Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.02.2024
Share:

By Village Missionary Movement

Saturday, 17-Feb-2024

ಧೈನಂದಿನ ಧ್ಯಾನ(Kannada) – 17.02.2024

 

ಕೂಗು 

 

"ಯಾಕಂದರೆ ಅವನು ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು" - ಕೀರ್ತನೆ 72:12

 

ತಪ್ಪಿ ಹಳ್ಳಕ್ಕೆ ಬಿದ್ದ ಒಬ್ಬರು ತನ್ನೊಳಗೆ ಪ್ರಲಾಪಿಸುತ್ತಾ ಅಳುತ್ತಿದ್ದರೆ ಅವರಿಗೆ ಯಾವ ಸಹಾಯವೂ ಸಿಗುವುದಿಲ್ಲ. ಆದರೆ ಈ ಹಳ್ಳದಿಂದ ತನ್ನನ್ನು ಕಾಪಾಡುವಂತೆ ಸ್ವರವೆತ್ತಿ ಕೂಗಿಕೊಂಡರೆ, ಖಂಡಿತವಾಗಿಯೂ ಯಾರಾದರೊಬ್ಬರು ಅವರ ಧ್ವನಿಯನ್ನು ಕೇಳಿ ಅವರಿಗೆ ಸಹಾಯ ಮಾಡುತ್ತಾರೆ. ಹಳ್ಳದಿಂದ ಮೇಲೆತ್ತುತ್ತಾರೆ. ಅಳುವ ಮಕ್ಕಳಿಗೇನೆ ಆಹಾರ ಸಿಗುತ್ತದೆ ಎಂಬ ಗಾದೆಯೂ ಇದೆ.

 

ಹೌದು, ಯೇಸು ಕ್ರಿಸ್ತನು ಈ ಭೂಮಿಯಲ್ಲಿ ಸಂಚರಿಸುತ್ತಿದ್ದ ದಿನಗಳಲ್ಲಿ ಬಾರ್ತಿಮಾಯನೆಂಬ ಕುರುಡನು ಭಿಕ್ಷೆ ಬೇಡುತ್ತಿದ್ದರು. ಆ ದಾರಿಯಲ್ಲಿ ಯೇಸು ಬರುತ್ತಿದ್ದಾರೆಂದು ತಿಳಿದು ಜನಸಮೂಹದ ಶಬ್ದಕ್ಕಿಂತ ಜೋರಾಗಿ ಕೂಗುತ್ತಾರೆ. ತಕ್ಷಣ ಯೇಸು ನಿಂತು ದೃಷ್ಟಿ ಕೊಟ್ಟರು. ಅಂತೆಯೇ, ನಮಗೆ ಏನೇ ಅಗತ್ಯವಾದರೂ ನಾವು ಆತನನ್ನು ನೋಡಿ ಕೂಗಿಕೊಳ್ಳುವಾಗ ದೇವರು ಯಾವುದೇ ಭೇದಭಾವವಿಲ್ಲದೆ ನಮಗೆ ಸಹಾಯ ಮಾಡುತ್ತಾರೆ. ಶತಾಧಿಪತಿ, ಸಭಾಮಂದಿರದ ಅಧಿಪತಿ ಇವರ ಕೂಗಿಗೂ ಪ್ರತ್ಯುತ್ತರ ಕೊಟ್ಟರು. ಕುಷ್ಠರೋಗಿಗಳು ಕರೆದಾಗಲೂ ಸಹ ಉತ್ತರಿಸಿದರು.

 

ನಮ್ಮ ದೇವರು ಆತನನ್ನು ನೋಡಿ ಕರೆಯುವ ಎಲ್ಲರಿಗೂ ಯಥಾರ್ಥವಾಗಿ ಮೊರೆಯಿಡುವ ಎಲ್ಲರಿಗೂ, . . . ಹತ್ತಿರವಾಗಿಯೇ ಇದ್ದಾರೆ ಎಂದು ಕೀರ್ತನೆ 145:18 ರಲ್ಲಿ ಓದುತ್ತೇವೆ. ಅಲ್ಲದೆ (ತನ್ನನ್ನು). . . ನೋಡಿ ಮೊರೆಯಿಡುವವರೆಲ್ಲರಲ್ಲಿ ಕೃಪಾಪೂರ್ಣನೂ ಆಗಿದ್ದೀಯಲ್ಲಾ. (ಕೀರ್ತನೆ 86:5) ಎಂದು ನೋಡುತ್ತೇವೆ. ನಾವು ನಿಜವಾಗಿಯೂ ಪೂರ್ಣ ಹೃದಯದಿಂದ ಕರೆದರೆ, ಕಿವಿಗೊಟ್ಟು ಉತ್ತರಿಸುತ್ತಾರೆ. ಯಾಕಂದರೆ ಆತನು ಕರೆಯುವವರ ಮುಖವನ್ನು ನೋಡುವವರಲ್ಲ ಕೂಗುವವರ ಹೃದಯವನ್ನು ನೋಡುತ್ತಾರೆ. ನಮಗೆ ಕಷ್ಟ, ನಷ್ಟ, ಸೋಲುಗಳು ಮತ್ತು ಸಂಕಟಗಳು ಸಂಭವಿಸಿದರೂ ಅವೆಲ್ಲವುಗಳಿಂದ ನಮ್ಮನ್ನು ಬಿಡಿಸಲು ನಮ್ಮ ದೇವರು ಸಮರ್ಥರಾಗಿದ್ದಾರೆ.

 

ಇದನ್ನು ಓದುತ್ತಿರುವ ಪ್ರಿಯರೇ! ನೀವು ನಿಮ್ಮ ಪಾಡುಗಳು ಮತ್ತು ತೊಂದರೆಗಳಲ್ಲಿ ಆತನಿಗೆ ಮೊರೆಯಿಡಿರಿ; ಆತನು ನಿಮ್ಮನ್ನು ಬಿಡಿಸಿ ಕಾಪಾಡುತ್ತಾರೆ. ನೀವು ಹೇಗಿದ್ದರೂ ಬಿಡಿಸಲು ಶಕ್ತನು; ಅವರು ಪಕ್ಷಪಾತಿಯಲ್ಲ. ಮನುಷ್ಯರೇ ಪಕ್ಷಪಾತಿಗಳು. ಅವರು ಅಂತರಂಗವನ್ನು ನೋಡುವವರು. ನೀವು ಕೂಗಿಕೊಂಡರೆ ಮಾತ್ರವೇ ಅವರು ಬಂದು ಕಾರ್ಯಮಾಡುತ್ತಾರೆ. ಆದ್ದರಿಂದ ಅವರನ್ನು ನೋಡಿ ಕರೆದು ಬಿಡುಗಡೆ ಹೊಂದಿಕೊಳ್ಳಿರಿ. ಕರ್ತನು ನಿಮ್ಮನ್ನು ಆಶೀರ್ವದಿಸಲಿ.

- Mrs. ಗ್ಲಾಡಿಸ್ ಮುರಳಿ ಗಿದ್ಯೋನ್

 

ಪ್ರಾರ್ಥನಾ ಅಂಶ:

ಸಹ ಸೇವಕರನ್ನು ಉಜ್ಜೀವನದ ಅಸ್ತ್ರಗಳಾಗಿ ದೇವರು ಎತ್ತಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş