Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.02.2024
Share:

By Village Missionary Movement

Thursday, 08-Feb-2024

ಧೈನಂದಿನ ಧ್ಯಾನ(Kannada) – 08.02.2024

 

ಹಲವು ವಿಧವಾದ ಬೀಜಗಳು

 

"…ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು" - ಗಲಾತ್ಯ. 6:7

 

"ಒಬ್ಬ ಮನುಷ್ಯನ ಸ್ಮರಣೆ ಹೇಗೋ ಹಾಗೆಯೇ ಅವನೂ ಇರುತ್ತಾನೆ" ಎಂದು ಸತ್ಯವೇದವು ಹೇಳುತ್ತಿದೆ. ಅಂದರೆ, ಒಂದು ಮನುಷ್ಯನ ಹೃದಯದ ಯೋಚನೆಗಳ ಪ್ರಕಾರ, ಅವನ ಕ್ರಿಯೆಗಳು ಸಹ ನಿರ್ಧರಿಸಲ್ಪಡುತ್ತವೆ. ಮನುಷ್ಯನ ಕ್ರಿಯೆಗಳೇ ಅವನು ಬಿತ್ತುವ ಬೀಜಗಳು! ಮನುಷ್ಯನು ಬಿತ್ತುವ ವಿವಿಧ ರೀತಿಯ ಬೀಜಗಳ ಬಗ್ಗೆಯೂ ಅದರಿಂದ ಅವರು ಕೊಯ್ಯುವ ಸುಗ್ಗಿಯ ಬಗ್ಗೆಯು ಸತ್ಯವೇದವು ಏನು ಹೇಳುತ್ತದೆ ಎಂಬುದನ್ನು ನೋಡೋಣ.

 

ಶಾರೀರಿಕವಾಗಿ ಬಿತ್ತುವ ಬೀಜ:

ಇದನ್ನು ತಮ್ಮ ಹೃದಯ ಮತ್ತು ಶರೀರ ಬಯಸುವುದನ್ನು ಮಾಡುವವರು ಈ ಬೀಜವನ್ನು ಬಿತ್ತುತ್ತಾರೆ. ಈ ಬೀಜವು ದೇವರು ಬಯಸದ ಶಾರೀರಿಕ ಕೆಲಸಗಳಾಗಿ ಪ್ರಕಟವಾಗುತ್ತದೆ. ಇಂತಹ ಮನುಷ್ಯರು ಅನ್ಯಾಯವನ್ನು ಬಿತ್ತುವುದರಿಂದ ದುಃಖವನ್ನು (ಶಾಪವನ್ನು) ಕೊಯ್ಯುತ್ತಾರೆ. (ಜ್ಞಾನೋಕ್ತಿ 22:8) ನಿತ್ಯನಾಶನವೇ ಅವರ ಸುಗ್ಗಿಯಾಗಿರುತ್ತದೆ.

 

ಆತ್ಮಕ್ಕಾಗಿ ಬಿತ್ತುವ ಬೀಜ:

ಕ್ರಿಸ್ತನ ಜನರು ಈ ಬೀಜವನ್ನು ಬಿತ್ತುತ್ತಾರೆ. ಅವರು ಆತ್ಮದಿಂದ ಮುನ್ನಡೆಸಲ್ಪಡುತ್ತಾರೆ. ಅವರ ಕ್ರಿಯೆಗಳಲ್ಲಿ ಆತ್ಮದ ಫಲವು ಪ್ರಕಟವಾಗುತ್ತದೆ. ಅವರು ತಮ್ಮ ಆಧ್ಯಾತ್ಮಿಕ ಜೀವನಕ್ಕೆ ಮತ್ತು ಇತರರ ಆಧ್ಯಾತ್ಮಿಕ ಜೀವನಕ್ಕೆ ಉಪಯುಕ್ತವಾದ ಬೀಜಗಳನ್ನು ಬಿತ್ತುತ್ತಾರೆ ಮತ್ತು ಅವರು ಕಾರ್ಯಗಳನ್ನು ಮಾಡುತ್ತಾರೆ ಇಂತಹ ನೀತಿಯ ಬೀಜಗಳನ್ನು ಬಿತ್ತುವವರು ನಿಜವಾದ ಫಲವಾಗಿರುವ ನಿತ್ಯಜೀವವನ್ನು ಬಿತ್ತುವವರು ಶಾಶ್ವತ ಜೀವನವನ್ನು ತಾವು ಹೊಂದಿ ಇತರರೂ ಹೊಂದಿಕೊಳ್ಳಲು ಮಾರ್ಗತೋರುತ್ತಾರೆ. 

