಮಾರ್ಪಟ್ಟನು.
3. ಎಲೀಯ ದೇವರೊಂದಿಗೆ Online ನಲ್ಲಿ ಇದ್ದುದರಿಂದ ಧೈರ್ಯದಿಂದ ಸವಾಲು ಹಾಕಲು ಸಾಧ್ಯವಾಯಿತು.
ಅದೇ ರೀತಿ ಇಂದಿಗೂ ಅನೇಕ ದೇವಮಾನವರನ್ನು ಕಾಣಬಹುದು. ದೇವರ ಪ್ರಸನ್ನತೆಯಲ್ಲಿ, ಯಾವಾಗಲೂ ತನ್ನೊಂದಿಗೆ ಐಕ್ಯವಾಗಿರುವವರನ್ನು ದೇವರು ಉಪಯೋಗಿಸುತ್ತಲೇ ಇದ್ದಾರೆ. ಬಳ್ಳಿ ಗಿಡದಲ್ಲಿ ನೆಲೆಗೊಂಡಿರದಿದ್ದರೆ ತಾನಾಗಿಯೇ ಫಲಕೊಡಲು ಸಾಧ್ಯವಿಲ್ಲ. ಅದು ಒಣಗಿ ಬೆಂಕಿಗೆ ಹಾಕಲ್ಪಡುತ್ತದೆ. ಇದರಿಂದ ಯಾರಿಗೂ ಉಪಯೋಗವಾಗುವುದಿಲ್ಲ. ನಾವು ದೇವರೊಂದಿಗೆ ನೆಲೆಗೊಂಡಿದ್ದರೆ ಮಾತ್ರವೇ ಹೆಚ್ಚು ಫಲವನ್ನು ನೀಡಲು ಸಾಧ್ಯ; ದೇವರು ನಮ್ಮನ್ನು ಉಪಯೋಗಿಸಲೂ ಸಾಧ್ಯ. ದೇವರೊಂದಿಗಿನ ನಮ್ಮ ಸಂಬಂಧವು ಸರಿಯಾಗಿಲ್ಲದಿದ್ದರೆ, ನಾವು ನಿಷ್ಪ್ರಯೋಜಕರಾಗುತ್ತೇವೆ ಮತ್ತು ನರಕದ ಬೆಂಕಿಗೆ ತಳ್ಳಲ್ಪಡುತ್ತೇವೆ.
ಪ್ರಿಯರೇ! ಇಂದು ನೀವು ಯೋಚಿಸಿ. ದೇವರೊಂದಿಗಿನ ನಿಮ್ಮ ಸಂಬಂಧವು Offline ನಲ್ಲಿ ಇದೆಯೇ? Online ನಲ್ಲಿ ಇದೆಯೇ? ನಾವು Online ನಲ್ಲಿ ಇದ್ದೇವೆ ಎಂಬುದಕ್ಕೆ ಕೆಲವು ಚಿಹ್ನೆಗಳು ಇವೆ. ದೇವರಿಗೆ ಭಯಪಡುವ ಭಯವಿರುತ್ತದೆ. ಅವರು ನನ್ನನ್ನು ನೋಡುತ್ತಲೇ ಇದ್ದಾರೆ ಎಂಬ ಭಾವನೆಯು ಪಾಪದಿಂದ ದೂರ ಸರಿಯುವಂತೆ ಮಾಡುತ್ತದೆ. Online ನಲ್ಲಿದ್ದರೆ, ಅರಿವಿಲ್ಲದ ಗಟ್ಟಿ ಹೃದಯ, ನಾನು ಮಾಡುತ್ತಿರುವುದು ಸರಿ ಎಂಬ ಆಲೋಚನೆ ಮೇಲುಗೈ ಸಾಧಿಸುತ್ತದೆ. ನಮ್ಮನ್ನು ನಾವೇ ಪರೀಕ್ಷಿಸಿ ಸರಿಪಡಿಸಿಕೊಳ್ಳೋಣ. ದೇವರು ನಿಮ್ಮನ್ನು ಉಪಯೋಗಿಸಿ ಉಪಯುಕ್ತವಾಗಿ ಬದುಕುವಂತೆ ಮಾಡುತ್ತಾರೆ.
- Y. ಪೌಲ್ ರಾಜ್
ಪ್ರಾರ್ಥನಾ ಅಂಶ:
ಉತ್ತರ ರಾಜ್ಯದಲ್ಲಿ 500 ಮಿಷನರಿಗಳು ಎಬ್ಬಿಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482