Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.02.2024
Share:

By Village Missionary Movement

Saturday, 03-Feb-2024

ಧೈನಂದಿನ ಧ್ಯಾನ(Kannada) – 03.02.2024

 

ಹೊರಟುಹೋಗಿ 

 

"…ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ;.." - ಮತ್ತಾಯ 28:19

 

ಒಬ್ಬ ಯುವಕ ತನ್ನ ಮನೆಯ ಬಳಿಯಿರುವ ಶ್ರೀಮಂತ ವ್ಯಕ್ತಿಗಾಗಿ ಸತತವಾಗಿ ಪ್ರಾರ್ಥಿಸುತ್ತಿದ್ದನು. ಏಕೆಂದರೆ ಆ ವ್ಯಕ್ತಿ ಒಳ್ಳೆಯವರಾಗಿದ್ದರು ಮತ್ತು ಅನೇಕ ಜನರಿಗೆ ಸಹಾಯ ಮಾಡಿದ್ದರು. ಆದರೆ ದೇವರನ್ನು ತಿಳಿದಿಲ್ಲವೇ ಎಂದು ಭಾರವಾದ ಹೃದಯದಿಂದ ಆ ಯುವಕ ಪ್ರಾರ್ಥಿಸುವುದನ್ನು ಮುಂದುವರೆಸಿದನು. ಒಂದು ದಿನ ಕರ್ತನು ಅವನಿಗೆ, "ಹೋಗಿ ಮಾತನಾಡು" ಎಂದು ಹೇಳಿದರು. ಆದರೆ ಹುಡುಗ ನಾನು ತುಂಬಾ ಚಿಕ್ಕವನು ಮತ್ತು ತುಂಬಾ ಬಡವ, ನಾನು ಅವರೊಂದಿಗೆ ಹೇಗೆ ಮಾತನಾಡಲಿ ಎಂದು ಯೋಚಿಸುತ್ತಿದ್ದನು. "ಅವರ ಬಗ್ಗೆ ಕೇಳಲ್ಪಡದವರು ಹೇಗೆ ನಂಬುತ್ತಾರೆ? ಆತನ ಸುದ್ದಿ ಕೇಳದಿರುವಲ್ಲಿ ಆತನನ್ನು ನಂಬುವದು ಹೇಗೆ? ಸಾರಿ ಹೇಳುವವನಿಲ್ಲದೆ ಕೇಳುವದು ಹೇಗೆ? (ರೋಮಾ 10:14) ಎಂಬ ವಾಕ್ಯದ ಮೂಲಕ ದೇವರು ಮಾತನಾಡಿದರು. ಅವನು ದಿನವಿಡೀ ಪ್ರಾರ್ಥಿಸಿ ಹೋಗುತ್ತೇನೆ ಎಂದನು. ಆ ರಾತ್ರಿ ಇದ್ದಕ್ಕಿದ್ದಂತೆ ಅವರೊಂದಿಗೆ ಸೇರಿ ವ್ಯಾಪಾರ ಮಾಡುತ್ತಿದ್ದ ಪಾರ್ಟ್ನರ್ ಜೊತೆ ಒಂದು ಸಮಸ್ಯೆ ಏರ್ಪಟ್ಟು ಪಾರ್ಟ್ನರ್ ಶ್ರೀಮಂತನನ್ನು ಕೊಂದುಬಿಟ್ಟರು. ಬೆಳಿಗ್ಗೆ ಎದ್ದ ಕೂಡಲೇ ಆ ಯುವಕನು ತನ್ನ ಮನೆಯ ಮುಂದೆ ಜನಸಂದಣಿ ಏನೆಂದು ಕೇಳಿ ಸುದ್ದಿ ಕೇಳಿ ಅತ್ತನು.

 

ಮತ್ತಾಯ 28: 19-20 ರಲ್ಲಿ ಯೇಸು ಕ್ರಿಸ್ತನು ಹೇಳುತ್ತಾರೆ, ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ ಎಂದು. ಆದರೆ ನಾವು ಆ ಯುವಕನಂತೆ ಅನೇಕ ಕಾರಣಗಳನ್ನು ಹೇಳುತ್ತಿದ್ದೇವೆಯೇ? ಮಹಾ ಸೇನಾಪತಿಯಾದ ನಾಮಾನನು ದೇವರನ್ನು ತಿಳಿಯಲು, ದೇವರು ಗುಲಾಮ ಹುಡುಗಿಯನ್ನು ಆರಿಸಿಕೊಂಡರು. ನಾಮಾನನು ಸ್ವಸ್ಥತೆ ಹೊಂದಿದ್ದರಿಂದ ಇಡೀ ಸಿರಿಯಾ ದೇಶವು ದೇವರನ್ನು ಅರಿಯಲು ಸಾಧ್ಯವಾಯಿತು. ತಾಯಿ ಮತ್ತು ತಂದೆಯಿಲ್ಲದೆ ತನ್ನ ಸಹೋದರನೊಂದಿಗೆ ಅನ್ಯದೇಶದಲ್ಲಿ ವಾಸಿಸುತ್ತಿದ್ದ ಎಸ್ತೇರ್ ಮೂಲಕ ದೇವರು ಯೆಹೂದಿ ಜನರ ರಕ್ಷಣೆಯನ್ನು ಆಜ್ಞಾಪಿಸಿದರು. ಯೇಸು ಕ್ರಿಸ್ತನು ತನ್ನನ್ನು ಅನುಸರಿಸಲು ತನ್ನೊಂದಿಗೆ ಇದ್ದ ಅಶಿಕ್ಷಿತ ಮೀನುಗಾರರನ್ನು ಆರಿಸಿಕೊಂಡರು. ಅವರು ಮೂರು ಬಾರಿ ತನ್ನನ್ನು ನಿರಾಕರಿಸಿದ ಪೇತ್ರನ ಮೂಲಕ ಸಭೆಯನ್ನು ನಿರ್ಮಿಸಿದರು. ಅವರ ಮುಖಾಂತರ ಐದು ಸಾವಿರ ಮತ್ತು ಮೂರು ಸಾವಿರ ಜನರು ರಕ್ಷಣೆಹೊಂದಿದರು. ಮತ್ತು ಅವರ ನೆರಳು ಬಿದ್ದು ಅನೇಕರು ಗುಣಹೊಂದಿದರು. ವಾಕ್ಚಾತುರ್ಯವಿಲ್ಲದವನು, ಮಂದನಾಲಿಗೆಯವನಾದ ಮೋಶೆಯ ಮೂಲಕ ಲಕ್ಷಾಂತರ ಇಸ್ರಾಯೇಲ್ಯರನ್ನು ರಕ್ಷಿಸಲು ಮುಂದಾದರು.

 

ಮೋಶೆ, ಎಸ್ತೇರ್, ಚಿಕ್ಕ ಹುಡುಗಿ ಮತ್ತು ಪೇತ್ರನನ್ನು ಉಪಯೋಗಿಸಿದ ದೇವರು ನಿಮ್ಮನ್ನೂ ಉಪಯೋಗಿಸುತ್ತಾರೆ. ನೀವು ದೇವರಿಗೆ ಸಮರ್ಪಿಸಿಕೊಂಡು ಹೊರಟುಹೋಗಿ. ಮಾತಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮನೇ ನಿಮ್ಮ ಮುಖಾಂತರವಾಗಿ ಮಾತಾಡುವನು ಎಂದು ಮತ್ತಾಯ 10:20 ಹೇಳುತ್ತದೆ ನಾವು ಅವರಿಗಾಗಿ ಒಂದು ಹೆಜ್ಜೆ ಹಾಕಿದಾಗ ಅವರೇ ನಮ್ಮೊಳಗಿದ್ದು ಮಹಿಮೆಹೊಂದುತ್ತಾರೆ. ಇದನ್ನು ರುಚಿ ನೋಡಲು, ಇಂದೇ ಸುವಾರ್ತೆ ಸಾರಲು ಹೊರಡಿರಿ.

- Mrs. ಅನ್ಬುಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ಎಲ್ಲಾ 313 ತಾಲೂಕುಗಳಲ್ಲಿ ಇಬ್ಬರಿಬ್ಬರು ದೆಬೋರಾಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş