Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.02.2024
Share:

By Village Missionary Movement

Friday, 16-Feb-2024

ಧೈನಂದಿನ ಧ್ಯಾನ(Kannada) – 16.02.2024

 

ಪ್ರಯತ್ನದ ಫಲ

 

"ನೆಡುವವನೂ ನೀರು ಹೊಯ್ಯುವವನೂ ಒಂದೇ ಆಗಿದ್ದಾರೆ. ಆದರೂ ಪ್ರತಿಯೊಬ್ಬನಿಗೆ ಅವನವನ ಕಷ್ಟಕ್ಕೆ ತಕ್ಕಹಾಗೆ ಕೂಲಿಯು ದೊರೆಯುವದು" - 1 ಕೊರಿಂಥ. 3:8

 

ಒಬ್ಬ ಮಹಿಳೆ ಹೂವಿನ ಗಿಡಗಳನ್ನು ಬೆಳೆಸಲು ಬಹಳ ಆಸಕ್ತಿ ಹೊಂದಿದ್ದರು. ತಮ್ಮ ಮನೆಯ ತೋಟದಲ್ಲಿ ಅಪರೂಪದ ಹೂವಿನ ಗಿಡ ಬೆಳೆಸಿದ್ದರು. ಅದಕ್ಕೆ ದಿನವೂ ನೀರು ಹಾಯಿಸಿ ಚೆನ್ನಾಗಿ ನಿರ್ವಹಣೆ ಮಾಡುತ್ತಿದ್ದರು. ಹೂವಿನ ಗಿಡವು ವೇಗವಾಗಿ ಬೆಳೆದು ಗೋಡೆಯ ಮೇಲೆ ಬಳ್ಳಿಯಂತೆ ಹರಡಿತು. ಆ ಗಿಡದಲ್ಲಿ ಹೂವುಗಳು ಅರಳುತ್ತವೆ ಎಂದು ನಿರೀಕ್ಷಿಸಿದ್ದ ಮಹಿಳೆಗೆ ನಿರಾಸೆಯಾಯಿತು. ಆ ಗಿಡದಲ್ಲಿ ಯಾವ ಹೂವನ್ನೂ ಕಾಣಲಿಲ್ಲ ಮತ್ತು ಅವಳ ಪ್ರಯತ್ನಗಳು ವ್ಯರ್ಥವಾಯಿತು. ಒಂದು ದಿನ ಉದ್ಯಾನದ ಗೋಡೆಯ ಇನ್ನೊಂದು ಬದಿಯಲ್ಲಿ ವಾಸಿಸುವ ಇನ್ನೊಬ್ಬ ಮಹಿಳೆ ಗಿಡವನ್ನು ಹೊಗಳಿ ಮಾತಾಡಿದಳು. ಹೂವಿಲ್ಲದ ಆ ಗಿಡವನ್ನು ಯಾಕೆ ಹೀಗೆ ಹೊಗಳುತ್ತಿದ್ದೀಯ ಎಂದು ಗಿಡ ಬೆಳೆಸಿದ ಮಹಿಳೆ ಕೇಳಿದಳು. ಅದು ಅರಳಿಲ್ಲ ಎಂದು ಯಾರು ಹೇಳಿದ್ದು? ಗೋಡೆಯ ಇನ್ನೊಂದು ಬದಿಗೆ ಬಂದು ನೋಡು ಎಂದಳು ಪಕ್ಕದ ಮನೆಯ ಮಹಿಳೆ. ಇನ್ನೊಂದು ಕಡೆಯಲ್ಲಿ ಅರಳಿ ನಿಂತಿದ್ದ ಹೂಗಳ ಸೊಬಗನ್ನು ಕಂಡು ಮೈಮರೆತು ನಿಂತು “ನನ್ನ ಶ್ರಮ ವ್ಯರ್ಥವಾಗಿಲ್ಲ” ಎಂದು ಖುಷಿಯಿಂದ ಹೇಳಿದಳು.

 

ಅಂತೆಯೇ, ರೂತಳು ದೇವರಿಗಾಗಿ ಪ್ರಯಾಸಪಟ್ಟು ತನ್ನ ಜನಾಂಗವನ್ನು ಮತ್ತು ಜನರನ್ನು ಬಿಟ್ಟು ಬಂದಳು. ಆರಂಭದಲ್ಲಿ ಆಕೆಯ ನಿರ್ಧಾರ ಫಲಪ್ರದವಾಗದಂತೆ ಕಂಡಿರಬಹುದು. ಆದರೆ ಕೊನೆಯಲ್ಲಿ ಅವಳು ಯೇಸುಕ್ರಿಸ್ತನ ಮುತ್ತಜ್ಜಿಯಾಗುವ ಭಾಗ್ಯವನ್ನು ಪಡೆದಳು. ಬೇಥಾನ್ಯದ ಮರಿಯಳು ತಿಂಗಳುಗಟ್ಟಲೆ ಸೇರಿಸಿಟ್ಟಿದ್ದ ಹಣದಲ್ಲಿ ಬೆಲೆಬಾಳುವ ತೈಲವನ್ನು ಖರೀದಿಸಿ ಯೇಸುವಿನ ಪಾದಗಳಿಗೆ ಸುರಿದಳು. ಮಾನವ ದೃಷ್ಟಿಕೋನದಲ್ಲಿ ಇದು ವ್ಯರ್ಥವಾದ ಖರ್ಚಾಗಿತ್ತು. ಆದರೆ ಆ ಪ್ರಯತ್ನದ ಫಲವಾಗಿ ಇಂದು ಪ್ರಪಂಚದಾದ್ಯಂತ ಅವಳ ಕ್ರಿಯೆ ನೆನಪಾಗುತ್ತಿದೆ.

 

ಹೌದು, ಪ್ರಿಯರೇ! ದೇವರಿಗಾಗಿ ನೀವು ಮಾಡುವ ಪ್ರಯತ್ನಗಳು ನಿಮ್ಮ ದೃಷ್ಟಿಯಲ್ಲಿ ಫಲಪ್ರದವಾಗದಂತೆ ತೋರಬಹುದು. ಆದರೆ ನಿಮಗೆ ಗೊತ್ತಿಲ್ಲದ ರೀತಿಯಲ್ಲಿ ಅದು ಫಲಕೊಡುತ್ತಿರುತ್ತದೆ ಎಂಬುದನ್ನು ಮರೆತು ಹೋಗಬೇಡಿರಿ. ನಿರುತ್ಸಾಹಗೊಳ್ಳದೆ ಪೂರ್ಣ ಪ್ರಯತ್ನದಿಂದ ನಿಮ್ಮ ಕೆಲಸವನ್ನು ಮುಂದುವರಿಸಿ. ನಿಮ್ಮ ಎಲ್ಲಾ ಪ್ರಯತ್ನಗಳ ಫಲವನ್ನು ದೇವರೇ ನಿಮಗೆ ನೀಡಲು ಸಮರ್ಥನಾಗಿದ್ದಾನೆ. ಆಮೆನ್!

- Mrs. ಎಸ್ತರ್ ಮನೋಜ್ ಕುಮಾರ್

 

ಪ್ರಾರ್ಥನಾ ಅಂಶ:

ಉಜ್ಜೀವನಕ್ಕಾಗಿ ಪ್ರತಿದಿನ 12 ನಿಮಿಷಗಳ ಕಾಲ ಪ್ರಾರ್ಥಿಸುವ ಪ್ರಾರ್ಥನಾ ಪಾಲುದಾರರು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş