Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.02.2024 (Kids Special)
Share:

By Village Missionary Movement

Sunday, 11-Feb-2024

ಧೈನಂದಿನ ಧ್ಯಾನ(Kannada) – 11.02.2024 (Kids Special)

 

ತಾತ ಕೊಟ್ಟ Gift 

 

". . . ಚುರುಕುಗೈ ಐಶ್ವರ್ಯ" - ಜ್ಞಾನೋಕ್ತಿ 10:4

 

ಜಾನ್ ಮತ್ತು ಜೆಸ್ಸಿ ಅಣ್ಣ ತಂಗಿ. ಏನು ಪುಟಾಣಿಗಳೇ ನಿಮ್ಮ ಮನೆಯಲ್ಲೂ ಅಕ್ಕ, ತಂಗಿ, ಅಣ್ಣ, ತಮ್ಮ ಇದ್ದಾರಲ್ವಾ! ಒಬ್ಬರ ಹಾಗೆ ಇನ್ನೊಬ್ಬರು ಇರೋದಿಲ್ಲ ಹೌದು ತಾನೇ? ಇದ್ದಕ್ಕಿದ್ದಂತೆ ಡಮಾಲ್, ಡಿಮೀಲ್ ಅಂತ ಶಬ್ದ ಕೇಳಿಸುತ್ತೆ. ಜಗಳ ಬರುವುದಕ್ಕಿಂತ ಸ್ವಲ್ಪ ಹೊತ್ತಿನ ಮುಂಚೆ ಸರಿಯಾಗಿ ಆಟವಾಡಲು ಪ್ರಾರಂಭಿಸಿ ಬಿಡುತ್ತೀರ ಅಲ್ವಾ? ಜಾನ್ ಮತ್ತು ಜೆಸ್ಸಿ ನಿಮ್ಮಂತೆಯೇ ಇದ್ದರು. ಜಾನ್ ಎಲ್ಲಾ ಕಾರ್ಯಗಳಲ್ಲೂ ಚುರುಕಾಗಿ ಇರುತ್ತಿದ್ದ. ಆದರೆ ಜೆಸ್ಸಿ ಹಾಗಲ್ಲ. ಅವಳು ತುಂಬಾ ಸೋಮಾರಿಯಾಗಿ ಇರುತ್ತಿದ್ದಳು. ಅಪ್ಪ, ಅಮ್ಮ ಪುಟ್ಟಿ ಹೀಗೆಲ್ಲಾ ಇರಬಾರದು ಎಂದು Advice ಮಾಡುತ್ತಿದ್ದರು. ಇದನ್ನೆಲ್ಲಾ ಗಮನಿಸಿದ ತಾತ ಜಾನ್ ಮತ್ತು ಜೆಸ್ಸಿಗೆ ಒಂದು ಕೆಲಸ ಕೊಡುತ್ತೇನೆ. ಅದನ್ನು ಚೆನ್ನಾಗಿ ಮಾಡಿದರೆ ಸೂಪರ್ ಗಿಫ್ಟ್ ತೆಗೆದುಕೊಡುತ್ತೇನೆ ಎಂದಾಗ. . . ತಾತ ಹೇಳಿ ಎಂದು ಬಹಳ ಉತ್ಸುಕತೆಯಿಂದ ಕೇಳಿದರು.

 

ಕೂಡಲೇ ತಾತ ಒಬ್ಬೊಬ್ಬರಿಗೆ ಒಂದೊಂದು ಬೀಜ ಕೊಟ್ಟು ಅದನ್ನು ನೆಲದಲ್ಲಿ ನೆಟ್ಟು ದಿನವೂ ನೀರು ಹಾಕಿ ಬೆಳೆಸಬೇಕು ಎಂದು ಹೇಳಿದಾಗ ಜಾನ್ ದಿನವೂ ಸರಿಯಾಗಿ ತನ್ನ ಕೆಲಸ ಮಾಡುತ್ತಿದ್ದ. ಸಸ್ಯ ಬೆಳೆದು ಎಲೆಗಳು ಕಾಣಿಸಿಕೊಂಡಾಗ ಜಾನ್ ಗೆ ತುಂಬಾ ಸಂತೋಷ. ಜೆಸ್ಸಿ ಚೆನ್ನಾಗಿ ನಿದ್ದೆ ಮಾಡುತ್ತಿದ್ದಳು. ಅವಳು ತನ್ನ ಕೆಲಸವನ್ನು ಸರಿಯಾಗಿ ಮಾಡಲಿಲ್ಲ. ಜಾನ್ ನ ಗಿಡ ಚೆನ್ನಾಗಿ ಬೆಳೆದು ಹೂ ಬಿಡಲಾರಂಭಿಸಿತು. ಆದರೆ ಜೆಸ್ಸಿಯ ಗಿಡ ಮಣ್ಣಲ್ಲಿ ಮಣ್ಣಾಗಿ ಕೊಳೆತು ಹೋಯಿತು. ತಾತ ಜಾನ್ ಗೆ ಇಷ್ಟವಾದ ಸೂಪರ್ ಸೈಕಲ್ ಒಂದನ್ನು ತೆಗೆದುಕೊಟ್ಟು ನೀನು ಚುರು-ಚುರುಕಾಗಿ ಕೊಟ್ಟ ಕೆಲಸವನ್ನು ಶ್ರದ್ಧೆಯಿಂದ ಮಾಡಿದ್ದರಿಂದ ಈ ಉಡುಗೊರೆ ಎಂದು ಹೇಳಿದರು. ಇದನ್ನು ನೋಡಿದ ಜೆಸ್ಸಿ ತಾತ ನನಗೇನೂ ಇಲ್ವಾ? ಎಂದು ಕೇಳಿದಳಂತೆ. ನಿನಗೆ ಕೊಟ್ಟ ಕೆಲಸವನ್ನು ಸರಿಯಾಗಿ ಮಾಡದ ಕಾರಣ ನೀನು Gift ಅನ್ನು ಕಳೆದುಕೊಂಡೆ. ನಿನಗೆ ಇನ್ನೊಂದು ಅವಕಾಶ ಕೊಡುತ್ತೇನೆ ಎಂದು ಹೇಳಿ ಇನ್ನೊಂದು ಬೀಜ ಕೊಟ್ಟು ನೀನು ಇದನ್ನು ಸರಿಯಾಗಿ ಮಾಡಿದರೆ ನಿನಗೂ Gift ತೆಗೆದುಕೊಡುತ್ತೇನೆ ಎಂದು ತಾತ ಹೇಳಿದರು. ಜಾನ್ ಜೆಸ್ಸಿ ಬಾ ನೀನು, ನಾನು ಒಟ್ಟಿಗೆ ಸೈಕಲ್ ಓಡಿಸೋಣ ಎಂದ ಕೂಡಲೇ ಜೆಸ್ಸಿಗೆ ತುಂಬಾ ಸಂತೋಷವಾಯಿತು. ನನ್ನ ಸೋಮಾರಿತನದಿಂದ ನನ್ನ ತಾತನ Gift ಅನ್ನು ಕಳೆದುಕೊಂಡೆನೆ ಎಂದು ಯೋಚಿಸಿ ತನ್ನ ಸೋಮಾರಿತನವನ್ನು ಕೊನೆಗೊಳಿಸಲು ನಿರ್ಧರಿಸಿದಳು ಮತ್ತು ಜಾನ್ ನಂತೆ ಚುರುಕಾಗಿರಲು ನಿರ್ಧರಿಸಿದಳು.

 

ಮುದ್ದು ಪುಟಾಣಿಗಳೇ! ನೀವು ಸಹ ನಿಮ್ಮ ಸೋಮಾರಿತನದಿಂದಾಗಿ ಬಹಳಷ್ಟು ಪ್ರಯೋಜನಗಳನ್ನು miss ಮಾಡಿರಬಹುದು. ಇನ್ನು ಮುಂದೆ ಚುರು-ಚುರುಕಾಗಿದ್ದು ನಿಮಗೆ ಸಿಗುವ Blessing ಅನ್ನು ಪಡೆದುಕೊಳ್ಳಲು Ready ತಾನೇ.

- Mrs. ರೂತ್ ಚಾರ್ಲ್ಸ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al