Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.02.2024
Share:

By Village Missionary Movement

Wednesday, 14-Feb-2024

ಧೈನಂದಿನ ಧ್ಯಾನ(Kannada) – 14.02.2024

 

ಆಳವಾದ ಪ್ರೀತಿ

 

"ನೀವು ದೇವರ ಪ್ರೀತಿಯಲ್ಲಿ ನೆಲೆಗೊಂಡು ನಿಂತು ಅದರ ಅಗಲ ಉದ್ದ ಎತ್ತರ ಆಳ ಎಷ್ಟೆಂಬದನ್ನು ದೇವಜನರೆಲ್ಲರೊಂದಿಗೆ ಗ್ರಹಿಸಲೂ " - ಎಫೆಸ 3:18

 

ಕಾಲೇಜಿನಲ್ಲಿ ಚೆನ್ನಾಗಿ ಓದುತ್ತಿದ್ದ ಯುವತಿಯೊಬ್ಬಳು, ಒಬ್ಬ ಹುಡುಗನನ್ನು ಪ್ರೀತಿಸಿದಳು. ಅವನು ಪ್ರತಿದಿನ ಅವಳಿಗೆ, "ನೀನಿಲ್ಲದಿದ್ದರೆ ನಾನು ಸತ್ತುಹೋಗುತ್ತೇನೆ" ಎಂದು ಹೇಳುತ್ತಲೇ ಇದ್ದನು. ಇವಳು ಸಹ ಇದಕ್ಕೆ ಹೆದರಿ ಮದುವೆಗೆ ಒಪ್ಪಿಕೊಂಡು ದಿಢೀರನೆ ಒಂದು ದಿನ ತಂದೆ ತಾಯಿಗೂ ತಿಳಿಯದೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಳು. ಒಂದು ವಾರದಲ್ಲೇ ಅವನ ನಿಜವಾದ ದುಷ್ಟ ಗುಣವು ಬಹಿರಂಗವಾಯಿತು. ಆಗ ಅವಳಿಗೆ ದೊಡ್ಡ ಮೋಸ! ಇವನ ಪ್ರೀತಿಯನ್ನು ನಂಬಿ ನನ್ನ ಎಲ್ಲವನ್ನು ಬಿಟ್ಟು ಬಂದೆನೇ ಎಂದು ಅತ್ತಳು.

 

ಲೋಕದ ಪ್ರೀತಿಯೆಲ್ಲಾ ಹೀಗೆಯೇ; ಹೊರ ರೂಪವನ್ನು ನೋಡಿ "ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ" ಎಂದೆಲ್ಲಾ ಹೇಳುವ ಆಳವಿಲ್ಲದ ಪ್ರೀತಿ! (Superficial love) ! ಎಲ್ಲಾ ಮನುಷ್ಯರ ಆಸೆ, ಯಾರಾದರೂ ನನ್ನನ್ನು ಪ್ರೀತಿಸುತ್ತಾರಾ, ವಿಚಾರಿಸುತ್ತಾರಾ? ಇದಕ್ಕಾಗಿಯೇ ಹೆಣ್ಣು ಮಕ್ಕಳು ತಮ್ಮನ್ನು ಅಲಂಕರಿಸಿಕೊಳ್ಳುತ್ತಾರೆ. ಪುರುಷರು ಜಿಮ್‌ಗೆ ಹೋಗುತ್ತಾರೆ. ನಾವು ಸುಂದರವಾಗಿದ್ದರೆ, ನಮಗಾಗಿ ಒಬ್ಬನು/ ಒಬ್ಬಳು ಬರುತ್ತಾರೆ ಎಂದೆಲ್ಲಾ ಕಲ್ಪನೆ ಮಾಡಿಕೊಳ್ಳುತ್ತಾರೆ. ನೀನಿಲ್ಲದೆ ನನ್ನಿಂದ ಬಾಳಲು ಸಾಧ್ಯವಿಲ್ಲ ಎಂದು ಹೇಳುವ ಅದೇ ವ್ಯಕ್ತಿಯೇ ಒಂದು ದಿನ "ನಿನ್ನ ನೋಡೋಕೇನೆ ನನಗೆ ಇಷ್ಟ ಇಲ್ಲ" ಎಂದು ಹೇಳುತ್ತಾರೆ. ಈ ಪ್ರೀತಿಯೆಲ್ಲಾ ಭ್ರಮೆಯ ಪ್ರೀತಿ! ಬದಲಾಗದ, ನಿಜವಾದ, ಆಳವಾದ ಪ್ರೀತಿ ಎಂದರೆ ನಮ್ಮ ಯೇಸು ಕ್ರಿಸ್ತನ ಪ್ರೀತಿ ಮಾತ್ರವೇ!

 

ಆ ಪ್ರೀತಿಯ ಅಗಲವು ಯಾವ ರೀತಿಯ ಬಣ್ಣ, ಧರ್ಮ, ಭಾಷೆ ಮಾತಾಡುವ ಜನರಾಗಿದ್ದರೂ ಹುಡುಕಿ ಬಂದು ಬಿಡಿಸುತ್ತದೆ. ಆ ಪ್ರೀತಿಯ ಉದ್ದ ನೀನು ಹುಟ್ಟುವ ಮುನ್ನವೇ ನಿನ್ನನ್ನು ಹೆಸರಿಟ್ಟು ಕರೆದ ಶಾಶ್ವತ ಪ್ರೀತಿ (everlasting)! ಆ ಪ್ರೀತಿಯ ಆಳ, ನಾವು ಪಾಪದ ಕೂಪದಲ್ಲಿರುವಾಗಲೇ ನಮಗಾಗಿ ತನ್ನ ಪ್ರಾಣವನ್ನೇ ಕೊಟ್ಟು ವಿಮೋಚಿಸಿ ಮೇಲೆತ್ತಿದ ಪ್ರೀತಿ! ಆ ಪ್ರೀತಿಯ ಎತ್ತರ, ಕಸದಲ್ಲಿ, ಧೂಳಿನಲ್ಲಿ ಇದ್ದರೂ ನಮ್ಮನ್ನು ಮೇಲೆತ್ತಿ ಆನಂದಿಸುವ ಪ್ರೀತಿ!

 

ಲೋಕವೇ ಪ್ರೇಮಿಗಳ ದಿನವನ್ನು ಆಚರಿಸುವ ಈ ದಿನದಂದು, ದೇವರು ನಮ್ಮೊಂದಿಗೆ ಮಾತನಾಡುತ್ತಿದ್ದಾರೆ. ನೀವು ಮದುವೆಯಾದವರಾಗಿದ್ದರೂ ಸರಿ, ಅಥವಾ ಯೌವನಸ್ಥರಾಗಿದ್ದರೂ ಸರಿ, ನಮ್ಮ ಮೊದಲ ಪ್ರೀತಿ ಯೇಸುವಿಗೆ ಮಾತ್ರ. ಅದರ ನಂತರವೇ ನಮ್ಮ ಜೀವನ ಸಂಗಾತಿ, ಪೋಷಕರು, ಸ್ನೇಹಿತರು. ಆ ಆಳವಾದ ಊಹೆಗೂ ಮೀರಿದ ಯೇಸುವಿನ ಪ್ರೀತಿ ಇಂದು ನಿಮ್ಮನ್ನು ತುಂಬಲಿ!

- Dr. ರಂಜಿತಾ

 

ಪ್ರಾರ್ಥನಾ ಅಂಶ:

Child care child ಯೋಜನೆಯಲ್ಲಿ ಭಾಗಿಯಾಗಿರುವ ಚಿಕ್ಕ ಮಕ್ಕಳು ಮತ್ತು ಅವರ ಕುಟುಂಬ ಆಶೀರ್ವದಿಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş holiganbet holiganbet giriş jasminbet jasminbet giriş kargabet kargabet giriş matbet matbet giriş norabahis norabahis giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş holiganbet casibom çarkbet vizebet vizebet giriş alobet alobet giriş amgbahis amgbahis giriş sweet bonanza grandpashabet grandpashabet jojobet gameofbet