Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.02.2024
Share:

By Village Missionary Movement

Friday, 02-Feb-2024

ಧೈನಂದಿನ ಧ್ಯಾನ(Kannada) – 02.02.2024

 

ಮೊದಲ ಹೆಜ್ಜೆ

 

"…ಲಪ್ಪೀದೋತನ ಹೆಂಡತಿಯಾದ ದೆಬೋರಳೆಂಬ ಪ್ರವಾದಿನಿಯು ಇಸ್ರಾಯೇಲ್ಯರಲ್ಲಿ ನ್ಯಾಯತೀರಿಸುತ್ತಿದ್ದಳು" - ನ್ಯಾಯಸ್ಥಾಪಕರು. 4:4

 

ನಾನು ಹದಿಹರೆಯದವನಾಗಿದ್ದಾಗ ಶಿಥಿಲಗೊಂಡ ಕಟ್ಟಡದಲ್ಲಿ ಮಲಗುತ್ತಿದ್ದೆ. ಹಾಗೆ ಮಲಗಿರುವಾಗ ಬೀಗ ಹಾಕಿದ್ದ ಕೋಣೆಯೊಳಗೆ ಯಾರೋ ಒಬ್ಬರು ಬಿಳಿವಸ್ತ್ರಗಳನ್ನು ಧರಿಸಿ ಲೋಕದ ಜನರಿಗಾಗಿ ಅಳುತ್ತಿದ್ದರು. ನಾನೇ ನಿಜವಾದ ದೇವರು, ನನ್ನಿಂದ ಸೃಷ್ಟಿಸಲ್ಪಟ್ಟ ನನ್ನ ಜನರಿಗೆ ಸಮಾಧಾನವನ್ನು ಮತ್ತು ಸಂತೋಷವನ್ನು ಕೊಡಲು ಬಯಸುತ್ತಿದ್ದೇನೆ. ಆದರೆ ಅವರೋ ನನ್ನ ಬಳಿಗೆ ಬರಲು ನಿರಾಕರಿಸುತ್ತಿದ್ದಾರೆ ಎಂದು ಹೇಳಿ ಅತ್ತರು. ನನ್ನ ಮುಂದೆ ಅಳುತ್ತಿರುವ ವ್ಯಕ್ತಿಯನ್ನು ಕಂಡು ನನಗೆ ಅಳು ತಡೆಯಲಾಗಲಿಲ್ಲ. ನಾನೂ ಅತ್ತೆನು ನನ್ನ ಅಳುವಿನ ಶಬ್ದವನ್ನು ಕೇಳಿ ಪಕ್ಕದಲ್ಲಿದ್ದವರು ಬಂದು ಬಾಗಿಲು ತಟ್ಟಿ ಯಾಕೆ ಅಳುತ್ತಿದ್ದೀಯ ಎಂದು ಕೇಳಿದರು. ಅಂದಿನಿಂದ, ನಾನು ಜನಸಂದಣಿಯನ್ನು ನೋಡಿದಾಗಲೆಲ್ಲಾ ನನಗೆ ಅಳುವಿನ ಶಬ್ದ ಕೇಳಿಸುತ್ತಲೇ ಇತ್ತು. ನಾನು ಸಹ ಅಳಲು ಪ್ರಾರಂಭಿಸುತ್ತಿದ್ದೆ. ಒಂದು ದಿನ, ಒಬ್ಬ ಕ್ರೈಸ್ತ ಸ್ನೇಹಿತನ ಮೂಲಕ, ಅಳುತ್ತಿರುವ ವ್ಯಕ್ತಿ ಯೇಸುಕ್ರಿಸ್ತನೇ ಎಂದು ನಾನು ತಿಳಿದುಕೊಂಡೆ. ಜನರು ಅವರನ್ನು ತಿಳಿದಿಲ್ಲವೆಂದು ಅಳುತ್ತಿದ್ದಾರೆ. ನಾವು ಅವರ ಬಗ್ಗೆ ಇತರರಿಗೆ ಹೇಳಬಹುದಲ್ಲಾ ಎಂದು ಪ್ರಾರಂಭಿಸಿ ಮೊದಲ ಹೆಜ್ಜೆ ಇಟ್ಟದ್ದೇ ಈ ಸೇವೆ.

 

ಅಂತೆಯೇ, ದೇವರು ಇಸ್ರಾಯೇಲ್ಯರನ್ನು ಕಾನಾನ್ಯ ರಾಜನ ಗುಲಾಮಗಿರಿಯಿಂದ ಬಿಡಿಸಲು ಉದ್ದೇಶಿಸಿದರು. ದೆಬೋರಳು ಅವರ ಯೋಜನೆಗೆ ಮೊದಲ ಹೆಜ್ಜೆ ಇಟ್ಟಳು. ದೆಬೋರಳು ಅದನ್ನು ಬಾರಾಕನಿಗೆ ಪ್ರಕಟಿಸಿದಳು. ಅವಳು ಕುಟುಂಬದ ಮಹಿಳೆ ಮತ್ತು ನ್ಯಾಯ ವಿಚಾರಿಸುವವಳಾಗಿದ್ದರೂ ದೇವರು ಬಯಸಿದ್ದನ್ನು ಮಾಡಲು ಮೊದಲು ಹೆಜ್ಜೆ ಇಟ್ಟಳು. ಅಲ್ಲಿಯವರೆಗೆ ಯುದ್ಧಕ್ಕೆ ಹೋಗದವಳು ಹಿಂಜರಿಯದೆ ಹೋದಳು. ದೇವರು ನನ್ನ ಜನರನ್ನು ಬಿಡುಗಡೆ ಮಾಡಲು ಬಯಸುವಾಗ, ನಾನು ತಡಮಾಡಿ ಅದರಿಂದ ನನ್ನ ಜನರು ಕಷ್ಟಪಡಬಾರದು ಎಂದು ತಡಮಾಡದೆ ಹೋದಳು. ಇಸ್ರಾಯೇಲ್ಯರು ಗೆದ್ದರು.

 

ಇದನ್ನು ಓದುತ್ತಿರುವ ಪ್ರಿಯರೇ, ನಾನು ಸೇವೆಯನ್ನು ಪ್ರಾರಂಭಿಸುವಾಗ ನನಗೆ ಹೇಗೆ ಪ್ರಾರ್ಥಿಸಬೇಕೆಂದು ತಿಳಿದಿರಲಿಲ್ಲ. ಸತ್ಯವೇದವಿರಲಿಲ್ಲ. ಆದರೆ ನನ್ನನ್ನು ಸ್ವಸ್ಥ ಮಾಡಿದ ದೇವರು ಅಳುತ್ತಿದ್ದಾರೆ. ಅವರ ಕಣ್ಣೀರು ಒರೆಸಬೇಕೆಂದು ಕೂಡಲೇ ಅವರ ಕಣ್ಣೀರನ್ನು ಒರೆಸಲು ಸೇವೆಯನ್ನು ಆರಂಭಿಸಿದೆನು, ಹೊರಟೆನು. ತನ್ನ ಜನರ ದುರವಸ್ಥೆ ಮತ್ತು ದೇವರ ಯೋಜನೆಯನ್ನು ತಿಳಿದ ದೆಬೋರಳು ಯುದ್ಧಭೂಮಿಗೆ ಹೊರಟಳು. ದೇವರು ಜೊತೆಯಿದ್ದು ಜಯವನ್ನು ಕೊಟ್ಟರು. ಇದೇ ರೀತಿ ಈ ವರ್ಷ 313 ತಾಲೂಕುಗಳಲ್ಲಿ ಎಬ್ಬಿಸಲು ದೇವರು ಯೋಜನೆಯನ್ನು ಕೊಟ್ಟಿದ್ದಾರೆ. ಅವರು ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ಒಂದು ಮನೆಯಲ್ಲಿ ಒಟ್ಟುಗೂಡಿ ಪ್ರಾರ್ಥಿಸಿದ ನಂತರ ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ ಹಳ್ಳಿಗಳಲ್ಲಿ ಸುವಾರ್ತೆಯನ್ನು ಸಾರಬೇಕು. ದೆಬೋರಾಳ ಹಾಗೆ ನೀವು ಸಹ ಮೊದಲ ಹೆಜ್ಜೆ ಇಡಿ. ದೇವರು ಜೊತೆಯಿದ್ದು ನಿಮ್ಮನ್ನು ನಿಮ್ಮ ಸೇವೆಯನ್ನು, ಕುಟುಂಬವನ್ನು ಆಶೀರ್ವದಿಸುತ್ತಾರೆ. ಬಲದೊಂದಿಗೆ ಪರಲೋಕ ತಂದೆಯನ್ನು ದರ್ಶಿಸಬಹುದು. ಹಲ್ಲೇಲೂಯಾ!

- K. ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ:

ಎಲ್ಲಾ ತಾಲೂಕುಗಳಲ್ಲಿ 30 ಮನೆ ಪ್ರಾರ್ಥನಾ ಗುಂಪುಗಳನ್ನು ಪ್ರಾರಂಭಿಸಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş