Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.02.2024
Share:

By Village Missionary Movement

Wednesday, 07-Feb-2024

ಧೈನಂದಿನ ಧ್ಯಾನ(Kannada) – 07.02.2024

 

ಸಮಾರ್ಯ ಬೀಜ

 

"ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವದು" - ಜ್ಞಾನೋಕ್ತಿ. 28:13

 

ಒಬ್ಬ ಕ್ರೈಸ್ತ ಯುವಕ ಒಂದು ಪಾಪದಲ್ಲಿ ಬಿದ್ದನು. ತಕ್ಷಣವೇ ಅವನು ತನ್ನ ಹೃದಯದಲ್ಲಿ ಅದನ್ನು ಗ್ರಹಿಸಿ ಪಶ್ಚಾತ್ತಾಪದಿಂದ ಆ ಪಾಪವನ್ನು ಅರಿಕೆಮಾಡಿದ್ದು ಮಾತ್ರವಲ್ಲದೆ ಅವನು ಪಾಪದಲ್ಲಿ ಬೀಳಲು ಕಾರಣವಾದ ವಿಷಯವನ್ನು ಸಹ ಸರಿಪಡಿಸಿಕೊಂಡನು. ಆದರೆ ಸೈತಾನನು ಆ ಹುಡುಗನ ಮೇಲೆ ಆರೋಪ ಮಾಡುತ್ತಲೇ ಇದ್ದನು. ವರ್ಷಾನುಗಟ್ಟಲೆ ತಪ್ಪಿತಸ್ಥ ಭಾವನೆಯೊಂದಿಗೆ ಆ ಯುವಕ ಹೋರಾಡುತ್ತಿದ್ದನು. ಒಂದು ದಿನ ಅವನು ತನ್ನ ಸಭೆಯಲ್ಲಿ ಪ್ರವಾದನೆಯ ವರವನ್ನು ಹೊಂದಿರುವ ತಾಯಿಯ ಬಳಿಗೆ ಹೋಗಿ ತನಗಾಗಿ ಪ್ರಾರ್ಥಿಸುವಂತೆ ಕೇಳಿಕೊಂಡನು. ಅವರು ಅವನಿಗಾಗಿ ಪ್ರಾರ್ಥಿಸುವಾಗ ಅವನ ಕಣ್ಣುಗಳಿಂದ ಕಣ್ಣೀರು ಹರಿಯಿತು. ಕರ್ತನೇ, ನಾನು ಇಂತಹ ಪಾಪವನ್ನು ಮಾಡಿದ್ದೇನೆ, ನನ್ನನ್ನು ಕ್ಷಮಿಸುತ್ತೀರಾ? ಎಂದು ಇದೇ ವಿಷಯವನ್ನು ಮತ್ತೆ ಮತ್ತೆ ಹೇಳಿ ಹೃದಯದಲ್ಲಿ ಪ್ರಾರ್ಥಿಸುತ್ತಿದ್ದನು. ದೇವರು ಆ ತಾಯಿಯ ಮೂಲಕ ಮಾತನಾಡಿದರು. "ಮಗನೇ, ನೀನು ಏನು ಪಾಪ ಮಾಡಿದೆ? ನನಗೆ ನೆನಪಿಲ್ಲವೇ" ಎಂದು! ಹೌದು, ಕ್ಷಮಿಸುವ ದೇವರು ಅವುಗಳನ್ನು ಮರೆತುಬಿಟ್ಟರು. ಹಲ್ಲೇಲೂಯಾ!!

 

ಕರ್ತನಾದ ಯೇಸು ಭೂಮಿಯ ಮೇಲೆ ವಾಸಿಸುತ್ತಿದ್ದ ದಿನಗಳಲ್ಲಿ, ಒಂದು ಬಾರಿ ಸಮಾರ್ಯ ದೇಶದ ಮೂಲಕ ಹಾದುಹೋಗಬೇಕಾಗಿತ್ತು, ಆಗ ಯೇಸು ಪ್ರಯಾಣದಲ್ಲಿ ದಣಿದು ಬಾವಿಯ ಬಳಿಯಲ್ಲಿ ಹಾಗೆ ಕೂತುಕೊಂಡರು. ಆಗ ಒಂದು ಹೆಂಗಸು ನೀರು ಸೇದಲು ಬಂದಳು. ಯೇಸು ಅವಳನ್ನು "ಅಮ್ಮಾ, ನೀರು ಕುಡಿಯುವದಕ್ಕೆ ಕೊಡು" ಎಂದು ಕೇಳಿದನು. ಕರ್ತನಾದ ಯೇಸು ಆ ಹೆಂಗಸನ್ನು ಪಾಪಿ ಎಂದು ತಳ್ಳಿಹಾಕಲಿಲ್ಲ ಮತ್ತು ಅವಳನ್ನು ಖಂಡಿಸಲೂ ಇಲ್ಲ. ಅವಳಿಗೆ ತನ್ನನ್ನು ಬಹಿರಂಗಪಡಿಸಿದರು. ತಕ್ಷಣ ಆ ಹೆಂಗಸು ತನ್ನ ಕೊಡವನ್ನು ಅಲ್ಲೇ ಬಿಟ್ಟು ನಾನು ಇದುವರೆಗೆ ಮಾಡಿದ್ದನ್ನೆಲ್ಲಾ ಒಬ್ಬ ಮನುಷ್ಯ ನನಗೆ ಹೇಳಿದನು. ಬಂದು ಅವರನ್ನು ನೋಡಿರಿ ಎಂದು ಸುವಾರ್ತೆಯನ್ನು ಪ್ರಕಟಿಸಿದಳು. ಆ ಸ್ತ್ರೀಯ ಮೂಲಕ ಇಡೀ ಗ್ರಾಮವೇ ಯೇಸುವನ್ನು ಅರಿತುಕೊಂಡಿತು. 

 

ನನಗೆ ಪ್ರಿಯರಾದವರೇ, ನಮ್ಮ ಕರ್ತನು ನಮ್ಮ ಪಾಪಗಳನ್ನು ಕ್ಷಮಿಸುವವರು ಮಾತ್ರವಲ್ಲ, ಕ್ಷಮಿಸಿದ ಪಾಪಗಳನ್ನು ಸಹ ಮರೆತುಬಿಡುತ್ತಾರೆ. ಆದುದರಿಂದ ನಮ್ಮ ಪಾಪಗಳ ನಿಮಿತ್ತ ನಮಗೆ ತಪ್ಪಿತಸ್ಥರೆಂಬ ಮನೋಭಾವನೆ ಏರ್ಪಟ್ಟರೆ ಅದನ್ನು ಯೇಸುವಿನ ಬಳಿ ಅರಿಕೆಮಾಡಿ ಬಿಟ್ಟುಬಿಡೋಣ. ಸಮಾರ್ಯ ಸ್ತ್ರೀಯು ನಮಗೆ ಕಲಿಸುವ ಪಾಠ ಇದುವೇ! ಇಂದು ನನ್ನಿಂದ ಏನು ಮಾಡಲು ಸಾಧ್ಯ ಎಂದು ಹಂಬಲಿಸುತ್ತಿರುವ ನೀವು ಯೇಸು ನಿಮ್ಮ ಜೀವನದಲ್ಲಿ ಮಾಡಿದ ಒಳ್ಳೆಯ ಕಾರ್ಯಗಳನ್ನು ಸಾಕ್ಷಿಯಾಗಿ ಹಂಚಿಕೊಳ್ಳಿ. ಇದೇ ಸುವಾರ್ತೆ! ಸಮುದ್ರಗಳು ಮತ್ತು ಪರ್ವತಗಳನ್ನು ದಾಟಿಯೇ ಸುವಾರ್ತೆಯನ್ನು ಸಾರಬೇಕೆಂಬ ಕಡ್ಡಾಯವಿಲ್ಲ. ನೀವು ವಾಸಿಸುವ ಪ್ರದೇಶಗಳಲ್ಲಿ ಅವರಿಗಾಗಿ ಬೀಜಗಳಾಗಿ ಮಾರ್ಪಡುವುದಾದರೆ ಖಂಡಿತವಾಗಿಯೂ ಅದ್ಭುತ ಫಲಿತಾಂಶಗಳು ಕಂಡುಬರುತ್ತವೆ.

- Mrs. ರೂಬಿ ಅರುಣ್

 

ಪ್ರಾರ್ಥನಾ ಅಂಶ:

ಎಲ್ಲಾ ತಾಲೂಕುಗಳಲ್ಲಿ 3 ಒಂದು ಗಂಟೆ ಮಿಷನರಿಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş