Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.02.2024
Share:

By Village Missionary Movement

Thursday, 01-Feb-2024

ಧೈನಂದಿನ ಧ್ಯಾನ(Kannada) – 01.02.2024

 

ಕೇವಲ ನೃತ್ಯವಲ್ಲ. . .

 

"…ನೀವು ಲೋಕದ ಎಲ್ಲಾ ಕಡೆಗೆ ಹೋಗಿ ಜಗತ್ತಿಗೆಲ್ಲಾ ಸುವಾರ್ತೆಯನ್ನು ಸಾರಿರಿ" - ಮಾರ್ಕ 16:15

 

ದೇವರು ತಮ್ಮನ್ನು ಆಶೀರ್ವದಿಸುವಾಗ, ದೇವಜನರು ಅದನ್ನು ನೃತ್ಯದಿಂದ ಆಚರಿಸಿದರು ಎಂದು ನಾವು ಸತ್ಯವೇದದಲ್ಲಿ ನೋಡುತ್ತೇವೆ. ಕೆಂಪು ಸಮುದ್ರವು ಬೇರ್ಪಟ್ಟು ದೊಡ್ಡ ಬಿಡುಗಡೆಯುಂಟಾದಾಗ, ಮಿರ್ಯಾಮಳುಮತ್ತು ಅವಳೊಂದಿಗೆ ಇದ್ದ ಸ್ತ್ರೀಯರು ನೃತ್ಯದೊಂದಿಗೆ ದೇವರನ್ನು ಆರಾಧಿಸಿದರು. ಒಡಂಬಡಿಕೆಯ ಮಂಜೂಷವನ್ನು ಯೆರೂಸಲೇಮಿಗೆ ಹಿಂತೆಗೆದುಕೊಂಡು ಬರುವಾಗ, ದಾವೀದನು ಸಂತೋಷದಿಂದ ತುಂಬಿದವನಾಗಿ ನೃತ್ಯದಿಂದ ದೇವರನ್ನು ಸ್ತುತಿಸಿದರು. ಹೀಗೆ ತುಂಬು ಹೃದಯದಿಂದ ದೇವರನ್ನು ನಾಟ್ಯವಾಡಿ ಆರಾಧಿಸುವುದು ಒಳ್ಳೆಯದು. ಆದರೆ ಅದೇ ನೃತ್ಯವು ದೇವರನ್ನು ಕೇಂದ್ರವಾಗಿರಿಸದೆ ಮನರಂಜನೆಯಾಗಿ ಮಾರ್ಪಡಿಸುವ ಅಪಾಯವಿದೆ. ಯುವಕ ಯುವತಿಯರು ಸೇರುವ ಕೂಟಗಳಲ್ಲಿ ಇಂತಹ ನೃತ್ಯಗಳು ಎಡವುವಂತೆ ಮಾಡುತ್ತದೆ. ಇಂದು ಕೆಲವು ಆರಾಧನೆಗಳು ಸಿನಿಮಾ ರಂಗದಲ್ಲಿ ಸಂಗೀತ ಕಛೇರಿಯಂತಿವೆ. ನಮ್ಮ ಆರಾಧನೆಯ ವಿಧಾನಗಳು ಯಾರಿಗೂ ಅಡ್ಡಿಯಾಗಬಾರದು.

 

ಬಾಬೆಲ್ ದೇಶದ ನದಿಗಳ ಬಳಿಯಲ್ಲಿ ತಮ್ಮ ಕಿನ್ನರಿಗಳನ್ನು ನುಡಿಸಲು ಮನಸ್ಸಿಲ್ಲದೆ ದುಃಖದ ಮುಖದೊಂದಿಗೆ ನಿಂತುಕೊಂಡಿದ್ದ ಒಂದು ಗುಂಪಿನ ಜನರನ್ನು ಕೀರ್ತನೆಗಳು 137 ರಲ್ಲಿ ಭೇಟಿಮಾಡುತ್ತೇವೆ. ತಮ್ಮ ಪಾಪದ ಫಲವಾಗಿ ಬಾಬಿಲೋನಿಗೆ ಬಂದಿಯಾಗಿ ಕಳುಹಿಸಲ್ಪಟ್ಟ ಇಸ್ರಾಯೇಲ್ಯರೇ ಇವರು. ಇಂದಿನ ಸತ್ಯವೇದಭಾಗದಲ್ಲಿ ಈ ಸೆರೆಯಾಳುಗಳು ತಮ್ಮ ಸ್ವಂತ ದೇಶಕ್ಕೆ ಹಿಂತಿರುಗುತ್ತಾರೆ ಎಂದು ದೇವರು ಪ್ರವಾದನೆಯಾಗಿ ನುಡಿದರು. ದೇವಜನರು ಸಂತೋಷದಿಂದ ನೃತ್ಯ ಮಾಡುತ್ತಾರೆ ಎಂದು ಹೇಳುತ್ತಾರೆ. ನಾಟ್ಯದೊಂದಿಗೆ ಸುಮ್ಮನಾಗದೆ ದೇವರ ಈ ರಕ್ಷಣೆಯನ್ನು ದೂರದ್ವೀಪಗಳಲ್ಲಿ ಸಾರಿರಿ ಎಂದು ಯೆರೆಮಿಯ 31:10 ರಲ್ಲಿ ಆಜ್ಞಾಪಿಸಿದ್ದಾರೆ. 

 

ಪ್ರಿಯರೇ, ನಾವು ಕರ್ತನಲ್ಲಿ ಸಂತೋಷಪಡುವುದು, ದೇವರನ್ನು ಆರಾಧಿಸುವುದು ಮತ್ತು ನೃತ್ಯ ಮಾಡುವುದು ಒಳ್ಳೆಯದೇ. ಆದರೆ ಇವು ಶಿಷ್ಯತ್ವದ ಅಂತ್ಯವಲ್ಲ. ಪ್ರಪಂಚದಾದ್ಯಂತ ಹೋಗಿ ಯೇಸುಕ್ರಿಸ್ತನ ಸುವಾರ್ತೆಯನ್ನು ಸಾರಬೇಕೆಂದು ನಮಗೆ ರಾಜ ಆಜ್ಞೆಯನ್ನು ನೀಡಲಾಗಿದೆ. ಪಾಪದ ಕಾರಣದಿಂದ ನಿಜವಾದ ಸಂತೋಷವನ್ನು ಕಳೆದುಕೊಂಡಿರುವ, ಜೀವನದ ಉದ್ದೇಶವನ್ನು ಅರ್ಥಮಾಡಿಕೊಳ್ಳದ, ಅನಾರೋಗ್ಯ ಮತ್ತು ಇತರ ಅನೇಕ ರೀತಿಯ ನೋವುಗಳಲ್ಲಿ ವಾಸಿಸುವ ಜನರಿಗೆ ಸುವಾರ್ತೆ ಮಾತ್ರವೇ ಎಲ್ಲವನ್ನು ಬದಲಾಯಿಸುವ ಔಷಧವಾಗಿದೆ. ಇಂದು ಅನೇಕ ಕ್ರೈಸ್ತರು ತಮ್ಮ ಜೀವನದಲ್ಲಿ ಎಲ್ಲೋ ನಿಂತುಬಿಟ್ಟು "ಹೊರಟು ಹೋಗಿ" ಎಂಬ ಆಜ್ಞೆಯನ್ನು ಮರೆತಿದ್ದಾರೆ. ಕೆಲವರು ಆರಾಧನೆ, ಪ್ರಾರ್ಥನೆ, ಹಾಡು, ನೃತ್ಯ ಎಂದು ಹೊರಟು ಹೋಗದೆ ನಿಂತುಬಿಟ್ಟರು. ಈ ಸಂದೇಶವನ್ನು ಓದುತ್ತಿರುವವರು, ಎಲ್ಲಿಯೂ ನಿಲ್ಲಬೇಡಿ ದೇಶಕ್ಕೆ ಸುವಾರ್ತೆ ತಲುಪಲು ಏನಾದರೂ ಮಾಡಿ. ಸಾಧ್ಯವಾದ ಸ್ಥಳಗಳಿಗೆ ಹೋಗಿ ಸುವಾರ್ತೆಯನ್ನು ಸಾರಿರಿ. ಸಾಧ್ಯವಾಗದ ಸ್ಥಳಗಳಲ್ಲಿ ಅಲ್ಲಿ ನಡೆಯುವ ಮಿಷನರಿ ಸೇವೆಗಳನ್ನು ಪ್ರಾರ್ಥನೆಯಿಂದಲೂ, ತ್ಯಾಗವಾದ ಕಾಣಿಕೆಗಳಿಂದಲೂ ಬೆಂಬಲಿಸಿರಿ. ಹಲ್ಲೇಲೂಯಾ!

- J. ಸಂತೋಷ್

 

ಪ್ರಾರ್ಥನಾ ಅಂಶ:

ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş