Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.02.2024
Share:

By Village Missionary Movement

Saturday, 10-Feb-2024

ಧೈನಂದಿನ ಧ್ಯಾನ(Kannada) – 10.02.2024

 

ನಂಬಿಕೆ ಎಂಬ ಬೀಜ

 

"…ಸಾಸಿವೇಕಾಳಷ್ಟು ನಂಬಿಕೆ ನಿಮಗೆ ಇರುವದಾದರೆ ನೀವು ಈ ಬೆಟ್ಟಕ್ಕೆ ಇಲ್ಲಿಂದ ಅಲ್ಲಿಗೆ ಹೋಗು ಎಂದು ಹೇಳಿದರೂ ಅದು ಹೋಗುವದು" - ಮತ್ತಾ. 17:20

 

ಬೈಬಲ್ ಕಾಲೇಜಿನ ಶಿಕ್ಷಕರೊಬ್ಬರು ವಿದ್ಯಾರ್ಥಿಗಳಿಗೆ "ಸಾಸಿವೆ ಕಾಳಿನಷ್ಟು ನಂಬಿಕೆ" ಎಂಬ ಅಂಶದ ಕುರಿತು ಬೋಧಿಸಿದರು. ಇದನ್ನು ಕೇಳಿದ ವಿದ್ಯಾರ್ಥಿಗಳೆಲ್ಲರೂ ಅಲ್ಲಿಂದ ಹೊರಟು ಹೋದರು. ಆದರೆ ರಾಜೇಶ್ ಮಾತ್ರ ಆ ಮಾತನ್ನು ಯೋಚಿಸುತ್ತಿದ್ದ. ರಾಜೇಶ್ ಗೆ ಮನದಲ್ಲಿ, ನಮ್ಮ ಕಾಲೇಜಿಗೆ ಬರುವ ದಾರಿಯಲ್ಲಿ ಅಡ್ಡವಾಗಿರುವ ಆ ದೊಡ್ಡ ಬಂಡೆಯನ್ನು ಪ್ರಾರ್ಥನೆಯ ಮೂಲಕ ಅಲ್ಲಿಂದ ತೊರೆಯುವ ಯೋಚನೆ ಹುಟ್ಟಿತು. ದಿನವೂ ಆ ದೊಡ್ಡ ಬಂಡೆಯನ್ನು ನೋಡಿ ನೀನು ಸರಿದು ಆಕಡೆಗೆ ಹೋಗು ಎಂದು ಹೇಳುತ್ತಿದ್ದನು. ಹೀಗೇ 2 ತಿಂಗಳು ಕಳೆಯಿತು, ರಾಜೇಶನ ಪ್ರಾರ್ಥನೆಯನ್ನು ನೋಡಿದ ಸಹ ವಿದ್ಯಾರ್ಥಿಗಳು ಇವನಿಗೆ ಹುಚ್ಚು ಹಿಡಿದುಬಿಟ್ಟಿದೆ ಎಂದರು. ಮೂರು ತಿಂಗಳ ನಂತರ, ಒಂದು ದಿನ, ದೊಡ್ಡ ಯಂತ್ರಗಳ ಸಹಾಯದಿಂದ, ಬಂಡೆಯನ್ನು ಕತ್ತರಿಸಲಾಯಿತು. ವಿಚಾರಣೆ ನಡೆಸಿದಾಗ ಇದು ರಾಜ್ಯ ಸರ್ಕಾರದ ಪ್ರಯತ್ನ ಎಂದು ತಿಳಿದುಬಂತು. ಕಾಲೇಜಿನ ಪ್ರಾಂಶುಪಾಲರು ರಾಜೇಶನನ್ನು ಕರೆದು, "ದೇವರು ನಿನ್ನ ನಂಬಿಕೆಯನ್ನು ಗೌರವಿಸಿದರು. ನಂಬಿಕೆ ಒಂದು ಸಾಸಿವೆ ಕಾಳಿನಂತೆ; ಗಾತ್ರದಲ್ಲಿ ಚಿಕ್ಕದಾದರೂ ಅದರ ಪರಿಣಾಮವು ಪರ್ವತದಷ್ಟು ದೊಡ್ಡದು" ಎಂದು ಪ್ರಶಂಸಿಸಿದರು.

 

ಸತ್ಯವೇದದಲ್ಲಿ ಸಾಸಿವೆ ಕಾಳಿನಷ್ಟು ನಂಬಿಕೆಯಲ್ಲಿ ಪರ್ವತದಂತಹ ಅದ್ಬುತವನ್ನು ನೋಡಿದ ಒಂದು ಮಹಿಳೆ ಇದ್ದಾಳೆ. ಅವಳೇ ರಾಹಾಬಳು. ಅವಳೊಂದು ವೇಶ್ಯೆ ಎಂದು ಸತ್ಯವೇದವು ಹೇಳುತ್ತಿದೆ. ಆಕೆ ಇಸ್ರಾಯೇಲ್ಯಳಲ್ಲದಿದ್ದರೂ ದೇವರಲ್ಲಿ ನಂಬಿಕೆ ಇಟ್ಟಿದ್ದಳು. ಅವಳು ದೇವ ಜನರಂತೆ ದೇವರನ್ನು ಅರಿತವಳಲ್ಲ. ತನ್ನ ಪಾಪದ ಜೀವನದ ನಡುವೆಯೂ ಇಸ್ರಾಯೇಲ್ ಜನರಿಗೆ ದೇವರು ಮಾಡಿದ ಅದ್ಭುತಗಳನ್ನು ಅವಳು ಕೇಳಿದ ಮಾತ್ರದಲ್ಲೇ ನಂಬಿದಳು. ಪರಿಣಾಮವಾಗಿ! ಅವಳ ಹೃದಯದಲ್ಲಿದ್ದ ಸ್ವಲ್ಪ ನಂಬಿಕೆ ದೊಡ್ಡ ಫಲವನ್ನು ನೀಡಿತು

 

ಇಂದು ನಿಮ್ಮ ಹೃದಯದಲ್ಲಿಯೂ ಸಹ ಸ್ವಲ್ಪ ನಂಬಿಕೆ ಇದೆಯೇ? ಆ ನಂಬಿಕೆ ಒಂದು ಬೀಜವಿದ್ದಂತೆ. ಅದರಲ್ಲಿ ಜೀವವಿದೆ; ಅದು ಹೆಚ್ಚುತ್ತದೆ. ನಂಬಿಕೆ ಎಂಬ ಬೀಜವು ಹೃದಯದಲ್ಲಿದ್ದರೆ ದೊಡ್ಡ ದೊಡ್ಡ ಕಾರ್ಯಗಳನ್ನು ಮಾಡಲು ನಿಮ್ಮನ್ನು ಮುನ್ನಡೆಸುತ್ತದೆ. ಹೌದು, ದೇವರು ನಿಮ್ಮಿಂದ ಹೆಚ್ಚಿನದನ್ನು ನಿರೀಕ್ಷಿಸುವುದಿಲ್ಲ. ಸಾಸಿವೆ ಕಾಳಿನಷ್ಟು ನಂಬಿಕೆಯನ್ನು ನಿರೀಕ್ಷಿಸುತ್ತಿದ್ದಾರೆ. ಆ ನಂಬಿಕೆ ನಿಮಗಿದೆಯೇ? ನೀವು ಎದುರಿಸುವ ಸಮಸ್ಯೆಯನ್ನು ನಿವಾರಿಸಲು ಆ ನಂಬಿಕೆಯೇ ಸಾಕು. ಹಲ್ಲೇಲೂಯಾ!

- Bro. ಕ್ರಿಸ್ಟೋಫರ್

 

ಪ್ರಾರ್ಥನಾ ಅಂಶ:

ಇಂದು ನಡೆಯಲಿರುವ 24 ಗಂಟೆಗಳ ಉಪವಾಸ ಪ್ರಾರ್ಥನೆಯಲ್ಲಿ Online ನಲ್ಲಿ, ಆಮೆನ್ ವಿಲೇಜ್ ಟಿವಿ ಮೂಲಕವಾಗಿ ನಮ್ಮೊಂದಿಗೆ ಸೇರುವ ಪ್ರತಿಯೊಬ್ಬರೂ ರಕ್ಷಣೆ ಹೊಂದುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş holiganbet holiganbet giriş jasminbet jasminbet giriş kargabet kargabet giriş matbet matbet giriş norabahis norabahis giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş holiganbet casibom çarkbet vizebet vizebet giriş alobet alobet giriş amgbahis amgbahis giriş sweet bonanza grandpashabet grandpashabet jojobet gameofbet