 

ಬುದ್ಧಿವಂತಿಕೆಯ ಬೀಜ ಪ್ರಯೋಜನಗಳು:

ಇದು ಸುವಾರ್ತಾಬೋಧಕರು ಮತ್ತು ವಿಶ್ವಾಸಿಗಳು ನೆಟ್ಟ ಸುವಾರ್ತಾಬೋಧಕ ಬೀಜಗಳು ಮತ್ತು ಸತ್ಯವೇದ ವಾಕ್ಯಗಳ ಬೀಜಗಳನ್ನು ಸೂಚಿಸುತ್ತದೆ. ಇಂತಹ ಬೀಜವು ಆತ್ಮಸಂಬಂಧವಾದ ಸುಗ್ಗಿಯನ್ನು ನೀಡುತ್ತದೆ (1 ಕೊರಿಂಥ. 9:11)

 

ಧರ್ಮಸಹಾಯದ ಬೀಜ:

2 ಕೊರಿಂಥ 1: 6-12 ಇದು ಪರಿಶುದ್ಧರ ಕೊರತೆಗಳನ್ನು ನೀಗಿಸುವುದಕ್ಕಾಗಿ ಮಾಡುವ ಉಪಕಾರಗಳನ್ನು, ಬಡವರಿಗೆ ಮಾಡುವಂತಹ ದಾನ ಕಾರ್ಯಗಳನ್ನು ಸೂಚಿಸುತ್ತದೆ. ಇಂತಹ ಬೀಜಗಳನ್ನು ಮಿತವಾಗಿ ಬಿತ್ತುವವರು ಲಾಭವನ್ನು ಸಹ ಮಿತವಾಗಿ ಕೊಯ್ಯುತ್ತಾರೆ ಮತ್ತು ಹೇರಳವಾಗಿ ಬಿತ್ತುವವರು ಲಾಭವನ್ನು ಹೆಚ್ಚಾಗಿ ಕೊಯ್ಯುತ್ತಾರೆ. ಬಡವರಿಗೆ ಕೊಡುವವರ ನೀತಿಯು ಶಾಶ್ವತವಾಗಿ ನಿಲ್ಲುವುದು ಮಾತ್ರವಲ್ಲದೆ, ಅವರ ಕೈಗಳ ಎಲ್ಲಾ ಕೆಲಸಗಳು ಆಶೀರ್ವದಿಸಲ್ಪಡುತ್ತವೆ.

 

ಪ್ರಿಯರೇ! ನಾವು ಎಂತಹ ಬೀಜಗಳನ್ನು ಬಿತ್ತಲಿದ್ದೇವೆ? ಯೋಚಿಸೋಣ! ಉತ್ತಮ ಬೀಜಗಳನ್ನು ಬಿತ್ತದಿರಲು ಕೆಲವು ಕಾರಣಗಳನ್ನು ಬಳಸಬೇಡಿ. ಗಾಳಿಯನ್ನು ನೋಡುತ್ತಲೇ ಇರುವವನು ಬೀಜ ಬಿತ್ತನು; ಮೋಡಗಳನ್ನು ಗಮನಿಸುತ್ತಲೇ ಇರುವವನು ಪೈರು ಕೊಯ್ಯನು. (ಪ್ರಸಂಗಿ. 11:4) ಮುಂಜಾನೆಯೇ ನಿನ್ನ ಬೀಜವನ್ನು ಬಿತ್ತು; ... ಎಂದು ಸಂಜೆ ವೇಳೆಯಲ್ಲಿ ನಿನ್ನ ಕೈಯನ್ನು ಹಿಂತೆಗೆಯಬೇಡ; ... ಎಂದು ಸತ್ಯವೇದವು ಹೇಳುತ್ತಿದೆ. ಬೆಳಿಗ್ಗೆ ಎಂಬುದು ನಾವು ಹೊಸ ಉತ್ಸಾಹದಿಂದಿರುವ ಸಮಯ, ಸಂಜೆ ಎಂಬುದು ದಣಿದು ಆಯಾಸದಿಂದ ಇರುವ ಸಮಯ. ಮತ್ತು ದಣಿದ ಸಮಯ. ನಮ್ಮ ದೇಹ ಮತ್ತು ಮನಸ್ಸಿನ ಸ್ಥಿತಿ ಹೇಗೇ ಇರಲಿ, ದೇವರು ಬಯಸುವ ಒಳ್ಳೆಯ ಬೀಜಗಳನ್ನು ಬಿತ್ತುಬಿಡಬೇಕು ಎಂಬುದೇ ಮೇಲ್ಕಂಡ ವಾಕ್ಯದ ಅರ್ಥ. ಒಳ್ಳೆಯ ಕ್ರಿಯೆಗಳಾಗಿರುವ ಬೀಜಗಳನ್ನು ಸೋತುಹೋಗದೆಯೂ, ದಣಿಯದೆಯೂ ಬಿತ್ತಿದರೆ ತಕ್ಕ ಕಾಲದಲ್ಲಿ ಕೊಯ್ಯುತ್ತೇವೆ. ದೇವರು ಸಹಾಯ ಮಾಡಲಿ.

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

ಪ್ರತಿ ರಾಜ್ಯದಲ್ಲೂ 300 ಗಿದ್ಯೋನ್ ಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş