Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.02.2024
Share:

By Village Missionary Movement

Friday, 09-Feb-2024

ಧೈನಂದಿನ ಧ್ಯಾನ(Kannada) – 09.02.2024

 

ದೃಢವಾದ ಬೀಜ

 

"ಸ್ಥಿರಚಿತ್ತನನ್ನು ಶಾಂತಿಯಲ್ಲಿ ನೆಲೆಗೊಳಿಸಿ ಕಾಯುವಿ; ಅವನಿಗೆ ನಿನ್ನಲ್ಲಿ ಭರವಸವಿದೆ" - ಯೆಶಾಯ 26:3

 

ನಾನು ಆರನೇ ತರಗತಿಯಲ್ಲಿದ್ದಾಗ ನನ್ನ ಬೀದಿಯಲ್ಲಿ ನಡೆಯುತ್ತಿದ್ದ ಭಾನುವಾರ ಶಾಲೆಯ ಮೂಲಕ ದೇವರ ಪ್ರೀತಿಯನ್ನು ನಾನು ತಿಳಿದುಕೊಂಡೆ. ಅಲ್ಲಿ ಕಲಿಸಿದ ದೇವರ ವಾಕ್ಯ ನನ್ನಲ್ಲಿ ಹಚ್ಚ ಹಸಿರಾದ ಗೋರಂಟಿಯ ಹಾಗೆ ಅಂಟಿಕೊಂಡಿದ್ದು ಮಾತ್ರವಲ್ಲದೆ ವೇದವಾಕ್ಯವೂ ನನ್ನ ಹೃದಯದಲ್ಲಿ ಬೀಜದಂತೆ ಕೆಲಸ ಮಾಡತೊಡಗಿತು. ಸತತವಾಗಿ ನನ್ನ ಪ್ರಾಂತ್ಯದಲ್ಲಿ ನಡೆಯುವ ಮನೆ ಪ್ರಾರ್ಥನಾ ಕೂಟಗಳು ಮತ್ತು ಯುವ ಕೂಟಗಳಿಗೆ ಹಾಜರಾಗಲು ಪ್ರಾರಂಭಿಸಿದೆ. ಒಂಭತ್ತನೇ ತರಗತಿಯಲ್ಲಿ ನಾನು ಹದಿಹರೆಯದವನಾಗಿದ್ದಾಗ ಉತ್ತರ ಭಾರತದಲ್ಲಿ ಪೂರ್ಣ ಸಮಯದ ಮಿಷನರಿ ಸೇವೆಗಾಗಿ ನನ್ನ ಜೀವನವನ್ನು ಅರ್ಪಿಸಿಕೊಂಡೆ. ವರ್ಷಗಳು ಕಳೆದವು. ಯೇಸಪ್ಪನಿಗೆ ಮೊದಲ ಸ್ಥಾನವನ್ನು ಕೊಡುವುದರ ಮೂಲಕವಾಗಿ ನನ್ನ ಶಾಲಾ ಕಾಲೇಜು ವಿದ್ಯಾಭ್ಯಾಸದಲ್ಲಿ ದೇವರು ಉತ್ತಮ ಅಂಕಗಳನ್ನು ಕೊಟ್ಟರು.

 

ಪಾಲಿಟೆಕ್ನಿಕ್ ಓದಿದ ನನಗೆ ಪ್ರತಿಷ್ಠಿತ ಕಾಲೇಜಿನಲ್ಲಿ ಲ್ಯಾಬ್ ಟೆಕ್ನಿಷಿಯನ್ ಕೆಲಸ ಸಿಕ್ಕಿತು, ಉತ್ತಮ ಸಂಬಳ. ದಿನಗಳು ಕಳೆದಂತೆ ನಾನು ಸಮರ್ಪಣೆಯನ್ನು ಮರೆತುಬಿಟ್ಟೆ. ಆದರೆ ದೇವರು ನಾನು ಮಾಡಿದ ಸಮರ್ಪಣೆಯನ್ನು ಮರೆಯಲೇ ಇಲ್ಲ, ಜೀವನದಲ್ಲಿ ವಿವಾಹ ಎಂಬುದು ಒಂದು ದೊಡ್ಡ ತಿರುವು. ಯೇಸಪ್ಪ ನನ್ನನ್ನು ತನ್ನ ಸಮ್ಮುಖದಲ್ಲಿ ಬಂದು ಬೀಳುವಂತೆ ಮಾಡಿದರು. ನಾನು ಕೂಡ ಹರಕೆ ಮಾಡಿ ಪ್ರಾರ್ಥಿಸಿದೆ. ಉತ್ತರ ಭಾರತಕ್ಕೆ ಮಿಷನರಿಯಾಗಿ ಹೋಗಬೇಕಾದರೆ, ಭವಿಷ್ಯದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುವ ಜೀವನ ಸಂಗಾತಿಯನ್ನು ಕೊಡಿ ಎಂದು ಪ್ರಾರ್ಥಿಸಿದೆ. ಎರಡು ವರ್ಷಗಳು ಎಷ್ಟೋ ಹೋರಾಟಗಳು, ಸಂಕಟಗಳು, ಕಣ್ಣೀರುಗಳು, ಆದರೂ ನಾನು ದೇವರನ್ನು ಗಟ್ಟಿಯಾಗಿ ಹಿಡಿದುಕೊಂಡೆ. ಎರಡು ವರ್ಷಗಳ ಕೊನೆಯಲ್ಲಿ, ದೇವರು ಪ್ರಾರ್ಥನೆಗೆ ಉತ್ತರಿಸಿದರು ಮತ್ತು ಛತ್ತೀಸ್ ಗಡ ಪ್ರದೇಶದಲ್ಲಿ ಸೇವೆ ಮಾಡುವ ಜೀವನ ಸಂಗಾತಿಯನ್ನು ಕರ್ತನು ಒದಗಿಸಿದರು. ಯೇಸಪ್ಪ ನನಗೆ ಹಿಂದಿ ಕಲಿಸಿದರು, ನಾವು ಛತ್ತೀಸ್ ಗಡ ಮತ್ತು ಮಹಾರಾಷ್ಟ್ರ ಪ್ರದೇಶದಲ್ಲಿ ಕೆಲವು ವರ್ಷಗಳ ಕಾಲ ಕುಟುಂಬವಾಗಿ ಸೇವೆ ಸಲ್ಲಿಸಿದೆವು. ಈಗ ಮೂರು ವರ್ಷಗಳಿಗಿಂತ ಹೆಚ್ಚಾಗಿ ವಿಲೇಜ್ ಮಿಷನರಿ ಮೂವ್ಮೆಂಟ್ ನಲ್ಲಿ ಕುಟುಂಬವಾಗಿ ದೇವರ ಸೇವೆ ಮಾಡುತ್ತಿದ್ದೇವೆ.

 

ಪರಿಶುದ್ಧ ಗ್ರಂಥದಲ್ಲಿ ರೂತ್ ಎಂಬ ಮಹಿಳೆಯ ಬಗ್ಗೆ ಓದುವಾಗ, ರೂತ್ ತನ್ನ ಅತ್ತೆಯನ್ನು ಬಿಡದೇ ಅಂಟಿಕೊಂಡಳು. ರೂತಳಲ್ಲಿದ್ದ ದೃಢವಾದ ಬೀಜವು ಮಹಾನ್ ಸಂತತಿ ರೂಪುಗೊಳ್ಳಲು ಕಾರಣವಾಯಿತು. ಹೌದು, ಚಿಕ್ಕಂದಿನಲ್ಲಿ ನನ್ನಲ್ಲಿ ನೆಟ್ಟ ಬೀಜವು, ದೇವರಿಗಾಗಿ ಏನಾದರೂ ಮಾಡಬೇಕೆಂಬ ಬಯಕೆಯನ್ನು ಹುಟ್ಟುಹಾಕಿತು. ನನ್ನಲ್ಲಿರುವ ನಂಬಿಕೆಯ ಬೀಜವು ಈಗ ಪೂರ್ಣ ಸಮಯದ ಮಿಷನರಿಯಾಗಿ ಫಲ ನೀಡುತ್ತಿದೆ. ಇದನ್ನು ಓದುತ್ತಿರುವ ನೀವು ಸಹ, ನಿಮ್ಮ ಪ್ರದೇಶದಲ್ಲಿ ದೇವರ ವಾಕ್ಯಗಳನ್ನು ಬಿತ್ತಬಹುದಲ್ಲಾ! ಆರಂಭಿಕ ದಿನಗಳಲ್ಲಿ ಫಲಿತಾಂಶಗಳು ಗೋಚರಿಸದಿರಬಹುದು. ಆದರೆ ಒಂದು ದಿನ ನಾವು ಬಿತ್ತಿದ ಬೀಜದ ಫಲವನ್ನು ಖಂಡಿತವಾಗಿ ನೋಡುತ್ತೇವೆ. ಬೀಜವನ್ನು ನೆಡಲು ಹಿಂಜರಿಯಬೇಡಿ. ಇಂದೇ ಬಿತ್ತೋಣ! ಪರಲೋಕದಲ್ಲಿ ಪ್ರತಿಫಲವನ್ನು ನೋಡೋಣ! ಬಿತ್ತಲು ಬನ್ನಿ!!

- Mrs. ಶಕ್ತಿ ಶಂಕರ್ ರಾಜ್ 

 

ಪ್ರಾರ್ಥನಾ ಅಂಶ:

ನಾಳೆ ನಮ್ಮ ಕ್ಯಾಂಪಸ್‌ನಲ್ಲಿ ನಡೆಯಲಿರುವ 24 ಗಂಟೆಗಳ ಉಪವಾಸ ಪ್ರಾರ್ಥನೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಪ್ರಾರ್ಥನಾ ಆತ್ಮದಿಂದ ತುಂಬಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş holiganbet holiganbet giriş jasminbet jasminbet giriş kargabet kargabet giriş matbet matbet giriş norabahis norabahis giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş holiganbet casibom çarkbet vizebet vizebet giriş alobet alobet giriş amgbahis amgbahis giriş sweet bonanza grandpashabet grandpashabet jojobet gameofbet