Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.02.2024
Share:

By Village Missionary Movement

Thursday, 15-Feb-2024

ಧೈನಂದಿನ ಧ್ಯಾನ(Kannada) – 15.02.2024

 

ಕೃತಜ್ಞತೆಯೊಂದಿಗೆ. . .

 

"…ಕೃತಜ್ಞತೆಯುಳ್ಳವರಾಗಿರ್ರಿ" - ಕೊಲೊ. 3:15

 

ಸರ್ಕಾರಿ ಸೇವೆಯಿಂದ ನಿವೃತ್ತರಾದ ವ್ಯಕ್ತಿಯೊಬ್ಬರು ವರ್ಷದ ಕೊನೆಯ ದಿನಗಳಲ್ಲಿ ದೇವರ ಪಾದದ ಬಳಿ ಕುಳಿತು ಆ ವರ್ಷದಲ್ಲಿ ನಡೆದ ಕಾರ್ಯಗಳನ್ನು ಯೋಚಿಸಿದರು. ನನಗೆ ಈ ವರ್ಷ ಹೃದಯ ಶಸ್ತ್ರಚಿಕಿತ್ಸೆ ನಡೆಯಿತು, ಒಳ್ಳೆಯ ಕೆಲಸದಿಂದ ನಿವೃತ್ತಿ ಹೊಂದಿದೆ. ವೈದ್ಯಕೀಯ ಓದುತ್ತಿರುವ ನನ್ನ ಮಗ ಅಪಘಾತಕ್ಕೀಡಾಗಿ, ಕಾರು ಸಂಪೂರ್ಣ ಜಖಂಗೊಂಡಿತು. ನನ್ನ ಮಗನಿಗೂ ಸಣ್ಣಪುಟ್ಟ ಗಾಯಗಳಾದವು. ಈ ವರ್ಷ ಅತ್ಯಂತ ಕೆಟ್ಟ ವರ್ಷ ಎಂದು ಬರೆದಿಟ್ಟು ಹಾಸಿಗೆಯ ಮೇಲೆ ಮಲಗಿದರು. ಸ್ವಲ್ಪ ಸಮಯದ ನಂತರ ಅವರ ಹೆಂಡತಿ ಹೋಗಿ ಆ ಪೇಪರ್ ನೋಡಿದರು. ನಂತರ ಏಕಾಂತವಾಗಿ ಕೋಣೆಗೆ ಹೋಗಿ ಪ್ರಾರ್ಥಿಸಲು ಪ್ರಾರಂಭಿಸಿದರು. "ಕರ್ತನೇ, ತುಂಬಾ ಬ್ಯುಸಿಯಾಗಿ ಓಡುತ್ತಿದ್ದ ನನ್ನ ಗಂಡನಿಗೆ ವಿಶ್ರಾಂತಿ ಕೊಟ್ಟು ನೆಮ್ಮದಿಯಾಗಿ ಬದುಕಲು ಸಹಾಯ ಮಾಡಿದ್ದಕ್ಕಾಗಿ ವಂದನೆ! ಹೃದಯ ಕಾಯಿಲೆಯಿಂದ ಮೇಜರ್ ಆಪರೇಷನ್ ಮಾಡಿದಾಗ ನನ್ನ ಗಂಡನಿಗೆ ನೀವು ನೀಡಿದ ಆಯುಷ್ ದಿನಗಳಿಗಾಗಿ ವಂದನೆ! ನನ್ನ ಮಗನನ್ನು ಅಪಘಾತದಿಂದ ತಪ್ಪಿಸಿದ್ದಕ್ಕಾಗಿ ವಂದನೆ! ಎಂದು ಅವರ ಹೆಂಡತಿ ಕಣ್ಣೀರಿನಿಂದ ಕೃತಜ್ಞತೆ ಹೇಳಿದರು. ನೋಡಿ ಇಬ್ಬರ ನೋಟವೂ ಎರಡು ರೀತಿಯಾಗಿತ್ತು. ಆದರೆ ದೇವರು ಯಾರ ಮನಸ್ಥಿತಿಯನ್ನು ಕಂಡು ಸಂತೋಷಪಟ್ಟಿರುತ್ತಾರೆ?ಹೌದು, ಕೃತಜ್ಞತೆಯುಳ್ಳ ಹೃದಯವನ್ನು ಕಂಡೇ!

 

ಹತ್ತು ಜನರು ಸ್ವಸ್ಥತೆಗಾಗಿ ಯೇಸುವಿನ ಬಳಿಗೆ ಬಂದು ನಮ್ಮನ್ನು ಕರುಣಿಸು ಎಂದು ಕೂಗಿದರು. ಯೇಸು ಅವರಿಗೆ ಅದ್ಭುತವಾಗಿ ಸ್ವಸ್ಥತೆಯನ್ನು ನೀಡಿ, ಯಾಜಕರಿಗೆ ನಿಮ್ಮನ್ನು ತೋರಿಸಿಕೊಳ್ಳಿ ಎಂದು ಹೇಳಿದರು. ಆದರೆ ಅವರಲ್ಲಿ ಒಬ್ಬನು ಮಾತ್ರವೇ ತಾನು ಸ್ವಸ್ಥವಾದದ್ದನ್ನು ಕಂಡು ಹಿಂತಿರುಗಿ ಬಂದು ದೊಡ್ಡ ಧ್ವನಿಯಿಂದ ದೇವರನ್ನು ಮಹಿಮೆಪಡಿಸಿದನು. ಆಗ ಯೇಸು ಸ್ವಸ್ಥವಾದವರು ಹತ್ತು ಮಂದಿಯಲ್ಲವೇ? ಉಳಿದ ಒಂಭತ್ತು ಮಂದಿ ಎಲ್ಲಿ? ಎಂದು ಕೇಳುತ್ತಾರೆ.

 

ಪ್ರಿಯರೇ, ನಮ್ಮ ಕರ್ತನು ನಮ್ಮ ಬಳಿ ಏನನ್ನೂ ನಿರೀಕ್ಷಿಸಿ ನಮ್ಮನ್ನು ರಕ್ಷಿಸಿಲ್ಲ, ಕರೆದಿಲ್ಲ ಅಭಿಷೇಕಿಸಿಲ್ಲ. ಆದರೆ ಒಂದೇ ಒಂದನ್ನು ಮಾತ್ರ ನಿರೀಕ್ಷಿಸುತ್ತಾರೆ. ಅದು ನಾವು ಕೃತಜ್ಞತೆಯ ಹೃದಯದೊಂದಿಗಿದ್ದೇವಾ? ಎಂಬುದೇ. ಅವರು ನಮಗೂ ನಮ್ಮ ಕುಟುಂಬಕ್ಕೂ ಮಾಡಿರುವ ಉಪಕಾರಗಳು ಎಷ್ಟೋ! ಎಷ್ಟೆಷ್ಟೋ! ಆದರೆ ನಾವು ಅನೇಕ ಬಾರಿ ದೇವರು ಮಾಡಿದ ಒಳ್ಳೆಯ ಕಾರ್ಯಗಳನ್ನು ಮರೆತು ಆತನ ಬಗ್ಗೆ ಗುಣುಗುಟ್ಟುತ್ತೇವೆ. ಪ್ರತಿದಿನವೂ ಯೇಸುಕ್ರಿಸ್ತನು ನಮ್ಮನ್ನು ಈ ಭೂಮಿಯಲ್ಲಿ ಜೀವಂತವಾಗಿರಿಸಿರುವುದನ್ನು ನೆನೆಸಿ ನೋಡಿದರೆ ಖಂಡಿತವಾಗಿಯೂ ನಮ್ಮಿಂದ ದೇವರಿಗೆ ಕೃತಜ್ಞತೆ ಹೇಳದೆ ಇರಲು ಸಾಧ್ಯವೇ ಇಲ್ಲ. ನಿಜ ಅಲ್ವಾ. ನಾವು ಸಹ ದೇವರಿಗೆ ಕೃತಜ್ಞತೆ ಸಲ್ಲಿಸುವವರಾಗಿ ಕಾಣಲ್ಪಡೋಣ. ದೇವರು ಕೊಡುವ ಆಶೀರ್ವಾದಗಳನ್ನು ಸ್ವತಂತ್ರಿಸಿಕೊಳ್ಳೋಣ.

- Mrs. ತವಮಣಿ ವೈರವೇಲ್

 

ಪ್ರಾರ್ಥನಾ ಅಂಶ:

ಎಲ್ಲಾ 313 ತಾಲೂಕುಗಳಲ್ಲಿ ನಡೆಸಲಿರುವ ಮಕ್ಕಳ ಮತ್ತು ಯೌವನಸ್ಥರ ಕೂಟಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş