Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.04.2021
Share:

By Village Missionary Movement

Monday, 05-Apr-2021

ಧೈನಂದಿನ ಧ್ಯಾನ(Kannada) – 05.04.2021

ಬಳಲಿ ಹೋಗಬೇಡ

"ನಾವಾದರೋ ಹಿಂದೆಗೆದವರಾಗಿ ನಾಶವಾಗುವವರಲ್ಲ, ನಂಬುವವರಾಗಿ ಪ್ರಾಣರಕ್ಷಣೆಯನ್ನು ಹೊಂದುವವರಾಗಿದ್ದೇವೆ." - ಇಬ್ರಿಯರಿಗೆ 10:39

ಅಮೆರಿಕಾದಲ್ಲಿ ಸಾಟ್ ಪೆನ್ನಿಂಗಡನ್ ಎಂಬ ಫುಟ್ಬಾಲ್ ಆಟಗಾರರೊಬ್ಬರಿದ್ದರು. ಇವರು ಅನೇಕ ಪಂದ್ಯಗಳಲ್ಲಿ ಕಠಿಣವಾಗಿ ಆಟವಾಡಿದ್ದರಿಂದ ಫುಟ್ಬಾಲ್ ಆಡಲು ಸಾಧ್ಯವಾಗದ ಮಟ್ಟಿಗೆ ಶರೀರದಲ್ಲಿ ಅನೇಕ ಗಾಯಗಳೊಂದಿಗೆ ಕಾಣಲ್ಪಟ್ಟರು. ಅವರಿಗಿದ್ದ ಗಾಯಗಳಿಂದಾಗಿ ಎರಡು ಬಾರಿ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು. ತಿಂಗಳುಗಟ್ಟಲೆ ಒಳ್ಳೆಯ ಆರೋಗ್ಯಕ್ಕಾಗಿ ಔಷಧಿಗಳನ್ನು ತೆಗೆದುಕೊಂಡರು. ಹೀಗೆ ಕ್ರಮವಾಗಿ ಹಲವು ವಾರಗಳ ತರಬೇತಿಯ ನಂತರ ಆರೋಗ್ಯವು ಚೇತರಿಸಿಕೊಂಡಿತು. ಪುನಃ ಫುಟ್ಬಾಲ್ ಆಡಲು ಮೈದಾನಕ್ಕೆ ಇಳಿದು ಚಿಕ್ಕ ಚಿಕ್ಕ ಪಂದ್ಯಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರು. ಒಂದು ನಿರ್ದಿಷ್ಟವಾದ ಸಮಯದಲ್ಲಿ ರಾಷ್ಟ್ರಮಟ್ಟದ ಪಂದ್ಯಗಳಲ್ಲಿ ಭಾಗವಹಿಸಿ ಎರಡು ಬಾರಿ ಆ ವರ್ಷದ ರಾಷ್ಟ್ರೀಯ ಫುಟ್ಬಾಲ್ ಆಟದ ಆಟಗಾರನಾಗಿ ವಿಶೇಷ ಪ್ರಶಸ್ತಿಯನ್ನು ಪಡೆದುಕೊಂಡರು.

ಕ್ರಿಸ್ತನಲ್ಲಿ ನಮ್ಮ ಆತ್ಮೀಕ ಜೀವನವು ಕಠಿಣವಾದ ತರಬೇತಿಗಳು, ಹೋರಾಟಗಳಿಂದ ತುಂಬಿ ಕಾಣಲ್ಪಡುತ್ತಿವೆ. ನಮ್ಮ ಆತ್ಮೀಕ ಜೀವನದಲ್ಲಿ ಕೆಲವು ಸಮಯಗಳಲ್ಲಿ ಬಲವಾದ ಗಾಯಗಳು ಏರ್ಪಡುತ್ತಿವೆ. ಅದು ನಾವು ಪುನಃ ಎದ್ದೇಳಲಾಗದ ಮಟ್ಟಿಗೆ ನಮ್ಮನ್ನು ಹಿಂಜಾರುವಂತೆ ಮಾಡುತ್ತಿದೆ. ಇಂತಹ ಪಾಡುಗಳು, ಹೋರಾಟಗಳಲ್ಲಿ ಅನೇಕರು ಮುಗ್ಗರಿಸಿ ಬಿದ್ದುಹೋಗಿ ಆತ್ಮೀಕ ಓಟವನ್ನೇ ನಿಲ್ಲಿಸಿ ಬಿಡುತ್ತಿದ್ದಾರೆ. ಇಂದು ನಾವು ಓದಿದ ಸತ್ಯವೇದ ಭಾಗದಲ್ಲಿ ಇಬ್ರಿಯರಿಗೆ ಹೀಗೆ ಬರೆಯುತ್ತಿದ್ದಾರೆ. ನಾವಾದರೋ ಹಿಂದೆಗೆದವರಾಗಿ ನಾಶವಾಗುವವರಲ್ಲ, ನಂಬುವವರಾಗಿ ಪ್ರಾಣರಕ್ಷಣೆಯನ್ನು ಹೊಂದುವವರಾಗಿದ್ದೇವೆ. ಎಂದು ಹೇಳುತ್ತಿದ್ದಾರೆ. ಎಲೀಯ ಎಂಬ ಪ್ರವಾದಿ ತನ್ನ ಸೇವೆಯ ದಿನಗಳಲ್ಲಿ ಬಳಲಿ ಹೋದಾಗ ದೇವರು ಅವರನ್ನು ದೂತನ ಮೂಲಕ ಹೀಗೆ ಬಲಪಡಿಸಿದರು. "ಎದ್ದು ಊಟಮಾಡು; ನೀನು ನಿನ್ನ ಶಕ್ತಿ ಮೀರುವಷ್ಟು ಪ್ರಯಾಣಮಾಡಬೇಕಾಗಿದೆ ಅಂದನು."  (1 ಅರಸು .19:7)

ಕ್ರಿಸ್ತನಲ್ಲಿ ಪ್ರಿಯರೇ! ಈ ಸಂದೇಶವನ್ನು ಓದುತ್ತಿರುವ ನೀವು ನಿಮ್ಮ ಓಟವು ತಡೆಗಳಿಂದ ನಿಂತು ಹೋಗಿದ್ದರೆ, ನಿಮ್ಮ ಕೊರತೆಗಳನ್ನು, ಬಲಹೀನತೆಗಳನ್ನು ದೇವರ ಬಳಿ ಹೇಳಿರಿ. ನಿಮ್ಮನ್ನು ಚೆನ್ನಾಗಿ ಅರಿತಿರುವವರು, ನಿಮ್ಮ ಬಲಹೀನತೆಯಲ್ಲಿ ಸಹಾಯ ಮಾಡುವವರು ಯೇಸು ಒಬ್ಬರು ಮಾತ್ರವೇ! ನಿಮ್ಮ ಆತ್ಮೀಕ ಪ್ರಯಾಣವು ತಡೆ ಗಳಿಲ್ಲದೆ ಮುಂದೆ ಸಾಗುವಂತೆ ಯಾವಾಗಲೂ ದೇವರ ಸಹಾಯವನ್ನು ಕೇಳಲು ಮರೆಯಬೇಡಿರಿ. ನಿಮ್ಮ ಕೈ ಹಿಡಿದಿರುವವರು ಕೊನೆಯವರೆಗೂ ಮುನ್ನಡೆಸಲು ಶಕ್ತರಾಗಿದ್ದಾರೆ. ಹಲ್ಲೆಲೂಯ!
-    P. ಜೇಕಬ್ ಶಂಕರ್

ಪ್ರಾರ್ಥನಾ ಅಂಶ:-
ಸತ್ಯವೇದ ಕಾಲೇಜಿನಲ್ಲಿ ಸೇರಿರುವ ವಿದ್ಯಾರ್ಥಿಗಳು ಸತ್ಯದಲ್ಲಿ ಬೇರೂರಿ ಬೆಳೆಯುವಂತೆ ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin